ಹೊಸ ವರ್ಷಕ್ಕೆ ಹೊಸ ತರಹದ ಸಿನಿಮಾ

Team Udayavani, Jan 7, 2019, 6:04 AM IST

yogi.jpg

* ಮದುವೆಯ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಲಂಬೋದರ. ಏನನಿಸುತ್ತಿದೆ..?
ಸಿನಿಮಾದ ಬಿಡುಗಡೆಯಾಗುತ್ತಿರುವುದರ ಬಗ್ಗೆ ಖುಷಿಯಂತೂ ಇದೆ. ಇನ್ನೊಂದು ಕಡೆ ಎಕ್ಸೈಟ್‌ಮೆಂಟ್‌ ಜೊತೆಗೆ ಟೆನ್ಷನ್‌ ಕೂಡ ಆಗ್ತಿದೆ. ಸುಮಾರು ಒಂದೂವರೆ ವರ್ಷ ಆದಮೇಲೆ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಎರಡೂ ಇದ್ದೇ ಇದೆ. 

* “ಲಂಬೋದರ’ ರಿಲೀಸ್‌ ಆಗೋದು ತಡವಾಗಿದ್ದೇಕೆ? 
ನಮ್ಮ ಪ್ಲಾನ್‌ ಪ್ರಕಾರ ಎಲ್ಲ ನಡೆದಿದ್ದರೆ ಕಳೆದ ವರ್ಷಾಂತ್ಯದೊಳಗೆ ಸಿನಿಮಾ ರಿಲೀಸ್‌ ಆಗಬೆಕಿತ್ತು. ಆದ್ರೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸಾಕಷ್ಟು ಸಮಯ ತೆಗೆದುಕೊಂಡಿತು. ಜೊತೆಗೆ ಚಿತ್ರದ ಪ್ರಮೋಷನ್ಸ್‌ಗೆ ಕೂಡ ಒಂದಷ್ಟು ಸಮಯ ಹಿಡಿಯಿತು ಹಾಗಾಗಿ ರಿಲೀಸ್‌ ಆಗೋದು ಸ್ವಲ್ಪ ತಡವಾಯಿತು.
 
* “ಲಂಬೋದರ’ನ ರಿಲೀಸ್‌ಗೂ ಮುನ್ನ ಪ್ರತಿಕ್ರಿಯೆ ಹೇಗಿದೆ?
ಈಗಾಗಲೇ ಲಂಬೋದರ ಚಿತ್ರದ ಹಾಡುಗಳು, ಟ್ರೇಲರ್‌ ಎಲ್ಲದಕ್ಕೂ ಒಳ್ಳೆ ರೆಸ್ಪಾನ್ಸ್‌ ಸಿಕ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲೂ ಟ್ರೇಲರ್‌ ಟ್ರೆಂಡಿಂಗ್‌ನಲ್ಲಿದೆ. ಚಿತ್ರದ ಬಗ್ಗೆ ಚಿತ್ರರಂಗದ ಕಡೆಯಿಂದ, ಆಡಿಯನ್ಸ್‌ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಸಿನಿಮಾದ ಮೇಲೂ ನಿರೀಕ್ಷೆ ಇದೆ. ಸಿನಿಮಾ ನೋಡಿನ ನನ್ನ ಪತ್ನಿ, ಫ್ರೆಂಡ್ಸ್‌ ಕೂಡ ಸಾಕಷ್ಟು ನಿರೀಕ್ಷೆಯ ಮಾತಾಡಿದ್ದಾರೆ. 

* “ಲಂಬೋದರ’ ಚಿತ್ರದಲ್ಲಿ ಪ್ರೇಕ್ಷಕರು ಏನೆಲ್ಲಾ ನಿರೀಕ್ಷಿಸಬಹುದು?
ಲಂಬೋದರ ಸಿನಿಮಾದಲ್ಲಿ ನಾವೇನೂ ದೊಡ್ಡ ವಿಷಯವನ್ನು ಹೇಳುತ್ತಿಲ್ಲ. ಆಡಿಯನ್ಸ್‌ಗೆ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಇಡೀ ಸಿನಿಮಾದಲ್ಲಿ ಸಿಗಬೇಕು ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಎರಡು ಗಂಟೆ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ಗಂತೂ ಮೋಸವಿಲ್ಲ. ಪ್ರತಿಯೊಬ್ಬರು ಚಿತ್ರದ ಪಾತ್ರಗಳನ್ನು ತಮ್ಮ ಜೊತೆ ಕನೆಕ್ಟ್ ಮಾಡಿಕೊಳ್ಳುತ್ತಾರೆ. 

* ನಿಮ್ಮ ಪ್ರಕಾರ “ಲಂಬೋದರ’ ಯಾವ ಥರದ ಸಿನಿಮಾ?
ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ “ಲಂಬೋದರ’, “ಸಿದ್ಲಿಂಗು’ ಚಿತ್ರದ ನೆಕ್ಸ್ಟ್ ವರ್ಷನ್‌. “ಸಿದ್ಲಿಂಗು’ ಚಿತ್ರದಲ್ಲಿ ಆಡಿಯನ್ಸ್‌ ಯಾವ್ಯಾವ ಅಂಶಗಳನ್ನು ಎಂಜಾಯ್‌ ಮಾಡಿದ್ರೋ, ಅದೆಲ್ಲವೂ ಈ ಸಿನಿಮಾದಲ್ಲೂ ಸಿಗುತ್ತದೆ. ಯಾರೂ ಮಾಡಿರದ ಥರದ ಸಿನಿಮಾ ನಾವು ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಆದ್ರೆ ಮನರಂಜನೆ ಕೊಡುವ ಸಿನಿಮಾ ಮಾಡಿದ್ದೇವೆ. 

* ನೀವು ಗಮನಿಸಿದಂತೆ ಸಿನಿಮಾದ ಹೈಲೈಟ್ಸ್‌ ಯಾವುದು?
ಸಿನಿಮಾದಲ್ಲಿ ಚಿತ್ರಕಥೆಯ ನಿರೂಪಣೆ, ಕ್ಯಾಮರಾ ವರ್ಕ್‌, ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರದಲ್ಲಿ ಹೈಲೈಟ್ಸ್‌ ಎನ್ನಬಹುದು. ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಕೆಲಸವನ್ನು ಕಾಣಬಹುದು.  ಹೊಸ ವರ್ಷಕ್ಕೆ ಹೊಸ ಥರದ ಸಿನಿಮಾವಾಗಲಿದೆ ಎಂಬ ನಂಬಿಕೆ ಇದೆ. 

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.