ಸೊತ್ತುಗಳ ಮಾರಾಟ ಮತ್ತು ಆದಾಯ ಕರ 


Team Udayavani, Jul 23, 2018, 9:28 AM IST

sottugala-marata.png

ತೆರಿಗೆ ಕಾನೂನಿನ ಪ್ರಕಾರ ಭೂಮಿ ಅಥವಾ ಕಟ್ಟಡದಂತಹ ಭೌತಿಕ ಆಸ್ತಿಯನ್ನು ಕ್ಯಾಪಿಟಲ್‌ ಎಂದು ಪರಿಗಣಿಸಲಾಗುತ್ತದೆ ಹಾಗೂ ಅದರ ಮೇಲೆ ಬರುವಂತಹ ಲಾಭಾಂಶವನ್ನು ಕ್ಯಾಪಿಟಲ್‌ ಗೈನ್ಸ್‌ ಎಂದು ಕರೆಯಲಾಗುತ್ತದೆ. ಅಂತೆಯೇ ಆ ಗೈನ್ಸ್‌ ಮೇಲೆ ಲಾಗೂ ಆಗುವ ತೆರಿಗೆ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಅಡಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಇದು ಸಂಬಳ, ಪೆನÒನ್‌, ಬಡ್ಡಿ, ಡಿವಿಡೆಂಡ್‌ ಇತ್ಯಾದಿ ಸಾಮಾನ್ಯ ಆದಾಯಗಳಿಗಿಂತ ಭಿನ್ನವಾಗಿದೆ. 

ಭೂಮಿ/ಕಟ್ಟಡಗಳ ಮೇಲಿನ ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ:

ಕೃಷಿ ಭೂಮಿ 
ಮೊತ್ತ ಮೊದಲನೆಯದಾಗಿ ಕೃಷಿ ಭೂಮಿಯ ಮಾರಾಟದ ಮೇಲೆ ಯಾವುದೇ ರೀತಿಯ ಆದಾಯ ತೆರಿಗೆ ಇರುವುದಿಲ್ಲ. ಆದರೆ ಇದು ಎಲ್ಲ ರೀತಿಯ ಕೃಷಿ ಭೂಮಿಯ ಮೇಲೆ ಅನ್ವಯವಾಗು ವುದಿಲ್ಲ ಎನ್ನುವುದು ಬಹಳಷ್ಟು ಜನರಿಗೆ ಅರಿವಿಲ್ಲ. ಕೇವಲ ಗ್ರಾಮೀಣ ಪ್ರದೇಶದ ಕೃಷಿ ಭೂಮಿಯ ಮೇಲೆ ಮಾತ್ರ ಈ ಶೂನ್ಯ ಕರದ ಸವಲತ್ತನ್ನು ನೀಡಲಾಗಿದೆ. ಯಾವುದು ಗ್ರಾಮೀಣ ಯಾವುದು ಟೌನ್‌ ಎನ್ನುವುದಕ್ಕೂ ಕಾನೂನಿನಲ್ಲಿ ಸ್ಪಷ್ಟವಾದ ಉÇÉೇಖ ಇದೆ. ಈ ಕೆಳಗೆ ಕಾಣಿಸಿದ ಪ್ರದೇಶಗಳನ್ನು ಮಾತ್ರವೇ ಗ್ರಾಮೀಣ ಪ್ರದೇಶವೆಂದ ಪರಿಗಣಿಸಲಾಗುತ್ತದೆ. 

1    ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿನ ಒಳಗಿನ ಪ್ರದೇಶ. 

2    ಹತ್ತು ಸಾವಿರಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಲಿಮಿಟಿಗಿಂತ 2 ಕಿ.ಮೀ. ವರೆಗಿನ ಪ್ರದೇಶ

3    ಒಂದು ಲಕ್ಷಕ್ಕಿಂತ ಜಾಸ್ತಿ ಜನ ಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಸಭೆ ಲಿಮಿಟಿಗಿಂತ 6 ಕಿ.ಮೀ ವರೆಗಿನ ಪ್ರದೇಶ ಅಥವಾ

4    ಹತ್ತು ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿಗಿಂತ 8 ಕಿ.ಮೀ ವರೆಗಿನ ಪ್ರದೇಶ. 
(ಇಲ್ಲಿ ಜನಸಂಖ್ಯೆಯನ್ನು ಹಿಂದಿನ ಅಧಿಕೃತ ಸೆನ್ಸಸ್‌ ಪ್ರಕಾರ ಹಾಗೂ ದೂರವನ್ನು “ಕಾಗೆ ಹಾರುವ’ ಪ್ರಕಾರ ನೇರವಾಗಿ ತೆಗೆದುಕೊಳ್ಳಬೇಕು) 

ಈ ಷರತ್ತಿನ ಪ್ರಕಾರ ಬರುವ ಗ್ರಾಮೀಣ ಪ್ರದೇಶಗಳಲ್ಲಿರುವ ಕೃಷಿ ಭೂಮಿಯನ್ನು ಕರ ಕಾನೂನು ಕ್ಯಾಪಿಟಲ್‌ ಎಂದು ಪರಿಗಣಿಸುವುದಿಲ್ಲ ಮತ್ತು ಹಾಗಾಗಿ ಶೂನ್ಯ ಕ್ಯಾಪಿಟಲ್‌ ಗೈನ್ಸ್‌ ತೆರಿಗೆಗೆ ಅರ್ಹ. ಅಂದರೆ ಮೇಲ್ಕಾಣಿಸಿದ ಕಿ.ಮೀ. ಪರಿಧಿಯ ಒಳಗೆ ಬರುವ ಕೃಷಿ ಭೂಮಿ ಕೂಡಾ ಕೃಷಿಯೇತರ ಭೂಮಿಯಂತೆಯೇ ಕ್ಯಾಪಿಟಲ್‌ ಗೈನ್ಸ್‌ ತೆರಿಗೆಯ ಬಲೆಗೆ ಸಿಲುಕುತ್ತದೆ. ಯಾವುದೇ ಪ್ರದೇಶದಲ್ಲಿರುವ ಎÇÉಾ ಕೃಷಿಯೇತರ ಭೂಮಿಗಳು ಕ್ಯಾಪಿಟಲ್‌ ಗೈನ್ಸ್‌ ತೆರಿಗೆಯಡಿಯಲ್ಲಿ ಹೇಗೂ ಬರುತ್ತದೆ. 

ಆದ್ದರಿಂದ ಪ್ರತಿಯೊಬ್ಬ ಕೃಷಿಕನೂ ತನ್ನ ಕೃಷಿ ಭೂಮಿಯನ್ನು ಆದಾಯ ತೆರಿಗೆಯ ಕಾನೂನಿನಡಿಯಲ್ಲಿ ಯಾವ ರೀತಿಯಲ್ಲಿ ನೋಡಲಾಗುತ್ತದೆ ಎನ್ನುವುದನ್ನು ಮೊತ್ತ ಮೊದಲು ಅರಿತಿರಬೇಕು. ಕೃಷಿ ಎಂದಾಕ್ಷಣ ಎಲ್ಲವೂ ಮುಕ್ತ ಎನ್ನುವ ಭಾವನೆ ಹಲವು ಕೃಷಿಕರಲ್ಲಿದೆ. ನನಗೆ ತಿಳಿದಿರುವ ಹಲವಾರು ಕೃಷಿಕರು ತಾವು ಕೃಷಿ ಆದಾಯದಿಂದ ಇಟ್ಟಿರುವ ಎಫ್ಡಿಯ ಮೇಲಿನ ಬಡ್ಡಿ ಕೂಡಾ ಕರಮುಕ್ತ ಎನ್ನುವ ತಪ್ಪು ಕಲ್ಪನೆಯಲ್ಲಿ ಇ¨ªಾರೆ. ಅಂತಹ ಹಲವಾರು ಜನರಿಗೆ ಈಗಾಗಲೇ ಇಲಾಖೆಯಿಂದ ನೋಟೀಸು ಬರಲು ಆರಂಭವಾಗಿದೆ. ಮುಂದಕ್ಕೆ ಗ್ರಾಮೀಣವಲ್ಲದ ಕೃಷಿ ಭೂಮಿ ಮಾರಾಟ ಮಾಡಿದವರಿಗೂ ಇಲಾಖೆಯಿಂದ ಲವ್‌ ಲೆಟರ್‌ ಬರುವ ದಿನ ದೂರವಿಲ್ಲ. 

ಟೌನ್‌ ಕೃಷಿ ಭೂಮಿ-ಕೃಷಿಯೇತರ ಭೂಮಿ-ಕಟ್ಟಡ 
ಮೇಲೆ ಹೇಳಿದ ಕೃಷಿ ಭೂಮಿಯ ಹೊರತಾಗಿ ಈಗ ಉಳಿದದ್ದು ಟೌನ್‌ ಪ್ರದೇಶವೆಂದು ಗಣನೆಯಾಗುವ ಗ್ರಾಮೀಣ
ವಲ್ಲದ ಕೃಷಿ ಭೂಮಿ, ಯಾವುದೇ ಪ್ರದೇಶದ ಕೃಷಿಯೇತರ ಭೂಮಿ ಮತ್ತು ಕಟ್ಟಡ. ಇವೆÇÉಾ ಸ್ಥಿರಾಸ್ತಿಗಳ ಮೇಲೆ ಕ್ಯಾಪಿಟಲ್‌ ಗೈನ್ಸ್‌ ತೆರಿಗೆ ಲಾಗೂ ಆಗುತ್ತದೆ ಮತ್ತು ಆ ಲೆಕ್ಕಾಚಾರ ಈ ಕೆಳಗಿನ ಎರಡು ರೀತಿಯಲ್ಲಿ ನಡೆಯುತ್ತದೆ. 
ಕ್ಯಾಪಿಟಲ್‌ ಗೈನ್ಸ್‌ ಅನ್ನು ಅಲ್ಪಕಾಲಿಕ ಮತ್ತು ದೀರ್ಘ‌ಕಾಲಿಕ ಎಂಬ ಎರಡು ರೀತಿಯಲ್ಲಿ ನೋಡಲಾಗುತ್ತದೆ. ಇದು ಭೂಮಿ/ಕಟ್ಟಡ ಮಾರಾಟವಾಗುವ ಹೊತ್ತಿನಲ್ಲಿ ನಿಮ್ಮ ಕೈಯಲ್ಲಿ ಎಷ್ಟು ಸಮಯ ಇತ್ತು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಈ ಹೋಲ್ಡಿಂಗ್‌ ಪೀರಿಯಡ್‌ 2 ವರ್ಷಕ್ಕಿಂತ ಕಮ್ಮಿ ಇದ್ದರೆ ಅದು ಅಲ್ಪಕಾಲಿಕ ಹಾಗೂ 2 ವರ್ಷಕ್ಕಿಂತ ಜಾಸ್ತಿ ಇದ್ದರೆ ಅದು ದೀರ್ಘ‌ಕಾಲಿಕ. (ಮೊದಲು, ಅಂದರೆ ಮಾರ್ಚ್‌ 31, 2017 ರವರೆಗೆ ಇದು 3 ವರ್ಷ ಇತ್ತು. 2017 ರ ಬಜೆಟ್‌ ಪ್ರಕಾರ ಪ್ರಸ್ತುತ ವಿತ್ತ ವರ್ಷ 2017-18ರಿಂದ ಅದು 2 ವರ್ಷ) 

ಅಲ್ಪಕಾಲಿಕ ಕ್ಯಾಪಿಟಲ್‌ ಗೈನ್ಸ್‌ 
ಒಬ್ಟಾತ ಒಂದು ಭೂಮಿ/ಕಟ್ಟಡವನ್ನು ಖರೀದಿಸಿ ಅದರ ಅಭಿವೃದ್ಧಿಗಾಗಿ ಸ್ವಲ್ಪ ಖರ್ಚು ಮಾಡಿ ಆಮೇಲೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಆಗ ಅಲ್ಪಕಾಲಿಕ ಕ್ಯಾಪಿಟಲ್‌ ಗೈನ್ಸ್‌ = ಮಾರಾಟದ ಬೆಲೆ – (ಖರೀದಿ ಬೆಲೆ + ಅಭಿವೃದ್ದಿ ವೆಚ್ಚ). 

ಈ ಸೂತ್ರದ ಪ್ರಕಾರ ಲಾಭಾಂಶ ಲೆಕ್ಕ ಹಾಕಿ ಅದನ್ನು ಆ ವರ್ಷದ ತಮ್ಮ ಆದಾಯಕ್ಕೆ ಸೇರಿಸಿ ತಮಗೆ ಅನ್ವಯಿಸುವ ಸ್ಲಾಬ್‌ ದರದಲ್ಲಿ ಯಾವತ್ತಿನಂತೆ ತೆರಿಗೆ ಕಟ್ಟಬೇಕು. ಇದಕ್ಕೆ ಪ್ರತ್ಯೇಕವಾದ ಬೇರೆ ಕ್ರಮಗಳು ಇಲ್ಲ. 

ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ 
2 ವರ್ಷಗಳಿಂದ ಜಾಸ್ತಿ ಅವಧಿಗೆ ಹೂಡಿಕೆಯಲ್ಲಿದ್ದ ಭೂಮಿ/ಕಟ್ಟಡಕ್ಕೆ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಎಂಬ ಹೆಸರಿನಲ್ಲಿ ಕೆಲ ರಿಯಾಯಿತಿಗಳು ಸಿಗುತ್ತವೆ. ಮೊತ್ತ ಮೊದಲನೆಯದಾಗಿ ಈ ತರಗತಿಯ ಕ್ಯಾಪಿಟಲ್‌ ಗೈನ್ಸ್‌ಗೆ ಬೆಲೆಯೇರಿಕೆಯ ಇಂಡೆಕ್ಸೇಶನ್‌ ಸೌಲಭ್ಯ ದೊರಕುತ್ತದೆ. ಅಂದರೆ, ಮೂಲ ಹೂಡಿಕೆ ಮತ್ತು ಅಭಿವೃದ್ಧಿ ವೆಚ್ಚಗಳೆರಡನ್ನೂ ಬೆಲೆಯೇರಿಕೆಯ ಪ್ರಮಾಣದಷ್ಟು ಎತ್ತರಿಸಿ ಉಳಿದ ಲಾಭಾಂಶಕ್ಕೆ ಮಾತ್ರ ತೆರಿಗೆ ಕಟ್ಟಿದರಾಯಿತು. ಅರ್ಥಾತ್‌, ನೀವು ತೆರುವ ಕರ ನೈಜ ಲಾಭದ ಮೇಲೆ ಮಾತ್ರ ಆಗಿದ್ದು ಬೆಲೆಯೇರಿಕೆಯಿಂದ ಉಂಟಾಗುವ ತೋರಿಕೆಯ ಲಾಭದ ಮೇಲೆ ಅಲ್ಲ ಎನ್ನುವುದು ಇಲ್ಲಿ ಮುಖ್ಯ. 

ಇದರ ಲೆಕ್ಕವನ್ನು 2001ರ ತಳಹದಿಯಲ್ಲಿ ಹಾಕಲಾಗುತ್ತದೆ. 2001ನೇ ಇಸವಿಯಲ್ಲಿ ಇದ್ದ ರೂ. 100 ಈಗ ಎಷ್ಟಾಗುತ್ತದೆ ಎನ್ನುವ ಲೆಕ್ಕಾಚಾರವೇ ಈ ಇಂಡೆಕ್ಸ್‌. (ಇದು ಈ ಮೊದಲು 1981 ಆಗಿತ್ತು) ಈ ಅಂಕಿಗಳನ್ನು ಸರಕಾರ Cost Inflation Index ಅಥವಾ CIIಎಂದು ಪ್ರಕಟಿಸುತ್ತದೆ. ಅದನ್ನು ಹಿಡಿದುಕೊಂಡು ಮೂಲ ಹೂಡಿಕೆ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಎತ್ತರಿಸಿ ಉಳಿದ ಭಾಗಕ್ಕೆ ಮಾತ್ರ ತೆರಿಗೆ ಕಟ್ಟಿದರೆ ಸಾಕು. 

ದೀರ್ಘ‌ ಕಾಲಿಕ ಕ್ಯಾಪಿಟಲ್‌ ಗೈನ್ಸ್‌ = ಮಾರಾಟದ ಬೆಲೆ – (ಖರೀದಿ ಬೆಲೆ XCII + ಅಭಿವೃದ್ದಿ ವೆಚ್ಚ XCII)
ಇದರ ಮೇಲೆ ತೆರಿಗೆ ಶೇ.20 ದರದಲ್ಲಿ ಕಟ್ಟಬೇಕು. (ಬೇಸಿಕ್‌ ಎಕ್ಸೆಂಪ್ಷನ್‌ ಲಿಮಿಟ್ಟಿನಲ್ಲಿ ಅವಕಾಶವಿದ್ದರೆ ಅದರಲ್ಲಿ ಇದನ್ನು ಕಳೆದು ಉಳಿದ ಭಾಗಕ್ಕೆ ಕಟ್ಟಿದರೆ ಸಾಕು.)

ಕಾಪಿಟಲ್‌ ಗೈನ್ಸ್‌ ತೆರಿಗೆ ವಿನಾಯಿತಿ 
ಸಾಮಾನ್ಯ ಆದಾಯಕ್ಕೆ ಇರುವಂತೆ 80ಸಿ ಇನ್ನಿತರ ಸೆಕ್ಷನ್‌ಗಳ ವಿನಾಯಿತಿ (ಪಿಪಿಎಫ್, ಎನ್‌ಎಸ್‌ಸಿ, 5 ವರ್ಷದ ಎಫ್.ಡಿ, ಇಎಲ್‌ಎಸ್‌ಎಸ್‌ ಇತ್ಯಾದಿ) ಕ್ಯಾಪಿಟಲ್‌ ಗೈನ್ಸ್‌ ಮೇಲೆ ಸಿಗುವುದಿಲ್ಲ. ಕ್ಯಾಪಿಟಲ್‌ ಗೈನ್ಸ್‌ ತೆರಿಗೆಗೆ ಪ್ರತ್ಯೇಕವಾದ ವಿನಾಯಿತಿ ಸೆಕ್ಷನ್ನುಗಳಿವೆ.

1 ಸೆಕ್ಷನ್‌ 54: ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗಳಿಕೆ ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು (ಒಂದೇ ಒಂದು, ಎರಡು ಮೂರಕ್ಕೆ ಆಗುವುದಿಲ್ಲ) ಹೊಸ ಮನೆ ಹೊಂದುವ ಸಲುವಾಗಿ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕ್ಯಾಪಿಟಲ್‌ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚು ಮಾಡಿದರೆ ಅಷ್ಟೇ ಭಾಗದ (ಟrಟ rಚಠಿಚ) ವಿನಾಯತಿ ಸಿಗುತ್ತದೆ. ಇಲ್ಲಿ ನೋಡಬೇಕಾದ ಇನ್ನೊಂದು ವಿಚಾರವೆಂದರೆ ಆ ರೀತಿ ಪಡೆದ ಇನ್ನೊಂದು ಹೊಸ ಮನೆಯನ್ನು ಕನಿಷ್ಠ 3 ವರ್ಷಗಳ ಕಾಲ ಇಟ್ಟುಕೊಳ್ಳಬೇಕು. 

2 ಸೆಕ್ಷನ್‌ 54B: ಒಂದು ಗ್ರಾಮೀಣವಲ್ಲದ ಕೃಷಿ ಭೂಮಿಯನ್ನು ಮಾರಾಟ ಮಾಡಿದರೆ ಉಂಟಾಗುವ ಲಾಭಾಂಶ
ದಿಂದ ಎರಡು ವರ್ಷಗಳೊಳಗೆ ಇನ್ನೊಂದು ಕೃಷಿ ಭೂಮಿಯನ್ನು ಖರೀದಿ ಮಾಡಿದರೆ ಕ್ಯಾಪಿಟಲ್‌ ಗೈ®Õ… ನಿಂದ ಸಂಪೂರ್ಣ ಮುಕ್ತಿ ಸಿಗುತ್ತದೆ. ಮಾರಾಟವಾಗುವ ಕೃಷಿ  ಭೂಮಿ ಬರೇ ಹೆಸರಿಗೆ ಮಾತ್ರ ಕೃಷಿ ಭೂಮಿಯಾಗಿರದೆ ಅದರಲ್ಲಿ ನೈಜವಾದ ಕೃಷಿ ಚಟುವಟಿಗೆ ಕನಿಷ್ಠ 2 ವರ್ಷ ಗಳಿಂದ ನಡೆಯುತ್ತಿದ್ದಿರಬೇಕು. 
 

3 ಸೆಕ್ಷನ್‌ 54F: ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು ತಮ್ಮ ಮನೆಯಲ್ಲದ ಬೇರಾವುದೇ ಕ್ಯಾಪಿಟಲ್‌ ಆಸ್ತಿಯನ್ನು ಮಾರಾಟ ಮಾಡಿ ಕ್ಯಾಪಿಟಲ್‌ ಗೈನ್ಸ್‌ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್‌ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು.

4 ಸೆಕ್ಷನ್‌ 54EC: ಯಾವುದೇ ಕ್ಯಾಪಿಟಲ್‌ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕ್ಯಾಪಿಟಲ್‌ ಗಳಿಕೆಯನ್ನು ರೂರಲ್‌ ಇಲೆಕ್ಟ್ರಿಫಿಕೇಶನ್‌ ಕಾರ್ಪೋರೇಶನ್‌ (REC) ಅಥವಾ ನಾಶನಲ್‌ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಹೂಡಿದರೆ (ಮಿತಿ 50 ಲಕ್ಷ ವರ್ಷಕ್ಕೆ) ಅಂತಹ ಕ್ಯಾಪಿಟಲ್‌ ಗಳಿಕೆ ಸಂಪೂರ್ಣವಾಗಿ ಕರಮುಕ್ತ. 

ಇತರ ಕ್ಯಾಪಿಟಲ್‌ ಆಸ್ತಿ
ಭೂಮಿ/ಕಟ್ಟಡವಲ್ಲದ ಇತರ ಕ್ಯಾಪಿಟಲ್‌ ಸರಕುಗಳ ಮೇಲೆ ಕ್ಯಾಪಿಟಲ್‌ ಗೈನ್ಸ್‌ ತೆರಿಗೆ ಹೇಗೆ ಎನ್ನುವುದು ಸಹಜವಾದ ಪ್ರಶ್ನೆ. ಶೇರು/ಮ್ಯೂಚುವಲ್‌ ಫ‌ಂಡುಗಳು, ಚಿನ್ನ, ಇತ್ಯಾದಿಗಳನ್ನು ಯಾವ ರೀತಿ ನೋಡಬೇಕು ಎನ್ನುವುದರ ಬಗ್ಗೆ ಒಂದು ನೋಟ ಹರಿಸೋಣ ಇಲ್ಲೂ ಕೂಡಾ ಹೂಡಿಕೆಯ ಅವಧಿಯ ಮೇರೆಗೆ ಅಲ್ಪಕಾಲಿಕ ಮತ್ತು ದೀರ್ಘ‌ಕಾಲಿಕೆ ಎಂಬ ವಿಂಗಡಣೆ ಆಗುತ್ತದೆ. ಶೇರು ಮತ್ತು ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡು (ಕನಿಷ್ಠ ಶೇ. 65 ಶೇರುಗಳಲ್ಲಿ ಹೂಡಿಕೆ ಇರುವ)ಗಳಿಗೆ ಹೂಡಿಕಾ ಅವಧಿ 1 ವರ್ಷ. ಡೆಟ್‌ ಫ‌ಂಡ್‌/ಹೈಬ್ರಿಡ್‌ ಫ‌ಂಡ್‌, ಚಿನ್ನಗಳಿಗೆ ಈ ಅವಧಿ 3 ವರ್ಷ ಹಾಗೂ ಅಲ್ಪಕಾಲಿಕ ಅವಧಿಯ ಹೂಡಿಕೆಗೆ ಅಯಾ ವರ್ಷದ ಆದಾಯಕ್ಕೆ ಸೇರಿಸಿ ಅನ್ವಯ ದರದಲ್ಲಿ ಕರಕಟ್ಟಬೇಕು. ದೀರ್ಘ‌ ಕಾಲಿಕ ಹೂಡಿಕೆಗೆ ಇಂಡೆಕ್ಸೇಶನ್‌ ಬಳಿಕ ಶೇ. 20 ದರದಲ್ಲಿ ಕರ ಕಟ್ಟತಕ್ಕದ್ದು. ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್‌ಗೆ ಸೆಕ್ಷನ್‌ 54ಊ ಅಥವಾ 54ಉಇ ಅನುಸಾರ ರಿಯಾಯಿತಿ ದೊರಕುತ್ತದೆ. 

ಸ್ಟಾಚ್ಯುಟರಿ ವಾರ್ನಿಂಗ್‌ 
ಕರ ವಿಚಾರವಾಗಿ ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಸಂಕ್ಷಿಪ್ತವಾಗಿ ಮಾಹಿತಿ ಮತ್ತು ಚರ್ಚೆಗಾಗಿ ಎತ್ತಿಕೊಳ್ಳಲಾಗಿದೆ. ಎಷ್ಟೋ ಸೂಕ್ಷ್ಮವಿವರಗಳನ್ನು ಇಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವೈಯಕ್ತಿಕ ಪರಿಸ್ಥಿತಿಯನ್ನು ನುರಿತ ಚಾರ್ಟರ್ಡ್‌ ಅಕೌಂಟಂಟ್‌ ಜೊತೆ ಚರ್ಚಿಸಿಯೇ ತೆಗೆದುಕೊಳ್ಳಿ. ಕೇವಲ ಒಂದು ಲೇಖನವನ್ನು ಓದಿ ಯಾವುದೇ ನಿರ್ಧಾರವನ್ನೂ ಯಾವತ್ತೂ ತೆಗೆದುಕೊಳ್ಳಬಾರದು – ಕಾಕು ಶಾಸನ ವಿಧಿಸಿದ ಎಚ್ಚರಿಕೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.