CONNECT WITH US  

ಪ್ರಶಸ್ತಿ ಪ್ರದಾನ ಹಾಗೂ ಯಕ್ಷ ಪ್ರದರ್ಶನ

ಯಕ್ಷಗಾನದ ಮೇಲಿನ ಅತೀವ ಪ್ರೀತಿಯಿಂದ ಪ್ರಾರಂಭವಾದ "ಯಕ್ಷಸಿಂಚನ' ಸಂಸ್ಥೆ 9ನೇ ವರ್ಷಕ್ಕೆ ಕಾಲಿಟ್ಟಿದೆ. ವಾರ್ಷಿಕೋತ್ಸವದ ನಿಮಿತ್ತ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದ ಓರ್ವ ಸಾಧಕರಿಗೆ "ಸಾರ್ಥಕ-ಸಾಧಕ' ಪ್ರಶಸ್ತಿ ನೀಡಲಾಗುತ್ತಿದ್ದು, ಈ ವರ್ಷ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ಸತೀಶ್‌ ಕೆದಿಲಾಯಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುವುದು. ಇದೇ ವೇಳೆ, ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ "ವೃಷಸೇನ ಕಾಳಗ' ಮತ್ತು ಯಕ್ಷಸಿಂಚನ ತಂಡದಿಂದ "ಜಲಂಧರನ ಕಾಳಗ' ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಅಖೀಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸಂಘಟಕ ಎಸ್‌.ಎನ್‌. ಪಂಜಾಜೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಎಂ. ಎ. ಹೆಗಡೆ ಮತ್ತು ಸಾಹಿತಿ ಜಿ.ಎಸ್‌.ಭಟ್ಟ ಭಾಗವಹಿಸುತ್ತಿ¨ªಾರೆ.

ಎಲ್ಲಿ?: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಟೌನ್‌ ಹಾಲ್‌ ಹತ್ತಿರ, ಜೆ.ಸಿ.ರಸ್ತೆ
ಯಾವಾಗ?: ಸೆ.2, ಭಾನುವಾರ ಮಧ್ಯಾಹ್ನ 3.30


Trending videos

Back to Top