ತಾರೆಗಳ ತೋಟದ ಸೇವಕರು


Team Udayavani, Apr 14, 2018, 3:52 PM IST

566633.jpg

ಕೈಗೆ ಸಿಗದೇ ಇರುವ ಸಂಗತಿಗಳ ಬಗ್ಗೆಯೇ ಮನುಷ್ಯನಿಗೆ ಕುತೂಹಲ ಜಾಸ್ತಿ. ಅದಕ್ಕೇ ಇರಬೇಕು; ಆಕಾಶ, ನಕ್ಷತ್ರ, ಆಕಾಶಕಾಯಗಳು, ಅವುಗಳ ಚಲನೆ… ಬಾಹ್ಯಾಕಾಶದ ಚಟುವಟಿಕೆಗಳ ಬಗ್ಗೆ ನಮಗೆ ಸೋಜಿಗ ಜಾಸ್ತಿ. ಆ ಕುತೂಹಲದ ಬೆನ್ನತ್ತಿ ಜನರು ಮ್ಯೂಸಿಯಂಗಳಿಗೆ, ತಾರಾಲಯಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಫ‌ಲಕಗಳನ್ನು, ಪ್ರಾತ್ಯಕ್ಷಿಕೆಗಳನ್ನು, ವಿಜ್ಞಾನ ಮಾದರಿಗಳ ಮೂಲಕ ವಿಷಯಗಳನ್ನು ಸರಳವಾಗಿ ವಿವರಿಸಲಾಗಿರುತ್ತದೆ. ಅವನ್ನೆಲ್ಲ ನೋಡಿ, ಆ ಫ‌ಲಕಗಳನ್ನು ಕಣ್ಮುಚ್ಚದೆ ಓದಿದರೂ ಕೆಲವೊಂದು ಸಂಗತಿಗಳು ಅರ್ಥವೇ ಆಗುವುದಿಲ್ಲ. ವಿಜ್ಞಾನದ ಉಪಕರಣಗಳನ್ನು ಬಳಸುವ ಮಾರ್ಗವೂ ಕೆಲವರಿಗೆ ತೋಚುವುದಿಲ್ಲ. ಆಗ “ಛೇ, ಇದನ್ನೆಲ್ಲಾ ವಿವರಿಸಿ ಹೇಳ್ಳೋಕೆ ಯಾರಾದ್ರೂ ಇರಬೇಕಿತ್ತು’ ಅನ್ನಿಸುವುದು ಸಹಜ. 

  ವೀಕ್ಷಕರ ಈ ಅಗತ್ಯವನ್ನು ಮನಗಂಡಿರುವ ಜವಾಹರಲಾಲ್‌ ನೆಹರು ತಾರಾಲಯವು, ವಿಜ್ಞಾನ ಮಾದರಿಗಳನ್ನು ವಿವರಿಸಲು ಸ್ವಯಂಸೇವಕರನ್ನು ನೇಮಿಸಿದೆ. ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ, ವಿಜ್ಞಾನದ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. 

ಇವರು “ವನಪಾಲಕ’ರು…

ನೀವು, ನೆಹರು ತಾರಾಲಯಕ್ಕೆ ಭೇಟಿ ನೀಡಿದ್ದರೆ, ಅಲ್ಲಿಯೇ ಹೊರಭಾಗದಲ್ಲಿರುವ ವಿಜ್ಞಾನ ವನಕ್ಕೂ ಹೋಗಿರುತ್ತೀರಿ. ಅಲ್ಲಿ, ಸೌರಮಂಡಲದ ಮಾದರಿ, ಆಪ್ಟಿಕ್‌ ಟ್ರೀ, ಪಿಎಸ್‌ಎಲ್‌ವಿ ಕ್ಷಿಪಣಿ, ಕೆಲಿಡೋಸ್ಕೋಪ್‌, ಆರ್ಕಿಮಿಡಿಸ್‌ ಸೂðé, ವಿಸ್ಪರಿಂಗ್‌ ಡಿಶ್‌ ಸನ್‌ಡಯಲ್‌, 3ಡಿ ಪೆಂಡ್ಯುಲಮ್‌, ಗ್ಲೋಬ್‌, ಆಪ್ಟಿಕಲ್‌ ಇಲ್ಯೂಶನ್‌, ಪ್ರಿನ್ಸಿಪಲ್‌ ಅಫ್ ಸೀ ಸಾ ಸೇರಿದಂತೆ 40ಕ್ಕೂ ಹೆಚ್ಚು ವಿಜ್ಞಾನ ಹಾಗೂ ಬಾಹ್ಯಾಕಾಶ ಮಾದರಿಗಳಿವೆ. ಪ್ರತಿ ಮಾದರಿಯ ಪಕ್ಕದಲ್ಲೂ ಅದರ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ನೀವು ಈಗ ಪುನಃ ಅಲ್ಲಿಗೆ ಭೇಟಿ ಕೊಟ್ಟರೆ, ನಿಮ್ಮನ್ನು ನಗುಮೊಗದಿಂದ ಸ್ವಾಗತಿಸಿ, ಅಲ್ಲಿರುವ ಮಾದರಿಗಳನ್ನು ವಿವರಿಸುವ, ಯಂತ್ರಗಳನ್ನು ಬಳಸುವ ವಿಧಾನವನ್ನು ತಿಳಿಸಿಕೊಡುವ ಸ್ವಯಂಸೇವಕರಿದ್ದಾರೆ. ಹ್ಯಾಟು ತೊಟ್ಟ ಇವರನ್ನು ಈ “ವನಪಾಲಕರು’ ಎನ್ನಲಡ್ಡಿಯಿಲ್ಲ. 

ಯಾರಿವರು?

ಇವರು ಕೆ.ಆರ್‌. ಸರ್ಕಲ್‌ನಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು. ಭೌತಶಾಸ್ತ್ರದಲ್ಲಿ ಬಿಎಸ್ಸಿ ಓದುತ್ತಿರುವ ಈ ವಿದ್ಯಾರ್ಥಿಗಳು ಬೇಸಿಗೆ ರಜಾದಿನಗಳಲ್ಲಿ ಸ್ವಯಂಸೇವಕರಾಗಿ ಇಲ್ಲಿಗೆ ಬಂದಿದ್ದಾರೆ. ಪ್ರತಿದಿನವೂ ಈ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು ಇಲ್ಲಿರುತ್ತಾರೆ. ವಿಜ್ಞಾನ ವನದಲ್ಲಿರುವ ಮಾದರಿಗಳ ಬಗ್ಗೆ, ತಾರಾಲಯದ ಸಿಬ್ಬಂದಿಯಿಂದ ಮಾಹಿತಿ ಪಡೆದಿರುವ ಇವರು ಅದನ್ನು ಸರಳವಾಗಿ ಪ್ರೇಕ್ಷಕರಿಗೆ ವಿವರಿಸುತ್ತಾರೆ. ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ತಾರಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ನೆರವಾಗಲು ಈ ಸೌಲಭ್ಯ ನೀಡಲಾಗಿದೆ ಎನ್ನುತ್ತಾರೆ ತಾರಾಲಯದ ಸಿಬ್ಬಂದಿ. ಈ ಸ್ವಯಂಸೇವಕರ ಸೇವೆ ಬೇಸಿಗೆ ಪೂರ್ತಿ ದೊರೆಯಲಿದೆ. ಸೈಯದ್‌ ತಾಹೀರ್‌, ಸೈಯದ್‌ ಫ‌ಹಾತೀಮ್‌, ರೋಶನ್‌ ಹಾಗೂ ನವೀನ್‌ರ ತಂಡ ಶುಕ್ರವಾರ ತಾರಾಲಯದಲ್ಲಿತ್ತು.  
ಬೇಸಿಗೆಯಲ್ಲಿ ಮಕ್ಕಳನ್ನು ಕರೆದುಕೊಂಡು ತುಂಬಾ ಜನ ತಾರಾಲಯಕ್ಕೆ ಬರುತ್ತಾರೆ. ದೊಡ್ಡವರು ಇಲ್ಲಿರುವ ಮಾಹಿತಿಗಳನ್ನು ಓದಿ ಅರ್ಥ ಮಾಡಿಕೊಳ್ತಾರೆ. ಮಕ್ಕಳಿಗೆ ಅವು ಅರ್ಥವಾಗೋದಿಲ್ಲ. ಆದರೆ, ಅವರಿಗೆ ಕುತೂಹಲ ಜಾಸ್ತಿ. ಇದೇನು? ಇಲ್ಲಿ ಯಾಕೆ ಹೀಗಿದೆ? ಇದನ್ನು ತಿರುಗಿಸಿದರೆ ಏನಾಗುತ್ತೆ?… ಅಂತೆಲ್ಲಾ ಪ್ರಶ್ನೆಗಳನ್ನು ಕೇಳ್ತಾರೆ. ಅದನ್ನು ಅವರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುತ್ತೇವೆ. ಕೆಲವೊಂದು ಪ್ರಯೋಗಗಳನ್ನು ನಾವೇ ಮಾಡಿ ತೋರಿಸುತ್ತೇವೆ. ಇದು ನಮ್ಮ ಕಲಿಕೆಗೂ ಸಹಕಾರಿ.
– ನವೀನ್‌, ಸ್ವಯಂಸೇವಕ 

ರಜೆಯಲ್ಲಿ ಆಕಾಶಕ್ಕೆ ಏಣಿ ಹಾಕಿ!
ಜವಾಹರಲಾಲ್‌ ನೆಹರು ತಾರಾಲಯ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರವನ್ನೂ ನಡೆಸಲಾಗುತ್ತಿದೆ. ಟೈನಿ ಟಾಟ್ಸ್‌ (3ರಿಂದ 5ನೇ ತರಗತಿ ಮಕ್ಕಳಿಗೆ) ಫ‌ನ್‌ ವಿತ್‌ ಸೈನ್ಸ್‌ (6-7 ತರಗತಿ) ಹ್ಯಾಂಡ್ಸ್‌ ಆನ್‌ ಅಸ್ಟ್ರೋನಮಿ (8-10ನೇ ತರಗತಿ) ಸಮ್ಮರ್‌ ಕೋರ್ಸ್‌-ಲೈಟ್‌ ಆ್ಯಂಡ್‌ ಲೈಫ್ (9-10ನೇ ತರಗತಿ), ಒಂದು ದಿನದ ಕಾರ್ಯಾಗಾರ (8-9ನೇ ತರಗತಿಗೆ, ಏ.15, 22, 29 ಹಾಗೂ ಮೇ 6) ಫ್ರಂ ವೆಬ್‌ ಆಫ್ ಲೈಫ್ ಟು ಯುನಿವರ್ಸ್‌ (ಪಿಯುಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 10 ದಿನಗಳ ಶಿಬಿರ, ಮೇ 22- ಜೂ.2ರವರೆಗೆ) ಇತ್ಯಾದಿ ವಿಜ್ಞಾನ ಹಾಗೂ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಶಿಬಿರಗಳು ನಡೆಯುತ್ತಿವೆ. ಹೆಚ್ಚಿನ ವಿವರಗಳಿಗೆ www.taralaya.org ಅಥವಾ 22379725/22266084/22203234 ಸಂಪರ್ಕಿಸಿ. 

 - ಪ್ರಿಯಾಂಕಾ

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.