CONNECT WITH US  

ಕ್ಲೋನ್‌ ಮೀಯಲ್ಲಿ ನಿಮ್ಮಂತೇ ಕಾಣುವ 3ಡಿ ಗೊಂಬೆ ಸಿಗುತ್ತದೆ

ಯಾರಿಗಾದರೂ ಡಿಫ‌ರೆಂಟ್‌ ಆದ ಗಿಫ್ಟ್ ಕೊಡಬೇಕು ಅಂತ ನಿಮಗೆ ಯಾವತ್ತಾದರೂ ಅನ್ನಿಸಿದೆಯಾ? ಹೌದೆಂದಾದರೆ ನಿಮಗೊಂದು ಒಳ್ಳೆ ಐಡಿಯಾ ಇದೆ. ನೀವು ಯಾರಿಗೆ ಗಿಫ್ಟ್ ಕೊಡಬೇಕು ಅಂತಂದುಕೊಂಡಿದ್ದೀರೋ ಅವರಿಗೆ ಅವರಂತೆ ಕಾಣುವ 3ಡಿ ಗೊಂಬೆಯನ್ನು ಗಿಫ್ಟ್ ಕೊಡೋದು. ಅಂಥಾ ಗೊಂಬೆ ಎಲ್ಲಿ ಸಿಗುತ್ತದೆ ಅಂತ ಕೇಳಿದರೆ ಅದಕ್ಕೆ ಉತ್ತರ "ಕ್ಲೋನ್‌ ಮೀ'. 

ಏನಿದು ಕ್ಲೋನ್‌ಮೀ?
ಬೆಂಗಳೂರಿನ ಸಿದ್ದಾರ್ಥ್ ರಾಥೋಡ್‌ ಇಂಗ್ಲೆಂಡಿಗೆ ಹೋದಾಗ ಅಲ್ಲಿ 3ಡಿ ಪ್ರಿಂಟಿಂಗ್‌ನಿಂದ ತಯಾರಾದ ಪ್ರತಿಕೃತಿಗಳನ್ನು ನೋಡುತ್ತಾರೆ. ಉದಾಹರಣೆಗೆ ನಿಮ್ಮ ಫೋಟೋ ಕೊಟ್ಟರೆ 3ಡಿ ಪ್ರಿಂಟಿಂಗ್‌ ಮುಖಾಂತರ ನಿಮ್ಮ ಥರಾನೇ ಕಾಣುವ ಗೊಂಬೆಯೊಂದನ್ನು ತಯಾರಿಸಬಹುದು. ಅಷ್ಟೇ ಅಲ್ಲ, ನೀವೊಂದು ಮನೆಯ ಚಿತ್ರವನ್ನು ಕೊಟ್ಟರೆ ಅದೇ ಥರ ಕಾಣುವ ಒಂದು ಪ್ರತಿಕೃತಿಯನ್ನು 3ಡಿಯಲ್ಲಿ ತಯಾರಿಸಬಹುದು. 
ಸಿದ್ದಾರ್ಥ್ ಅದನ್ನು ನೋಡಿ ಅಚ್ಚರಿಯಾಗಿ ಆ ತಂತ್ರಜ್ಞಾನವನ್ನು ಕಲಿತು ಡಾ.ಕಲ್ಮೇಶ್‌ ಕೊಠಾರಿ ಜೊತೆ ಸೇರಿ ಆ 3ಡಿ ತಂತ್ರಜ್ಞಾನವನ್ನು ನಮ್ಮ ಬೆಂಗಳೂರಿಗೆ ತಂದಿದ್ದಾರೆ. ಅವರ ಕ್ಲೋನ್‌ ಮೀ ಜಗತ್ತಿಗೆ ಹೋದರೆ ನೀವೂ ನಿಮಗೆ ಬೇಕಾದವರ 3ಡಿ ಪ್ರತಿಮೆಯನ್ನು ತಯಾರಿಸಲು ಹೇಳಬಹುದು. ವ್ಯಕ್ತಿಗಳದಷ್ಟೇ ಅಲ್ಲ ವಸ್ತುಗಳ ಪ್ರತಿಕೃತಿಯನ್ನೂ ಇವರು ತಯಾರಿಸಿಕೊಡುತ್ತಾರೆ. ಉದಾಹರಣೆಗೆ ಶಿಕ್ಷಕರು ಮಕ್ಕಳಿಗೆ ಹೃದಯವನ್ನು ವಿವರಿಸಲು ಹೃದಯದ ಪ್ರತಿಕೃತಿ ಬೇಕು ಅಂತಂದುಕೊಂಡರೆ ಇವರು 3ಡಿ ಹೃದಯವನ್ನು ಕೈಗಿಡುತ್ತಾರೆ. ನಿಮ್ಮ ಕನಸಿನ ಮನೆಯ ಚಿತ್ರವನ್ನು ಕೊಟ್ಟರೆ ಆ ಮನೆಯನ್ನೂ 3ಡಿ ರೂಪದಲ್ಲಿ ಕೊಡಬಲ್ಲರು. ಆಸಕ್ತರು ಹೀಗೆ ಯಾವ ಪ್ರತಿಕೃತಿ ಬೇಕಾದರೂ ಕ್ಲೋನ್‌ ಮೀಗೆ ಹೋಗಿ ಆ ಪ್ರತಿಕೃತಿಗಳನ್ನು ತಯಾರಿಸಿ ಮನೆಗೆ ತಗೊಂಡು ಹೋಗಬಹುದು.    

ಬೆಲೆ- ಒಂದೊಂದು ಪ್ರತಿಕೃತಿಗೆ ಒಂದೊಂದು ಬೆಲೆ. ಆರಂಭಿಕ ಬೆಲೆ ರೂ.999.
ಎಲ್ಲಿ- ಕ್ಲೋನ್‌ ಮೀ, ಸೆಕೆಂಡ್‌ ಫ್ಲೋರ್‌, ಮಂತ್ರಿ ಮಾಲ್‌, ಮಲ್ಲೇಶ್ವಂರ
ದೂ- 080 41147855
ಫೇಸ್‌ಬುಕ್‌-https://www.facebook.com/clonemeindia?fref=ts 
ವೆಬ್‌ಸೈಟ್‌-www.cloneme.in/

Trending videos

Back to Top