ಎರ್ಮಾಯಿ ಎಂಬ ಅಜ್ಞಾತ ಸುಂದರಿ


Team Udayavani, Jul 22, 2017, 12:16 PM IST

698.jpg

ಮಳೆಗಾಲ ಬಂತೆಂದರೆ ಸಾಕು. ಮಳೆಗಾಲದುದ್ದಕ್ಕೂ  ಪ್ರಕೃತಿಗೆ ಹಬ್ಬ. ಪ್ರಕೃತಿ ಮಾತೆ ಹಚ್ಚಹಸುರಿನಿಂದ ಕಂಗೊಳಿಸುತ್ತಾಳೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವ ಪಡೆಯುತ್ತವೆ.ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಮನಸ್ಸಿಗೆ, ಕಣ್ಣಿಗೆ ಆಹ್ಲಾದ ನೀಡುವ ಜಲಪಾತಗಳು ಆಗ ನಮಗೆ ಕಾಣ ಸಿಗುತ್ತವೆ.ಅಂಥವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಜಲಪಾತವೂ ಒಂದು.

    ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಸುಮಾರು 80 ಅಡಿ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕುವ ಈ ಜಲಧಾರೆಯನ್ನು ನೋಡುವುದೇ ಒಂದು ಹಬ್ಬ. ಒಂದು ಕಡೆ ಆಕಾಶದೆತ್ತರ ಬೆಳೆದು ನಿಂತ ಮರಗಳು,ಹಚ್ಚ ಹಸುರಿನ ಪ್ರಕೃತಿ, ಇನ್ನೊಂದು ಕಡೆ ಜೀರುಂಡೆಗಳ ಕಲರವ, ಮತ್ತೂಂದು ಕಡೆ ಮನಸ್ಸಿಗೆ ಖುಷಿ ನೀಡುವ ಜಲಧಾರೆ. ಈ ಎಲ್ಲ ಅನುಭವಗಳನ್ನು ಒಂದೇ ಕಡೆ ಪಡೆಯಬೇಕೆಂದರೆ ನೀವು ಎರ್ಮಾಯಿಗೆ ಬರಲೇಬೇಕು.

ಎರ್ಮಾಯಿ ಎಂಬ ಹೆಸರು ಬಂದಿದ್ದು ಹೇಗೆ?
ಎಳುವರೆ ಹಳ್ಳ ಎಂಬ ಜಾಗ ಈ ಜಲಪಾತದ ಉಗಮ ಸ್ಥಾನ.ಹಿಂದೆ ಏಳು ಜನ ಯುವಕರು ಗದ್ದೆ ಉಳುಮೆ ಮಾಡಿ ಎತ್ತುಗಳನ್ನು ಇದೇ ಜಾಗದಲ್ಲಿ ತೊಳೆಯುತ್ತಿದ್ದರಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಎತ್ತುಗಳು ಇದ್ದಕ್ಕಿದ್ದಂತೆ ಮಾಯವಾದವಂತೆ. ತುಳುವಿನಲ್ಲಿ  ಎತ್ತಿಗೆ ಎರು ಎಂದು ಕರೆಯುವ ಕಾರಣಕ್ಕೆ ಈ ಜಾಗಕ್ಕೆ ಎರು ಮಾಯ ಎಂಬ ಹೆಸರು ಬಂತಂತೆ. ಕ್ರಮೇಣ ಜನರ ಬಾಯಲ್ಲಿ ಹೀಗೆ ಕರೆಯಲ್ಪಟ್ಟು ಕಡೆಗೆ ಎರ್ಮಾಯಿ ಎಂದಾಯಿತಂತೆ.

    ಬೆಳ್ತಂಗಡಿಯಿಂದ ಕಾಜೂರಿಗೆ ತೆರಳುವ ಹಾದಿಯಲ್ಲಿ ಬಂದು ಕಾಜೂರಿನಲ್ಲಿ ಇಳಿದು ಕಾಡುದಾರಿಯಲ್ಲಿ 2 ಕಿ.ಮೀ ಕ್ರಮಿಸಿದರೆ ಎರ್ಮಾಯಿ ಜಲಪಾತ ತಲುಪಬಹುದು. ಈ ಜಲಪಾತಕ್ಕೆ ಹೋಗುವುದೇ ಒಂದು ಚಾರಣದ ಅನುಭವವನ್ನು ನೀಡುತ್ತದೆ. ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ನಡುವೆ ಸಿಗುವ ಹಳ್ಳ,ಬೇಡವೆಂದರೆ ಕಾಲುಸಂಕದಲ್ಲೂ ತೆರಳಬಹುದು. ಅಲ್ಲಿಂದ ಪುನಃ ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ದಟ್ಟ ಅಡವಿಯಲ್ಲಿ ದಾರಿ ಹುಡುಕುತ್ತಾ, ಮಧ್ಯದಲ್ಲಿ ಸಿಗುವ ಪುಟ್ಟಝರಿಗಳ ಚೆಲುವನ್ನು ಕಣ್ತುಂಬಿಸಿಕೊಳ್ಳುತ್ತಾ ,ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಿದಂತೆ ಹೊಸಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತದೆ.

ಆಗಸ್ಟ್‌ನಿಂದ ಡಿಸೆಂಬರ್‌ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಆಗ ಎರ್ಮಾಯಿ ಭೋರ್ಗರೆದು ಮನಮೋಹಕವಾಗಿ ಕಾಣಿಸುತ್ತಾಳೆ. . ಇನ್ನು ಇಲ್ಲಿಗೆ ಭೇಟಿ ನೀಡುವಾಗ ತಿಂಡಿ ಪೊಟ್ಟಣಗಳನ್ನು ಕೊಂಡೊಯ್ಯುವುದು ಉತ್ತಮ. ಜಲಪಾತ ನೋಡುವುದರೊಂದಿಗೆ ಚಾರಣದ ಸವಿಯನ್ನೂ ನೀಡುವ ಈ ತಾಣ ಸದಾ ಕೆಲಸದ ಜಂಜಡದಲ್ಲಿರುವವರ ಮನಸ್ಸಿಗೆ ಹಿತ ನೀಡುತ್ತದೆ.

ಸೌಮ್ಯಶ್ರೀ.ಎನ್‌.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.