CONNECT WITH US  
echo "sudina logo";

15 ದಿನ ಭೂಮಿ ಬಿಟ್ಟು ಹೋಗಿ ಬನ್ನಿ...

ಭಾರೀ ಭಾರಿ ಶ್ರೀಮಂತರ ಐಶಾರಾಮಿ ಖಯಾಲಿಗಳು ಹಲವಾರು. ಅವುಗಳಲ್ಲೊಂದು ಅನ್ಯ ಗ್ರಹಕ್ಕೆ ಹೋಗಿ ಬರಬೇಕೆನ್ನುವುದು. ಈಗಾಗಲೇ ನಾಸಾ ಸೇರಿದಂತೆ ವಿಶ್ವದ ಕೆಲ ಸಾಹಸಿ ಪರ್ಯಟನೆ ಆಯೋಜನಾ ಸಂಸ್ಥೆಗಳು ಇಂಥ ಆಫ‌ರ್‌ಗಳನ್ನು ಜನರಿಗೆ ನೀಡಿದ್ದುಂಟು. ಈಗ, "ಆ್ಯಕ್ಸಿಯಮ್‌ ಸ್ಪೇಸ್‌' ಎಂಬ ಸಂಸ್ಥೆ, ಭೂಮಿಯನ್ನು ಬಿಟ್ಟು 8 ದಿನ ಖಗೋಳ ಪರ್ಯಟನೆ ಮಾಡುವ ಟೂರ್‌ ಪ್ಯಾಕೇಜನ್ನು ಜನರ ಮುಂದಿಟ್ಟಿದೆ. 2020ರಿಂದ ಆರಂಭವಾಗುವ 15 ದಿನಗಳ ಈ ಪ್ರವಾಸ ಶುಲ್ಕ ಕೇವಲ 371 ಕೋಟಿ ರೂ.!

ಏನಿರಬೇಕು ಅರ್ಹತೆ?
ಈ ಪ್ರಯಾಣಕ್ಕೆ ಸಜ್ಜಾಗಿರುವವರು 21 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು. ಗರಿಷ್ಠ ವಯೋ ಮಿತಿಯೇನಿಲ್ಲ. ಆದರೆ, ಕೂಲಂಕಷ ವೈದ್ಯ ಕೀಯ ಪರೀಕ್ಷೆ, "ದ ರೈಟ್‌ ಸ್ಟಫ್'  ಮಾದರಿಯ ಪರೀಕ್ಷೆಗಳ ಮೂಲಕ ಅಂತರಿಕ್ಷದಲ್ಲಿ ಇವರು ಪ್ರಯಾಣಿಸುವ ಆಕಾಶಕಾಯ ಸ್ಪಿನ್‌ ಅಥವಾ ಏರುಪೇರಾದರೆ ಅವರು ತೋರಬಹುದಾದ ಮಾನಸಿಕ ಸ್ಥೈರ್ಯಗಳನ್ನು ಕಂಡುಕೊಂಡ ನಂತರವಷ್ಟೇ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು. 

ಸೌಲಭ್ಯಗಳೇನು?
ಈ ಪ್ರಯಾಣಕ್ಕಾಗಿ ಅಣಿಯಾಗಿರುವ ಆಕಾಶ ಕಾಯ, ಟೆಲಿಫೋನ್‌ ಬೂತ್‌ ಮಾದರಿಯಲ್ಲಿರಲಿದೆ. ಭೂಮಿಯ ಮೇಲ್ಮೆ„ ನಿಂದ 402 ಕಿ.ಮೀ. ಎತ್ತರದಲ್ಲಿ ಸಾಗಲಿದೆ. ಉಚಿತ ವೈಫೈ, ಸಂಬಂಧಿಗಳಿಗೆ ಫೋನಾಯಿಸುವ ಅನುಕೂಲ ಇರಲಿದೆ. ಪ್ರತಿ ಯೊ ಬ್ಬರ ಕ್ಯಾಬಿ ನ್‌ಗೂ ವಿಶೇಷ ಎಲ್‌ ಇಡಿ ಪರದೆ ಇರಲಿದ್ದು, ನೆಟ್‌ ಪ್ಲಿಕ್ಸ್  ಸಂಪರ್ಕದಿಂದ ಚಲನ ಚಿ ತ್ರಗಳನ್ನು ವೀಕ್ಷಿಸಬಹುದಾಗಿದೆ. ಟಿವಿ ಕಾರ್ಯಕ್ರಮಗಳನ್ನು ನೋಡ ಬಹುದಾಗಿದೆ. ಆರೋಗ್ಯ ಕರ ಪೇಯ, ತಿನಿಸು ಎಲ್ಲವೂ ಲಭ್ಯ. ಸ್ಪಾಂಜ್‌ ಬಾತ್‌ಗೂ ಅನುಕೂಲವಿರಲಿದೆ. 

ಹೊಸ ಸ್ಪೇಸ್‌ ಸ್ಟೇಷನ್‌
ಅಂದ ಹಾಗೆ, ಅಂತರಕ್ಷಕ್ಕೆ ಸಾಗಿದ ನಂತರ, ಈ ಪ್ರಯಾಣಿಕರು ನೂತನವಾಗಿ ನಿರ್ಮಿಸಲಾಗುವ ಬಾಹ್ಯಾ ಕಾಶ ನಿಲ್ದಾಣದಲ್ಲಿ ಕೆಲ ಗಂಟೆಗಳ ಕಾಲ ಬಿಡಾರ ಹೂಡಲಿ ದ್ದಾರೆ. ಈಗ ಸದ್ಯಕ್ಕೆ ನಿರ್ಮಾಣ ಹಂತದಲ್ಲಿರುವ ಆ ನಿಲ್ದಾಣ, 2022ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲ ಕಾಲ ಇಳಿದು, ಅಲ್ಲಿ ವಿಹಾರ ಮಾಡಿ ಇಡೀ ಅಂತರಿಕ್ಷವನ್ನು ನೋಡುವ ಅವಕಾಶ ಸಿಗಲಿದೆ. 

ವಿಶೇಷ ಸೂಟ್‌
ಈ ಪ್ರವಾಸಕ್ಕೆ ತೆರಳುವವರಿಗೆಂದೇ ನಾಸಾ ಕಡೆಯಿಂದ ವಿಶೇಷ ಸೂಟ್‌ಗಳನ್ನು ವಿನ್ಯಾಸಗೊಳಿ ಸುತ್ತಿರುವುದಾಗಿ ಆಕ್ಸಿಯಮ್‌ ಹೇಳಿದೆ. ಇವು ಕೃತಕ ಚರ್ಮದ ಮಾದರಿಯ ಸೂಟ್‌ಗಳಾಗಿರಲಿವೆ.

*ಅಮೆರಿಕದ ಆ್ಯಕ್ಸಿಯಮ್‌ ಸ್ಪೇಸ್‌ ಸಂಸ್ಥೆಯಿಂದ ಆಫ‌ರ್‌
*ಅಂತರಿಕ್ಷ ಸುತ್ತುವ ವಿಶೇಷ ಪ್ರವಾಸದ ಪ್ಯಾಕೇಜ್‌ ಪ್ರಕಟ

*2020 ಈ ವರ್ಷದಲ್ಲಿ ಸಂಸ್ಥೆಯ ಮೊದಲ ಪ್ರವಾಸ ಶುರು
*371ಕೋಟಿ ಪ್ರವಾಸಕ್ಕೆಂದು  ನಿಗದಿಪಡಿಸಲಾಗಿರುವ ಶುಲ್ಕ
*15 ದಿನ ಗಳ ಪ್ರವಾಸ ಯೋಜನೆಯಿದು

Trending videos

Back to Top