ಚಿನ್ನದ ಮೆರಗೂ, ಶೇರಿನ ಬೆರಗೂ…


Team Udayavani, May 7, 2018, 8:01 AM IST

gold.jpg

ಚಿನ್ನಕ್ಕೆ ಅದರದ್ದೇ ಆದ ಮೆರಗು ಇದೆ ಹಾಗೂ ಶೇರಿಗೆ ಅದರದ್ದೇ ಆದ ಬೆರಗು ಇದೆ. ನಮಗೆ ಎರಡೂ ಬೇಕು. ಭದ್ರತೆಯೂ ಬೇಕು, ಪ್ರಗತಿಯೂ ಬೇಕು, ಜಿಲೇಬಿಯೂ ಬೇಕು, ಬೈಟೂ ಕಾಫಿಯೂ ಬೇಕು. ಹಾಗೆಯೇ ಚಿನ್ನವೂ, ಒಟ್ಟಿಗೆ ಒಂದಿಷ್ಟು ಶೇರೂ ಖರೀದಿಸಿಟ್ಟರೆ ವಿತ್ತ, ದಾಂಪತ್ಯ ಸಮರಸ ಇರುತ್ತದೆ.

ಇತ್ತೀಚೆಗೆ ನಾನು ಸಭೆ ಸಮಾರಂಭಗಳಿಗೆ ಹೋದಾಗ ಕೆಲ ಹೆಂಗಸರು ಶೇರುಗಳ ಅಪಾಯದ ಬಗ್ಗೆ ನಾನು ಬರೆದ ಲೇಖನಗಳನ್ನು ಉÇÉೇಖೀಸಿ ನನ್ನನ್ನು ಅಭಿನಂದಿಸುತ್ತಾರೆ. ನನ್ನ ಶೇರು ಲೇಖನಗಳು ಅವರಿಗೆ ತಮ್ಮ ಮನೆಯÇÉಾಗುವ ಗೃಹ ಕದನಗಳಲ್ಲಿ ಉತ್ತಮ ಅಸ್ತ್ರವಾಗಿ ಉಪಯೋಗವಾಗುತ್ತದೆ ಎಂದು ತೋರುತ್ತದೆ. ಅವರ ಮನೆಯ “ಅವರು’ ಕೂಡಾ ಜೊತೆಯಲ್ಲಿ ಇದ್ದರೆ ಅವರ ಕಂದಿದ ಮುಖದಿಂದಲೇ ಅದು ಸತ್ಯ ಎಂದು ಖಚಿತವಾಗುತ್ತದೆ. ಅಲ್ಲದೆ, ನಾನು ಇತ್ತೀಚೆಗೆ ಬಂಧು ಬಾಂಧವರ ಮನೆಗೆ ಭೇಟಿ ನೀಡಿದಾಗಲೆÇÉಾ ಕಾಫಿ, ಸ್ನ್ಯಾಕ್ಸ್‌ ಜೊತೆಗೆ ಸ್ವಲ್ಪ ಸ್ವೀಟ್ಸ್‌ ಕೂಡಾ ತಟ್ಟೆಯಲ್ಲಿ ಕಾಣಸಿಗುತ್ತದೆ – ಬೋನಸ್‌ ಆಫ‌ರ್‌! 

ಉದಯವಾಣಿಯಲ್ಲಿ ಕಾಲಂ ಬರೆಯುತ್ತಾ ದೊರಕುವ ಈ ಟ್ಯಾಕ್ಸ್‌-ಫ್ರೀ ಪರ್ಕ್ಸ್ ಸವಿಯುತ್ತಾ ಮೊನ್ನೆ ಒಬ್ಬ ಸ್ನೇಹಿತನ ಮನೆಯಲ್ಲಿ ಕುಳಿತಿ¨ªೆ. ಮನೆಯೊಡತಿ ನನ್ನನ್ನು ಶೇರ್‌ ಮಾರ್ಕೆಟ್‌ ರಿಸ್ಕ್ ಬಗ್ಗೆ ತನ್ನ ಪತಿಯ ಎದುರು ಮಾತಿಗೆಳೆದರು – ಅವರ ವಾದಕ್ಕೆ ನಾನೊಬ್ಬ ಅಧಿಕೃತ ಸಾಕ್ಷಿಯೋ ಎಂಬಂತೆ. ಶೇರುಗಳ ರಿಸ್ಕ್ ಬಗ್ಗೆ ಮಾತು ಬೆಳೆದಷ್ಟೂ ಯೆಸ್‌, ಯೆಸ್‌, ರೈಟ್‌, ರೈಟ್‌’ ಅಂತ ಗೋಣುಹಾಕಿ ಜಿಲೇಬಿ ಮೆಲ್ಲುತ್ತಿ¨ªೆ. ಆದರೆ ವಿಷಯ ಶೇರಿನಿಂದ ಹೊರಳಿ ಚಿನ್ನದ ಕಡೆ ತಿರುಗಿತು. ಅವಾಗ ಆಕೆ ಇನ್ನೊಂದು ಜಿಲೇಬಿ ನನ್ನ ಪ್ಲೇಟೆೆY ಇಳಿಸುತ್ತಾ “ಇರುವುದರಲ್ಲಿ ಅತ್ಯುತ್ತಮ ಇನ್ವೆಸ್ಟೆ$¾ಂಟ್‌ ಅಂದರೆ ಚಿನ್ನ’ ಅಲ್ವ ಮೊಳೆಯಾರ್ರೆà. . .’ ಅಂತ ರಾಗ ಎಳೆದು ತನ್ನ ಪತಿಯತ್ತ ನೋಟ ಹಾಯಿಸಿದಾಗ ನಾನು ಎಂತಹ ಚಕ್ಕರ್ನಲ್ಲಿ ಸಿಕ್ಕಿ ಬಿದ್ದಿದ್ದೇನೆ ಎಂಬ ಪ್ರಾಥಮಿಕ ಅರಿವು ಉಂಟಾಯಿತು. ಆದರೂ ತಿಂದ ಜಿಲೇಬಿಯ ಉಪ್ಪಿನ ಋಣಕ್ಕೋ, ಇನ್ನೂ ತಿನ್ನಬೇಕಾಗಿರುವ ಜಿಲೇಬಿ-ಲಂಚದ ಆಮಿಷಕ್ಕೋ ಗೊತ್ತಿಲ್ಲ; ಆ ಪ್ರಶ್ನೆಗೂ ಯೆಸ್‌, ಯೆಸ್‌’ ಎಂದೇ ಗೋಣು ಹಾಕಿದೆ.

ಮರುದಿನ ಆಫೀಸಿನಲ್ಲಿ ಸಿಕ್ಕ ಆ ನನ್ನ ಸ್ನೇಹಿತ ನನ್ನನ್ನು ಚೆನ್ನಾಗಿಯೇ ಬೆಂಡೆತ್ತಿದ. ಅಲ್ಲ ಮಾರಾಯ, ನಿನ್ನನ್ನು ಒಳ್ಳೆ ಫ್ರೆಂಡ್‌ ಅಂತ ಮನೆಗೆ ಎಂಟ್ರಿ ಕೊಟ್ರೆ ಅಲ್ಲಿ ಬಂದು ನಮ್ಗೆà ಹಚ್ಚಿ ಹಾಕುದಾ? ಅಂತ ಶುರು ಮಾಡಿದ. 
ಏಕೆ ಮಾರಾಯ? ಏನಾಯ್ತು? ಎಂದೆ, ಒಂದು ಅಮಾಯಕ ಮುಖವಾಡ ಧರಿಸಿ.

“ಏಕೆ? ಅಷ್ಟೂ ಗೊತ್ತಾಗುದಿಲ್ವಾ? ನೀನು ಮದ್ವೆ ಆದವನು ಕೂಡಾ ಹೀಗೆ ಕೇಳುವುದಾ? ನಮ್‌ ಮನೆಯಲ್ಲಿ ನಂಗೆ ಶೇರು ಹುಚ್ಚು. ಅವಳಿಗೆ ಶೇರ್‌ ಕಂಡ್ರೆ ಆಗುದಿಲ್ಲ. ಅವಳದ್ದು ಚಿನ್ನದಲ್ಲಿ ಇನ್ವೆಸ್ಟ್‌ ಮಾಡೋಣ ಅಂತ ಹಠ! ಒಮ್ಮೆ ಚಿನ್ನ ಹೆಂಗಸರ ಕೈವಶ ಆದ್ರೆ ಮತ್ತೆ ನಮ್ಗೆ ಅದು ವಾಪಾಸು ಸಿಗ್ಲಿಕ್ಕುಂಟಾ? ನೀನೂ ಅದಕ್ಕೆ ಯೆಸ್‌ ಯೆಸ್‌’ ಅಂತ ತಲೆ ಆಡಿಸುವುದಾ? ಎÇÉಾ ಜಿಲೇಬಿ ಮಹಾತೆ¾!’ ಅಂತ ತನ್ನ ರಿಪೇರಿ ಕೆಲಸ ಮುಂದುವರಿಸಿದ.

ಇದೊಳ್ಳೆ ಪೇಚಾಟ ಆಯ್ತಲ್ಲ ಮರಾಯೆÅà! ಶೇರು v/s ಚಿನ್ನ. ಚಿನ್ನ ಮೇಲೋ, ಶೇರು ಮೇಲೊ? ಹೆಂಡತಿ ಮೇಲೋ, ಗಂಡ ಮೇಲೋ? ಆಫೀಸ್ನಲ್ಲಿ ಸ್ನೇಹಿತ ಕೊಡೊÕà ಪುಕ್ಸಟ್ಟೆ ಕಾಫಿ ಮೇಲೋ, ಮನೆಗೆ ಹೋದ್ರೆ ಅವ° ಹೆಂಡ್ತಿ ಕೊಡೋ ಜಿಲೇಬಿ ಮೇಲೋ?

“ಮುಂದಿನ ಕಾಕುನಲ್ಲಿ ಸರಿಯಾಗಿ ಸ್ಟಡಿ ಮಾಡಿ ಒಂದು ಆರ್ಟಿಕಲ್‌ ಕುಟ್ಟು ಮರಿ’ ಅಂತ ಅಪ್ಪಣೆ ಹೊರಡಿಸಿಯೇ ಬಿಟ್ಟ ದೋಸ್ತ! ಇಲ್ದಿದ್ರೆ ನನ್ನ ಪುಕ್ಸಟ್ಟೆ ಬೈಟೂ ಕಾಫಿ ಬಂದ್‌!’ ಅಂದ.

So here it goes…
ಹೂಡಿಕೆಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಬೆಲೆಯುಳ್ಳದ್ದು ಚಿನ್ನವೇ ಸರಿ. ಆದರೆ, ಚಿನ್ನಕ್ಕೆ ಏಕೆ ಅಷ್ಟು ಬೆಲೆ? ಯಾವುದೇ ಆರ್ಥಿಕ ಉಪಯುಕ್ತತೆ ಅಥವಾ ಯುಟಿಲಿಟಿ ಇಲ್ಲದ ಆ ಲೋಹದ ತುಂಡಿಗೆ ಯಾಕೆ ನಾವು ಇಷ್ಟು ಬೆಲೆ ಕಟ್ಟುತ್ತೇವೆ? ಇದು ಆರ್ಥಿಕ ತಜ್ಞರು ಕೇಳುವ ಮೂಲಭೂತ ಪ್ರಶ್ನೆ. ಹೌದು, ಚಿನ್ನವನ್ನು ತಿನ್ನಲಾಗುವುದಿಲ್ಲ. ಅದನ್ನು ಫಾಕ್ಟರಿಯಲ್ಲಿ ಸರಕು ತಯಾರಿಗಾಗಿ ಉಪಯೋಗಿಸ ಲಾಗುವುದಿಲ್ಲ. ಅದರ ಉಪಯುಕ್ತತೆ ಏನಿದ್ದರೂ ಭಾವನಾತ್ಮಕ ಮಾತ್ರ. ಅದಕ್ಕೇ ಹೇಳುವುದು, ‘Gold has value because people think it has value’ ಅಂತ. 

ಅದೇನೇ ಇರಲಿ, ರಾಜ ಮಹಾರಾಜರ ಕಾಲದಿಂದ ಹಿಡಿದು ವಲ್ಡ…ì ವಾರ್‌ನ ಬಳಿಕದ ಅಮೇರಿಕನ್‌ ಸರಕಾರದವರೆಗೆ ಎಲ್ಲರೂ ಚಿನ್ನವನ್ನೇ ಸಂಪತ್ತೆಂದು ಪರಿಗಣಿಸಿ ಸಂಗ್ರಹಿಸಿ ಕೂಡಿಟ್ಟದ್ದಂತೂ ನಿಜ. ಎರಡನೇ ಜಾಗತಿಕ ಯುದ್ಧದ ಮೊದಲಿನ “ಗೋಲ್ಡ… ಸ್ಟಾಂಡರ್ಡ್‌’ ವ್ಯವಸ್ಥೆ ಹಾಗೂ ಬಳಿಕ ಜಾರಿಗೊಂಡ “ಬ್ರೆಟ್ಟನ್‌-ವೂಡ್ಸ್‌’ ಸಿಸ್ಟಂ ಅಥವ “ಗೋಲ್ಡ…-ಡಾಲರ್‌ ಸ್ಟಾಂಡರ್ಡ್‌’ ವ್ಯವಸ್ಥೆಗಳೆಲ್ಲವೂ ಒಂದು ದೇಶದ ಹಣದ ಮೌಲ್ಯವನ್ನು ಆ ದೇಶದ ಖಜಾನೆಯಲ್ಲಿರುವ ಚಿನ್ನದ ಪ್ರಮಾಣಕ್ಕೆ ಗಂಟು ಹಾಕಿತು. ಈ ವ್ಯವಸ್ಥೆಯನ್ನು 1971ರ ಬಳಿಕ ರದ್ದು ಪಡಿಸಿದರೂ ಜಗತ್ತಿನ ಎÇÉಾ ಸರಕಾರಗಳೂ ಚಿನ್ನವನ್ನು ಆಪದ್ಧನ ಎಂಬ ನೆಲೆಯಲ್ಲಿ ಕೂಡಿಡುವುದನ್ನು ನಿಲ್ಲಿಸಲಿಲ್ಲ. 

ಏನಿದು ಆಪದ್ಧನ? 
ಅಂದರೆ, ಒಂದು ಮಹಾ ವಿಪತ್ತು ಸಂಭವಿಸಿದಾಗ, ಆರ್ಥಿಕ ತೆಯೇ ಕುಸಿದು ಬಿ¨ªಾಗ, ಬೇರೆಲ್ಲ ಹೂಡಿಕೆಗಳೂ ವಿಫ‌ಲವಾದಾಗ, ಬರೇ ನಮ್ಮ ಕೈ ಮುಷ್ಟಿಯಲ್ಲಿಯೇ ನಮ್ಮೆಲ್ಲ ಸಂಪತ್ತನ್ನು ಎತ್ತಿಕೊಂಡು ಸಿಕ್ಕಲ್ಲಿ ಓಡಿ ಹೋಗಿ, ಅಲ್ಲಿ ಜೀವನವನ್ನು ಪುನಃ ಕಟ್ಟುವ ಸೌಲಭ್ಯ ಚಿನ್ನದಲ್ಲಿ ಮಾತ್ರವೇ ಸಿಗುತ್ತದೆ. ಆ ನಿಟ್ಟಿನಲ್ಲಿ ಚಿನ್ನ ಒಂದು ಅತ್ಯುತ್ತಮ ಆಪದ್ಧನವಾಗಿ ಕೆಲಸ ಮಾಡುವುದು ನಿಜ. 

ಚಿನ್ನವು ಭಾರೀ ಹೈ ಪ್ರತಿಫ‌ಲ ನೀಡುತ್ತದೆ ಎಂಬ ಪ್ರಚಲಿತ ಭಾವನೆ ಬಹಳ ಇದೆ. ಆದರೆ, ವಾಸ್ತವದಲ್ಲಿ ಚಿನ್ನದ ಹೂಡಿಕೆಯಲ್ಲಿ ರಿಟರ್ನ್ ಅಥವ ಪ್ರತಿಫ‌ಲ ಕಡಿಮೆ ಎಂದರೆ ಯಾರಿಗೂ ಅಚ್ಚರಿಯಾದೀತು. ಕಳೆದ ಮೂವತ್ತು ವರ್ಷಗಳಲ್ಲಿ ಚಿನ್ನದ ರಿಟರ್ನ್ ಜಾಗತಿಕ ಮಟ್ಟದಲ್ಲಿ (ಡಾಲರ್‌ ಲೆಕ್ಕದಲ್ಲಿ) ಬರೇ ಶೇ. 4-5 ಹಾಗೂ ಭಾರತದಲ್ಲಿ (ರೂಪಾಯಿ ಲೆಕ್ಕದಲ್ಲಿ) ಸುಮಾರು ಶೇ. 7-8. ಅದೇ ಸಮಯದಲ್ಲಿ ಬಾಂಬೆ ಸೂಚ್ಯಂಕ ಶೇರುಗಳಲ್ಲಿ (ಬಿಎಸ್ಸಿ-30) ವಿನಿಯೋಗಿಸಿದ ಹಣ ಸರಾಸರಿ ಶೇ. 19-20 ರಿಟರ್ನ್ ಕೊಟ್ಟಿದೆ. ಏಕೆಂದರೆ ಶೇರು ಒಂದು “ಪ್ರೊಡಕ್ಟಿವ್‌ ಅಸೆಟ್‌’. ಸರಕುಗಳನ್ನು ಉತ್ಪಾದಿಸಿ ಮಾರಿ ಲಾಭಮಾಡಿಕೊಳ್ಳ ಬಲ್ಲುದು. ಚಿನ್ನವು ಹಾಗೆ ಮಾಡಲಾರದು. ಆದರೂ, ಶೇರುಗಳಲ್ಲಿ ಸಾವಿರಾರು ಶೇಕಡಾ ಪ್ರತಿಫ‌ಲ ಕೊಟ್ಟ ಶೇರುಗಳೂ ಇವೆ; ಭಾರೀ ನಷ್ಟ ಪಟ್ಟು ಇಡೀ ಇಡುಗಂಟನ್ನೇ ಕಳೆದುಕೊಂಡು ನಿರ್ನಾಮವಾದ ಶೇರುಗಳೂ ಇವೆ. ಹಾವು-ಏಣಿ ಆಟದಂತೆ ಶೇರುಗಳು ಯದ್ವಾ ತದ್ವಾ ಮೇಲಕ್ಕೂ ಕೆಳಕ್ಕೂ ಏರಿಳಿಯುತ್ತವೆ. ಚಿನ್ನದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಶೇರುಗಳು “ಹೈ ರಿಸ್ಕ್ ಹೈ ರಿಟರ್ನ್’ ಆದರೆ ಚಿನ್ನ “ಲೋ ರಿಸ್ಕ್ ಲೋ ರಿಟರ್ನ್’ ಎಂದು ಧಾರಾಳವಾಗಿ ಹೇಳಬಹುದು. 

“ಚಿನ್ನದ ಬೆಲೆ ಎಂದೆಂದಿಗೂ ಏರುತ್ತಲೇ ಹೋಗುತ್ತದೆ. ಇಳಿ ಯುವ ಪ್ರಶ್ನೆಯೇ ಇಲ್ಲ. ಹಾಗಾಗಿ ಆದಷ್ಟು ಬೇಗನೆ ಆದಷ್ಟು ಮಟ್ಟಿಗೆ ಚಿನ್ನದಲ್ಲಿ ದುಡ್ಡು ಹಾಕಬೇಕು’ ಎಂಬ ಇನ್ನೊಂದು ಪ್ರಚಲಿತ ಭಾವನೆ ಇದೆ. (ಬಹುತೇಕ ಮಹಿಳೆಯರೇ ಈ ಮಾತನ್ನು ಹೇಳುತ್ತಾರೆನ್ನುವುದು ಬೇರೆ ವಿಚಾರ). ಆದರೆ, ಇದು ಸತ್ಯಕ್ಕೆ ದೂರ. ಕೆಲವು ಬಾರಿ ಚಿನ್ನದ ಬೆಲೆ ಇಳಿದಿದೆ. ವರುಷ ಗಟ್ಟಲೆ ಸ್ಥಗಿತವಾಗಿ ತೆವಳುತ್ತಾ ಇದ್ದದ್ದೂ ಇದೆ. ಚಿನ್ನಕ್ಕೆ ಬೆಲೆ ಕುದುರಿದ್ದೇ 2000 ಇಸವಿಯ ಬಳಿಕ. (ಗ್ರಾಫ್ ನೋಡಿ) ಚಿನ್ನವು ಯಾವಾಗಲಾದರೂ ಒಮ್ಮೆ ಜಾಗತಿಕ ವಿಪತ್ತಿನ ಸಮಯಗಳಲ್ಲಿ ಮಾತ್ರ ಭಾರೀ ಬೆಲೆಯೇರಿಕೆ ಕಾಣುತ್ತದೆ. 2009ರ ಒಂದೇ ವರ್ಷದಲ್ಲಿ ರಿಸೆಶನ್‌ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಶೇ.25 ಏರಿದೆ. 2012ರ ನಂತರ ಬೆಲೆ ಕುಸಿದು ಈಗ ಪುನಃ ಏರಿದೆ. 

ಈ ರೀತಿಯ ಏರಿಕೆ, “ಚಿನ್ನ ಒಂದು ಆಪದ್ಧನ’ ಎಂಬ ಮಾತನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.
  50 ವರ್ಷಗಳ ಚಿನ್ನದ ಬೆಲೆ (ರೂ. ಪ್ರತಿ 10 ಗ್ರಾಮಿಗೆ) ಚಿನ್ನ ಒಂದು ಭದ್ರವಾದ, ಲೋ ರಿಸ್ಕ್, ಲೋ ರಿಟರ್ನ್ ಮತ್ತು ಆಪತ್ತಿನ ಸಮಯದಲ್ಲಿ ಕೈಹಿಡಿಯುವ ಅಸೆಟ್‌. ಒಂದು ನಿಜವಾದ ಆಪದ್ಧನ. ಹೋಲಿಕೆಯಲ್ಲಿ, ಶೇರು “ಹೈ ರಿಸ್ಕ್, ಹೈ ರಿಟರ್ನ್ ಮತ್ತು ಆಪತ್ತಿನ ಸಮಯದಲ್ಲಿ ಕೈಕೊಡುವ ಅಸೆಟ್‌. 2008ರ ರಿಸೆಶನ್‌ ಸಂದರ್ಭದಲ್ಲಿ ಶೇರು ಬೆಲೆ ಅರ್ಧಕ್ಕರ್ಧ ಇಳಿದಿತ್ತು.

ಚಿನ್ನಕ್ಕೆ ಅದರದ್ದೇ ಆದ ಮೆರಗು ಇದೆ ಹಾಗೂ ಶೇರಿಗೆ ಅದರದ್ದೇ ಆದ ಬೆರಗು ಇದೆ. ನಮಗೆ ಎರಡೂ ಬೇಕು. ಚಿನ್ನವೂ ಬೇಕು, ಶೇರೂ ಬೇಕು. ಭದ್ರತೆಯೂ ಬೇಕು, ಪ್ರಗತಿಯೂ ಬೇಕು, ಜಿಲೇಬಿಯೂ ಬೇಕು, ಬೈಟೂ ಕಾಫಿಯೂ ಬೇಕು. ಕಾಫಿಯಿಲ್ಲದೆ ಬರೇ ಜಿಲೇಬಿ ರುಚಿಸದು. ಹಾಗೆಯೇ ಚಿನ್ನವೂ, ಒಟ್ಟಿಗೆ ಒಂದಿಷ್ಟು ಎಚ್ಚರಿಕೆಯಿಂದ ಹದವರಿತು ಶೇರೂ ಖರೀದಿಸಿಟ್ಟರೆ ವಿತ್ತ ಸಾಮರಸ್ಯವೂ ಇರುತ್ತದೆ, ದಾಂಪತ್ಯ ಸಮರಸವೂ ಇರುತ್ತದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.