ಸುದ್ದಿ ಕೋಶ: ಈಗ ಏಷ್ಯಾದಲ್ಲೇ ಅತಿ ಶ್ರೀಮಂತ ಮುಕೇಶ್

ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ಸಿರಿವಂತಿಕೆಯಲ್ಲಿ ಅಲಿಬಾಬಾ ಗ್ರೂಪ್ ಸ್ಥಾಪಕ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಶುಕ್ರವಾರ ರಿಲಯನ್ಸ್ ಷೇರು ಮೌಲ್ಯ ದಾಖಲೆಯ 1,101ರೂ.ಗಳಿಗೆ ಏರಿಕೆಯಾದ ಬೆನ್ನಲ್ಲೇ ಅಂಬಾನಿ ಅವರ ನಿವ್ವಳ ಆಸ್ತಿಯ ಮೌಲ್ಯವೂ 44.3 ಶತಕೋಟಿ ಡಾಲರ್ ತಲುಪಿತು.
2ನೇ ಸ್ಥಾನಕ್ಕೆ ಕುಸಿದ ಅಲಿಬಾಬಾ ಸ್ಥಾಪಕ ಜಾಕ್ ಮಾ
2 ದಿನದಲ್ಲಿ 3 ದಾಖಲೆ
100 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳ ಕ್ಲಬ್ಗ ಸೇರ್ಪಡೆ
7 ಲಕ್ಷ ಕೋಟಿ ದಾಟಿದ ರಿಲಯನ್ಸ್ ಸಂಸ್ಥೆಯ ಮಾರುಕಟ್ಟೆ ಮೌಲ್ಯ
ಜಾಕ್ ಮಾರನ್ನು ಹಿಂದಿಕ್ಕಿ ಏಷ್ಯಾದ ಕುಬೇರರೆನಿಸಿಕೊಂಡು ಅಂಬಾನಿ
3,03,700 ಕೋಟಿ ರೂ. ಮುಕೇಶ್ ಅಂಬಾನಿ ಆಸ್ತಿ ಮೌಲ್ಯ
3,01,600 ಕೋಟಿ ರೂ. ಜಾಕ್ ಮಾ ಆಸ್ತಿ ಮೌಲ್ಯ
27,400 ಕೋಟಿ ರೂ. ಪ್ರಸಕ್ತ ವರ್ಷ ಅಂಬಾನಿ ಆಸ್ತಿಯಲ್ಲಾದ ಹೆಚ್ಚಳ
9,600 ಕೋಟಿ ರೂ. 2018ರಲ್ಲಿ ಜಾಕ್ ಮಾ ಕಳೆದುಕೊಂಡ ಆಸ್ತಿ