CONNECT WITH US  

ಬಿಎಸ್ಸೆನ್ನೆಲ್‌ "ನಗೆಹಬ್ಬ'

ಬಿ.ಎಸ್‌.ಎನ್‌.ಎಲ್‌ ನೌಕರರ ಸಹಕಾರ ಸಂಘ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.  ಈ ಕಾರ್ಯಕ್ರಮವನ್ನು ಸಹಕಾರ ಸಚಿವ ಬಂಡಪ್ಪ ಕಾಶಂಪೂರ ಉದ್ಘಾಟಿಸಲಿದ್ದು, "ಸುವರ್ಣ ಸೌರಭ' ಸ್ಮರಣ ಸಂಚಿಕೆಯನ್ನು ಬಿ.ಎಸ್‌.ಎನ್‌.ಎಲ್‌ ಕರ್ನಾಟಕ ವೃತ್ತದ ಮುಖ್ಯ ಮಹಾಪ್ರಬಂಧಕ ಆರ್‌. ಮಣಿ ಲೋಕಾರ್ಪಣೆಗೊಳಿಸಲಿದ್ದಾರೆ.ಬೆಂಗಳೂರು ಜಿಲ್ಲಾ ಮಹಾಪ್ರಬಂಧಕ ಸಂಘದ ಅಂತರ್ಜಾಲ ತಾಣವನ್ನು ಉದ್ಘಾಟಿಸುವರು. ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಹಾಗೂ ಜಂಟಿ ನಿಬಂಧಕ ಮೊಹಮ್ಮದ್‌ ಜಫ‌ರುಲ್ಲಾಖಾನ್‌ ಪ್ರತಿಭಾ ಪುರಸ್ಕಾರ, ಗೌರವಾಪರ್ಣೆ ನಡೆಸಿಕೊಡುತ್ತಾರೆ. ಮಧ್ಯಾಹ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್‌ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿಮ್ಮನ್ನು ನಗಿಸಲು ಹಾಸ್ಯ ಸಾಹಿತಿಗಳಾದ ಎಂ.ಎಸ್‌.ನರಸಿಂಹ ಮೂರ್ತಿ, ರಿಚರ್ಡ್‌ ಲೂಯಿಸ್‌, ಮೈಸೂರು ಆನಂದ್‌, ಕಿರ್ಲೋಸ್ಕರ್‌ ಸತ್ಯ ಬರುತ್ತಿದ್ದಾರೆ. ಸಹನಾ ಭಾರದ್ವಾಜ್‌ರಿಂದ ಭರತನಾಟ್ಯ ಮತ್ತು ಗೀತಗಾಯನ ಹಾಗೂ ಸಂಘದ ನೌಕರರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.

ಎಲ್ಲಿ?: ಸಂಯುಕ್ತ ಗುಜರಾತಿ ಭವನ, ಸರ್ದಾರ್‌ ಪಟೇಲ್‌ ಭವನ, #16, ತಿಮ್ಮಯ್ಯ ರಸ್ತೆ, ವಸಂತನಗರ
ಯಾವಾಗ?: ಸೆ.2, ಭಾನುವಾರ ಬೆಳಗ್ಗೆ 10.30

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top