CONNECT WITH US  

ನಿಮ್ಮ ರಿಟರ್ನ್ಸ್ ಫೈಲಿಂಗ್‌ "ಫಾರ್ಮ್ 26ಎಎಸ್‌'ನೊಂದಿಗೆ ಶುಭಾರಂಭ 

ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ತೆರಿಗೆಯನ್ನು ಉಳಿಸುವ ಕೆಲವು ಕಾನೂನೀಯ ಹಾದಿಗಳನ್ನು ಕರ ಕಾನೂನು ಕೊಟ್ಟಿದೆ. ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ಕರ ತಪ್ಪಿಸುವುದು ತಪ್ಪು ಮತ್ತು ಅದು ಕರ ಕಳ್ಳತನ. ಕರ ಉಳಿಸುವುದು ಮತ್ತು ತಪ್ಪಿಸುವುದರ ನಡುವಿನ ವ್ಯತ್ಯಾಸವನ್ನು ಅರಿತಿರಬೇಕು.

ಜೂನ್‌-ಜುಲೈ ಬಂದಿತೆಂದರೆ ಆದಾಯ ಕರದ ಸೀಸನ್‌ ಶುರು. ಇನ್ನಿಲ್ಲದ ಗೊಂದಲಗಳು ಆರಂಭವಾಗುತ್ತವೆ. ಕೆಲವು ಹೊಸ ಗೊಂದಲಗಳಾದರೆ ಕೆಲವು ಮತ್ತದೇ ಹಳೆ ಗೊಂದಲಗಳು. ಕಳೆದ ಬಾರಿ ಅದೇ ಗೊಂದಲಗಳನ್ನು ತಲೆಯಲ್ಲಿ ತುಂಬಿಕೊಂಡು ಬಿಪಿ ರೈಸ್‌ ಮಾಡಿಕೊಂಡು ಮನೆಯಲ್ಲಿ ಹಾರಾಡಿ ಪತ್ನಿ ಬೈಗುಳದೊಂದಿಗೆ ಒಂದು ಹಂತಕ್ಕೆ ಶಮನವಾಗಿದ್ದರೂ ಇದೀಗ ಮತ್ತದೇ ಹಳೆ ಗೊಂದಲಗಳು ಹೆಡೆಯೆತ್ತುತ್ತವೆ. ಜುಲೈ ಮಾಸಾಂತ್ಯದಲ್ಲಿ ರಿಟರ್ನ್ ಸಲ್ಲಿಕೆ ಮಾಡಿ ಎÇÉಾ ಲೆಕ್ಕ ಚುಕ್ತಾ ಮಾಡಿಬಿಡಬೇಕು ಎನ್ನುವ ಆತುರ ಎಲ್ಲರಿಗೂ ಇರುತ್ತದೆ. ಆದರೆ ಗೊಂದಲಗಳು ಮುಗಿಯುವುದೇ ಇಲ್ಲ. ರಿಟರ್ನ್ ಫೈಲಿಂಗ್‌ ಮಾಡುವುದು ಹೇಗೆ? ಪೆನಾಲ್ಟಿ ತಪ್ಪಿಸುವುದು ಹೇಗೆ? ಅಲ್ಲದೆ, ಯಾವುದೇ ತೊಂದರೆಗೆ ಸಿಲುಕಿಹಾಕಿಕೊಳ್ಳದೆ ಸಲೀಸಾಗಿ ಕರ ಸಲ್ಲಿಕೆ ಮಾಡುವುದು ಹೇಗೆ? - ಇವೆÇÉಾ ಮಂಡೆಬಿಸಿಗಳು ಒಂದೊಂದಾಗಿ ಆರಂಭವಾಗುತ್ತವೆ. 

ಹೌದು, ಕರ ಹೇಳಿಕೆಯ ಗಡು ಸನ್ನಿಹಿತವಾಗುತ್ತಿದೆ. ನಿಧಾನವಾಗಿ ಕೆಲಸ ಆರಂಭಿಸುವುದು ಒಳ್ಳೆಯದು. ವಿತ್ತ ವರ್ಷ 2017-18, ಮಾರ್ಚ್‌ 31, 2018ರಂದು ಕೊನೆಗೊಂಡಿದ್ದು, ಆ ವರ್ಷದ ಆದಾಯ ಮತ್ತು ಕರದ ಬಗ್ಗೆ ಕರ ಹೇಳಿಕೆ ಅಥವಾ ರಿಟರ್ನ್ಸ್ ಫೈಲಿಂಗ್‌ ಜುಲೈ 31, 2018ರ ಒಳಗಾಗಿ ಮಾಡಬೇಕಾಗಿದೆ. ಮೊತ್ತ ಮೊದಲನೆಯದಾಗಿ ಸರ್ವರೂ ಈ ಒಂದು ಅಂಶವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು. ಮೊನ್ನೆ ಫೆಬ್ರವರಿಯಲ್ಲಿ ಘೋಷಣೆಯಾದ ಬಜೆಟ್ಟಿನ ಅಂಶಗಳು ಸದ್ರಿ ಕರ ಸಲ್ಲಿಕೆಗೆ ಅನ್ವಯವಾಗುವುದಿಲ್ಲ. (ಫೆಬ್ರವರಿ 2018ರಲ್ಲಿ ಘೋಷಣೆಯಾದ ಬಜೆಟ್‌ ವಿತ್ತೀಯ ವರ್ಷ 2018-19 ಅಂದರೆ ಅಸೆಸೆ¾ಂಟ್‌ ವರ್ಷ 2019-20ಕ್ಕೆ ಅನ್ವಯವಾಗುತ್ತದೆ.) ಸದ್ರಿ ರಿಟರ್ನ್ ಫೈಲಿಂಗ್‌ ವಿತ್ತೀಯ ವರ್ಷ 2017-18 ಅಂದರೆ ಅಸೆಸೆ¾ಂಟ್‌ ವರ್ಷ 2018-19ಕ್ಕೆ ಸಂಬಂಧ ಪಟ್ಟ¨ªಾಗಿದೆ. ಇದಕ್ಕೆ ಅನ್ವಯವಾಗುವ ಬಜೆಟ್‌ 2017ರಲ್ಲಿ ಘೋಷಿತವಾದದ್ದು. ಈ ಸರಳ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಸಾವಿರಾರು ಜನ ಗೊಂದಲಕ್ಕೆ ಒಳಗಾಗುತ್ತಾರೆ. ಹೊಸ ಬಜೆಟ್ಟಿನ ಅವಕಾಶಗಳನ್ನು ಹಳೆ ವರ್ಷಕ್ಕೆ ಅನ್ವಯಿಸಿ ಎÇÉಾ "ಸಜ್ಜಿಗೆ ಬಜಿಲ್‌' ಮಾಡಿಕೊಂಡು ನನ್ನೊಡನೆ ಜಗಳಾಡಿದವರೂ ಇ¨ªಾರೆ. 

ಆದಾಯದ ಮಾಹಿತಿ
ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಆ ಬಳಿಕ ಆದರೆ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ಕರ ಕಾನೂನು ತೆರಿಗೆಯನ್ನು ಉಳಿಸುವ ಕೆಲವು ಕಾನೂನೀಯ ಹಾದಿಗಳನ್ನು ಕೊಟ್ಟಿದೆ. ಆದರೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ತಪ್ಪಿಸಲು ಹವಣಿಸುವುದು ಶುದ್ಧ ತಪ್ಪು ಮತ್ತು ಅದು ಕರ ಕಳ್ಳತನ. ಕರ ಉಳಿಸುವುದು ಮತ್ತು ತಪ್ಪಿಸುವುದರ ನಡುವಿನ ವ್ಯತ್ಯಾಸವನ್ನು ಎಲ್ಲರೂ ಅರಿತಿರಬೇಕು. 
ನಮ್ಮಲ್ಲಿ ಬಹುತೇಕ ಜನರು ತಪ್ಪುದಾರಿಯಲ್ಲಿ ಹೋಗಿ ಕರ ಕಳ್ಳತನ ಮಾಡುವುದು ವ್ಯಾಪಕವಾಗಿ ನಡೆಯುತ್ತಿದೆ.

ಅದರಲ್ಲಿ ಅತ್ಯಂತ ಮೂಲಭೂತವಾದ ಪ್ರಕಾರವೆಂದರೆ ಆದಾಯದ ಬಗ್ಗೆ ಚಕಾರ ಸುದ್ದಿಯೆತ್ತದೆ ಹಾಗೆಯೇ ಸುಮ್ಮನೆ ಇದ್ದುಬಿಡುವುದು, ಸಂಬಳದ ಆದಾಯ ಮತ್ತಿತರ ಸಾಂಸ್ಥಿಕ ಆದಾಯಗಳನ್ನು ಹೊರತುಪಡಿಸಿ ಉಳಿದವರು ಈ ರೀತಿಯಲ್ಲಿ ಆದಾಯವನ್ನು ತೋರಿಸದೆ ಸುಮ್ಮನಿದ್ದು ಕರ ಕಳ್ಳತನ ಮಾಡುವುದೇ ಜಾಸ್ತಿ. ಕೇಳಿದರೆ "ಯಾವನಿಗೆ ಗೊತ್ತಾಗುತ್ತದೆ?' ಎನ್ನುವ ಉಡಾಫೆ, "ಸಿಕ್ಕಿ ಬಿದ್ರೆ ಅಲ್ವಾ? ಆಮೇಲೆ ನೋಡೋಣ' ಎನ್ನುವ ಹಾರಿಕೆಯ ಉತ್ತರ. ಇದು ಶುದ್ಧ ಅಪರಾಧ ಹಾಗೂ ಭ್ರಷ್ಟಾಚಾರದ ಮೇಲೆ ನಾವು ಇಟ್ಟಿರುವ ನಂಬಿಕೆಗೆ ಸಾಕ್ಷಿ. ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿದ್ದು ಮಾತ್ರ ಕಾನೂನುಬಾಹಿರ ಕಪ್ಪು ಹಣ. ನಾವು ಕರ ತಪ್ಪಿಸಿ ಮನೆಯೊಳಗೆ ಇಟ್ಟಿದ್ದು ಜಾಣ್ಮೆಯ ಉಳಿತಾಯ ಎನ್ನುವ ಭೂಪರು ನಮ್ಮಲ್ಲಿ ಹಲವರಿ¨ªಾರೆ. 

ಅದೇನೇ ಇರಲಿ; ಲಾಗಾಯ್ತಿನಿಂದ ಕರ ಚೋರರನ್ನು ಹಿಡಿಯಲು ಕರ ಇಲಾಖೆ ಬಹುಕೃತ ವೇಷವನ್ನು ಹಾಕುತ್ತಲೇ ಇದೆ. ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಈ ಕೆಲಸ ತುಂಬಾ ಸುಲಭವಾಗಿಯೂ ನಡೆಯುತ್ತದೆ. ಇಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪ್ಯಾನ್‌ ಇನ್ನಿತರ ದಾಖಲೆಗಳನ್ನು ಆಧರಿಸಿ ಅದೆಷ್ಟೋ ವಿವರಗಳನ್ನು ಕಲೆಹಾಕಿ ಆ ಮೂಲಕ ಆದಾಯ ತೆರಿಗೆಯನ್ನು ಸಮರ್ಪಕವಾಗಿ ಸಲ್ಲಿಕೆಯಾಗುವಂತೆ ನೋಡಿಕೊಳ್ಳುವುದು ಇಲಾಖೆಯ ಕರ್ತವ್ಯ ಮತ್ತು ಅದು ಅದನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದೆ. 

ಫಾರ್ಮ್ 26ಎಎಸ್‌
ಏನಿದು ಫಾರ್ಮ್ 26ಎಎಸ್‌? ಕರ ಕಟ್ಟುವವರೂ ಹಾಗೂ ಕರ ಕಳ್ಳತನ ಮಾಡುವವರೂ ಅತ್ಯಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರ ಇದು. ಆದಾಯ ತೆರಿಗೆ ಇಲಾಖೆ ಪ್ಯಾನ್‌ ಕಾರ್ಡ್‌ ಮುಖಾಂತರ ಎÇÉಾ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ಯಾನ್‌ ಕಾರ್ಡ್‌ ಮುಖಾಂತರ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಪ್ರತಿಯೊಬ್ಬರೂ ಕಟ್ಟಿದ ಆದಾಯ ಕರದ ಪಟ್ಟಿಯನ್ನು ಫಾರ್ಮ್ 26 ಎಎಸ್‌ ಎಂಬ ವೈಯಕ್ತಿಕ ಪಟ್ಟಿಯಲ್ಲಿ ನೋಂದಾಯಿಸುತ್ತಾ ಹೋಗುತ್ತದೆ. ನಿಮ್ಮ ಸಂಬಳದಿಂದ, ಬ್ಯಾಂಕ್‌ ಬಡ್ಡಿಯಿಂದ, ಕಮಿಷನ್‌ ಪಾವತಿಯಿಂದ ಕಡಿತವಾದ ಟಿಡಿಎಸ್‌ (ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌) ಅಲ್ಲದೆ ನೀವು ಸ್ವತಃ ಕಟ್ಟಿದ ಅಡ್ವಾನ್ಸ್‌ ಟ್ಯಾಕ್ಸ್‌ ಮತ್ತು ಸೆಲ#… ಅಸೆಸೆ¾ಂಟ್‌ ಟ್ಯಾಕ್ಸ್‌ ವಿವರಗಳು ಈ ಫಾರ್ಮ್ 26 ಎಎಸ್‌ನಲ್ಲಿ ದಾಖಲಾಗುತ್ತಾ ಹೋಗುತ್ತವೆ. 

ಕರ ಇಲಾಖೆ ಈ ಪಟ್ಟಿಯನ್ನು ಹಿಡಿದುಕೊಂಡು ನೀವು ತುಂಬುವ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಫಾರ್ಮ್ 26 ಎಎಸ್‌ ಪ್ರಕಾರ ಟಿಡಿಎಸ್‌ ಮೂಲಕ ದಾಖಲಾದ ಎÇÉಾ ಆದಾಯಗಳೂ ನಿಮ್ಮ ಟ್ಯಾಕ್ಸ್‌ ರಿಟರ್ನ್ ಫೈಲಿಂಗ್‌ನಲ್ಲಿ ಬಂದಿರಬೇಕು ಹಾಗೂ ಟಿಡಿಎಸ್‌ ಅಲ್ಲದೆ ಬಾಕಿ ಉಳಿದ ತೆರಿಗೆಯನ್ನು ನಿಮ್ಮ ಸ್ಲಾಬ್‌ಗ ಅನ್ವಯವಾಗುವಂತೆ ಕಟ್ಟಿರಬೇಕು. ಈ ರೀತಿ ತಾಳೆಯಾಗದ ಎÇÉಾ ವ್ಯವಹಾರಗಳನ್ನೂ ಆದಾಯ ತೆರಿಗೆ ಇಲಾಖೆ ತನ್ನ ಬೃಹತ್‌ ಕಂಪ್ಯೂಟರಿನ ಸಹಾಯದಿಂದ ಪತ್ತೆ ಹಚ್ಚಿ ವೈಯಕ್ತಿಕ ನೋಟೀಸುಗಳನ್ನು ಕಳೆದ ಕೆಲ ವರ್ಷಗಳಿಂದ ಜಾರಿ ಮಾಡುತ್ತಿದೆ. ಈ ಬಗ್ಗೆ ಕೆಲವು ಬಾರಿ ಚರ್ಚೆ ಮಾಡಿದ್ದರೂ ಎಂತದೂ ಆಗುದಿಲ್ಲ ಮಾರಾಯೆÅ ಎಂದು ಸಮಾಧಾನ ಪಟ್ಟುಕೊಳ್ಳುವವರು ಈಗ ನಿಧಾನವಾಗಿ ಎಚ್ಚೆತ್ತುಕೊಂಡಿ¨ªಾರೆ. ಲೆಫ್ಟ್ ರೈಟ್‌ ಆ್ಯಂಡ್‌ ಸೆಂಟರ್‌ ಎನ್ನುವಂತೆ 26 ಎಎಸ್‌ನಲ್ಲಿ ಸಮಸ್ಯೆ ಇರುವವರೆÇÉಾ ಈಗ ನೋಟೀಸು ಪಡೆದುಕೊಂಡು ಉತ್ತರಿಸಲು ಪರದಾಡುತ್ತಾ ಕಂಗಲಾಗಿ¨ªಾರೆ.

15ಜಿ/15ಎಚ್‌
26 ಎಎಸ್‌ ಫಾರ್ಮು ಟಿಡಿಎಸ್‌ ಕಡಿತವಾದಾಗ ಮಾತ್ರವೇ ಆದಾಯವನ್ನು ದಾಖಲಿಸಿ ಪಟ್ಟಿಮಾಡುತ್ತದೆ ಎನ್ನುವ ಮೂಲಭೂತ ತತ್ವ ಹಲವು ಬುದ್ಧಿವಂತರು ಮನನ ಮಾಡಿಕೊಂಡಿ¨ªಾರೆ. ಹಾಗಾದರೆ ಟಿಡಿಎಸ್‌ ಕಡಿತವಾಗದಂತೆ ನೋಡಿಕೊಂಡರೆ ಸಾಕು, ಕರ ಇಲಾಖೆಯ ದೃಷ್ಟಿಯಿಂದ ತಪ್ಪಿಸಿಕೊಂಡಂತೆಯೇ ಸರಿ ಎನ್ನುವ ಮಹಾ ಸಂಶೋಧನೆಯನ್ನು ಹಲವರು ಮಾಡಿಕೊಂಡರು. ಆ ಪ್ರಕಾರ ಬ್ಯಾಂಕುಗಳಲ್ಲಿ ಇಟ್ಟ ಡೆಪಾಸಿಟ್ಟುಗಳಿಗೆ ಟಿಡಿಎಸ್‌ ಕಡಿತವಾಗದಂತೆ ಫಾರ್ಮ್ 15ಜಿ ಅಥವಾ 15ಎಚ್‌ ತುಂಬಿ ಕೊಡಲು ಆರಂಭಿಸಿದರು. ಈ ಫಾರ್ಮು ತುಂಬಿ ಕೊಟ್ಟರೆ ಟಿಡಿಎಸ್‌ ಕಡಿತ ಆಗುವುದಿಲ್ಲ ಎನ್ನುವುದೇನೋ ಸರಿ ಆದರೆ ಮೂಲಭೂತವಾಗಿ ಕರಾರ್ಹರು ಈ ಫಾರ್ಮನ್ನು ತಮ್ಮ ಕೈಯಿಂದ ಮುಟ್ಟುವಂತೆಯೇ ಇಲ್ಲ. ಈ ಫಾರ್ಮಿನಲ್ಲಿ ನಾನು ಕರಾರ್ಹನಲ್ಲ, ಆದಕಾರಣ ನನ್ನ ಬಡ್ಡಿಯ ಮೇಲೆ ಟಿಡಿಎಸ್‌ ಕಡಿತ ಮಾಡಬೇಡಿ ಎಂದು ಬರೆದಿರುತ್ತದೆ. ಅದನ್ನು ಗಾಳಿಗೆ ತೂರಿ ಲಕ್ಷಂತರ ಜನರು ಬೇಕಾಬಿಟ್ಟಿ ಈ ಫಾರ್ಮುಗಳನ್ನು ತುಂಬಿ ಬ್ಯಾಂಕುಗಳಲ್ಲಿ ನೀಡಿ¨ªಾರೆ. ಕೆಲವೆಡೆ ಬ್ಯಾಂಕು ಸಿಬ್ಬಂದಿಗಳೇ ಅರಿತೋ ಅರಿಯದೆಯೋ ಈ ರೀತಿ ಮಾಡಲು ಠೇವಣಿದಾರರನ್ನು ಪ್ರೇರೇಪಿಸಿ¨ªಾರೆ. ಯಾರು ಏನೇ ಹೇಳಿದರೂ ಸಹಿ ಹಾಕಿದವನೇ ಅಂತಿಮ ಹೊಣೆಗಾರನಾಗುತ್ತಾನೆ ಎನ್ನುವುದನ್ನು ಜನರು ಮರೆಯಬಾರದು. ಈ ರೀತಿ ಟಿಡಿಎಸ್‌ ತಪ್ಪಿಸಿ ಫಾರ್ಮ್ 26 ಎಎಸ್‌ನ ಜಾಲದಿಂದ ತಪ್ಪಿಸಿಕೊಂಡೆ ಎಂದು ಬೀಗುತ್ತಿದ ಲಕ್ಷಾಂತರ ಜನರಿಗೆ ಕೂಡಾ ಒಂದು ಸಣ್ಣ ಆಘಾತ ಕಾದಿದೆ. 

26 ಎಎಸ್‌ ನ ಹೊಸ ಅವತಾರ 
ಯಾವುದೇ ಸದ್ದು ಗದ್ದಲವಿಲ್ಲದೆ ಈ ಫಾರ್ಮ್ 26 ಎಎಸ್‌ ಎನ್ನುವುದು ಇಂತಹ ಅತಿಜಾಣ್ಮೆಯನ್ನು ಹಿಡಿದು ಹಾಕಲು ಕಳೆದ ವರ್ಷದಿಂದ ಹೊಸ ಅವತಾರ ಪಡೆದುಕೊಂಡಿದೆ. ಕಳ್ಳ ಚಾಪೆಯ ಕೆಳಗೆ ನುಸುಳಿಕೊಂಡರೆ ಪೋಲೀಸು ರಂಗೋಲಿಯ ಕೆಳಗೆ ನುಸುಳಿಕೊಂಡಿ¨ªಾನೆ. ಆ ಪ್ರಯುಕ್ತ ಈ ವರ್ಷ 26 ಎಎಸ್‌ ಫಾರ್ಮಿನಲ್ಲಿ ಅದುವರೆಗೆ ಅಷ್ಟೊಂದು ಗಂಭೀರವಾಗಿ ಮಾಡಿರದ ಹೊಸತೊಂದು ಮಾಹಿತಿ ನಿಖರಾಗಿ ದಾಖಲಾಗುತ್ತಿದೆ. ಯಾರೆÇÉಾ ಎಲ್ಲೆÇÉಾ 15ಜಿ ಅಥವಾ 15ಎಚ್‌ ಫಾರ್ಮ್ ನೀಡಿ ಟಿಡಿಎಸ್‌ ತಪ್ಪಿಸಿಕೊಂಡಿ¨ªಾರೋ ಆ ಎÇÉಾ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಫಾರ್ಮ್ 26 ಎಎಸ್‌ ಈ ವರ್ಷ ಕಟ್ಟುನಿಟ್ಟಾಗಿ ಹಿಡಿದಿಟ್ಟಿದೆ. ಈ ಮೊದಲು ಅದರಲ್ಲಿ ಆ ಕಾಲಂ ಇದ್ದರೂ ಸಹ ಅದು ಅಷ್ಟೊಂದು ಸರಿಯಾಗಿ ಭರ್ತಿಯಾಗಿದ್ದಿಲ್ಲ. ಅಂದರೆ ಟಿಡಿಎಸ್‌ ಕಡಿತವಾಗದಿದ್ದರೂ ನಿಮ್ಮ ಎÇÉಾ ಎಫಿx ಹಾಗೂ ಅವುಗಳ ಬಡ್ಡಿಗಳ ವಿವರ ಈಗ ಕರ ಇಲಾಖೆಯ ಕಂಪ್ಯೂಟರಿನಲ್ಲಿ ಶೇಖರವಾಗಿದೆ. ಅಷ್ಟೇ ಅಲ್ಲದೆ ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳು, ಕರ ಇಲಾಖೆಯಿಂದ ಹಿಂಪೆಡದ ಬಡ್ಡಿ ಇತ್ಯಾದಿಗಳೂ ಸಹ ಸ್ಪಷ್ಟವಾಗಿ ದಾಖಲಾಗುತ್ತಿದೆ. ನೀವು ರಿಟರ್ನ್ ಫೈಲ್‌ ಮಾಡುವ ಹೊತ್ತಿಗೆ ಅದನ್ನು ತಾಳೆಹಾಕಿ ನೀವು ಕಟ್ಟಬೇಕಾದ ತೆರಿಗೆಯ ಸರಿಯಾದ ಲೆಕ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಅದರ ಮೇಲೆ ಪೆನಾಲ್ಟಿ, ಬಡ್ಡಿ ಹಾಗೂ ಕರಾರ್ಹನಲ್ಲವೆಂದು ಸುಳ್ಳು ಡಿಕ್ಲರೇಶನ್‌ ಕೊಟ್ಟ ಕಾರಣಕ್ಕೆ ಒಂದು ನೋಟೀಸ್‌ ಬರಲಿದೆ. 

ಕರ ಪಾವತಿ ಯಾವಾಗ?
ಈ ವರ್ಷಕ್ಕೆ ಸಂಬಂಧಪಟ್ಟಂತೆ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31. ಹಲವಾರು ಜನರು ಕರ ಕಟ್ಟಲೂ ಹೂಡಿಕೆ ಮಾಡಲೂ ರಿಟರ್ನ್ ಫೈಲಿಂಗ್‌ ಮಾಡಲೂ - ಸಕಲ ಕರ ಸಂಬಂಧಿ ಕೆಲಸಗಳಿಗೆ ಜುಲೈ 31 ಕೊನೆಯ ದಿನಾಂಕವೆಂಬ ಭ್ರಮೆಯಲ್ಲಿ ಇರುತ್ತಾರೆ. ವಾಸ್ತವ ಹಾಗಿಲ್ಲ. ಈ ವಿತ್ತೀಯ ವರ್ಷ ಮಾರ್ಚ್‌ 31ಕ್ಕೆ ಕೊನೆಗೊಳ್ಳುತ್ತದೆ. ಅದರೊಳಗೆ ಈ ವರ್ಷಕ್ಕೆ ಸಂಬಂಧಪಟ್ಟ ಕರ ಸಂಬಂದಿ ಹೂಡಿಕೆ ಹಾಗೂ ಅಂತಿಮ ಆದಾಯ ಕರವನ್ನು ಕಟ್ಟಿ ಲೆಕ್ಕ ಮುಗಿಸಿಬಿಡುವುದೊಳಿತು. ಮಾರ್ಚ್‌ 31 ದಾಟಿದರೆ ಈ ವರ್ಷಕ್ಕೆ ಸಂಬಂದಪಟ್ಟಂತೆ ಕರ ಉಳಿತಾಯದ ಹೂಡಿಕೆ ಮಾಡಲು ಬರುವುದಿಲ್ಲ. ಬಾಕಿ ಕರ ಆಮೇಲೆ ಕಟ್ಟಬಹುದಾದರೂ ಅದರ ಮೇಲೆ ಬಡ್ಡಿ ಬೀಳುತ್ತದೆ. ಹೂಡಿಕೆಯಂತೂ ಆಮೇಲೆ ಮಾಡಲೂ ಬರುವುದೇ ಇಲ್ಲ!

- ಜಯದೇವ ಪ್ರಸಾದ ಮೊಳೆಯಾರ


Trending videos

Back to Top