CONNECT WITH US  

ರಫ್ ನಲ್ಲಿ ನಾಯಿ ಹ್ಯಾಪಿ ಬರ್ತ್‌ಡೇ ಆಚರಿಸಿ

ಮನೆಯಲ್ಲೊಂದು ಮುದ್ದು ನಾಯಿಮರಿ ಇದೆ. ಮುಂದಿನವಾರ ಅದರ ಬರ್ತ್‌ ಡೇ. ಮುದ್ದು ನಾಯಿಮರಿಗೆ ಬರ್ತ್‌ಡೇ ಆಚರಿಸಬೇಕು ಅಂತ ಮಕ್ಕಳು ಹಠ ಹಿಡಿಯುತ್ತವೆ. ಮನೆಯವರಿಗೂ ನಾಯಿಮರಿಯ ಜೊತೆ ದಿನ ಕಳೆಯೋಣ ಅನ್ನೋ ಆಸೆ ಇರತ್ತೆ. ಮನೆಯಲ್ಲೇ ಇರೋದಕ್ಕಿಂತ ಹೊರಗೆ ಹೋಗೋದು ಒಳ್ಳೇದು ಅಂತನ್ನಿಸಿರತ್ತೆ. ಇಂಥಾ ಹೊತ್ತಲ್ಲಿ ನಾಯಿಮರಿಗಳ ಬರ್ತ್‌ಡೇ ಆಚರಿಸೋದಕ್ಕೆಂದೇ ಒಂದು ತಾಣವಿದೆ. ಅದರ ಹೆಸರು ರಫ್ ಪೆಟ್‌ ಸರ್ವಿಸಸ್‌.

ನಾಯಿಗಳ ಜಗತ್ತು
ರಫ್ ಸಂಸ್ಥೆ ನಾಯಿಗಳ ಖುಷಿಗಾಗಿಯೇ ಇರೋ ಸಂಸ್ಥೆ. ನೀವು ಯಾವುದೋ ಊರಿಗೆ ಕುಟುಂಬ ಸಮೇತ ಟೂರ್‌ ಹೋಗುತ್ತಿದ್ದೀರಿ ಅಂತಿಟ್ಟುಕೊಳ್ಳಿ. ಅಲ್ಲಿಗೆ ನಾಯಿಯನ್ನು ಕೊಂಡು ಹೋಗಲು ಸಾಧ್ಯವಿಲ್ಲ. ಎರಡು ಮೂರು ದಿನ ನಾಯಿಯನ್ನು ಮನೆಯಲ್ಲೇ ಬಿಟ್ಟು ಹೋಗುವುದೂ ಕಷ್ಟ. ಅಂಥಾ ಹೊತ್ತಲ್ಲಿ ನೀವು ನಾಯಿಮರಿಯನ್ನು ರಫ್ನಲ್ಲಿ ಬಿಟ್ಟು ಹೋಗಬಹುದು. ಇಲ್ಲಿ ನಿಮ್ಮ ನಾಯಿಗೆ ಹಲವಾರು ಫ್ರೆಂಡ್ಸ್‌ ಸಿಗುತ್ತಾರೆ. ಅವರ ಜೊತೆ ಬಾಲ್‌ ಆಡಿಕೊಂಡು, ತಿಂಡಿ ತಿಂದುಕೊಂಡು ಆರಾಮಾಗಿರುತ್ತವೆ. 

ಡಾಗ್‌ ಸ್ಪಾ
ಬೋರ್ಡಿಂಗ್‌ ಹೊರತುಪಡಿಸಿ ಇಲ್ಲಿ ನಾಯಿ ಹೇರ್‌ಕಟ್‌ ಮಾಡೋದು, ಸ್ನಾನ ಮಾಡಿಸೋದು ಮುಂತಾದ ಸ್ಪಾ ಕೆಲಸಗಳು ಕೂಡ ನಡೆಯುತ್ತವೆ. ನಿಮ್ಮ ನಾಯಿಯನ್ನು ಚೆಂದ ಮಾಡಿ ಕರ್ಕೊಂಡ್‌ ಹೋಗಬಹುದು. 

ಪೆಟ್‌ ಟ್ಯಾಕ್ಸಿ
ಇಲ್ಲಿ ಪೆಟ್‌ ಟ್ಯಾಕ್ಸಿ ಕೂಡ ಉಂಟು. ನಾಯಿಗೇನಾದ್ರೂ ತೊಂದ್ರೆ ಆದ್ರೆ, ಅದನ್ನು ಆಸ್ಪತ್ರೆಗೆ ಕರ್ಕೊಂಡ್‌ ಹೋಗಬೇಕಾದ ಪರಿಸ್ಥಿತಿ ಬಂದ್ರೆ ಅಂಥಾ ಹೊತ್ತಲ್ಲಿ ರಫ್ಗೆ ಕಾಲ್‌ ಮಾಡಿದ್ರೆ ಸಾಕು. ಅವರು ಪೆಟ್‌ ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಡುತ್ತಾರೆ. ರಫ್ಗೆ ಕರ್ಕೊಂಡ್‌ ಹೋಗಬೇಕಾದ್ರೂ ಪೆಟ್‌ ಟ್ಯಾಕ್ಸಿಯಲ್ಲೇ ಕರೆದುಕೊಂಡು ಹೋಗಬಹುದು. 

ಡೇ ಕೇರ್‌
ಬೆಳಿಗ್ಗೆ ನಾಯಿಯನ್ನು ಇಲ್ಲಿ ಬಿಟ್ಟು ಸಂಜೆ ಹೊತ್ತಿಗೆ ಕರೆದುಕೊಂಡು ಹೋಗಬಹುದು. ಅಷ್ಟು ಹೊತ್ತು ನಿಮ್ಮ ನಾಯಿ ರಫ್ನಲ್ಲಿ ಆರಾಮಾಗಿರುತ್ತದೆ. ನಾಯಿಯನ್ನು ಆಟವಾಡಿಸಲೆಂದೇ ಇಲ್ಲಿಗೆ ಬರಬಹುದು. ಈ ಸಂಸ್ಥೆಯಲ್ಲಿ ಹಲವಾರು ಮಂದಿ ನಾಯಿಯ ವರ್ತನೆಯನ್ನು ಬಲ್ಲ ತಜ್ಞರಿದ್ದಾರೆ. ನಾಯಿ ವರ್ತನೆ ಬಗ್ಗೆ ಹೇಳುವುದಲ್ಲದೇ, ನಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. 

ಎಲ್ಲಿ- 358, 1ಎ ಕ್ರಾಸ್‌, ಕೋರಮಂಗಲ, 4ನೇ ಬ್ಲಾಕ್‌
ದೂ- 9945171969, 9845075999
ಫೇಸ್‌ಬುಕ್‌- https://www.facebook.com/ruffpetservices/
ವೆಬ್‌ಸೈಟ್‌-  http://ruffpetservices.in/

Trending videos

Back to Top