ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ -9


Team Udayavani, Feb 3, 2019, 12:30 AM IST

diabetes-ddd.jpg

ಮುಂದುವರಿದುದು- ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂದರೇನು?
ಕಿಟೋನ್‌ ಎಂಬ ವಿಷಕಾರಿ ರಾಸಾಯನಿಕ ರಕ್ತದಲ್ಲಿ ಹೆಚ್ಚು ಶೇಖರಣೆಯಾಗಿ ರಕ್ತ ಆಮ್ಲಿàಯ ವಾಗುವುದನ್ನು ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎನ್ನುತ್ತಾರೆ.

ಈ ಸ್ಥಿತಿ ಯಾರಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು 
ಕಾರಣಗಳೇನು?

ದೇಹದಲ್ಲಿ ಇನ್ಸುಲಿನ್‌ ಕೊರತೆಯಾಗಿ ಜೀವಕೋಶಗಳಿಗೆ ಗ್ಲುಕೋಸ್‌, ಶಕ್ತಿಯ ರೂಪದಲ್ಲಿ ತಲುಪದೇ ಹೋದಾಗ ದೇಹದ ಕೊಬ್ಬಿನಂಶವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಕೀಟೋನ್‌ ಅಂಶಗಳು ಉತ್ಪಾದನೆಯಾಗುತ್ತವೆ. ಇದು ಹೆಚ್ಚಾಗಿ ಪ್ರಭೇದ 1 ಮತ್ತು ಪ್ರಭೇದ 2 ಮಧುಮೇಹದೊಂದಿಗೆ ಜೀವಿಸು ತ್ತಿರುವವರಲ್ಲಿ ಕಂಡುಬರುತ್ತದೆ. ಹಾಳಾದ ಇನ್ಸುಲಿನ್‌ನ ಬಳಕೆ, ಇನ್ಸುಲಿನ್‌ ತೆಗೆದುಕೊಳ್ಳುವ ಪ್ರಮಾಣದಲ್ಲಿ ವ್ಯತ್ಯಯ ಮತ್ತು ಸತತವಾಗಿ ಇನ್ಸುಲಿನ್‌ ತೆಗೆದುಕೊಳ್ಳುವುದನ್ನು ಮರೆಯುವುದು ಈ ಸ್ಥಿತಿ ಉಂಟಾಗಲು ಪ್ರಮುಖ ಕಾರಣಗಳು.

ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ನ ಸಾಮಾನ್ಯ ಲಕ್ಷಣಗಳೇನು?
ಕೀಟೋ ಅಸಿಡೋಸಿಸ್‌ ಹಂತ ತಲುಪಲು ಸುಮಾರು 24 ಗಂಟೆಗಳು ಬೇಕಿದ್ದು ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ತೀವ್ರಗೊಳ್ಳುತ್ತದೆ. ಮೊದಲ ಹಂತದಲ್ಲಿ ವಾಂತಿ, ವಾಕರಿಕೆ, ಹೊಟ್ಟೆನೋವು, ಹಸಿವೆ ಕಡಿಮೆಯಾಗುವುದು, ಉಸಿರಾಟದ ತೀವ್ರತೆಯಾಗುವುದು ಮತ್ತು ಪರೀಕ್ಷೆಗೊಳಪಡಿಸಿದಾಗ ಮೂತ್ರ ಮತ್ತು ಬೆವರಿನಲ್ಲಿ ಕೀಟೋನ್‌ ಅಂಶ ಪತ್ತೆಯಾಗುತ್ತದೆ.

ತತ್‌ಕ್ಷಣದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ತೀವ್ರತರವಾದ ಲಕ್ಷಣಗಳಾದ‌ ಉಸಿರಾಟದಲ್ಲಿ ಹೆಚ್ಚಳ,  ಏದುಸಿರು, ಹೆಚ್ಚಿದ ಹೃದಯ ಬಡಿತ, ಸೀಬೆಕಾಯಿ ಪರಿಮಳದ ಉಸಿರು, ಗೊಂದಲಮಯ ಮನಃಸ್ಥಿತಿ, ಕಡಿಮೆ ರಕ್ತದೊತ್ತಡ, ತಲೆಸುತ್ತು ಮತ್ತು ಕ್ರಮೇಣವಾಗಿ ಮೂಛೆì ಹೋಗುವುದು ಹಾಗೂ ಮೂತ್ರದಲ್ಲಿ ಹೆಚ್ಚಿನ  ಪ್ರಮಾಣದ ಕೀಟೋನ್‌ ಅಂಶ ಪತ್ತೆಯಾಗುವುದು.

ಇಂತಹ ಲಕ್ಷಣಗಳು ಕಂಡುಬಂದಲ್ಲಿ  ಮಧುಮೇಹದೊಂದಿಗೆ ಜೀವಿಸುವವರು ಏನು ಮಾಡಬೇಕು?
ತತ್‌ಕ್ಷಣಕ್ಕೆ ಸಮೀಪದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯಬೇಕು. ರಕ್ತನಾಳದ ಮೂಲಕ ದ್ರವಾಂಶ ಮತ್ತು ಹೆಚ್ಚಿನ ಇನ್ಸುಲಿನ್‌ ಕೊಟ್ಟು ಚಿಕಿತ್ಸೆ ನೀಡಲಾಗುತ್ತದೆ. ಆದರೆ ತುರ್ತು ಚಿಕಿತ್ಸೆ ನೀಡದಿದ್ದಲ್ಲಿ ಇದು ಜೀವಕ್ಕೆ ಕುತ್ತು ತರಬಹುದು.

ಮಧುಮೇಹದೊಂದಿಗೆ ಜೀವಿಸುವವರಲ್ಲಿ  ಕಂಡುಬರಬಹುದಾದ 
ಸಂಭಾವ್ಯ ಅಲ್ಪಾವಧಿಯ ತೀವ್ರ ತರವಾದ  (Acute Complications) 
ತೊಂದರೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ 
ಮುಂಜಾಗ್ರತಾ ಕ್ರಮಗಳೇನು?

– ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರಬಹುದಾದ ಸಂಭಾವ್ಯ ಅಲ್ಪಾವಧಿಯ ತೀವ್ರ ತರವಾದ (Acute Complications) ತೊಂದರೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದಲ್ಲಿ ದೇಹಕ್ಕೆ ಮಾರಕವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಕೆಳಗಿನ ಅಂಶಗಳನ್ನು ಇವುಗಳನ್ನು ತಡೆಯಲು ಪಾಲಿಸುವುದು ಅತ್ಯಗತ್ಯ.

– ವೈದ್ಯರ  ಶಿಫಾರಸಿನಂತೆ ನಿಗದಿತ ಪ್ರಮಾಣದ ಔಷ‌ಧ/ಇನ್ಸುಲಿನ್‌ ತೆಗೆದುಕೊಳ್ಳುವುದು
– ರಕ್ತದಲ್ಲಿನ ಗ್ಲುಕೋಸ್‌ ನಿಯಂತ್ರಣದಲ್ಲಿರಿಸಲು ನಿಯಮಿತ ಔಷಧದ ಬದ್ಧತೆ ಮತ್ತು  ಆಹಾರಕ್ರಮವನ್ನು ಪಾಲಿಸುವುದು
– ವೈದ್ಯರ ಸಲಹೆಯಂತೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ
– ನಿಯಮಿತವಾಗಿ ವೈದ್ಯರ ಭೇಟಿ ಮತ್ತು ಚಿಕಿತ್ಸೆ ಅನುಸರಣೆ

– ಪ್ರಭಾತ್‌ ಕಲ್ಕೂರ ಎಂ., ಯೋಜನಾ ನಿರ್ವಾಹಕರು,  
ವಿಶ್ವ ಮಧುಮೇಹ ಪ್ರತಿಷ್ಠಾನ, ಸ್ಕೂಲ್‌ಆಫ್ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಣಿಪಾಲ
ಚಿತ್ರ: ರವಿ ಆಚಾರ್ಯ, ಬ್ರಹ್ಮಾವರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.