ತಲೆದಂಡ: ಶಕ್ತಕೃತಿಗೆ ನಾಟಕೀಯ ಸ್ಪರ್ಶ 


Team Udayavani, Jun 16, 2018, 3:57 PM IST

256663.jpg

ಕೆಲವು ರಂಗಕೃತಿಗಳು ವಸ್ತು ಮತ್ತು ಮಾತಿನ ಬಲದಿಂದ ತುಂಬ ಶಕ್ತವಾಗಿರುತ್ತವೆ. ಇಲ್ಲಿ ಮಾತಿನ ಬಲ ಎನ್ನುವುದು ವಾಚಾಳಿತನದ ರೀತಿಯದ್ದಲ್ಲ. ಬದಲಾಗಿ ಶತಮಾನಗಳ ಹಿಂದೆ ನಡೆದ ಚಳವಳಿಯೊಂದನ್ನು ಅದರದೇ ಪಾತ್ರ ಮತ್ತು ಸನ್ನಿವೇಶಗಳ ಮೂಲಕ ಇಂದಿನ ಸಂದರ್ಭವನ್ನು ರೂಪಕವಾಗಿ ಚಿತ್ರಿಸುವ ಸವಾಲಿನದ್ದು. ಇಂಥ ಕೃತಿಗೆ ಕಾಲವನ್ನು ಮೀರುವ ಶಕ್ತಿ ಇರುತ್ತದೆ. ಅದು ಧ್ವನಿಸುವ ಮಾತುಗಳಲ್ಲಿ ಹೊಳಹುಗಳಿರುತ್ತವೆ. 

 ಗಿರೀಶ್‌ ಕಾರ್ನಾಡರ “ತಲೆದಂಡ’ ರಂಗಕೃತಿ ಈ ಬಗೆಯದು. ಯಾರೇ ನಿರ್ದೇಶಕನಾಗಲಿ, ಈ ರಂಗಕೃತಿಯನ್ನು ಪ್ರಯೋಗಕ್ಕೆ ತೆಗೆದುಕೊಂಡಾಗ ಹೆಚ್ಚು ಅಲಂಕಾರಗೊಳಿಸುವ ಬಗೆಗೆ ಯೋಚಿಸಬೇಕಾಗಿರುವುದಿಲ್ಲ. ತುಂಬ ನಾಟಕೀಯವಾಗಿ ವಿನ್ಯಾಸಗಳನ್ನ ನಿರ್ಮಿಸಬೇಕಾಗಿರುವುದಿಲ್ಲ. ಸುಮ್ಮನೆ ಕಾಲವನ್ನು ಬಿಂಬಿಸುವ ಪೋಷಾಕು ತೊಟ್ಟುಕೊಂಡು ನಟರು ಬಂದು ಮಾತಿಗೆ ನಿಂತರೆ ಸಾಕು, ಅಭಿನಯದಲ್ಲಿ ಕಸರತ್ತು, ದೇಹಭಾಷೆಯ ಬಗೆಗೆ ಜಿಜಾnಸೆ ಈ ಯಾವುವೂ ಬೇಡ; ರಂಗಕೃತಿಯಲ್ಲಿನ ಮಾತುಗಳಲ್ಲೇ ಈ ಎಲ್ಲ ಕಸರತ್ತುಗಳು ಅಡಕಗೊಂಡು ನಟರನ್ನು ಮುನ್ನಡೆಸುವ ಶಕ್ತಿ ಈ ಕೃತಿಗೆ ಇದೆ. ಆದರೆ, ರಂಗಕೃತಿಯೊಂದಕ್ಕೆ ಅದರ ಪ್ರದರ್ಶನದ ಸಾಧ್ಯತೆಯನ್ನು ನಿರ್ದೇಶಕ ತನ್ನ ಸೃಜನಶೀಲ ನೆಲೆಯಲ್ಲಿ ದೊರಕಿಸಿಕೊಡಲು ಸದಾ ಹವಣಿಸುತ್ತಿರುತ್ತಾನೆ. ಇದು ಎಲ್ಲ ರಂಗಕೃತಿಗಳಿಗೂ ಅನ್ವಯವಾಗುವುದಿಲ್ಲ. ಅನ್ವಯವಾಗಬೇಕಾಗಿಯೂ ಇಲ್ಲ. ಸಾಧಾರಣ ವಸ್ತುವನ್ನು ಅಸಾಧಾರಣ ಎಂದು ಬಿಂಬಿಸಲು ಮುಂದಾಗುವಾಗ ನಿರ್ದೇಶಕ ಈ ಕಸರತ್ತನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಆದರೆ “ತಲೆದಂಡ’ ರಂಗಕೃತಿಯ ಮಟ್ಟಿಗೆ ಈ ಯಾವ ಕಸರತ್ತುಗಳೂ ಅಗತ್ಯವಿಲ್ಲ. ಪಾತ್ರಗಳು ಮಾತಿಗೆ ಆರಂಭಿಸುತ್ತಿದ್ದಂತೆ ಒಂದು ಲೋಕ ತಂತಾನೇ ಕಟ್ಟಿಕೊಳ್ಳಲು ಆರಂಭಿಸುತ್ತದೆ.

ಈಚೆಗೆ ರಂಗಸಿರಿ ತಂಡ “ತಲೆದಂಡ’ ನಾಟಕವನ್ನು ಎಡಿಎ ರಂಗಮಂದಿರದಲ್ಲಿ ಪ್ರದರ್ಶಿಸಿದಾಗ ಈ ಅಂಶ ಮತ್ತೆ ಸಾಬೀತಾಯಿತು. ಜಾತಿ ಸಂಘರ್ಷವನ್ನು ಬಿಜ್ಜಳನಿಂದ ಆರಂಭಿಸಿ ಬಸವಣ್ಣ ಮತ್ತು ಶರಣರು ಎದುರಿಸುವ ವಸ್ತುವನ್ನು ಒಳಗೊಂಡಿರುವ ಈ ನಾಟಕ ವರ್ತಮಾನದ ಜಾತೀಯತೆ ಮತ್ತು ತಲ್ಲಣಗಳಿಗೆ ಸ್ಪಂದಿಸುತ್ತಿದೆ ಎನ್ನುವ ಕಾರಣಕ್ಕಾಗಿಯೇ ಅದು ಜೀವಂತ ಅನಿಸಿಕೊಳ್ಳುತ್ತದೆ. ಈ ಸಂಘರ್ಷವನ್ನು ರಂಗದ ಮೇಲೆ ಕೃತಿಯ ನೆಲೆ ಬಿಟ್ಟು ತಾನು ಮತ್ತೂಂದು ಆವರಣ ಕಟ್ಟುತ್ತೇನೆ ಎನ್ನುವ ಹಠಕ್ಕೆ ನಿರ್ದೇಶಕ ಬೀಳದಿದ್ದರೆ ಎಲ್ಲವೂ ಸಲೀಸೇ. ಸಂದೀಪ್‌ ಪೈ ಇದನ್ನು ಚೆನ್ನಾಗಿ ಅರಿತು ನಟರಿಗೆ ನಾಟಕದ ಸಂಘರ್ಷ ಅರ್ಥ ಮಾಡಿಸಿರುವುದು ಕಂಡುಬರುತ್ತಿತ್ತು.

ಇದರ ಆಚೆಗೆ ಅವರು ಮಾಡಿಕೊಂಡಿರುವ ವಿನ್ಯಾಸಕ್ಕೆ ಅನುಗುಣವಾಗಿ ರಂಗಸಜ್ಜಿಕೆಗಳನ್ನು ನಿರ್ಮಿಸಿಕೊಂಡಿದ್ದರು. ಶಶಿಧರ್‌ ಅಡಪ ಅವರ ರಂಗಸಜ್ಜಿಕೆ ಔಚಿತ್ಯದ ಎಲ್ಲೆ ದಾಟದಂತೆ ಇದ್ದವು. ನಾಟಕವನ್ನು ರಂಗಕೃತಿಯಲ್ಲಿನ ಪಾತ್ರ ಸನ್ನಿವೇಶದಂತೆ ಯಥಾವತ್ತಾಗಿ ಯಾವ ನಾಟಕೀಯತೆಯನ್ನೂ ಪ್ರಯತ್ನಪೂರ್ವಕವಾಗಿ ತರದೆ ಆರಂಭಿಸಿದ ಸಂದೀಪ್‌ ಪೈ ಅವರಿಗೆ ಕೆಲವು ಕಡೆ ದೃಶ್ಯಗಳನ್ನು ನಾಟಕೀಯವಾಗಿ ಕಟ್ಟಬೇಕೆನಿಸಿದೆ. ಬಸವಣ್ಣ ತನ್ನ ಶರಣರೊಡಗೂಡಿ ಪಯಣಿಸುವುದು, ಆತ್ಮಾವಲೋಕನಕ್ಕೆ ತೊಡಗುವುದು ಇವೆಲ್ಲವುಗಳ ನಾಟಕೀಯ ವಿನ್ಯಾಸ ಚೆನ್ನಾಗಿತ್ತು. ಜೊತೆಗೆ ಇವು ಕೆಲವೇ ಕ್ಷಣಗಳಲ್ಲಿ ಹಾದುಹೋಗುವ ದೃಶ್ಯಾವಳಿಗಳಾದರೂ ಇನ್ನೂ ಒಂದಿಷ್ಟು ಮೆರುಗು ಬೇಕಿತ್ತು ಅನಿಸಿದ್ದು ನಿಜ. ಉಳಿದಂತೆ ಎಲ್ಲ ಸರಾಗ.  

   ಮೊದಲಿಗೆ ಬಿಜ್ಜಳನ ಪಾತ್ರಧಾರಿ ಅಭಿನಯಕ್ಕೆ ಸಂಬಂಧಿಸಿದಂತೆ ಒಂದು ಶೃತಿಯ ಸ್ತರ ಕಟ್ಟಿಕೊಟ್ಟರು. ಅವರ ಅಭಿಯನದ ಪರಿ ಅಷ್ಟು ಶೃತಿಬದ್ಧವಾಗಿತ್ತು. ಉಳಿದವರೂ ಆ ಶೃತಿಯ ಸ್ತರ ತಾಕುತ್ತಾರೆ ಎಂಬ ನಿರೀಕ್ಷೆಯನ್ನು ನಾಟಕ ಹುಟ್ಟಿಸಿತು. ಕೆಲವರು ಆ ಹಂತ ತಲುಪಲಿಕ್ಕೆ ಶ್ರಮಿಸಿದರು. ನಿಜದ ಕಥೆಯಲ್ಲಿ ಬಸವಣ್ಣ, ಬಿಜ್ಜಳನಿಗೆ ಸವಾಲು ಒಡ್ಡಿದಂತೆ ನಾಟಕದಲ್ಲೂ ಅಭಿನಯದ ವಿಚಾರದಲ್ಲಿ ಬಸವಣ್ಣ, ಬಿಜ್ಜಳನಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಹುದು ಎನ್ನುವ ರೀತಿಯಲ್ಲಿ ಆರಂಭವಿತ್ತು. ಬಸವಣ್ಣನ ಪಾತ್ರಧಾರಿ ಈ ನಿರೀಕ್ಷೆ ಹುಸಿಗೊಳಿಸಲಿಲ್ಲವಾದರೂ ಒಂದು ಪ್ರಭೆಯ ಹಾಗೆ ಬೆಳಗಲು ಸಾಧ್ಯವಾಗಲಿಲ್ಲ ಎನ್ನುವುದು ಒಂದು ಲೋಪ. ಆದರೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಅವರ ಅಭಿನಯದಲ್ಲಿ ತೀವ್ರತೆ ಇತ್ತು. ಎಲ್ಲಕ್ಕೂ ಮಿಗಿಲಾಗಿ ದೃಶ್ಯ ಮುಕ್ತಾಯವಾಗಿ ಮತ್ತೂಂದು ದೃಶ್ಯ ಆರಂಭವಾಗುವ ಮೊದಲು ಹಾಡುಗಾರಿಕೆಯಲ್ಲಿ ಬಳಸಿಕೊಂಡ ವಚನಗಳು ಔಚಿತ್ಯಪೂರ್ಣವಾಗಿದ್ದರೂ, ನೃತ್ಯ ಸಂಯೋಜನೆಯಲ್ಲಿ ಹಿಡಿತವಿರಲಿಲ್ಲ. ಈ ತಂತ್ರ ಅಗತ್ಯವಿತ್ತೆ ಎಂದು ಪ್ರಶ್ನಿಸಿಕೊಳ್ಳುವಂತಿತ್ತು. ಅಂತರ ತುಂಬಿಸಲಿಕ್ಕೆ ಹಾಡು ನೃತ್ಯ ಪ್ರತಿಬಾರಿ ಬಳಸುತ್ತಿದ್ದಾರೇನೋ ಅನಿಸುವ ರೀತಿಯಲ್ಲಿ ನೃತ್ಯ ಬಳಕೆ ಆಯಿತು. ನಾಟಕದ ಆರಂಭದಲ್ಲಿನ ಬಿಗಿ ಬಂಧ ಕ್ರಮೇಣ ಸಡಿಲವಾಗುತ್ತಾ ಹೋಗಿ ಶರಣರು ಆಕ್ರೋಶ ವ್ಯಕ್ತಪಡಿಸುವ ವೇಳೆಗೆ ತೀವ್ರತೆ ಕಳೆದುಕೊಂಡಂತೆ ಅನಿಸಿತು. ಈ ಕೆಲವೇ ನ್ಯೂನತೆಗಳನ್ನು ಹೊರತುಪಡಿಸಿದರೆ ಪ್ರಯೋಗದಲ್ಲಿ ಸಾಂದ್ರತೆಯಂತೂ ಇತ್ತು. 

-ಎನ್‌.ಸಿ ಮಹೇಶ್‌  

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.