ಪಾಕ್ ಔಟ್; ಭಾರತಕ್ಕೆ ನೆದರ್ಲೆಂಡ್ ಎದುರಾಳಿ
Team Udayavani, Dec 12, 2018, 6:00 AM IST
ಭುವನೇಶ್ವರ: ಮಂಗಳವಾರ “ಕ್ರಾಸ್-ಓವರ್’ ಪಂದ್ಯಗಳು ಮುಕ್ತಾಯಗೊಳ್ಳುವುದರೊಂದಿಗೆ ವಿಶ್ವಕಪ್ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಣಾಹಣಿಯ ಕ್ಷಣಗಣನೆ ಮೊದಲ್ಗೊಂಡಿದೆ. ಇದರಂತೆ ಆತಿಥೇಯ ಭಾರತ ಗುರುವಾರದ 3ನೇ ಕ್ವಾರ್ಟರ್ ಫೈನಲ್ನಲ್ಲಿ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಮಂಗಳವಾರ ನಡೆದ ಮೊದಲ ಕ್ರಾಸ್ ಓವರ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ಬೆಲ್ಜಿಯಂ 5-0 ಗೋಲುಗಳ ಪ್ರಚಂಡ ಜಯದೊಂದಿಗೆ ಪಾಕಿಸ್ಥಾನವನ್ನು ಕೂಟದಿಂದ ಹೊರದಬ್ಬಿತು. ದಿನದ ದ್ವಿತೀಯ ಪಂದ್ಯದಲ್ಲಿ ನೆದರ್ಲೆಂಡ್ ಕೂಡ ಕೆನಡಾ ವಿರುದ್ಧ 5-0 ಗೋಲುಗಳಿಂದ ಜಯ ಸಾಧಿಸಿತು.
ಪಾಕ್ ದುರ್ಬಲ ರಕ್ಷಣಾ ವಿಭಾಗ
ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ “ರೆಡ್ ಲಯನ್ಸ್’ ಬೆಲ್ಜಿಯಂ ನೆಚ್ಚಿನ ತಂಡವಾಗಿ ಕಣಕ್ಕಿಳಿದಿತ್ತು. 10ನೇ ನಿಮಿಷದಲ್ಲೇ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿ ಖಾತೆ ತೆರೆದರು. ಆ ಕ್ಷಣದಿಂದಲೇ ಪಾಕಿಸ್ಥಾನದ ರಕ್ಷಣಾ ವಿಭಾಗ ದುರ್ಬಲಗೊಳ್ಳುತ್ತ ಹೋಯಿತು. ಮೂರೇ ನಿಮಿಷದಲ್ಲಿ ನಾಯಕ ಥಾಮಸ್ ಬ್ರಿಲ್ಸ್ ಗೋಲು ದಾಖಲಿಸಿದರು. ಬಳಿಕ ಸೆಡ್ರಿಕ್ ಚಾರ್ಲಿಯರ್ (27ನೇ ನಿಮಿಷ), ಸೆಬಾಸ್ಟಿಯನ್ ಡೋಕಿಯರ್ (35ನೇ ನಿಮಿಷ) ಮತ್ತು ಟಾಮ್ ಬೂನ್ (53ನೇ ನಿಮಿಷ) ಪಾಕ್ ಮೇಲೆ ಆಕ್ರಮಣಗೈದರು.
ಪಾಕ್ ಪೆನಾಲ್ಟಿ ವೈಫಲ್ಯ
ಮೊದಲ ಕ್ವಾರ್ಟರ್ನಲ್ಲೇ ಪಾಕಿಸ್ಥಾನಕ್ಕೆ 2 ಪೆನಾಲ್ಟಿ ಕಾರ್ನರ್ ಲಭಿಸಿತಾದರೂ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿತು. ದ್ವಿತೀಯ ಕ್ವಾರ್ಟರ್ನಲ್ಲಿ ಪಾಕ್ ಆಟ ಸ್ವಲ್ಪ ಮಟ್ಟಿಗೆ ಸುಧಾ ರಣೆಗೊಂಡಿತು, ಆದರೆ ಸೂಕ್ತ ಯೋಜನೆಯ ಕೊರತೆ ತಂಡ ವನ್ನು ಕಾಡಿತು. ಬೆಲ್ಜಿಯಂ ಡಿಫೆನ್ಸ್ ಬಲಿಷ್ಠವಾಗಿದ್ದರಿಂದ ಪಾಕಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ