“ಸುಯಿಂ ಟಪಕ್’ ಮಕ್ಕಳ ನಾಟಕ
Team Udayavani, Nov 10, 2018, 2:51 PM IST
8 ವರ್ಷದೊಳಗಿನ ಮಕ್ಕಳಿಗಾಗಿ ನಾಟಕ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ. ನಾಟಕದ ಹೆಸರು “ಸುಯಿಂ ಟಪಕ್’. ಶಬ್ದ, ತಾಳ, ಮ್ಯಾಜಿಕ್ಅನ್ನು ಒಳಗೊಂಡು ಮಕ್ಕಳಿಗಿಷ್ಟವಾಗುವ ಅಂಶಗಳನ್ನು ನಾಟಕ ಹೊಂದಿರುವುದು ವಿಶೇಷ. ನಾಟಕ ಇಂಗ್ಲೀಷಿನದಾದರೂ, ಭಾಷೆಯ ಹಂಗಿಲ್ಲದೆ ಸುಲಭವಾಗಿ ಅರ್ಥವಾಗುವಂತೆ ನಾಟಕವನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳನ್ನು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯಲಿದೆ ಎನ್ನುವುದು ಆಯೋಜಕರ ವಿಶ್ವಾಸದ ಮಾತು. ನಾಟಕವನ್ನು ಅನೀಶ್ರವರು ನಿರ್ದೇಶಿಸಿದ್ದಾರೆ. ಮಕ್ಕಳ ರಂಗ ತಂಡ “ಆಹಾ’ ಪ್ರಸ್ತುತಪಡಿಸುತ್ತಿದೆ.
ಎಲ್ಲಿ?: ರಂಗಶಂಕರ, ಜೆ.ಪಿ.ನಗರ
ಯಾವಾಗ?: ನ. 14, ಸಂಜೆ 7.30