ಅನಾಮಿಕನ ಬಲೆಗೆ ಸ್ವಿಸ್‌ ಟೆನಿಸ್‌ ತಾರೆ ಫೆಡರರ್‌!

Team Udayavani, Sep 8, 2018, 2:59 PM IST

92.jpg

ಒಂದು ಸೆಟ್‌, ಒಂದು ಬ್ರೇಕ್‌ನ ಮುನ್ನಡೆಯನ್ನು ಕೂಡ ಕಳೆದುಕೊಂಡು ಟಾಪ್‌ 50ರೊಳಗಿಲ್ಲದ, ಟಾಪ್‌ 10 ಆಟಗಾರರನ್ನು ಈವರೆಗೆ ಸೋಲಿಸಿಲ್ಲದ ಆಟಗಾರನೊಬ್ಬನಿಗೆ ವಿಶ್ವದ ಅಗ್ರ ಕ್ರಮಾಂಕಿತ ಆಟಗಾರನೊಬ್ಬ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೋಲುವುದೆಂದರೆ ಒಂದು ಕ್ಷಣ ನಿಂತು ಯೋಚಿಸಬೇಕಾದ ಘಟನೆ. 

ವಿಶ್ವದ ಗರಿಷ್ಠ 20 ಗ್ರ್ಯಾನ್‌ ಸ್ಲಾಂಗಳನ್ನು ಗೆದ್ದು ದಾಖಲೆ ಬರೆದಿರುವ ಸ್ವಿರ್ಜಲೆಂಡ್‌ನ‌ ರೋಜರ್‌ ಫೆಡರರ್‌ ಮೊನ್ನೆ ನ್ಯೂಯಾರ್ಕ್‌ನಲ್ಲಿ ನಡೆದಿರುವ ಯು.ಎಸ್‌.ಓಪನ್‌ನಲ್ಲಿ  ಪಕ್ಕಾ ಅನಾಮಿಕ ಆಸ್ಟ್ರೇಲಿಯಾದ 55ನೇ ಕ್ರಮಾಂಕದ ಮಿಲ್‌ವುನ್‌ ಕೈಯಲ್ಲಿ ಪರಾಜಿತರಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

ನಿವೃತ್ತಿಯ ಹತ್ತಿರಕ್ಕೆ ಬಂದರೆ ಫೆಡರರ್‌? 
ನಿಜ, ರೋಜರ್‌ ಅಮೆರಿಕನ್‌ ಹಾರ್ಡ್‌ ಕೋರ್ಟ್‌ ಸ್ಲಾಂನಲ್ಲಿ ತೋರಿದ ಎರಡನೇ ಅತ್ಯಂತ ಕಳಪೆ ಪ್ರದರ್ಶನ ಇದು. ಇಲ್ಲಿ ಐದು ಬಾರಿ ಚಾಂಪಿಯನ್‌ ಆಗಿರುವ ರೋಜರ್‌ 2001ರಲ್ಲಿ ಅಮೆರಿಕದ ಆ್ಯಂಡ್ರಿ ಅಗ್ಗಾಸ್ಸಿ ಎದುರು ಇದೇ ಹಂತದಲ್ಲಿ ಇಂತದ್ದೇ ಆಟ ಆಡಿದ್ದರು. ಅವತ್ತು ಕೊನೆಪಕ್ಷ ಎದುರಿಗಿದ್ದ ಆಟಗಾರನಾದರೂ ಬಲಾಡ್ಯನಾಗಿದ್ದ. ಮಿಲ್‌ವುನ್‌ ಎದುರಿನ ಹೀನಾಯ ಸೋಲು ಮರೆಯಬಹುದಾದ ಒಂದು ಅಪಘಾತ ಎಂದುಕೊಳ್ಳೋಣ ಎಂದರೂ ಫೆಡರರ್‌ರ 37ರ ವಯಸ್ಸು ನೆನಪಾಗುತ್ತದೆ. 2008ರಿಂದ ಇಲ್ಲಿ ಫೆಡರರ್‌ ಸ್ಲಾಂ ಗೆದ್ದಿಲ್ಲ ಎಂಬುದು ಕೇಳುತ್ತದೆ. ಆರೋಗ್ಯವಾಗಿರುವ ಮನೆಯ ಹಿರಿಯ ಜೀವ ಇದ್ದಕ್ಕಿದ್ದಂತೆ ಸ್ನಾನಗೃಹದಲ್ಲಿ ಬಿದ್ದಿದ್ದೇ ನೆಪವಾಗಿ ಹಾಸಿಗೆ ಹಿಡಿದು ಬಾಳು ಮುಗಿಸುತ್ತದೆ. ಈ ಸೋಲು ಫೆಡರರ್‌ರ ಆತ್ಮವಿಶ್ವಾಸವನ್ನು ಸೋಲಿಸಿ ಅವರ ನಿವೃತ್ತಿಯನ್ನು ಹತ್ತಿರಕ್ಕೆ ತರುತ್ತದೆಯೇ?

ವರ್ಷದಲ್ಲಿ ಚಿನ್ನದ ಬೆಳೆ 
ತೀರಾ ಗಡಿಬಿಡಿ ಮಾಡುವ ಕಾಲದಲ್ಲಿ ನಾವಿದ್ದೇವೆ. ತೀರ್ಪು ಬರೆಯುವ ಅವಸರ ನಮಗೆ. ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲವರಲ್ಲಿ ರೋಜರ್‌ ಒಬ್ಬರು. ಮೊಣಕಾಲು ಗಾಯದಿಂದ ಚೇತರಿಸಿಕೊಂಡವರು ಈ ಋತುವಿನಲ್ಲಿ 33-5ರ ಗೆಲುವು ಸೋಲಿನ ದಾಖಲೆ ಇಟ್ಟುಕೊಂಡಿದ್ದಾರೆ. ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್‌, ಯುಎಸ್‌ ತಯಾರಿ ಟೂರ್ನಿ ಸಿನ್ಸಿನೆಟ್ಟಿಯ ಫೈನಲ್‌ ಹೊರತಾಗಿ ರೋಜರ್‌ ಮೂರು ಪ್ರಶಸ್ತಿ ಪಡೆದಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದು ಮರೆಯಲಾದೀತೆ? ಅದು ಬಿಡಿ, ಸನ್‌ಶೈನ್‌ ಡಬಲ್‌ ಎಂಬ ಖ್ಯಾತಿಯ ಇಂಡಿಯಾನಾ ವೆಲ್ಸ್‌, ಮಿಯಾಮಿಯ ಎಟಿಪಿ ಗೆದ್ದಿದ್ದು ಮತ್ತು ಕೆಲ ವಾರಗಳ ಕಾಲ ವಿಶ್ವದ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದು ಪ್ರಚಂಡ ಸಾಧನೆ.

ಟೆನಿಸ್‌ ಸೀಸನ್‌ನ ಕೊನೆ 
2018ರ ಟೆನಿಸ್‌ ಋತು ಕೊನೆಯ ಹಂತದಲ್ಲಿದೆ, ಫೆಡ್‌ರ ಟೆನಿಸ್‌ ಜೀವನವಲ್ಲ! ಫೆಡರರ್‌ ಲೇವರ್‌ ಕಪ್‌ನಲ್ಲಿ ಆಡಲಿದ್ದಾರೆ. ದೈಹಿಕವಾಗಿ ತಂಪು ದೇಶದಿಂದ ಬಂದ ಫೆಡರರ್‌ಗೆ ಉಷ್ಣ ಕೂಡ ಎದುರಾಳಿಯಾಗುತ್ತಿದೆ. ಮೊನ್ನೆ ನ್ಯೂಯಾರ್ಕ್‌ನಲ್ಲಿ ಆಗಿದ್ದೂ ಅದೇ. ಬಹುಶಃ ಮೊದಲೆರಡು ಸೆಟ್‌ ಗೆದ್ದು ಬಿಟ್ಟಿದ್ದರೆ ಫ‌ಲಿತಾಂಶ ಬೇರೆಯಾಗಿರುತ್ತಿತ್ತು. ಆಗ ನಿವೃತ್ತಿಯ ಕೂಗು ಎಬ್ಬಿಸುವವರ ಬಾಯಿ ಕಟ್ಟುತ್ತಿತ್ತು. ಅಕ್ಷರಶಃ ಫೆಡರರ್‌ ಹೇಳಿದ್ದೂ ಇದನ್ನೇ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.