ಸುದ್ದಿ ಕೋಶ: ಬಫೆಟ್ರನ್ನೂ ಹಿಂದಿಕ್ಕಿದ ಮಾರ್ಕ್
ಜುಕರ್ಬರ್ಗ್ ಈಗ 5.61 ಲಕ್ಷ ಕೋಟಿ ರೂ. ಸ್ವತ್ತಿನ ಒಡೆಯ
Team Udayavani, Jul 08, 2018, 6:00 AM IST

ಸಾಮಾಜಿಕ ಅಂತರ್ಜಾಲ ತಾಣ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಇದೀಗ ಶತಕೋಟ್ಯಧಿಪತಿ ವಾರೆನ್ ಬಫೆಟ್ರನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಶುಕ್ರವಾರ ಫೇಸ್ಬುಕ್ ಷೇರುಗಳು ಶೇ. 2.4ರಷ್ಟು ಏರಿಕೆ ಕಂಡಿದ್ದರಿಂದಾಗಿ ಮಾರ್ಕ್ ಒಟ್ಟು ಸ್ವತ್ತಿನಲ್ಲಿ ಏರಿಕೆಯಾಗಿದೆ.