“ಅಶ್ವತ್ಥ’ ವೃಕ್ಷದ ಕೆಳಗೆ


Team Udayavani, Oct 18, 2017, 6:00 PM IST

Ninasam-Ashwath-(4).jpg

ಬಾಡಿ ಬಿಲ್ಡ್‌ ಮಾಡಬೇಕಾ?
ಸಣ್ಣ ಆಗಬೇಕಾ?
ತಲೆ ಬೋಳಿಸಿಕೊಳ್ಳಬೇಕಾ?
ನೆಕೆಡ್‌ಆಗಿ ಕಾಣಿಸಿಕೊಳ್ಳಬೇಕಾ?

ಆ ನಟ ಒಮ್ಮೆ ಸಿನಿಮಾವೊಂದರ ಸೆಟ್‌ನಲ್ಲಿ ಕುರ್ಚಿ ಮೇಲೆ ಕುಳಿತಿದ್ದರು. ಆಗ ಅಲ್ಲಿದ್ದ ಅಸಿಸ್ಟೆಂಟ್‌ನನ್ನು ಕರೆದು, ತಾವು ಕುಳಿತಿದ್ದ ಕುರ್ಚಿ ಕೆಳಗೆ ಇರುವ ವಾಟರ್‌ ಬಾಟಲ್‌ ಎತ್ತಿಕೊಡು ಅಂದಿದ್ದರು. ಆಗ ಆ ಹುಡುಗ ಓಡಿ ಬಂದು ಆ ವಾಟರ್‌ ಬಾಟಲ್‌ ಎತ್ತಿಕೊಟ್ಟಿದ್ದ. ಆ ನಟ ಬಾಟಲ್‌ ನೀರು ಕುಡಿದ ಬಳಿಕ ಅದೇಕೋ ತಮ್ಮ ಬಗ್ಗೆಯೇ ಬೇಸರ ಮಾಡಿಕೊಂಡರು. ತಾನು ಅಷ್ಟೊಂದು ಸೋಮಾರಿ ಆಗಿಬಿಟ್ನಾ ಅಂತ ಯೋಚಿಸೋಕೂ ಶುರುಮಾಡಿದರು.

ಅದು ಅವರನ್ನು ತುಂಬಾ ಕಾಡಿದ್ದೇ ತಡ, ಮರುದಿನವೇ ಅವರು ತಮ್ಮ ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡರು …ಅಂದಹಾಗೆ, ತನ್ನ ಸೋಮಾರಿತನದ ಅರಿವಾಗಿ ತನ್ನೂರಿಗೆ ಹೋದ ಆ ನಟ ಬೇರಾರೂ ಅಲ್ಲ, ನೀನಾಸಂ ಅಶ್ವತ್ಥ್. ಹೌದು, ಸುಮಾರು 170 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನೀನಾಸಂ ಅಶ್ವತ್ಥ್, ಅಂಥದ್ದೊಂದು ನಿರ್ಧಾರ ಮಾಡಿದವರು. ಅಷ್ಟೇ ಅಲ್ಲ, ಅದಕ್ಕೆ ಸರಿಯಾಗಿ, ಕೆ.ವಿ.ಸುಬ್ಬಣ್ಣ ಅವರೂ ಸಹ, ನೀನೀಗ ಎಲ್ಲಾ ಕಲಿತಿದ್ದೀಯ,

ಇನ್ನು ಊರಿಗೆ ಹೋಗಿ ಏನಾದ್ರೂ ಮಾಡು ಅಂತ ಹೇಳಿದ್ದರು. ಆ ಮಾತು ಕೂಡ ಅಶ್ವತ್ಥ್ಗೆ ಕಿವಿಯಲ್ಲಿ ಆಗಿಂದಾಗ್ಗೆ ಮಾರ್ದನಿಸುತಿತ್ತು. ಹಾಗಾಗಿ, ಅವರು ಹಳ್ಳಿ ಕಡೆ ಮುಖ ಮಾಡಿ ಕೃಷಿಯತ್ತ ಚಿತ್ತ ಹರಿಸಿದರು. ಅಂತಹ ಅಶ್ವತ್ಥ್ ಈಗ ಪುನಃ ಬಿಜಿಯಾಗಿದ್ದಾರೆ. ಸಿನಿ ಜರ್ನಿ ಕುರಿತು ಅವರೊಂದಿಗೆ ಮಾತಿಗಿಳಿದಾಗ, ಅಶ್ವತ್ಥ್ ಒಂದೇ ಉಸಿರಲ್ಲಿ ಪಟಪಟನೆ ಮಾತುದುರಿಸುತ್ತಾ ಹೋದರು.

“ನನ್ನ ಕೈಯಲ್ಲೀಗ ಒಂದಷ್ಟು ಸಿನಿಮಾಗಳಿವೆ. ಏನಿಲ್ಲವೆಂದರೂ ಸುಮಾರು 12 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಪೈಕಿ “ದುನಿಯಾ 2′ ವಂಡರ್‌ಫ‌ುಲ್‌ ಸಿನಿಮಾ ಆಗಲಿದೆ. ಇನ್ನು “ಕೆಜಿಎಫ್’ ಕೂಡ ಒಂದು ಹೊಸ ಅನುಭವ ಕೊಡುವ ಸಿನಿಮಾ ಆಗುತ್ತೆ. ಅದರಲ್ಲಿ ನಾನು ಸುಮಾರು 80 ವರ್ಷದ ಮುದುಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಉಳಿದಂತೆ, ತಮಿಳಿನ “ಮಾತಂಗಿ’ ಚಿತ್ರ ಕೂಡ ರಿಲೀಸ್‌ ಆಗುತ್ತಿದೆ. ತಮಿಳಿನಲ್ಲಿ ಇನ್ನೂ ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ.

ಕನ್ನಡದಲ್ಲೀಗ “ನರಗುಂದ ಬಂಡಾಯ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದೇನೆ. “ರಾಜ್‌ದೂತ್‌’ ಎಂಬ ಹೊಸ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಿವೆ. ನಿಜಕ್ಕೂ ನಾನು ಹ್ಯಾಪಿಯಾಗಿದ್ದೇನೆ. ನಿರ್ದೇಶಕ, ನಿರ್ಮಾಪಕರು ನನಗೆ ಇದುವರೆಗೂ ವಿಭಿನ್ನ ಪಾತ್ರ ಕೊಟ್ಟು, ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ನಾನು ಯಾವತ್ತೂ ಒಂದೇ ರೀತಿ ಪಾತ್ರ ಮಾಡಿಕೊಂಡು ಬಂದಿಲ್ಲ. ವಿಲನ್‌ ಆಗಿ, ರೇಪಿಸ್ಟ್‌ ಆಗಿ, ಕಾಮಿಡಿಯನ್‌ ಆಗಿ, ಕೆಟ್ಟವನಾಗಿ, ಒಳ್ಳೆಯವನಾಗಿ ಕಾಣಿಸಿಕೊಂಡಿದ್ದೇನೆ. ಕೆಲವರು ವಿಲನ್‌ ಆಗಿ ಬಂದರೆ, ಅದನ್ನೇ ಇನ್ನೂ ಮುಂದುವರೆಸುತ್ತಿದ್ದಾರೆ.

ನನಗೆ ಎಲ್ಲಾ ರೀತಿಯ ಪಾತ್ರ ಮಾಡಿದ ಖುಷಿ ಇದೆ. ಸದ್ಯಕ್ಕೆ ಕೃಷಿ ಮಾಡಿಕೊಂಡು ನೆಮ್ಮದಿ ಬದುಕು ಕಂಡುಕೊಂಡಿದ್ದೇನೆ. ಈಗ ಮಾಡ್ರನ್‌ ಡೈರಿಗೆ ಕನ್ವರ್ಟ್‌ ಮಾಡುತ್ತಿದ್ದೇನೆ. ನೂರು ಹಸುಗಳಿವೆ. 900 ಲೀಟರ್‌ ಹಾಲು ಮಾರಾಟವಾಗುತ್ತಿದೆ. ಹೈನುಗಾರಿಕೆ, ಸಾವಯವ ಕೃಷಿಯನ್ನು ಎಂದಿಗೂ ಬಿಡಲ್ಲ. ನನಗೆ ಯಾವಾಗ ಸಿನಿಮಾ ಸಾಕು ಅಂತ ಬೇಸರವಾಗುತ್ತೋ, ಆಗ ನನ್ನ ಹಳ್ಳಿಗೆ ಹೋಗಿ ಅಲ್ಲಿ ಕೋಲಾಟವನ್ನೋ, ಯಕ್ಷಗಾನವನ್ನೋ ಕಲಿಸಿಕೊಂಡು ಇರಿ¤àನಿ’ ಎಂದು ಹೇಳುತ್ತಾರೆ ಅಶ್ವತ್ಥ್.

ರಂಗಭೂಮಿ ಪಾಠ, ಸಿನಿಮಾ ಬದುಕು, ಸೀರಿಯಲ್‌ ಅನ್ನ
“ನಾನು ಈ ಮಧ್ಯೆ ಸಿನಿಮಾಗಳನ್ನು ಹೆಚ್ಚು ಮಾಡಲಿಲ್ಲ. ಕಾರಣ, ಹಳ್ಳಿಗೆ ಹೋಗಿದ್ದೆ. ಅಲ್ಲಿ ಹೊಟ್ಟೆಪಾಡಿಗೆ ಹಸು ಕಟ್ಟಿಕೊಂಡು ಬದುಕು ಸವೆಸುತ್ತಿದ್ದೇನೆ. ಯಾಕೆಂದರೆ, ಸಿನಿಮಾ ನಂಬಿಕೊಂಡು ನಾನು ತಿಂಗಳುಗಟ್ಟಲೆ ಮನೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನಾನು ಮನೆಯವರಿಗೂ ಸಮಯ ಕೊಡಬೇಕಲ್ವಾ. ನನಗೂ ವೈಯಕ್ತಿಕ ಬದುಕಿದೆ ತಾನೆ? ಹಾಗಾಗಿ, ಒಂದಷ್ಟು ದಿನ ಹಳ್ಳಿಯಲ್ಲಿದ್ದೆ. ಸಾರ್‌ ಇಲ್ಲಿ ದುಡ್ಡು ದುಡಿಯೋದು, ಹೆಸರು ಮಾಡೋದು ಒಂದು ಹಂತ.

ನಮ್ಮನ್ನು ನಾವು ಕಂಡುಕೊಳ್ಳೋದು ಇನ್ನೊಂದು ಹಂತ ಸಾರ್‌. ನಮ್ಮನ್ನ ನಾವು ಕಂಡುಕೊಳ್ಳೋದು ನನಗೆ ಬಹಳ ಮುಖ್ಯ. ನಿಮಗೆ ಗೊತ್ತಿಲ್ಲ, ನನಗೆ ತುಂಬಾ ಅವಮಾನ ಮಾಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಈಗ ಒಂದಷ್ಟು ಗುರುತಿಸಿಕೊಂಡಿದ್ದೇನೆ. ನನ್ನ ಹಳ್ಳಿàಲೇ ನಮ್ಮವರೇ ನಮಗೆ ಸಪೋರ್ಟ್‌ ಮಾಡಲಿಲ್ಲ. ಅಪ್ಪ-ಅಮ್ಮ ಬಿಟ್ಟು ಹೋದರೂ, ನಾನು ಗುರಿ ಬಿಟ್ಟು ಹೋಗಲಿಲ್ಲ. ಹಾಗಂತ ಯಾರ ಮೇಲೂ ಬೇಸರವಿಲ್ಲ ಸರ್‌. ನನಗೆ ಹಳ್ಳಿ ಅಂದ್ರೆ ಜೀವ. ಹಾಗಂತ ಸಿನಿಮಾ ಬಿಡಲ್ಲ.

ಒಂದು ವರ್ಷ ಇಪ್ಪತ್ತು ಸಿನಿಮಾ ಮಾಡಬಹುದು, ಇನ್ನೊಂದು ವರ್ಷ ಹತ್ತು ಸಿನಿಮಾ ಮಾಡಬಹುದು. ಅದೇ ವ್ಯತ್ಯಾಸ. ಅದು ಬಿಟ್ಟರೆ ಬೇರೇನೂ ಇಲ್ಲ. ಅಷ್ಟೇ ಲೈಫ‌ು. ಈಗ ಸಿನಿಮಾ ಪೇಮೆಂಟ್‌ನಷ್ಟೇ ಕೊಟ್ಟು ಸೀರಿಯಲ್‌ನವರು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಂತೂ ಈಗ ಜೀ,  ಸುವರ್ಣ ವಾಹಿನಿಗಳಿಂದ ಸಾಕಷ್ಟು ಡಿಮ್ಯಾಂಡ್‌ ಬರುತ್ತಿದೆ’ ಎನ್ನುತ್ತಾರೆ ಅವರು. “ನಾನು ಇಲ್ಲಿ 40 ಮೆಗಾ ಸೀರಿಯಲ್‌ ಮಾಡಿದವನು. ಸಿನಿಮಾಗೆ ಹೋದವನು ವಾಪಸ್‌ ಬಂದಿರಲಿಲ್ಲ.

ಮಧ್ಯೆ ಧಾರಾವಾಹಿಯೊಂದರಲ್ಲಿ ಸಾಯಿಬಾಬಾ ಪಾತ್ರ ಮಾಡಿದ್ದೆ, ಅಷ್ಟೇ.  ಪಾತ್ರ ಚೆನ್ನಾಗಿದ್ದರೆ ಸೀರಿಯಲ್‌ ಆದ್ರೂ ಸೈ, ಸಿನಿಮಾ ಆದ್ರೂ ಸೈ. ಈಗಂತೂ ಸೀರಿಯಲ್‌ ತುಂಬಾ ಚೆನ್ನಾಗಿ ಬರುತ್ತಿವೆ. ಕಿರುತೆರೆಯ ಮಂದಿ ಕೂಡ ಅಪ್‌ಡೇಟ್‌ ಆಗಿದ್ದಾರೆ. ಒಳ್ಳೇ ಪೇಮೆಂಟ್‌ ಸಿಗುತ್ತಿದೆ. ಸಿನಿಮಾದಲ್ಲಿ 1 ರುಪಾಯಿ ಸಿಕ್ಕರೆ, ಸೀರಿಯಲ್‌ನಲ್ಲಿ 60 ಪೈಸೆ ಸಿಗುತ್ತೆ. ಸೀರಿಯಲ್‌ ಆದ್ರೆ ವರ್ಷ ಪೂರ್ತಿ ಕೆಲಸ ಇರುತ್ತೆ. ಮೊನ್ನೆ ಜ್ವರವಿದ್ದರೂ, ನಾನು ಡ್ರಿಪ್‌ ಹಾಕಿಸಿಕೊಂಡು ಬಂದು ನಟನೆ ಮಾಡಿ ಹೋಗಿದ್ದೇನೆ.

ಈಗ ಸ್ವಲ್ಪ ಇಕ್ಕಟ್ಟು ಆಗುತ್ತಿದೆ. ಸಿನಿಮಾ, ಸೀರಿಯಲ್‌ ಎರಡನ್ನೂ ಹೇಗೋ ಮ್ಯಾನೇಜ್‌ ಮಾಡುತ್ತಿದ್ದೇನೆ. ಅವಕಾಶಗಳು ಪ್ರತಿ ದಿನ ನಮ್ಮ ಮನೆಗೆ ಬರೋದಿಲ್ಲ. ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು. ನಾನು ಈ ಹಿಂದೆ ಅಂತಹ ತಪ್ಪು ಮಾಡಿದ್ದೇನೆ. ಇಲ್ಲ ಅಂದಿದ್ದರೆ, ಇಷ್ಟೊತ್ತಿಗೆ ಸುಮಾರು 300  ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ …’ “ಈ ಅಶ್ವತ್ಥ್ ಯಾವತ್ತೂ ಖುಷಿಗೆ ಸಿನಿಮಾ ಮಾಡ್ತಾನೆ. ನನಗೆ ಸಿನಿಮಾ ಬದುಕು ಕೊಟ್ಟಿದೆ. ರಂಗಭೂಮಿ ಪಾಠ ಕಲಿಸಿದೆ. ಸೀರಿಯಲ್‌ ಅನ್ನ ಕೊಟ್ಟಿದೆ.

ಹಾಗಾಗಿ ನಾನು ಸೀರಿಯಲ್‌ನಲ್ಲಿ ಮಾಡೋದಿಲ್ಲ ಅಂತ ಹೇಳುವುದಿಲ್ಲ. ಸದ್ಯಕ್ಕೆ “ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೀನಿ. ಇಲ್ಲಿ ಒಳ್ಳೆಯ ಕಥೆ, ಪಾತ್ರ ಸಿಕ್ಕಿದೆ. ಜತೆಗೆ ಒಳ್ಳೆಯ ಪೇಮೆಂಟ್‌ ಕೊಡ್ತಾ ಇದ್ದಾರೆ. ತಿಂಗಳಲ್ಲಿ 10 ದಿನ ಡೇಟ್‌ ಕೊಡುತ್ತಿದ್ದೇನೆ. ಸಿನಿಮಾಗಳಿಗೆ ತೊಂದರೆ ಆಗದಂತೆ ನೋಡಿಕೊಂಡು ಹೋಗುತ್ತೇನೆ. ಜನರಿಗೆ ಗೊತ್ತು, ನಾವು ಸಿನಿಮಾ ಮಾಡಿದರೂ, ಸೀರಿಯಲ್‌ ಮಾಡಿದರೂ ನೋಡ್ತಾರೆ. ಮಾಡುವ ಪಾತ್ರಕ್ಕೆ ಜೀವ ತುಂಬಬೇಕಷ್ಟೇ.

ಹೆಮ್ಮೆಯಿಂದ ಹೇಳುವುದಾದರೆ, ನಾನು ಬೇಜಾನ್‌ ಒಳ್ಳೇ ಪಾತ್ರ ಮಾಡಿದ್ದೇನೆ.  ನಟನೆಗೆ ಅವಕಾಶ ಇರುವಂತಹ ಪಾತ್ರಗಳೇ ಸಿಕ್ಕಿವೆ. ಮುಂದೆ ಬರಲಿರುವ ಚಿತ್ರಗಳು ನನ್ನ ಮುಂದಿನ ಹೆಜ್ಜೆಗೆ ಸಹಕಾರಿಯಾಗಲಿವೆ. “ದುನಿಯಾ- 2′ ಹೊಸ  ಜಾನರ್‌ನ ಪಾತ್ರ. ಇದುವರೆಗೆ ಮಾಡದಂತಹ ಪಾತ್ರವದು. ಪರಭಾಷೆಯಲ್ಲೂ ಈಗ ಒಳ್ಳೆ ಅವಕಾಶಗಳು ಬರುತ್ತಿವೆ. ನನಗೆ ಈ ಹಿಂದೆಯೇ ಅಂಥದ್ದೊಂದು ಛಾನ್ಸ್‌ ಸಿಕ್ಕಿತ್ತು. ಆಗ ನಾನೇ ಕೈ ಬಿಟ್ಟೆ. ಯಾಕೆಂದರೆ, ಆಗಿಲ್ಲಿ ಒಟ್ಟೊಟ್ಟಿಗೆ ಇಪ್ಪತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದೆ.

ಬದುಕಿನ ಭಯವಿತ್ತು. ಇಲ್ಲಿ ಬಿಟ್ಟು, ಅಲ್ಲಿ ಹೋಗಿ, ಕಚ್ಚಿಕೊಳ್ಳದೇ ಇದ್ದರೆ ಏನು ಮಾಡೋದು ಎಂಬ ಪ್ರಶ್ನೆ ಕಾಡುತ್ತಿತ್ತು. ಅಲ್ಲದೆ, ಇಲ್ಲಿನವರು ಕರೆಯದೇ ಇದ್ದರೆ ಏನು ಮಾಡೋದು ಎಂಬ ಯೋಚನೆ ಇತ್ತು. ಇಲ್ಲಿನವರನ್ನು ಎದುರು ಹಾಕಿಕೊಳ್ಳುವ ಶಕ್ತಿ ಇರಲಿಲ್ಲ. ಸುಮ್ಮನಾದೆ. ಈಗ ಆಸೆಯಂತೂ ಇದೆ. ತೆಲುಗು ಆಯ್ತು, ತಮಿಳಿನಲ್ಲಿ ರೆಗ್ಯುಲರ್‌ ಆಗಿ ಸಿನಿಮಾ ಮಾಡ್ತಾ ಇದ್ದೇನೆ. ಆದರೂ ನನಗೆ ಮಲಯಾಳಂ ಚಿತ್ರದಲ್ಲಿ ನಟಿಸಬೇಕೆಂಬ ದೊಡ್ಡ ಆಸೆ ಇದೆ. ನೋಡೋಣ ಮುಂದೊಂದು ದಿನ ಆ ಕಾಲ ಬರುತ್ತೇನೋ?’ ಎನ್ನುತ್ತಾರೆ ಅವರು.

ನಮ್ಮನ್ನೂ ಬೇರೆ ರೀತಿ ನೋಡಿ
“ನನಗೆ ಒನ್‌ ಮ್ಯಾನ್‌ ಶೋ ಮಾಡಿ ಎಂಬ ಡಿಮ್ಯಾಂಡ್‌ ಇದೆ. ಆದರೆ, ಅದನ್ನೆಲ್ಲಾ ಆರ್ಗನೈಜ್‌ ಮಾಡೋಕ್ಕಾಗಲ್ಲ. ನಾನು “ಮಹಾಬಾರತ’ ಬ್ಯಾಕ್‌ಗ್ರೌಂಡ್‌ ಇಟ್ಟುಕೊಂಡು ಮನುಷ್ಯನಿಗೆ ಯುದ್ಧ ಅನಿವಾರ್ಯ ಅಲ್ಲ ಎಂಬ ವಿಷಯದೊಂದಿಗೆ ಇಂಡಿಯನ್‌ ಕ್ಲಾಸಿಕಲ್‌ ನೃತ್ಯವನ್ನು ಸೇರಿಸಿ ಮಾಡುವ ಶೋ ಅದು. ಅದಕ್ಕಾಗಿ ಒಂದೂವರೆ ಲಕ್ಷದವರೆಗೂ ಪೇಮೆಂಟ್‌ ಸಿಗುತ್ತೆ. ಆದರೆ, ಈಗಿನ ಒತ್ತಡದಲ್ಲಿ ಮಾಡೋಕ್ಕಾಗಲ್ಲ. ನೋಡೋಣ, ನಟನಿಗೆ 40 ವರ್ಷ ಆದ ಮೇಲೆ ಒಳ್ಳೇ ಟೈಮ್‌ ಬರುತ್ತಂತೆ.

ಅದು ನನಗೂ ಬರಬಹುದೇನೋ’ ಎಂದು ಹೇಳುವ ಅಶ್ವತ್ಥ್, ತಮ್ಮದ್ದೊಂದು ಆಕ್ಷೇಪಣೆ ಇದೆ ಅಂತಾರೆ. ಅವರ ಆಕ್ಷೇಪಣೆ ಏನು ಗೊತ್ತಾ? “ನೀವು ಬೇರೆ ಭಾಷೆ ನಟರನ್ನು ಬೇರೆ ರೀತಿ ನೋಡುವ ಬದಲು ನಮ್ಮನ್ನೇ ಬೇರೆ ರೀತಿ ನೋಡಿ. ನಮ್ಮ ಕೈಯಲ್ಲಿ ಮಾಡೋಕ್ಕಾಗಲ್ಲವಾ? ಬಾಡಿ ಬಿಲ್ಡ್‌ ಮಾಡಬೇಕಾ, ಸಣ್ಣ ಆಗಬೇಕಾ, ತಲೆ ಬೋಳಿಸಿಕೊಳ್ಳಬೇಕಾ, ನೇಕೆಡ್‌ಆಗಿ ಕಾಣಿಸಿಕೊಳ್ಳಬೇಕಾ? ಇದೆಲ್ಲವೂ ಆಯ್ತಲ್ಲಾ ಸಾರ್‌? ಇನ್ನೇನು ಮಾಡೋಕ್ಕಾಗಲ್ಲ ಹೇಳಿ? ಬರದಿದ್ದಕ್ಕೆ ಕಾದು ಕುಳಿತುಕೊಳ್ಳುವುದಕ್ಕಿಂತ ಬಂದಿದ್ದನ್ನು ರುಚಿಕಟ್ಟಾಗಿ ಮಾಡಿ ತೋರಿಸೋದಷ್ಟೇ ನಮ್ಮ ಕೆಲಸ’ ಎನ್ನುತ್ತಾರೆ.

ಹಾಗಾದರೆ, ನೀನಾಸಂ ಅಶ್ವತ್ಥ್ಗೆ ಬೇಸರವಿದೆಯೇ? ಎಂದು ಪ್ರಶ್ನಿಸಿದರೆ, ಅವರು ಸ್ಪಷ್ಟವಾಗಿ ಹೇಳುತ್ತಾರೆ. “ಚಿತ್ರರಂಗದ ಬಗ್ಗೆಯಂತೂ ಯಾವ ಬೇಸರವಿಲ್ಲ. ಆದರೆ, ಇದುವರೆಗೆ ಮಾಡಿದ ಪಾತ್ರಗಳ ಕುರಿತು ತೃಪ್ತಿ ಇರಲಿಲ್ಲ. ಒಂದೇ ಸಲ, ಒಂದು ನೂರು ಸಿನಿಮಾ ಮಾಡಿಬಿಟ್ಟೆ. ಆಮೇಲೆ ನನಗೇ ಅನಿಸಿತು, ಅಂಥ ಪಾತ್ರವೇಕೆ ಮಾಡಿದೆ ಅಂತ. ಆ ಬಳಿಕ ಸಿಕ್ಕಸಿಕ್ಕ ಪಾತ್ರ ಮಾಡೋದನ್ನ ಕಡಿಮೆ ಮಾಡ್ತ ಬಂದೆ. ಕೆಲವರು ಮಾತಾಡಿಕೊಂಡರು; ಅಶ್ವತ್ಥ್ ಬಿಜಿ ಇದ್ದಾರೆ, ಅವರು ಕೃಷಿ ಮಾಡೋಕೆ ಹೋಗಿದ್ದಾರೆ, ಇನ್ನು ಬರಲ್ಲ, ಸಿನಿಮಾ ಮಾಡಲ್ಲ ಅಂತೆಲ್ಲಾ ಸುದ್ದಿ ಹಬ್ಬಿಸಿದರು.

ಆದರೆ, ನಾನು ಸಿನಿಮಾ ಪ್ರೀತಿಸೋನು, ಸಿನಿಮಾಗೆ ಆಂತ ಮಧ್ಯರಾತ್ರಿ ಕರೆದರೂ ಎದ್ದು ಬರಿ¤àನಿ. ನನ್ನ ಬಿಜಿನೆಸ್‌ ನೋಡಿಕೊಳ್ಳೋಕೆ ಪತ್ನಿ, ತಮ್ಮ ಇದ್ದಾರೆ. ನನ್ನ ಬಿಜಿನೆಸ್‌ ಇದ್ದರೂ, ನಾನು ಸಿನಿಮಾ ಮೇಲಿನ ಪ್ರೀತಿ ಬಿಡಲ್ಲ. ಆದರೆ, ವಿಷಯ ಅರಿಯದೆ, ಎಷ್ಟೋ ನಿರ್ದೇಶಕರು, “ಏನ್‌ ಅಶ್ವತ್ಥ್, ನೀನು ಇಷ್ಟೊಂದು ಗಾಂಚಾಲಿನಾ? ಸಿನಿಮಾ ಮಾಡೋದೇ ಬಿಟ್ಯಂತೆ? ನಿಮಗಾಗಿನೇ ಪಾತ್ರ ಇತ್ತಪ್ಪಾ.

ನೀನ್‌ ನೋಡಿದ್ರೆ, ಹಳ್ಳಿಗೆ ಹೋಗಿ ಕುಂತಿದ್ದೀಯಾ’ ಅನ್ನೋಕೆ ಶುರುಮಾಡಿದರು. ಆಗ ನನಗೆ ಶಾಕ್‌ ಆಗಿದ್ದು ನಿಜ. ನಾನು ನನ್ನ ಅಪ್ಪನ ತಿಥಿ ಇದ್ದಾಗಲೂ ಸಿನಿಮಾ ಮಾಡಿದ್ದೇನೆ. ಅದು ಕಲೆ ಮೇಲಿನ ಪ್ರೀತಿ ಮತ್ತು ನನ್ನ ಕಮಿಟ್‌ಮೆಂಟ್‌. ಎಲ್ಲೂ ನಾನು ಬಿಜಿ ಅಂತಾಗಲಿ, ಬರೋದಿಲ್ಲ ಅಂತಾಗಲಿ ಹೇಳಿಲ್ಲ. ಒಂದಂತೂ ನೆನಪಲ್ಲಿಟ್ಟುಕೊಳ್ಳಿ. ನನ್ನಂತಹ ಅದೆಷ್ಟೋ ಕಲಾವಿದರಿಗೆ ಇದೇ ರೀತಿ ಆಗಿರಬಹುದು. ನಮ್ಮಂತವರನ್ನ ಉಳಿಸಿಕೊಳ್ಳಿ’ ಎನ್ನುತ್ತಾರೆ ಅವರು.

ಸಿನಿಮಾ ನಿರ್ದೇಶಿಸೋ ಆಸೆ ಇದೆ,ಅದಕ್ಕಿನ್ನೂ ಸಮಯವೂ ಇದೆ
ಇಷ್ಟೆಲ್ಲಾ ಹೇಳುವ ಅಶ್ವತ್ಥ್ ದುಬಾರಿನಾ? ಈ ಪ್ರಶ್ನೆಗೆ ನಗು ಹೊರಹಾಕುವ ಅಶ್ವತ್ಥ್, “ಸಾರ್‌, ನನ್ನ ಮಾರ್ಕೆಟ್‌ಗೆ ತಕ್ಕಂತೆ ಸಂಭಾವಣೆ ಪಡೆಯುತ್ತೇನೆ. ಒಳ್ಳೇ ಕಥೆ, ಪಾತ್ರವಿದ್ದರೆ ಹೇಳಿ, ನೀವು ಹೇಳಿದಷ್ಟೇ ಪೇಮೆಂಟ್‌ ಪಡೆಯುತ್ತೇನೆ. ಯಾವುದೋ, ಕಾಗಕ್ಕ ಗುಬ್ಬಕ್ಕನ ಕಥೆ ತಂದರೆ, ನನ್ನ ವ್ಯಾಲ್ಯೂಗೆ ತಕ್ಕಂತೆ ಸಂಭಾವನೆ ಪಡೆಯುತ್ತೇನೆ. ನಾನು ದುಬಾರಿಯೇನಲ್ಲ. ಆದರೂ ಬದುಕೋಕೆ ಕಾಸು ಬೇಕಲ್ವಾ ಸಾರ್‌? ಆರ್ಟಿಸ್ಟ್‌ ಅಂದರೆ, ಲಕ್ಸುರಿಯಾಗಿ ಬದುಕಬೇಕಾ? ಗೊತ್ತಿಲ್ಲ.

ನಾನಂತೂ ಸಿಂಪಲ್‌. ನನ್ನ ಹತ್ರ ಒಂದು ಕಾರಿದೆ, ಒಬ್ಬ ಡ್ರೈವರ್‌ ಇದ್ದಾನೆ. ಉಳಿದಂತೆ ನಾನು ಕುಟುಂಬದ ಜತೆಗೆ ಫ‌ುಟ್‌ಪಾತ್‌ನಲ್ಲೂ ತಿಂಡಿ ತಿಂತೀನಿ, ಹೊಲದಲ್ಲಿ ಕೆಲಸ ಮಾಡ್ತೀನಿ, ನನ್ನ ಸಂಪಾದನೆಯ ಶೇ.60 ರಷ್ಟು ಒಳ್ಳೆಯ ಕೆಲಸಕ್ಕೆ ವಿನಿಯೋಗಿಸುತ್ತೇನೆ. ಅದು ತೃಪ್ತಿ ಕೊಟ್ಟಿದೆ. ನನಗೂ ಒಂದಷ್ಟು ಆಸೆಗಳಿವೆ. ನಾನೊಂದು ಸಿನಿಮಾ ನಿರ್ದೇಶನ ಮಾಡಬೇಕು. ಸದ್ಯಕ್ಕೆ ಆಗಲ್ಲ. ಅದಕ್ಕಿನ್ನೂ ಎರಡು ವರ್ಷಗಳಾದರೂ ಬೇಕು. ಉಳಿದಂತೆ ಒಂದು ಪ್ರೊಡಕ್ಷನ್‌ ಶುರು ಮಾಡ್ತೀನಿ. ಆ ಮೂಲಕ ಹೊಸ ಬಗೆಯ ಸಿನಿಮಾ ಕೊಡುವ ಹಾಗೂ ಹೊಸಬರಿಗೆ ಅವಕಾಶ ಕೊಡುವ ಉದ್ದೇಶವಿದೆ’ ಎನ್ನುತ್ತಾರೆ ಅಶ್ವತ್ಥ್.

ಬರಹ: ವಿಜಯ್‌ ಭರಮಸಾಗರ
ಚಿತ್ರಗಳು: ಮನು

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.