CONNECT WITH US  

ಮಕ್ಕಳೇ ಕಥೆ ಕೇಳಿ!

ಕಥೆ ಅಂದರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವೇ. ಮಕ್ಕಳು ಕತೆ ಕೇಳುತ್ತಾ ಬೆರಗಾಗುತ್ತಾ ಕಲ್ಪನಾಲೋಕದಲ್ಲಿ ಕಳೆದುಹೋಗುವುದನ್ನು ನೋಡುವುದೇ ಚಂದ. ಕಥೆ ಕೇಳುವ ಮಕ್ಕಳಿಗಾಗಿ "ಕಥಾ ಪಡಸಾಲೆ' ಎನ್ನುವ ಕತೆ ಹೇಳುವ ಕಾರ್ಯಕ್ರಮ ಏರ್ಪಾಡಾಗಿದೆ. ರಂಗನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಸ್ನೇಹ ಕಪ್ಪಣ್ಣ ಮತ್ತು ಅಂಕಿತ ನಿಹಾರಿ ಮಕ್ಕಳಿಗೆ ಕಥೆ ಹೇಳಲಿದ್ದಾರೆ. 8-12 ವರ್ಷದೊಳಗಿನ ಮಕ್ಕಳು, ಶನಿವಾರ ಸಂಜೆ 6 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. 

ಎಲ್ಲಿ?: ಸಿಜಿಕೆ ರಂಗನಿರಂತರ, ಬಿಇಎಂಎಲ್‌ ಬಡಾವಣೆ 3ನೇ ಹಂತ, ರಾಜರಾಜೇಶ್ವರಿನಗರ 
ಯಾವಾಗ?: ಆಗಸ್ಟ್‌ 12, ಭಾನುವಾರ, ಬೆಳಿಗ್ಗೆ 10.30
ಸಂಪರ್ಕ: 9663574999


Trending videos

Back to Top