CONNECT WITH US  

ಸುದ್ದಿ ಕೋಶ: ಮುಗಿಯಿತೇ ಗಲ್ಫ್ ಕನಸು?

ಕೇರಳ, ಕರ್ನಾಟಕದ ದಕ್ಷಿಣ ಭಾಗದಿಂದ ಮತ್ತು ದೇಶದ ಇತರ ಭಾಗಗಳಿಂದ ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ವರ್ಷಗಳ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದರು. ಆದರೆ ಉದ್ಯೋಗ ಸಂಬಂಧ ಅಲ್ಲಿ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದಾಗಿ ಅಲ್ಲಿಗೆ ತೆರಳುವ ಭಾರತೀಯ ಸಂಖ್ಯೆ ಕಡಿಮೆಯಾಗಿದೆ.

ಕಾರಣಗಳೇನು?
ನಿತಾಕತ್‌ ಯೋಜನೆ ಅನ್ವಯ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು
ಬದಲಾದ ಆರ್ಥಿಕ ಸ್ಥಿತಿಗತಿ

ಯುಎಇ ಕೈಗೊಂಡ ಕ್ರಮಗಳೇನು?
ಈ ವರ್ಷದ ಅಂತ್ಯದ ಒಳಗಾಗಿ 10 ವರ್ಷಕ್ಕೆ  ವೃತ್ತಿಪರರಿಗೆ ಅಥವಾ ಹೂಡಿಕೆದಾರರಿಗೆ ವೀಸಾ ನೀಡಿಕೆ
ಉದ್ಯೋಗ ನಷ್ಟ ಹೊಂದಿದವರಿಗೆ ಮತ್ತೂಂದು ಉದ್ಯೋಗ ಸಿಗುವ ವರೆಗೆ ತಾತ್ಕಾಲಿಕ ವೀಸಾ
ಇತ್ತೀಚೆಗೆ ವ್ಯಾಟ್‌ ಜಾರಿಯಾಗಿದ್ದರಿಂದ ಭಾರತದ ಹಣಕಾಸು ಕ್ಷೇತ್ರದ ಪರಿಣತರಿಗೆ ಬೇಡಿಕೆ
ಪ್ರತಿ ವರ್ಕ್‌ ಪರ್ಮಿಟ್‌ಗೆ ನೀಡಬೇಕಾಗಿದ್ದ ಬ್ಯಾಂಕ್‌ ಖಾತರಿ ಬದಲು ಕಡಿಮೆ ವೆಚ್ಚದ ವಿಮೆ ಜಾರಿ

50,000ರೂ. ಪ್ರತಿ ವರ್ಕ್‌ ಪರ್ಮಿಟ್‌ಗೆ ಇದ್ದ ಠೇವಣಿ
3.7 ಲಕ್ಷ ರೂ. ವೇತನ ನೀಡದೇ ಇದ್ದ ಪಕ್ಷದಲ್ಲಿ ನೀಡಿಕೆ, ಕೆಲಸದ ವೇಳೆ ಗಾಯಗಳಾದಲ್ಲಿ ವ್ಯಕ್ತಿಗೆ ರಿಟರ್ನ್ ಟಿಕೆಟ್‌ ನೀಡಿಕೆ
1,100ರೂ. ವಾರ್ಷಿಕ ವಿಮೆ ಮೊತ್ತ
69 ಬಿಲಿಯ ಡಾಲರ್‌ 2017ರಲ್ಲಿ ಭಾರತಕ್ಕೆ ವಿದೇಶಗಳಿಂದ ಬಂದ ಹಣದ ಮೊತ್ತ


Trending videos

Back to Top