ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

Team Udayavani, Mar 10, 2019, 12:30 AM IST

cooking.jpg

ಮುಂದುವರಿದುದು– 5. ಕೊಬ್ಬನ್ನು ಅಡುಗೆ ಮಾಧ್ಯಮವಾಗಿ ಉಪಯೋಗಿಸುವುದು
ಬೇಯಿಸಲು, ಹುರಿಯಲು, ಕಾಯಿಸಲು ಕೊಬ್ಬನ್ನು ಮಾಧ್ಯಮವಾಗಿ ಉಪಯೋಗಿಸುವುದು ಒಂದು ಆರೋಗ್ಯಕರ ಆಹಾರ ತಯಾರಿ ವಿಧಾನವಾಗಿದೆ. ನೀರಿಲ್ಲದೆ ಕಿರು ಅವಧಿಯಲ್ಲಿ ಅಡುಗೆ ತಯಾರಿಸುವುದರಿಂದ ಬಿ ಮತ್ತು ಸಿ ವಿಟಮಿನ್‌ಗಳು ನಷ್ಟವಾಗುವುದು ತಪ್ಪುತ್ತದೆ. ಕೊಬ್ಬನ್ನು ಸೇರಿಸುವುದರಿಂದ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್‌ಗಳು ಮತ್ತು ಆ್ಯಂಟಿಓಕ್ಸಿಡೆಂಟ್‌ಗಳ ಹೀರುವಿಕೆ ಸುಲಭವಾಗುತ್ತದೆ.

ಹೇಗೆ: ಅಡುಗೆಯಲ್ಲಿ ಉಪಯೋಗಿಸುವ ಕೊಬ್ಬು/ಎಣ್ಣೆಯ ಆಯ್ಕೆಯಲ್ಲಿ ಎಚ್ಚರವಿರಲಿ. ತಮ್ಮ ಧೂಮಬಿಂದುವಿಗಿಂತ ಅಧಿಕ ಉಷ್ಣತೆಗೆ ಬಿಸಿಯಾದ ಎಣ್ಣೆಗಳು ರ್ಯಾನ್ಸಿಡ್‌ ಆಗಿ ಪರಿವರ್ತನೆಗೊಂಡು ಅಪಾಯಕಾರಿಯಾಗುತ್ತವೆ. ಒಮ್ಮೆ ಉಪಯೋಗಿಸಿದ ಎಣ್ಣೆಯನ್ನು ಪದೇ ಪದೇ ಮರಳಿ ಬಳಸಬೇಡಿ. ಕಡಿಮೆ ಧೂಮಬಿಂದು ಹೊಂದಿರುವ ಬೆಣ್ಣೆ, ಆಲಿವ್‌ ಎಣ್ಣೆಯಂತಹವು ಕಡಿಮೆ ಉಷ್ಣತೆಯಲ್ಲಿ ಅಡುಗೆ ಮಾಡುವ ವಿಧಾನಗಳಿಗೆ ಹೇಳಿ ಮಾಡಿಸಿದಂಥವಾಗಿವೆ.

ಸರಿ ಅಥವಾ ತಪ್ಪು?
ಒಂದೆರಡು ತರಕಾರಿಗಳ ಎರಡು ಅಡುಗೆ ವಿಧಾನಗಳನ್ನು ಹೋಲಿಸಿ ನೋಡೋಣ.

1. ಕಾಲಿಫ್ಲವರ್‌ ಅಡುಗೆ
ಯಾವುದು ತಪ್ಪು?:
ನೀವು ಆರಿಸಿಕೊಂಡ ಕಾಲಿಫ್ಲವರ್‌ನಲ್ಲಿ ಒಂದೆರಡು ಹುಳಗಳಾಡುತ್ತಿದ್ದರೆ ಏನು ಮಾಡುತ್ತೀರಿ? ಇಡೀ ಕಾಲಿಫ್ಲವರನ್ನು ಕುದಿಯುವ ನೀರಿಗೆ ಹಾಕುವುದೇ? ಅಲ್ಲ; ಹಾಗೆ ಮಾಡುವುದರಿಂದ ಕಾಲಿಫ್ಲವರ್‌ನಲ್ಲಿ ಇರುವ ವಿಟಮಿನ್‌ ಸಿ ಮತ್ತು ಆ್ಯಂಟಿ ಓಕ್ಸಿಡೆಂಟ್‌ಗಳು ಕೂಡ ಹುಳಗಳ ಜತೆಗೆ ನಾಶವಾಗುತ್ತವೆ. ಕಾಲಿಫ್ಲವರನ್ನು ಮೈಕ್ರೊವೇವ್‌ ಮಾಡುವುದರಿಂದಲೂ ಪೌಷ್ಟಿಕಾಂಶ ನಷ್ಟವಾಗುತ್ತದೆ.
ಯಾವುದು ಸರಿ?: ಬದಲಾಗಿ ಹಬೆಯಲ್ಲಿ ಬೇಯಿಸಿ. ಉಗಿಯಲ್ಲಿ ಬೇಯಿಸುವುದರಿಂದ ಕಾಲಿಫ್ಲವರ್‌ನಲ್ಲಿರುವ ವಿಟಮಿನ್‌ ಸಿ ಉಳಿಯುತ್ತದೆ ಮತ್ತು ಅದು ತಾಜಾ ಆಗಿರುತ್ತದೆ. ಹುಳಗಳನ್ನು ನಿವಾರಿಸಲು ಸಾದಾ ನಳ್ಳಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ಅಥವಾ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ತೊಳೆಯಿರಿ.

2. ಟೊಮ್ಯಾಟೊ ಅಡುಗೆ
ಯಾವುದು ತಪ್ಪು:
ಹೃದ್ರೋಗವನ್ನು ತಡೆಯುವ ಲೈಕೊಪೇನ್‌ ಟೊಮ್ಯಾಟೊಗಳಲ್ಲಿರುತ್ತದೆ. ಟೊಮ್ಯಾಟೊವನ್ನು ಹಸಿಯಾಗಿ ತಿನ್ನುವುದು ಅಥವಾ ಉಗಿಯಲ್ಲಿ ಬೇಯಿಸಿ ಸೇವಿಸುವುದು ಒಳ್ಳೆಯ ವಿಧಾನ ಎಂದು ನೀವು ಭಾವಿಸಿದ್ದರೆ ಅದು ತಪ್ಪು. 
ಯಾವುದು ಸರಿ?: ಟೊಮ್ಯಾಟೊಗಳಲ್ಲಿ ಇರುವ ಲೈಕೊಪೇನ್‌ನ ಗರಿಷ್ಠ ಉಪಯೋಗವನ್ನು ಪಡೆಯಲು ಅವುಗಳನ್ನು ಕತ್ತರಿಸಿ ಬಳಿಕ ಪದಾರ್ಥ ಅಥವಾ ಸಾರಿಗೆ ಸೇರಿಸಿ. ಆಗ ಅದರ ಹುಳಿ ರುಚಿ ಬಾಯಿ ನೀರೂರಿಸುತ್ತದೆಯಲ್ಲದೆ ಪೌಷ್ಟಿಕಾಂಶಗಳ ಉತ್ತಮ ನಿರ್ವಹಣೆಯೂ ಆಗುತ್ತದೆ.

ಹೀಗೆ, ಅಡುಗೆ ಮಾಡುವಾಗ ಸ್ವಲ್ಪ ಹೆಚ್ಚುವರಿ ಕಾಳಜಿ ವಹಿಸಿದರೆ ಅಮೂಲ್ಯ ಪೌಷ್ಟಿಕಾಂಶಗಳು ನಷ್ಟವಾಗದಂತೆ ಸಂರಕ್ಷಿಸಿ ಅವು ನಮ್ಮ ದೇಹ ಸೇರುವಂತೆ ಮಾಡುವುದು ಸಾಧ್ಯ. ರುಚಿ ಮತ್ತು ಸ್ವಾದಕ್ಕಾಗಿ ಮಾತ್ರವೇ ಅಲ್ಲದೆ ಆಹಾರ ವಸ್ತುಗಳ ಪೌಷ್ಟಿಕಾಂಶವೂ ನಮ್ಮ ದೇಹ ಸೇರುವುದು ಮುಖ್ಯ. ಯಾವುದೇ ಅಡುಗೆ ವಿಧಾನ ನೂರಕ್ಕೆ ನೂರು ಪೌಷ್ಟಿಕಾಂಶಗಳನ್ನು ಸಂರಕ್ಷಿಸದು. ಈ ಸಲಹೆಗಳನ್ನು ಅನುಸರಿಸಿ ಗರಿಷ್ಠ ಪೌಷ್ಟಿಕಾಂಶ ಸಿಗುವಂತೆ ಮಾಡಿ. ಯಾವುದೇ ಒಂದು ಅಡುಗೆ ವಿಧಾನಕ್ಕೆ ಸೀಮಿತವಾಗದಿರಿ.

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.