CONNECT WITH US  

ರಾಯರಿಂದ ಮೊಮ್ಮಗನಿಗೆ ಪ್ರಾಥಮಿಕ ಷೇರು ಪಾಠ

ನೂರು ರುಪಾಯಿ ಬಿಸಾಕಿದ್ರೆ ನಾಳೆ ಸಾವಿರ ಬಾಚಬಹುದು. ಗೂಗಲ್‌ ಮಾಡಿದರೆ ಮಾಹಿತಿ ಹೇಗೂ ಸಿಗುತ್ತದೆ. ಈ ವ್ಯಾಖ್ಯಾನ ಕೇಳಿ ರಾಯರಿಗೆ ಹಾರ್ಟ್‌ ಫೈಲ್‌ ಆಗುವುದೊಂದೇ ಬಾಕಿ. ಇನ್ನು ಸುಮ್ಮನೆ ಕುಳಿತರೆ ಕಾಲ ಮಿಂಚಿ ಹೋದೀತು ಎಂದು ರಾಯರು ತಾಳ್ಮೆಯಿಂದ ಪುಟ್ಟುವಿಗೆ ಬುದ್ಧಿ ಹೇಳತೊಡಗಿದರು. ಸರಿಯಾದ ಮಾಹಿತಿ ನೀಡುವುದೇ ಉತ್ತಮ ಎಂದು ಷೇರುಗಟ್ಟೆಯ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಸರಿ ರೂಪದಲ್ಲಿ ವಿವರಿಸತೊಡಗಿದರು. 

ಗುರುಗುಂಟಿರಾಯರು ತಮ್ಮ ಮೊಮ್ಮಗನ ಹೊಸ ಬೆಳವಣಿಗೆಯನ್ನು ಕಂಡು ದಂಗಾದರು. ಇತ್ತೀಚೆಗಿನ ದಿನಗಳಲ್ಲಿ ಮೊಮ್ಮಗ ಪುಟ್ಟು ಕಂಪ್ಯೂಟರ್‌ ತೆರೆದು ಗೂಗಲ್‌ ಮಾಡಿ ಷೇರುಗಳ ಏರಿಳಿತದ ಬಗ್ಗೆ ಓದಿಕೊಳ್ಳುವುದನ್ನು ನೋಡಿ ಕಂಗಾಲಾದರು. ಅಯ್ಯೋ ರಾಮ, ಇಷ್ಟು ಚಿಕ್ಕ ಪ್ರಾಯದಲ್ಲಿ ಈ ರೀತಿ ಷೇರು ಹುಚ್ಚು ಬೆಳೆಸಿಕೊಂಡರೆ ಏನಪ್ಪಾ ಗತಿ ಎನ್ನುವುದು ಅವರ ಚಿಂತೆ. ಷೇರು ಹುಚ್ಚು ಏರಿಸಿಕೊಂಡು ಷೇರುಗಟ್ಟೆಯಲ್ಲಿ ಜೂಜಾಡಿ ಎÇÉಾ ಕಳೆದುಕೊಂಡು ತಣ್ಣಗಾದವರನ್ನು ನೋಡಿ ಸಾಕಾಗಿ ಹೋದ ಗುರುಗುಂಟಿರಾಯರಿಗೆ ತನ್ನದೇ ಮೊಮ್ಮಗನ ಈ ಹೊಸ ಬೆಳವಣಿಗೆ ಗಾಬರಿ ಹುಟ್ಟಿಸಿತು. ಇನ್ನು ಸುಮ್ಮನೆ ಕೂತರೆ ಕಾಲ ಮಿಂಚಿ ಹೋದೀತು ಅಂತ ಪುಟ್ಟುವನ್ನು ಹತ್ತಿರ ಕರೆದು ಆತನ ಹೊಸ ವಿದ್ಯಮಾನದ ಬಗ್ಗೆ ವಿಚಾರಿಸತೊಡಗಿದರು. ಪುಟ್ಟುವಿನ ಪ್ರಕಾರ ಷೇರು ಟ್ರೇಡಿಂಗ್‌ ಬಗ್ಗೆ ಆತನ ಎಲ್ಲ ಸ್ನೇಹಿತರೂ ಅಧ್ಯಯನ ನಡೆಸಿ¨ªಾರೆ. ಈಗ ಒಂದು ನೂರು ರುಪಾಯಿ ಬಿಸಾಕಿದ್ರೆ ನಾಳೆ ಸಾವಿರ ಬಾಚಬಹುದು.

ಗೂಗಲ್‌ ಮಾಡಿದರೆ ಮಾಹಿತಿ ಹೇಗೂ ಸಿಗುತ್ತದೆ. ಏನೂ ಕಷ್ಟವಿಲ್ಲ. ಈ ವ್ಯಾಖ್ಯಾನ ಕೇಳಿ ರಾಯರಿಗೆ ಹಾರ್ಟ್‌ ಫೈಲ್‌ ಆಗುವುದೊಂದೇ ಬಾಕಿ. ಇನ್ನು ಸುಮ್ಮನೆ ಕುಳಿತರೆ ಕಾಲ ಮಿಂಚಿ ಹೋದೀತು ಎಂದು ರಾಯರು ತಾಳ್ಮೆಯಿಂದ ಪುಟ್ಟುವಿಗೆ ಬುದ್ಧಿ ಹೇಳತೊಡಗಿದರು. ಬೇಡ ಅಂದರೆ ಈಗಿನ ಮಕ್ಕಳು ಕೇಳ್ಳೋದಿಲ್ಲ; ಸರಿಯಾದ ಮಾಹಿತಿ ನೀಡುವುದೇ ಉತ್ತಮ ಎಂದು ಷೇರುಗಟ್ಟೆಯ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಸರಿ ರೂಪದಲ್ಲಿ ವಿವರಿಸತೊಡಗಿದರು. 
***
ಒಂದು ಕಂಪೆನಿಯ ಷೇರುಗಳನ್ನು ಮೊತ್ತ ಮೊದಲ ಬಾರಿಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡುವುದನ್ನು ಇನಿಶಿಯಲ್‌ ಪಬ್ಲಿಕ್‌ ಆಫ‌ರ್‌ (ಐ.ಪಿ.ಓ) ಎನ್ನುತ್ತಾರೆ. ಆ ಬಳಿಕ ಮತ್ತೂಮ್ಮೆ ಅದೇ ರೀತಿಯಲ್ಲಿ ಪಬ್ಲಿಕ್‌ ಆಗಿ ಆಫ‌ರ್‌ ಮಾಡಿದರೆ ಅದಕ್ಕೆ ಫಾಲೋ-ಆನ್‌ ಪಬ್ಲಿಕ್‌ ಆಫ‌ರ್‌ (ಎಫ್.ಪಿ.ಓ) ಎನ್ನುತ್ತಾರೆ. ಈ ರೀತಿಯಲ್ಲಿ ಕಂಪೆನಿಯ ವತಿಯಿಂದ ನೇರವಾಗಿ ಹೂಡಿಕೆದಾರರಿಗೆ ಬಿಡುಗಡೆ ಆಗುವ ಷೇರುಗಳನ್ನು ಪ್ರೈಮರಿ ಮಾರುಕಟ್ಟೆಯೆಂದು ಪರಿಗಣಿಸಲಾಗುತ್ತದೆ. 

ಒಂದು ಹೊಚ್ಚ ಹೊಸ ಕಂಪೆನಿಯ ಷೇರುಗಳನ್ನು ಐಪಿಓ ಮಾಡಬಹುದು ಅಥವಾ ಒಂದು ಚಾಲನೆಯಲ್ಲಿರುವ ಅದುವರೆಗೆ ಖಾಸಗಿಯಾಗಿದ್ದ ಒಂದು ಕಂಪೆನಿಯ ಹೊಸ ಷೇರುಗಳನ್ನೂ ಐಪಿಓ ಮೂಲಕ ಇಶ್ಯೂ ಮಾಡಬಹುದು. ಆದರೆ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಿಡಲು ಒಂದು ಐಪಿಓ ಹೊರತರಲು ಪ್ರಮೋಟರ್ಸ್‌ಗಳಿಗೆ ಕನಿಷ್ಠ 3 ವರ್ಷಗಳ ಸಾಧನೆ ಅಗತ್ಯ ಎಂಬ ಕಾನೂನಿದೆ. 

ಅಷ್ಟೇ ಅಲ್ಲದೆ, ಐಪಿಓ ಅನ್ನು "ಅಟ್‌ ಪಾರ್‌' ಅಂದರೆ ಮುಖಬೆಲೆಗೆ ಸಮಾನವಾದ ಬೆಲೆಗೆ ಇಶ್ಯೂ ಮಾಡಬಹುದು ಅಥವ "ಅಟ್‌ ಪ್ರೀಮಿಯಂ' ಅಂದರೆ, ಮುಖಬೆಲೆಗಿಂತ ಜಾಸ್ತಿ ಬೆಲೆಗೆ ಕೂಡಾ ನೀಡಬಹುದು. (ಉದಾ: ರೂ. 10 ಮುಖಬೆಲೆಯ ಶೇರನ್ನು ರೂ. 10 ಕ್ಕೇ ನೀಡಬಹುದು ಅಥವಾ ಅದರಿಂದ ಎಷ್ಟಾದರು ಜಾಸ್ತಿ ಮೊತ್ತಕ್ಕೆ ಕೂಡಾ ನೀಡಬಹುದು) ಹಿಂದೆÇÉಾ ಭಾರತದಲ್ಲಿ ಪ್ರಸಿದ್ಧ ಲಾಭದಾಯಕ ಕಂಪೆನಿಗಳ ಐಪಿಓಗಳೂ ಮುಖಬೆಲೆಗೇ ಇಶ್ಯೂ ಆಗುತ್ತಿದ್ದವು. ಶೇರಿಗೆ ಬಂದ ಅರ್ಜಿಗಳನ್ನು ಲಾಟರಿ ಎತ್ತಿ ಷೇರು ಅಲಾಟ್‌ ಮಾಡುತ್ತಿದ್ದರು. ಲಾಟರಿ ಹೊಡೆದವರಿಗೆ ಚಾಂದಿಯೋ ಚಾಂದಿಯಾಗುತ್ತಿತ್ತು. ಪ್ರೀಮಿಯಂ ಬೆಲೆಗೆ ಐಪಿಓ ಬಿಡುಗಡೆಗೆ ಅನುಮತಿ ಸಿಕ್ಕಿದ ನಂತರ ಈಗ ಎಲ್ಲ ಷೇರುಗಳೂ ಪ್ರೀಮಿಯಂ ದರಕ್ಕೇ ಇಶ್ಯೂ ಆಗುತ್ತವೆ. ಆದರೆ ಇಶ್ಯೂ ಆದ ಒಂದು ಕಂಪೆನಿಯ ಎÇÉಾ ಷೇರುಗಳೂ ಸಮಾನ ಮುಖಬೆಲೆಯ¨ªಾಗಿರುತ್ತದೆ. ಆದ್ದರಿಂದ ಜಾಸ್ತಿ ನೀಡಿದ ಪ್ರೀಮಿಯಂ ದುಡ್ಡು ಕಂಪೆನಿಯ ಒಟ್ಟು ಸಂಪತ್ತಿಗೆ ಸೇರಲ್ಪಟ್ಟು ಮುಖಬೆಲೆಗೆ ಷೇರು ಕೊಂಡ ಪ್ರಮೋಟರ್ಸ್‌ಗಳಿಗೆ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ ಷೇರು ಮಾರುಕಟ್ಟೆ ಉಚ್ಚಾ†ಯದಲ್ಲಿ ಇರುವಾಗ ಪ್ರಮೋಟರ್ಸ್‌ಗಳು ಐಪಿಓ ಅನ್ನು ಅದಷ್ಟು ಜಾಸ್ತಿ ಪ್ರೀಮಿಯಂಗೆ ಹೊರತರಲು ಮುಗಿಬೀಳುತ್ತಾರೆ.

ಐಪಿಓ ಇಶ್ಯೂ ಮಾಡುವ ಕಂಪೆನಿಯು ಮೊತ್ತ ಮೊದಲಾಗಿ ಒಬ್ಬ "ಲೀಡ್‌ ಮ್ಯಾನೇಜರ್‌' ಆಗಿ ಒಂದು ಮರ್ಚಂಟ್‌ ಬ್ಯಾಂಕನ್ನು ನಿಯುಕ್ತಗೊಳಿಸಬೇಕಾಗುತ್ತದೆ. ಅವರ ಸಹಾಯದಿಂದ ಇಶ್ಯೂನ ಎಲ್ಲ ರೂಪರೇಷೆಗಳನ್ನೂ, ಇಶ್ಯೂ ಪ್ರಮಾಣ, ಬೆಲೆ ಇತ್ಯಾದಿಗಳನ್ನು ನಿಗದಿಪಡಿಸಿ ಒಂದು ಡ್ರಾಫ್ಟ್ ಪ್ರಾಸ್ಪೆಕ್ಟಸ್‌(ಕರಡು ರೂಪರೇಷೆ) ಅನ್ನು ತಯಾರಿಸಿ ಸರಕಾರಿ ನಿಯಂತ್ರಕ "ಸೆಬಿ'ಯ (Securities and Exchange Board of India) ಒಪ್ಪಿಗೆಗಾಗಿ ನೀಡಬೇಕಾಗುತ್ತದೆ. ಒಂದು ಐಪಿಓ ಬಿಡುಗಡೆಯ ಮುನ್ನ ಸರಕಾರದ ಅನುಮತಿ ಅತ್ಯವಶ್ಯ. ಷೇರುಮಾರುಕಟ್ಟೆಯ ಎÇÉಾ ವಿದ್ಯಮಾನಗಳಿಗೂ "ಸೆಬಿ' ಅಂಗಸಂಸ್ಥೆಯೇ ಅಧಿಕಾರಿ. 

ಸರಕಾರದ ಅನುಮತಿ ಪಡೆದ ಬಳಿಕ ಸಾರ್ವಜನಿಕರಿಗೆ ನೀಡುವ ಆಹ್ವಾನವನ್ನು "ರೆಡ್‌ ಹೆರಿಂಗ್‌ ಪ್ರಾಸ್ಪೆಕ್ಟಸ್‌' ಅನ್ನುತ್ತಾರೆ. ನಾವು-ನೀವು ಕಾಣುವ ಪ್ರಾಸ್ಪೆಕ್ಟಸ್‌ ಈ ತೆರನ¨ªಾಗಿರುತ್ತದೆ. ಅದರಲ್ಲಿ ಇಶ್ಯೂನ, ಕಂಪೆನಿಯ ಎÇÉಾ ಸಂಬಂಧಿತ ವಿವರಣೆಗಳು ಇರುತ್ತವೆ. ಇದನ್ನು ಬಿಡುಗಡೆಗೊಳಿಸಿ ಸಾರ್ವಜನಿಕರಿಂದ ಹಣ ಪಡೆದು ಇಡೀ ಐಪಿಓ ಪ್ರಕ್ರಿಯೆಯನ್ನು ನಡೆಸಿಕೊಡುವವರು ಲೀಡ್‌ ಮ್ಯಾನೇಜರ್ಸ್‌ ಆಗಿರುತ್ತಾರೆ.

ಇಶ್ಯೂನಲ್ಲಿ ಹಣಕಾಸಿನ ಸಂಸ್ಥೆಗಳಿಗೆ - (Qualified Institutional Investors), ನಮ್ಮ -ನಿಮ್ಮಂತಹ ಚಿಲ್ಲರೆ ಗ್ರಾಹಕರಿಗೆ (Retail Investors) ದೊಡ್ಡ ಮೊತ್ತ ಹೂಡುವ ಶ್ರೀಮಂತ (High Networth Individuals) ಹಾಗೂ ಅದೇ ಕಂಪೆನಿಯ ಉದ್ಯೋಗಿಗಳಿಗೆ (Employees) ಎಂಬಂತೆ ಕೋಟಾ ನಿರ್ಣಯವಾಗಿರುತ್ತದೆ. ಇಶ್ಯೂನ ಬೆಲೆ ಮೊದಲೇ ನಿರ್ಧರಿತ "ಫಿಕ್ಸ್‌$x ಪ್ರೈಸ್‌' ಆಗಿರಬಹುದು ಅಥವಾ ಅಮೇಲೆ ನಿರ್ಧರಿತವಾಗುವ "ಬುಕ್‌ ಬಿಲ್ಡಿಂಗ್‌ ಪ್ರಾಸೆಸ್‌' ಮೂಲಕ ಆಗಿರಬಹುದು. ಬುಕ್‌ ಬಿಲ್ಡಿಂಗ್‌ ಪ್ರಾಸೆಸ್‌ನಲ್ಲಿ ಬೆಲೆಯ ಒಂದು ರೇಂಜ್‌ ಮಾತ್ರ (ಉದಾ, ರೂ 150-170) ಮಾತ್ರ ನಿರ್ಧರಿತವಾಗಿದ್ದು ಅಂತಿಮ ಬೆಲೆ ಕಿಐಐಗಳ ಬಿಡ್‌ಗಳ ಮೂಲಕವೇ ನಿರ್ಧರಿತವಾಗುತ್ತದೆ. ಆ ಬೆಲೆ ಎÇÉಾ ಷೇರುಗಳಿಗೂ ಅನ್ವಯಿಸುತ್ತದೆ. ಈಗೀಗ ರಿಟೇಲ್‌ ಗ್ರಾಹಕರಿಗೆ ಮಾತ್ರ ಸ್ವಲ್ಪ (ಶೇ.5-ಶೇ.10) ಡಿಸ್ಕೌಂಟ್‌ ನೀಡುವ ಪರಿಪಾಠ ಆರಂಭವಾಗಿದೆ. 

ಒಂದು ನಿರ್ಧರಿತ ಅವಧಿಯೊಳಗೆ ನಡೆದು ಮುಗಿಯುವ ಈ ಐಪಿಓ ಪ್ರಕ್ರಿಯೆಯ ಕೊನೆಗೆ ಷೇರು ಅಲಾಟೆ¾ಂಟ್‌ ನಡೆಯುತ್ತದೆ. ಇಶ್ಯೂನ ನಿಗದಿತ ಮೊತ್ತಕ್ಕಿಂತ ಜಾಸ್ತಿ ಅರ್ಜಿಗಳು ಬಂದಲ್ಲಿ ಅರ್ಥಾತ್‌, Oversubscribe ಆದಲ್ಲಿ ಒಂದು ಪೂರ್ವ ನಿರ್ಧರಿತ ಶೇಖಡಾವಾರು ಫಾರ್ಮುಲಾ ಮೂಲಕ ಅರ್ಜಿದಾರರಿಗೆ ಅಲಾಟೆ¾ಂಟ್‌ ನಡೆಯುತ್ತದೆ. ಆ ವಿವರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಸಿಕ್ಕವರಿಗೆ ಶೇರೂ ಮಿಕ್ಕವರಿಗೆ ದುಡೂx ವಾಪಸ್‌ ಬರುತ್ತದೆ. 
ಐಪಿಓಗೆ ನಿಮ್ಮ ಟ್ರೇಡಿಂಗ್‌ ಅಕೌಂಟ್‌ ಮೂಲಕ ಆನ್‌ಲೈನ್‌ ಆಗಿ ಅಥವಾ ಮುದ್ರಿತ ಫಾರ್ಮ್ಗ‌ಳ ಮೂಲಕ ಕೂಡಾ ಅಪ್ಲೆç ಮಾಡಬಹುದು. ಷೇರುಗಳನ್ನು ಕಾಗದದ ರೂಪದಲ್ಲಿ ಪಡೆಯಬಹುದಾದರೂ ಕೊನೆಗೆ ಅವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವು ಕಡ್ಡಾಯವಾಗಿ ಡಿ-ಮ್ಯಾಟ್‌ ರೂಪದಲ್ಲಿ ಇರಬೇಕಾಗುತ್ತದೆ. ಮಾರಾಟಕ್ಕೆ ಡಿ-ಮ್ಯಾಟ್‌/ಇಲೆಕ್ಟ್ರಾನಿಕ್‌ ಷೇರು ಇದೀಗ ಕಡ್ಡಾಯ.

ಐಪಿಓ ಜಗತ್ತಿನ ಅತ್ಯಂತ ನೂತನ ವಿಚಾರವೆಂದರೆ, Application Supported by Blocked Amount ಅಥವಾ ASBA. ಅಂದರೆ ಶೇರಿನ ಅಪ್ಲಿಕೇಶನ್‌ ಜೊತೆಗೆ ನೀಡುವ ದುಡ್ಡು ನಮ್ಮ ಬ್ಯಾಂಕ್‌ ಅಕೌಂಟಿನÇÉೇ block ಮಾಡಿ ಹಿಡಿದಿಟ್ಟಿರುತ್ತಾರೆ. ಷೇರು ಅಲಾಟ್‌ ಆದರೆ ಮಾತ್ರ ಡೆಬಿಟ್‌ ಆಗುತ್ತದೆ. ಇಲ್ಲವಾದರೆ ಆ ಹಣವನ್ನು ಅÇÉೇ ಹಾಗೇ unblock ಮಾಡಿಬಿಡುತ್ತಾರೆ. ಇದರಿಂದ ಹಳೆ ಪದ್ಧತಿಯಂತೆ ಮೊದಲು ಸಂಪೂರ್ಣ ದುಡ್ಡು ಕೊಟ್ಟು ಅಲಾಟ್‌ ಆಗದಿದ್ದರೆ ಆಮೇಲೆ ವಾಪಾಸು ಪಡೆಯಲು ಕೆಲಸ ತಪ್ಪುತ್ತದೆ. ಹೂಡಿಕೆದಾರರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು. 

ಐಪಿಓದಲ್ಲಿ ಬಿಡುಗಡೆಯಾದ ಷೇರು ಆ ಬಳಿಕ ಸೆಕೆಂಡರಿ ಮಾರುಕಟ್ಟೆ ಅಂದರೆ ಸ್ಟಾಕ್‌ ಎಕ್ಸ್‌ಚೆಂಜ್‌ನಲ್ಲಿ ಒಂದು ನಿಗದಿತ ದಿನಾಂಕದಂದು (ಸುಮಾರು 10-15 ದಿನಗಳಲ್ಲಿ) ಮಾರಾಟಕ್ಕೆ ಲಿಸ್ಟ್‌ ಆಗುತ್ತದೆ. ಲಿಸ್ಟ್‌ ಆದ ಬಳಿಕ ಅದು ನಿರಂತವಾಗಿ ಮಾರಾಟಕ್ಕೆ ಲಭ್ಯ. ಲಿಸ್ಟ್‌ ಆಗುವಾಗ ಮತ್ತು ಆ ಬಳಿಕ ಅದಕ್ಕೆ ಡಿಮಾಂಡ್‌-ಸಪ್ಲೆç ಅನುಸರಿಸಿ ಹೊಸದಾದ ಒಂದು ಮಾರುಕಟ್ಟೆ ಬೆಲೆ ಬರುತ್ತದೆ. ಮಾರುಕಟ್ಟೆ ಬೆಲೆ ಐಪಿಓ ಕೊಂಡ ಬೆಲೆಗಿಂತ ಜಾಸ್ತಿಯಾದರೆ ಲಿಸ್ಟಿಂಗ್‌ ಗೈನ್‌ ಎಂದು ಹೂಡಿದವರಿಗೆ ಲಾಭವಾಗುತ್ತದೆ, ಕಡಿಮೆಯಾದರೆ ಹೂಡಿದವರಿಗೆ ಲಿಸ್ಟಿಂಗ್‌ ಲಾಸ್‌ ಉಂಟಾಗುತ್ತದೆ. ಹಾಗಾಗಿ ಐಪಿಓದ ಬಿಡುಗಡೆ ಬೆಲೆಯ ಬಗ್ಗೆ ಅತ್ಯಂತ ಜಾಗರೂಕರಾಗಿ ವಿಶ್ಲೇಷಿಸಿಯೇ ಮುಂದುವರಿಯಬೇಕು. ಈಗೀಗ ಐಪಿಓ ಬೆಲೆಗಳು ಅಗತ್ಯಕ್ಕಿಂತ ದುಬಾರಿ ಪ್ರೀಮಿಯಂನಲ್ಲಿ ಬರುತ್ತಾ ಇವೆ. ಜಾಗ್ರತೆ! 

IPOದಲ್ಲೂ ಫ್ರೆಂಚ್‌, ಡಚ್‌ 
ಐಪಿಓವನ್ನು Qualified Institutional Investorsಗಳಿಗೆ ಬುಕ್‌ ಬಿಲ್ಡಿಂಗ್‌ ಮೂಲಕ ಮಾರುತ್ತಾರೆ ಎಂದು ಈಗಾಗಲೇ ಓದಿದೆವಷ್ಟೆ? ಬಹುತೇಕ ಚಾರಿತ್ರಿಕವಾಗಿ ಹಾಗೆಯೇ ನಡೆಯುತ್ತಾ ಬಂದಿದೆ. ಆದರೆ ಏಲಂ ಅಥವ auction ಮೂಲಕವೂ ಐಪಿಓ ಮಾರಾಟ ಮಾಡುವ ಪರಿಪಾಠ ಈಗ ಆರಂಭವಾಗಿದೆ. ಏಲಂ ಮಾಡುವಾಗ ಸಾಂಸ್ಥಿಕ ಹೂಡಿಕೆದಾರರು ಕಂಪೆನಿ ಘೋಷಿಸಿದ ಸೂಚಿತ ಬೆಲೆಯಾನುಸಾರ ತಮ್ಮ ತಮ್ಮ ಬಿಡ್‌ಗಳನ್ನು "ಎಷ್ಟು ಬೆಲೆಯಲ್ಲಿ ತಮಗೆ ಎಷ್ಟು ಪ್ರಮಾಣ(ಸಂಖ್ಯೆ)ದಲ್ಲಿ ಷೇರುಗಳು ಬೇಕು' ಎಂದು ನಮೂದಿಸಿರುತ್ತಾರೆ. 

Auctionನಡೆಸಿ ಆ ಬಳಿಕ ಬೆಲೆಯನ್ನು ನಿರ್ಧರಿಸಿ ಷೇರು ಅಲಾಟ್‌ ಮಾಡುವಲ್ಲಿ ಮುಖ್ಯವಾಗಿ ಎರಡು ರೀತಿಯ ಪದ್ಧತಿಗಳು ಜಾರಿಯಲ್ಲಿದೆ - ಡಚ್‌ ಪದ್ಧತಿ ಮತ್ತು ಫ್ರೆಂಚ್‌ ಪದ್ಧತಿ.

ಡಚ್‌ ಏಲಂ ಪದ್ಧತಿಯಲ್ಲಿ ಬಿಡ್‌ಗಳನ್ನು ಕಂಪೆನಿ ಘೋಷಿಸಿದ ಒಂದು ಪ್ರೈಸ್‌ ಬ್ಯಾಂಡ್‌ ಒಳಗಡೆ ಮಾಡಬೇಕಾಗುತ್ತದೆ. ಬಳಿಕ ಇಶ್ಯೂ ಮಾಡುವಾಗ ಕಂಪೆನಿಯವರು ಅತ್ಯಂತ ಹೆಚ್ಚಿನ ಬೆಲೆಯಿಂದ ಆರಂಭಗೊಂಡಂತೆ ಕೆಳ ಕೆಳಕ್ಕೆ ಇಳಿಯುತ್ತಾರೆ. ಯಾವ ಬಿಡ್‌ ಬೆಲೆಯ ಮಟ್ಟಕ್ಕೆ ಇಳಿಯುವಾಗ ತಮ್ಮ ಉದ್ದೇಶಿತ ಪ್ರಮಾಣವು ಸಂಪೂರ್ಣವಾಗಿ ಮಾರಿಹೋಗುತ್ತದೋ ಅದನ್ನೇ ಇಡೀ ಇಶ್ಯೂಗೆ ಎಲ್ಲರಿಗೂ ಅನ್ವಯಿಸುವ ಷೇರು ಬೆಲೆ ಎಂದು ನಿಗದಿ ಪಡಿಸುತ್ತಾರೆ. 

ಉದಾಹರಣೆಗೆ, "ಮಕ್ಮಲ್‌ ಕಟ¾ಲ್‌ ಟೋಪಿವಾಲಾ ಕಂಪೆನಿ'ಯು ಒಂದು ಐಪಿಓ ಇಶ್ಯೂ ಮಾಡುತ್ತದೆ ಎಂದು ಇಟ್ಟುಕೊಳ್ಳಿ. ಉದ್ದೇಶ- 100 ಷೇರುಗಳು. ಪ್ರೈಸ್‌ ಬ್ಯಾಂಡ್‌ ರೂ. 50-60 ಪ್ರತಿ ಶೇರಿಗೆ. ಸಾಂಸ್ಥಿಕ ಹೂಡಿಕೆದಾರ ಬಿಡ್‌ಗಳು ಈ ರೀತಿ ಬಂತು:
 ರೂ. 60 ರಲ್ಲಿ 25 ಷೇರು, 
ರೂ. 58 ರಲ್ಲಿ 25 ಷೇರು, 
ರೂ. 55 ರಲ್ಲಿ 30 ಷೇರು, 
ರೂ 50 ರಲ್ಲಿ 40 ಷೇರು ಇತ್ಯಾದಿ. 

ಗರಿಷ್ಟ ಬೆಲೆಯಿಂದ ಕೆಳಕ್ಕಿಳಿಯುತ್ತಾ ಬಂದಂತೆ ರೂ. 50ರ ಮಟ್ಟಕ್ಕೆ ತಲುಪಿದಾಗ ಉದ್ದೇಶಿತ 100 ಷೇರುಗಳೆಲ್ಲವೂ ಮಾರಿ ಹೋಗುವುದಲ್ಲವೇ? ಹಾಗಾಗಿ ರೂ. 50 ಈ ಇಶ್ಯೂಗೆ ಎಲ್ಲರಿಗೂ ಅನ್ವಯಿಸುವ ಷೇರು ಬೆಲೆ ಎಂದು ನಿರ್ಧರಿತವಾಗುತ್ತದೆ ಮತ್ತು ಅದೇ ರೀತಿಯಲ್ಲಿ ಎಲ್ಲರಿಗೂ ಷೇರು ಅಲಾಟ್‌ ಮಾಡಲಾಗುತ್ತದೆ. 

ಫ್ರೆಂಚ್‌ ಏಲಂ ಪದ್ಧತಿಯಲ್ಲಿ ಪ್ರೈಸ್‌ ಬ್ಯಾಂಡ್‌ನ‌ ಬದಲಾಗಿ ಒಂದು ಕನಿಷ್ಟ ಫ್ಲೋರ್‌ ಪ್ರೈಸ್‌ ಅನ್ನು ಮಾತ್ರ ಘೋಷಿಸುತ್ತಾರೆ. ಬಿಡ್‌ಗಳು ಆ ತಳಮಟ್ಟದ ಬೆಲೆಗಿಂತ ಮೇಲೆ ಎಷ್ಟಾದರೂ ಇರಬಹುದು. ಬಳಿಕ ಕಂಪೆನಿಯು ಗರಿಷ್ಟ ಬಿಡ್‌ ಬೆಲೆಯಿಂದ ಆರಂಭಗೊಂಡಂತೆ ಕೆಳ ಕೆಳಕ್ಕಿಳಿಯುತ್ತಾ ಪ್ರತಿಯೊಬ್ಬರೂ ಕೇಳಿದ ಬೆಲೆಯಲ್ಲಿ ಕೇಳಿದ ಪ್ರಮಾಣದ ಷೇರುಗಳನ್ನು ಮಾರುತ್ತಾ ಬರುತ್ತಾರೆ- ತಮ್ಮ ಉದ್ದೇಶಿತ ಪ್ರಮಾಣದ ಷೇರುಗಳು ಸಂಪೂರ್ಣವಾಗಿ ಮಾರಿ ಹೋಗುವ ತನಕ. ಪ್ರತಿಯೊಬ್ಬರಿಗೂ ಅವರವರು ಬಿಡ್‌ ಮಾಡಿದ ಬೆಲೆ ಹಾಗೂ ಪ್ರಮಾಣದÇÉೇ ಷೇರು ಮಾರಲಾಗುವುದು. ಇಲ್ಲಿ ಎಲ್ಲರಿಗೂ ಒಂದೇ ಬೆಲೆ ಇರುವುದಿಲ್ಲ.

ಮೇಲಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಫ್ಲೋರ್‌ ಪ್ರೈಸ್‌ ರೂ.50 ಎಂದಿಟ್ಟುಕೊಳ್ಳೋಣ. ಅದರಲ್ಲಿ ಫ್ರೆಂಚ್‌ ಪದ್ಧತಿಯಾನುಸಾರ ಮೊತ್ತ ಮೊದಲು ಗರಿಷ್ಟ ಬೆಲೆಯಾದ ರೂ. 60 ರಲ್ಲಿ 25 ಷೇರು ಮಾರಲಾಗುತ್ತದೆ. ಬಳಿಕ ರೂ. 58 ರಲ್ಲಿ 25 ಷೇರು, ಆಮೇಲೆ, ರೂ. 55 ರಲ್ಲಿ 30 ಷೇರು, ಹಾಗೂ ರೂ. 50 ರಲ್ಲಿ ಉಳಿದ 20 ಷೇರು. ಅಲ್ಲಿಗೆ ಉದ್ದೇಶಿತ 100 ಷೇರುಗಳ ಮಾರಾಟ ಮುಗಿಯಿತಲ್ಲವೇ? ಈ ಪದ್ಧತಿಯಲ್ಲಿ ಕಂಪೆನಿಗಳಿಗೆ ಗರಿಷ್ಟ ಬೆಲೆ ಸಿಗುತ್ತದೆ.

- ಜಯದೇವ ಪ್ರಸಾದ ಮೊಳೆಯಾರ


Trending videos

Back to Top