CONNECT WITH US  

ವೈಸರಾಯ್ ಹೌಸ್ ಇಂದು ರಾಷ್ಟ್ರಪತಿ ಭವನ;4 ಅಂತಸ್ತು, 340 ಕೊಠಡಿ!

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಹೊಂದಿರದ ಕೋವಿಂದ್ ಇನ್ಮುಂದೆ ರಾಷ್ಟ್ರಪತಿ ಭವನದಲ್ಲಿ ಆಡಳಿತ ಆರಂಭವಾಗಲಿದೆ. ಏತನ್ಮಧ್ಯೆ ರಾಷ್ಟ್ರಪತಿ ಭವನ ಹೇಗಿದೆ, ಅದರಲ್ಲಿ ಎಷ್ಟು ಕೋಣೆಗಳಿವೆ ಎಂಬಿತ್ಯಾದಿ ಕುರಿತ ಕುತೂಹಲದ ವಿವರಣೆಯ ಕಿರು ಚಿತ್ರಣ ಇಲ್ಲಿದೆ...

ರಾಷ್ಟ್ರಪತಿ ಭವನದ ಹೈಲೈಟ್ಸ್:
*ನೂತನ ಮತ್ತು ಮಾಜಿ ರಾಷ್ಟ್ರಪತಿ ಒಂದೇ ಕಾರಿನಲ್ಲಿ ಲೋಕಸಭೆಗೆ ಆಗಮನ
*ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅಧಿಕಾರ ಸ್ವೀಕಾರ
*ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಎಸ್ ಖೇಹರ್ ಪ್ರತಿಜ್ಞಾ ವಿಧಿ ಬೋಧಿಸಿದರು
*ಬಿಜೆಪಿಯಿಂದ 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು

*ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿ ಅಂಕಿತ ಅಗತ್ಯ
*ರಾಷ್ಟ್ರಪತಿ ಕೇಂದ್ರ ಕ್ಯಾಬಿನೆಟ್ ಶಿಫಾರಸ್ಸಿನ ಮೇಲೆ ಕಾರ್ಯನಿರ್ವಹಿಸಬೇಕು
*ಪ್ರಮಾಣವಚನದ ಬಳಿಕ 21 ಕುಶಾಲತೋಪು ಹಾರಿಸಿ ಗೌರವ ಸಲ್ಲಿಕೆ
*ಭಾರತದ ರಾಷ್ಟ್ರಪತಿ ಭವನದಲ್ಲಿ ಕರ್ನಾಟಕದ ಶಿಲ್ಪಕಲೆಗೂ ಸ್ಥಾನ ಇದೆ
*ಮೂಡಬಿದಿರೆಗೆ ಭೇಟಿ ನೀಡಿದ್ದ ಬ್ರಿಟಿಷ್ ಅಧಿಕಾರಿಗಳು ಸಾವಿರ ಕಂಬದ ಬಸದಿ, ವಾಸ್ತುಶಿಲ್ಪದಿಂದ ಪ್ರಭಾವಿತರಾಗಿದ್ದರು.
*ಮೂಡಬಿದಿರೆ ಸಾವಿರ ಕಂಬ ಬಸದಿಯ ಕಂಬ ಮತ್ತು ಗಂಟೆಗಳ ಮಾದರಿ ಬಳಕೆ
*ರಾಷ್ಟ್ರಪತಿ ಭವನ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿದೆ
*220 ಮಂದಿ ಯೋಧರು ಪ್ರೆಸಿಡೆಂಟ್ ಬಾಡಿಗಾರ್ಡ್ ಗಳಿದ್ದಾರೆ
*320 ಎಕರೆ ಪ್ರದೇಶದಲ್ಲಿ ರಾಷ್ಟ್ರಪತಿ ಭವನ ನಿರ್ಮಿಸಲಾಗಿದೆ(ಇದರಲ್ಲಿ ರಾಷ್ಟ್ರಪತಿ ನಿವಾಸ, ಮೊಘಲ್ ಗಾರ್ಡನ್ಸ್, ಬಾಡಿಗಾರ್ಡ್ಸ್ ನಿವಾಸ, ಸಿಬ್ಬಂದಿ, ಇನ್ನಿತರ ಅಧಿಕಾರಿಗಳ ನಿವಾಸ ಸೇರಿದೆ)
*ಬ್ರಿಟಿಷ್ ವಾಸ್ತು ಶಿಲ್ಪಿ ಎಡ್ವಿನ್ ಲೂಟಿಯಾನ್ಸ್ ರಾಷ್ಟ್ರಪತಿ ಭವನದ ವಿನ್ಯಾಸಕಾರ
*ರಾಷ್ಟ್ರಪತಿ ಭವನದಲ್ಲಿ ಅಶೋಕ್ ಹಾಲ್, ದರ್ಬಾರ್ ಹಾಲ್ ಗಳಿವೆ


*4 ಅಂತಸ್ತಿನ ಭವ್ಯ ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ
*ರಾಷ್ಟ್ರಪತಿ ಬಳಸುವುದು ಕೇವಲ 2 ಅಥವಾ 3 ಕೋಣೆ
*ಈಗ ರಾಷ್ಟ್ರಪತಿ ಭವನ ಜಾಗದಲ್ಲಿ  ಮೊದಲು ರೈಸಿನಾ ಬೆಟ್ಟವಿತ್ತು
*ಬೆಟ್ಟವನ್ನು ಒಡೆದು ಬ್ರಿಟಿಷರು ವೈಸರಾಯ್ ಹೌಸ್ ನಿರ್ಮಿಸಿದ್ದರು
*1950ರ ನಂತರ ವೈಸರಾಯ್ ಹೌಸ್ ರಾಷ್ಟ್ರಪತಿ ಭವನವಾಗಿ ಪರಿವರ್ತನೆ
*ರಾಷ್ಟ್ರಪತಿ ಭವನದಲ್ಲಿ ಸಾಂಚಿ ಸ್ತೂಪದ ಮಾದರಿಯ ಗೋಪುರ ನಿರ್ಮಾಣ


Trending videos

Back to Top