CONNECT WITH US  

ಸುಯೋಧನ 100ನೇ ಪ್ರದರ್ಶನ

ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡವು ಕಳೆದ 40 ವರುಷಗಳಿಂದ ಸಕ್ರಿಯವಾಗಿದ್ದು ಹಲವಾರು ಜನಪ್ರಿಯ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸಿ, ಜನ ಮೆಚ್ಚುಗೆ ಗಳಿಸಿದೆ.  ಅತ್ಯಂತ ಜನಪ್ರಿಯ ನಾಟಕಗಳಾದ ಸುಯೋಧನ (ಮಹಾಭಾರತಕ್ಕೊಂದು ಹೊಸ ಆಯಾಮ), ಪೌಲಸ್ಥ್ಯನ ಪ್ರಣಯ ಕಥೆ (ಹೊಸ ದೃಷ್ಟಿಯ ರಾಮಾಯಣ) ಮತ್ತು ಸೊಹ್ರಾಬ…-ರುಸ್ತುಂ (ಆಳುವ ಪ್ರಭುಗಳ ಲಾಭಕ್ಕಾಗಿ ಅಮಾಯಕ ತಂದೆ-ಮಕ್ಕಳ ಕಾಳಗ-ಬಲಿ.  ಯುದ್ಧವಿರೋಧಿ ನೀತಿಯ ಸಂದೇಶ) ಮುಂತಾದ ನಾಟಕಗಳೂ ನೂರಾರು ಪ್ರದರ್ಶನಗಳನ್ನು ಕಂಡು ಮನೆ ಮಾತಾಗಿವೆ. 

ಜನ ಸಾಮಾನ್ಯರಿಗೆ ಮನರಂಜನೆ, ಚಿಂತನೆಗಳಿಗೆ ಪ್ರೇರೇಪಿಸುವ ಆಸಕ್ತಿದಾಯಕ ವಿಷಯಗಳನ್ನು ಆಯ್ದು ಸ್ವಾರಸ್ಯಕರ ಚಕಮಕಿಯ ಸಂಭಾಷಣೆ, ಹೊಸ ಹೊಳಹಿನ ಸನ್ನಿವೇಶಗಳ ಪರಿಕಲ್ಪನೆಯಲ್ಲಿ ಮೂಡಿಬರುವ, ಲವಲವಿಕೆಯ ನಾಟಕದ ನಡೆ, ತಂಡದ  ನಾಟಕಗಳ ವೈಶಿಷ್ಟ್ಯ. ಎರಡು ಗಂಟೆಗಳ ಅವಧಿಯ ಈ ನಾಟಕಗಳು ಜನರಂಜನೆ , ವೈಚಾರಿಕತೆಯೊಂದಿಗೆ ಹಾಸ್ಯದ ಲೇಪನವನ್ನೂ ಒಳಗೊಂಡು  ಜನರನ್ನು ನೇರವಾಗಿ ತಲುಪುವುದು ತಂಡದ ನಾಟಕಗಳ ಉದ್ದೇಶ, ಹಾಗೆ ಅದರಲ್ಲಿ ಸಫ‌ಲವೂ ಆಗಿದೆ.

ಈ ಮೇಲಿನ, ನೂರು ಪ್ರದರ್ಶನಗಳನ್ನು ಕಂಡ ನಾಟಕಗಳ ನಾಟಕಕಾರ ಹಾಗೂ ನಿರ್ದೇಶಕ ಎಸ್‌.ವಿ.ಕೃಷ್ಣ ಶರ್ಮ ಈಗಾಗಲೇ ಅನೇಕ ನಾಟಕಗಳನ್ನು ರಚಿಸಿದ್ದು, ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಬಿ- ಹೈ ಮಾನ್ಯತೆ ಪಡೆದ ಕಲಾವಿದರಾಗಿ ತಮ್ಮೆಲ್ಲ ನಾಟಕಗಳಲ್ಲಿ ಮುಖ್ಯಪಾತ್ರ ನಿರ್ವಹಿಸುವ ಜೊತೆಗೆ ಇತರ ಅನೇಕ ನಾಟಕಗಳಲ್ಲಿ ನಟಿಸಿ¨ªಾರೆ. ವೃತ್ತಿಯಲ್ಲಿ ಎಂಜಿನಿಯರ್‌ ( ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಿವೃತ್ತ) ಆಗಿದ್ದು , ಪ್ರವೃತ್ತಿಯಲ್ಲಿ ನಾಟಕಕಾರ, ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿ¨ªಾರೆ. ಕಾರಣಾಂತರಗಳಿಂದ ತಂಡ, ಹಲವು ವರುಷಗಳು ಸ್ಥಗಿತವಾಗಿದ್ದು ಇದೀಗ ಮತ್ತೆ ಪುನಶ್ಚೇತನಗೊಂಡಿದೆ.  ಮಹಾಭಾರತವನ್ನು ವಿಶಿಷ್ಟವಾಗಿ ನೋಡುವ ಈ "ಸುಯೋಧನ' ನಾಟಕದ 101ನೇ ಪ್ರಯೋಗ ಇದಾಗಿದೆ.

ಎಲ್ಲಿ?: ಕೆಎಚ್‌ ಕಲಾಸೌಧ, ಹನುಮಂತನಗರ

ಯಾವಾಗ?: ನ. 6, ಭಾನುವಾರ, ಸಂಜೆ 7.30ಕ್ಕೆ
ಪ್ರವೇಶ ದರ: 100 ರೂ.
ಬುಕ್ಕಿಂಗ್‌: https://in.bookmyshow.com/bengaluru/plays/sandhya-kalavidaru-trust-suyod...

Trending videos

Back to Top