ಕಂಚುಕಿ: ಕೇಂದ್ರದ ಸುತ್ತ ಅಭಿನಯದ ಉತ್ತುಂಗ


Team Udayavani, Aug 12, 2017, 4:01 PM IST

6588.jpg

ಕಾದಂಬರಿ ಪ್ರಕಾರದ ಹರವು ವಿಸ್ತಾರವಾದದ್ದು; ಬದುಕಿನ ಚಿತ್ರಣ ಅಲ್ಲಿ ನಿರೂಪಣೆಯ ಹಿನ್ನೆಲೆಯಲ್ಲಿ ಸೂಕ್ಷ್ಮವೂ ಹೌದು, ವಿಸ್ತೃತವೂ ಹೌದು. ಕಾದಂಬರಿಯಲ್ಲಿನ ಬದುಕಿನ ಚಿತ್ರಣವನ್ನು ರಂಗಪ್ರಯೋಗಕ್ಕೆ ಅದರ ಕಾಲಮಿತಿ ಅನುಸಾರ ಅಳವಡಿಸುವುದು ನಿಜಕ್ಕೂ ಸವಾಲು.  

ಇತ್ತೀಚೆಗೆ “ನಟರಂಗ’ ರಂಗತಂಡ, ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ರಂಗಶಂಕರದಲ್ಲಿ ರಂಗರೂಪಕ್ಕೆ ಇಳಿಸಿತ್ತು. ಕಾದಂಬರಿಕಾರರ ಆಶಯಗಳನ್ನು ಕಾಣಿಸುತ್ತಲೇ ನಾಟಕ ಕಟ್ಟಲು ಬೇಕಾದ ಕೇಂದ್ರವನ್ನು ಕಂಡುಕೊಂಡು ಅದರ ಧ್ವನಿಯನ್ನು ದೃಶ್ಯಗಳಾಗಿ ಕಟ್ಟಿದರು. ಕಂಬಾರರು “ಸಿಂಗಾರೆವ್ವ ಮತ್ತು ಅರಮನೆ’ ಅಂತ ಹೆಸರಿಸಿರುವುದನ್ನು ದಿವ್ಯಾ ಕಾರಂತ್‌ “ಕಂಚುಕಿ’ ಎಂದು ಮರುನಾಮಕರಿಸಿದ್ದು, ಕುತೂಹಲವೆನಿಸಿತು.

ಸಿಂಗಾರಿ ಅರಮನೆಯಲ್ಲಿದ್ದರೂ ಬಂಜೆಯಾಗಿ ನೋವಿನಲ್ಲಿ ನೆಣೆಯುವ ವೈರುಧ್ಯಗಳನ್ನು ಕಂಬಾರರು ಕಟ್ಟಿಕೊಟ್ಟರೆ ದಿವ್ಯಾ ತಮ್ಮ ಪ್ರಯೋಗಕ್ಕೆ ಕೇಂದ್ರವನ್ನು ಕಂಚುಕಿ ರೂಪದಲ್ಲಿ ತೋರಿಸಿದ್ದಾರೆ. “ಕಂಚುಕಿ’ ಪದಕ್ಕೆ ಅಂತಃಪುರದ ಅಧಿಕಾರಿ ಎಂಬರ್ಥವೂ ಇದೆ. 

ರಾಜಮನೆತನದ ತನ್ನ ಗಂಡ ಬಲಹೀನತೆಯಲ್ಲಿ ಬಳಲುತ್ತಿರುವುದರಿಂದ ಸಿಂಗಾರಿಯ ಬದುಕಿನ ನಡೆ ಕ್ರಮೇಣ ಕವಲೊಡೆಯುತ್ತದೆ. ಆಕೆ ಅನಿರೀಕ್ಷಿತಗಳಿಗೆ ಪಕ್ಕಾಗುತ್ತಾಳೆ. ಆರಂಭದಲ್ಲಿನ ಭಯ ಮತ್ತು ಹೇವರಿಕೆಗಳು ಕ್ರಮೇಣ ಬದಲಾಗುತ್ತವೆ. ಕಾಯುವಿಕೆಯ ಹಂತ ಮುಗಿದಾಗ ಸಿಂಗಾರಿ ತನ್ನ ನಪುಂಸಕ ಗಂಡನನ್ನು ಬದಿಗೆ ಸರಿಸಿ ತನ್ನನ್ನು ಬೆಚ್ಚಿಸುವ, ಅದೇ ವೇಳೆ ಕಾಳಜಿಯೂ ತೋರುವ, ಒರಟನಂತಿರುವ ಆದರೆ ಆಳದಲ್ಲಿ ಮೃದುವಾಗಿರುವವನನ್ನು ತನ್ನ ಅಂತಃಪುರದ ಅಧಿಕಾರಿಯಾಗಿಸಿಕೊಂಡು ಗರ್ಭ ಧರಿಸುತ್ತಾಳೆ. ದಿವ್ಯಾರವರು ಕಾದಂಬರಿಯ ಶೀರ್ಷಿಕೆಯನ್ನು ಕಂಚುಕಿಯಾಗಿ ಮಾರ್ಪಾಡು ಮಾಡಿರುವ ರೀತಿ ಈ ಬಗೆಯದು.

ರಂಗರೂಪದಲ್ಲಿನ ತಮ್ಮ ದರ್ಶನದ ಅನುಸಾರ ಕೇಂದ್ರವನ್ನು ತುಂಬ ಸ್ಪಷ್ಟಪಡಿಸಿಕೊಂಡಿದ್ದರಿಂದ ದಿವ್ಯಾರಿಗೆ ಈ ಎಲ್ಲವನ್ನೂ ಅಭಿನಯದ ಸಾಧ್ಯತೆಯಲ್ಲಿ ತುಂಬಾ ಪ್ರೌಢಿಮೆಯಿಂದ ಕಟ್ಟಿ, ನಿರ್ದೇಶಿಸಲು ಸಾಧ್ಯವಾಗಿದೆ.  

ಅಭಿನಯದ ಸಾಧ್ಯತೆಗಳಿಗೆ ಒತ್ತು ನೀಡಿದ್ದು ಪ್ರತಿ ಹಂತದಲ್ಲೂ ಸ್ಪಷ್ಟವಾಗುತ್ತಿತ್ತು. ಸಾಧ್ಯತೆಗಳನ್ನು ಪಕ್ವಗೊಳಿಸಿಕೊಂಡಿರುವ ಬಗೆಯೂ ಆಗಾಗ ಇಣುಕುತ್ತಿತ್ತು. ಪ್ರತಿಯೊಬ್ಬರ ಅಭಿನಯವೂ ಸಹಜವಾಗಿತ್ತು; ಅಂದರೆ, ಅಭಿನಯವನ್ನು ನಾಟಕೀಯಗೊಳಿಸಲು ದಿವ್ಯಾ ಮುಂದಾಗಿಲ್ಲ. ಹಾಗಾಗಿ ಇಲ್ಲಿ ಅತೀ ಕಸರತ್ತುಗಳಿರಲಿಲ್ಲ. ಎಲ್ಲೋ ಸ್ವಗತದ ಮಾದರಿಯ ಮಾತುಗಳನ್ನು ಮತ್ತು ಭಯ ಆತಂಕಗಳನ್ನು ವ್ಯಕ್ತಪಡಿಸುವ ಸಂದರ್ಭಗಳಲ್ಲಿ ಮಾತ್ರ ಚೂರು ನಾಟಕೀಯ- ಅದೂ ಸಹಜತೆಯ ಕಕ್ಷೆಯ ಒಳಗೇ ಬರುವಂತೆ ನೋಡಿಕೊಳ್ಳಲಾಗಿದೆ.  

 ಇಲ್ಲಿ ತಂತ್ರಗಾರಿಕೆಯನ್ನು ಮೇಲಾಟ ಮಾಡಿಕೊಳ್ಳದ ಪರಿಣಾಮ ನಿರೂಪಿತ ಬದುಕಿನ ಸಹಜ ಗತಿ ಆವರಿಸಿಕೊಳ್ಳಲಾರಂಭಿಸಿತು. ಇಲ್ಲಿ ತಂತ್ರಗಾರಿಕೆ ಇರಲೇ ಇಲ್ಲವೆಂದಲ್ಲ; ರಂಗವನ್ನು ನೆರಳು ಬೆಳಕಿನಲ್ಲಿ ವಿಭಾಗಿಸಿಕೊಂಡ ಕ್ರಮ ಸರಳವಾಗಿಯೂ, ಪೂರಕವಾಗಿಯೂ ಇತ್ತು. ಸಿಂಗಾರಿ ಮತ್ತು ಆಕೆಯ ಅಂತಃಪುರದ ಅಧಿಕಾರಿ ಮಿಲನದಲ್ಲಿ ಸೇರುವ ದೃಶ್ಯವನ್ನು ಕಟ್ಟಿಕೊಟ್ಟ ಪರಿ ಶ್ಲಾಘನೀಯ. 

ಪ್ರತಿಯೊಬ್ಬರ ಅಭಿನಯವೂ ಆಯಾ ಪಾತ್ರಗಳ ನೋವಿನ ಅನುಭವದಲ್ಲಿ ಪಾಲುಗೊಳ್ಳುವಷ್ಟು ದಟ್ಟವಾಗಿತ್ತು. ಸಿಂಗಾರಿ ಪಾತ್ರದಾಕೆ ತನ್ನ ಸಾಮರ್ಥ್ಯವನ್ನು ತೋರಿಸಿದರು. ಶ್ರೀನಿಂಗಿ ಪಾತ್ರದ ನಟಿ ಅಭಿನಯದ ಬೇರೆ ಬೇರೆ ಮಜಲುಗಳನ್ನು ಸಮರ್ಥವಾಗಿ ಕಾಣಿಸಿದರು. ದೇಸಾಯಿ ಪಾತ್ರ ನಿರ್ವಹಣೆ ತಾರಕ ಮುಟ್ಟಿತ್ತು. 

ಹಿನ್ನೆಲೆ ಸಂಗೀತ ತುಸು ಪೇಲವವಾಗಿತ್ತು. ಸಾಹಿತ್ಯ ಚೆಂದವಿದ್ದರೂ, ಅದು ಸಂಗೀತದಲ್ಲಿ ಸಮರ್ಥವಾಗಿ ಧ್ವನಿಸಲಿಲ್ಲ. ಮಂಜು ನಾರಾಯಣ್‌ ಉತ್ತಮವಾಗಿ ಬೆಳಕಿನ ನಿರ್ವಹಣೆ ಮಾಡಿದ್ದಾರೆ. 

ಎನ್‌. ಸಿ. ಮಹೇಶ್‌

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.