ಅಕ್ಷರ ಲೋಕದ ಅಂಗಳದಲ್ಲಿ…


Team Udayavani, Jan 27, 2018, 11:24 AM IST

books-recview.jpg

ಕಥಾಸಾಗರ 1,2 
ತಮ್ಮ ಸಣ್ಣ ಕಥಾ ಸಂಕಲನಗಳನ್ನು ಎರಡು ಸಂಪುಟಗಳಲ್ಲಿ ಲೇಖಕರು ಹೊರತಂದಿದ್ದಾರೆ.  ಅದಕ್ಕೆ ಕಥಾಸಾಗರ 1,2 ಎಂದು ಹೆಸರಿಡಲಾಗಿದೆ.  ಲೇಖಕರು ಉತ್ತರ ಕರ್ನಾಟಕದವರಾದ್ದರಿಂದ ಸಹಜವಾಗಿ ಕತೆಗಳಲ್ಲಿ ಉತ್ತರಕರ್ನಾಟಕದ ಸೊಗಡಿದೆ. ಅವರು ಮೈಸೂರು ಸೀಮೆಯಲ್ಲಿ ನೆಲೆಸಿದವರಾದ್ದರಿಂದ ಅಲ್ಲಿನ ನೆಲಕ್ಕೆ ಸಂಬಂಧಿಸಿದ ಕತೆಗಳೂ ಇವೆ. ತಾವು ಹೇಳುವ ಕತೆಗಳಿಂದ ದೂರವೇ ಉಳಿಯುವ ಕತೆಗಾರ ಇಷ್ಟವಾಗುತ್ತಾನೆ.

ಓದಿ ಮುಗಿಸಿದಾಗೊಮ್ಮೆ ವಿಷಾದ ಭಾವ ಆವರಿಸುವಂತೆ ಮಾಡುವ ಹಲವು ಕತೆಗಳು ಇಲ್ಲಿವೆ. ಇಪ್ಪತ್ತೆ„ದು ವರ್ಷಗಳು ಹುಟ್ಟೂರಿನಿಂದ ದೂರವಾಗಿದ್ದರೂ ಗದಗ ತನ್ನದೆನ್ನುವ ಮಲಕಾಜಿ ಮತ್ತು ಮಾಧು, ತಂದೆಯ ಸಮಾಧಿ ಇರುವುದರಿಂದ ಆ ಜಮೀನು ತನ್ನದೆನ್ನುವ ಬೋರೆಗೌಡ, ಬಿಕಾನೇರ ಮಹಾರಾಜರು ಕರೆದರೂ ಒಲ್ಲೆನೆಂದು ಸ್ವರಗಳ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸುವ ಧೋಂಡೂಸಾ,

ದಟ್ಟವಾದ ಕಾಡಿನಲ್ಲೂ ದಾರಿ ತೆರೆದುಕೊಂಡು ಮುನ್ನಡೆಯುವ ಸಿದ್ಧ ಈ ಕತೆಗಳು ನೈಜವಾಗಿದೆ. ಜೀವಂತಿಕೆಯಿಂದ ಕೂಡಿವೆ. ಹರಿಯುವ ನೀರನ್ನು ತಡೆಗಟ್ಟಿ  ಕಾಡುಗಳನ್ನು ಸವರಿ ನೆಲವನ್ನು ಬಂಜೆಯಾಗಿಸುವ ರಾಜಕೀಯ, ಮನೆಗಳನ್ನು ಕೆಡ ಗೋಡೆಗಳನ್ನು ನಿಲ್ಲಿಸುತ್ತದೆ. ತಾವು ಕಂಡ ಪ್ರಪಂಚವನ್ನು, ಹೊಂದಿದ ಜೀವನಾನುಭವವನ್ನು ಲೇಖಕರು ಇಲ್ಲಿ ಮನುಡಿಯುವ ಕಥೆಗಳಾಗಿಸಿದ್ದಾರೆ.

ಲೇ: ಮಾಧವ ಕುಲಕರ್ಣಿ. ಆದಿತ್ಯ ಪಬ್ಲಿಕೇಷನ್ಸ್‌, ಎಲ್‌.ಐ.ಜಿ.-49, ಮಹಾಂತೇಶ್‌ ನಗರ, ಬೆಳಗಾವಿ.

***

ಹಂಪಿ ವಿಜಯನಗರ ಕೆಲವು ಬರಹಗಳು
ವಿಜಯನಗರಕ್ಕೆ ಸಂಬಂಧಿಸಿದ ಅಧ್ಯಯನಗಳತ್ತ ಒಮ್ಮೆ ಕಣ್ಣಾಡಿಸಿದರೆ ನಮ್ಮ ಭಾರತೀಯ ಸಂಸ್ಕೃತಿಯ ಬೃಹದ್ದರ್ಶನವಾಗುತ್ತದೆ. ದಕ್ಷಿಣ ಭಾರತದ ಮಟ್ಟಿಗೆ ವಿಜಯನಗರ ನಿತ್ಯಸ್ಫೂರ್ತಿಯ ತಾಣ. ಅಗೆದಷ್ಟೂ ದೊರೆಯುವ ಮಾಹಿತಿ, ಹೊಸ ವಿಷಯಗಳು ಅಧ್ಯಯನಶೀಲರಿಗೆ ಸದಾ ಕುತೂಹಲದ ಆಗರ. ಜನಸಾಮಾನ್ಯರಿಗೆ ತಮ್ಮ ನಾಡಿನ ಗತವೈಭವದ ನೆನಪು ಸದಾ ಚೈತನ್ಯದಾಯಕ.

ವಿಜಯನಗರವೆಂಬುದು ಕರುನಾಡ ಜನತೆಗೊಂದು ಹೆಮ್ಮೆ. ಎಲ್ಲ ಧರ್ಮ ಮತ್ತು ಸಂಸ್ಕೃತಿಗಳ ಕೇಂದ್ರ ವಿಜಯನಗರ. ವಿಜಯನಗರ ವೈಭವದ ಆ ದಿನಗಳಲ್ಲಿ ಆಡಳಿತದಲ್ಲೂ, ಸೇನೆಯಲ್ಲೂ, ಸಾರ್ವಜನಿಕ ಸೇವೆಗಳಲ್ಲೂ ಎಲ್ಲ ವರ್ಗದ ಜನರೂ ಪಾಲ್ಗೊಳ್ಳುತ್ತಿದ್ದರೆಂಬುದು ಅಧ್ಯಯನದ ಮೂಲಕ ತಿಳಿದುಬರುತ್ತದೆ. ಹಂಪಿಯ ದೊರೆಗಳು ಯಾವತ್ತೂ ಧರ್ಮ ಸಹಿಷ್ಣುಗಳಾಗಿದ್ದರು. ವೆಂಕಟಪತಿರಾಯ ಅರವೀಡು ಮನೆತನದ ಪ್ರಸಿದ್ಧ ಅರಸ.

ಶ್ರೀವೈಷ್ಣವ ಸಂಪ್ರದಾಯದ ಅವನು ತನ್ನ ಆಸ್ಥಾನದಲ್ಲಿ ಯೇಸುಕ್ರಿಸ್ತನ ಸುಂದರ ಪಟವೊಂದನ್ನು ಇರಿಸಿದ್ದನಂತೆ! ಇದು ಅವನ ಧರ್ಮ ಸಹಿಷ್ಣುತೆಗೆ ಸಾಕ್ಷಿ. ಈಗಿನ ಹಂಪಿಯ ಸ್ಮಾರಕಗಳು ಎಷ್ಟೋ ಕವಿಗಳಿಗೆ, ಬರಹಗಾರರಿಗೆ ಪ್ರೇರಣೆಯ ಪ್ರತೀಕಗಳು. ಪ್ರಸ್ತುತ ಕೃತಿಯಲ್ಲಿ ವಿಜಯನಗರ ಅರಸರಕಾಲದ ಶಾಸನಗಳ ವಿವರಣೆ, ಅವರು ನೀಡಿದ್ದ ದಾನ, ದತ್ತಿಗಳು, ಅವರ ಬಿರುದಾಂಕಿತಗಳ 
ಹಿನ್ನೆಲೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. 

ಪೊ: ಲಕ್ಷ್ಮಣ್‌ ತೆಲಗಾವಿ.
ಪ್ರ: ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ, 577545

***

ನಾವು ಕಂಡಂತೆ ವಿವೇಕಾನಂದ
ಧರ್ಮ ಮತ್ತು ಆಧ್ಯಾತ್ಮಗಳ ಜೇಷ್ಠತೆಯನ್ನು ಪ್ರತಿಪಾದಿಸಲು ಜೀವನವನ್ನೇ ಮುಡಿಪಾಗಿಟ್ಟವರು ಸ್ವಾಮಿ ವಿವೇಕಾನಂದರು. ಸಮಾಜದ ದುರ್ಬಲರ, ದೀನ ದಲಿತರ ಸೇವೆಯನ್ನು ತಮ್ಮ ಜೀವನದ ಪ್ರಮುಖ ಅಂಗವಾಗಿ ಭಾವಿಸಿ ಕಾರ್ಯಗತರಾಗುವ ಸನ್ಯಾಸಿ ಪರಂಪರೆಯ ನಿರ್ಮಾಣದ ಬೀಜಾಂಕುರ ಮಾಡಿದರು. ಜಗತ್ತಿನಲ್ಲಿ ಉತ್ತಮರು, ಧೀರರೂ, ಯಾರಿದ್ದಾರೋ ಅವರು ಬಹು ಜನರ ಒಳಿತಿಗಾಗಿ ಅಸ್ಪೃಶರ ಕಲ್ಯಾಣಕ್ಕಾಗಿ ತಮ್ಮನ್ನೇ ತಾವು ತ್ಯಾಗ ಮಾಡಬೇಕಾಗಿದೆ ಎಂದು ಸಂದೇಶವಿತ್ತವರು ಸ್ವಾಮಿ ವೇಕಾನಂದರು.

ಧರ್ಮವನ್ನು ಅಂಧಶ್ರದ್ಧೆಯಿಂದ ಮುಕ್ತಗೊಳಿಸಲು ಶ್ರಮಿಸಿದಷ್ಟೇ ತೀವ್ರತೆಯಿಂದ ಸ್ವಾಮೀಜಿಯವರು ಸಮಾಜವನ್ನು ಅಜಾnನ ಬಡತನಗಳಿಂದ ಮುಕ್ತ ಗೊಳಿಸಲು ಕಟಿಬದ್ಧರಾದರು. ಮೊದಲು ಅನ್ನ, ನಂತರ ಧರ್ಮ ಎಂದು ಸಾರಿದರು. ಹಿಂದೂ ಧರ್ಮದ ಬಗ್ಗೆ ಅವರಿಗೆ ಅಚಲ ಶ್ರದ್ಧೆ ವಿಶ್ವಾಸ ಇದ್ದರೂ ಅವರೆಂದೂ ಅದರ ಕುರುಡು ಸಮರ್ಥಕರಾಗಲಿಲ್ಲ. ಇಂತಹ ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ. ಆದರೆ ತಲೆಮಾರುಗಳ ವರೆಗೂ ಅವರನ್ನು ನೆನಪಿಟ್ಟುಕೊಳ್ಳಬಹುದಾದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ಅವರ ಜೀವನವನ್ನು ಮೂರುಭಾಗಗಳಾಗಿ ವಿಂಗಡಿಸಬಹುದು. ಒಂದು- ವಿದ್ಯಾರ್ಥಿ ಸಾಧಕ. ಎರಡು-ಅಲೆಮಾರಿ ಸನ್ಯಾಸಿ. ಮೂರು. ವೇದಾಂತ ಪ್ರಚಾರಕ. ಮನೆಯಲ್ಲಿ ಕಸ ಸೇರುವಂತೆ ಮನದಲ್ಲೂ ಕಸ ಶೇಖರಣೆಯಾಗುತ್ತದೆ. ಈ ಕಸವನ್ನು ತೆಗೆಯಲು ಮಹಾತ್ಮರ ಜೀವನ ಮತ್ತು ಸಾಧನೆ ಸಂದೇಶಗಳೇ ಮುಖ್ಯ ಸಾಧನ. ಜಾnನಗಳಿಕೆಯ ವಿಷಯದಲ್ಲಿ ನಾವು ವ್ಯಾಕುಲರಾಗಬೇಕು. ದೊಡ್ಡ ವಿಚಾರಗಳಲ್ಲಿ ಮನಸ್ಸನ್ನು ನೆನೆಸಬೇಕು. ಅರಳಿಸಬೇಕು. ಈ ನಿಟ್ಟಿನಲ್ಲಿ ಈ ಕೃತಿ ರಚಿತವಾಗಿದೆ. 

ಸಂ: ಡಾ. ಎನ್‌. ಚಿನ್ನಸ್ವಾಮಿ ಸೋಸಲೆ.
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

* ವೀಣಾ ಚಿಂತಾಮಣಿ

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.