CONNECT WITH US  

ಸುದ್ದಿ ಕೋಶ: ಫ್ರಾನ್ಸ್‌ ಹಿಂದಿಕ್ಕಿದ ನಮ್ಮ ಎಕಾನಮಿ

ವಿಶ್ವದಲ್ಲೇ 6ನೇ ಅತಿದೊಡ್ಡ ಆರ್ಥಿಕತೆಯೆಂಬ ಹೆಗ್ಗಳಿಕೆ

ಇತ್ತೀಚೆಗಷ್ಟೇ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಇದೀಗ ವಿಶ್ವಬ್ಯಾಂಕ್‌ ಬುಧವಾರ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ, ಭಾರತವು ಜಗತ್ತಿನಲ್ಲಿಯೇ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಫ್ರಾನ್ಸ್‌ನ ಅರ್ಥ ವ್ಯವಸ್ಥೆಯನ್ನೇ ಮೀರಿ ಮುಂದೆ ಸಾಗಿದೆ.

ವರದಿಯಲ್ಲಿ ಏನಿದೆ?
ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದ ಜಿಡಿಪಿ ವೃದ್ಧಿಸಿದೆ.
ಚೀನಾದ ಅರ್ಥ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ನಿಧಾನ ಬೆಳವಣಿಗೆ ಸಾಧಿಸಿದ್ದರಿಂದ ಭಾರತ ಮತ್ತಷ್ಟು ಬೆಳವಣಿಗೆ ಸಾಧಿಸಲು ಅನುಕೂಲವಾಗಲಿದೆ.
ಉತ್ಪಾದನಾ ಕ್ಷೇತ್ರದಲ್ಲಿ ವೃದ್ಧಿ ಮತ್ತು ಗ್ರಾಹಕರು ಮಾಡುವ ವೆಚ್ಚ ಹೆಚ್ಚಾಗಿದೆ. ಇದುವೇ ಅರ್ಥ ವ್ಯವಸ್ಥೆ ವೃದ್ಧಿಗೆ ಕಾರಣ. 
ಭಾರತದ ಜನಸಂಖ್ಯೆ ಫ್ರಾನ್ಸ್‌ಗಿಂತ ಹೆಚ್ಚಿದೆ. ಆದರೆ, ಭಾರತದ ಜಿಡಿಪಿಗಿಂತ ಫ್ರಾನ್ಸ್‌ನ ಜಿಡಿಪಿ ಶೇ.20ರಷ್ಟು ಹೆಚ್ಚಾಗಿದೆ. 

7.4% ಐಎಂಎಫ್ ಪ್ರಕಾರ ಭಾರತ ಈ ವರ್ಷ ಸಾಧಿಸ ಲಿರುವ ಅಭಿವೃದ್ಧಿ ದರ
7.8% 2019ರಲ್ಲಿ ಭಾರತ ಸಾಧಿಸಲಿರುವ ಅಭಿವೃದ್ಧಿ ಪ್ರಮಾಣ 


 


Trending videos

Back to Top