ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌


Team Udayavani, Sep 10, 2018, 8:01 PM IST

1.jpg

ನಮ್ಮ ಗುರುಗುಂಟಿರಾಯರಿಗೆ ಬ್ಯಾಂಕ್‌ ವಿಚಾರವಾಗಿ ಉಂಟಾಗುವ ಕಿರಿಕಿರಿ ಕಡಿಮೆಯೇನಲ್ಲ. ತಮ್ಮ ಯೌವನದ ಕಾಲದಲ್ಲಿ ಚೆಕ್‌ ಲೀಫ್ ಹಿಡಕೊಂಡು ಬ್ಯಾಂಕು ಬ್ರಾಂಚುಗಳಲ್ಲಿ ಕ್ಯೂ ನಿಂತು ದುಡ್ಡು ತಗೊಂಡು ಮಾತ್ರ ಅನುಭವ ಇರುವ ರಾಯರಿಗೆ ಈ ಹೊಸ ಮಾದರಿಯ ಇಂಟರ್ನೆಟ್‌ ಬ್ಯಾಂಕ್‌, ಮೊಬೈಲ್‌ ಬ್ಯಾಂಕ್‌, ಎಸ್ಸೆಮ್ಮೆಸ್‌ ಬ್ಯಾಂಕ್‌ ಇತ್ಯಾದಿ ಬ್ಯಾಂಕುಗಳು ಅರ್ಥವೇ ಆಗಲೊಲ್ಲದು. ಇತ್ತೀಚೆಗೆ ಮಿಸ್ಡ್ ಕಾಲ್‌ ಬ್ಯಾಂಕ್‌ ಬೇರೆ ಬಂದಿದೆ ಎಂದು ಎಲ್ಲೋ  ಕೇಳಿ “ಇದೇನಪ್ಪಾ ಈ ಪರಿ?’ ಎಂದು ಗಾಬರಿ ಬಿದ್ದಿದ್ದಾರೆ. ಹೀಗೇ ಬಿಟ್ಟರೆ ಇನ್ನು ರಾಂಗ್‌ ನಂಬರ್‌ ಬ್ಯಾಂಕ್‌ ಬಂದು ಯಾರದ್ದೋ ದುಡ್ಡು ಯಾರಿಗೋ ಕ್ರೆಡಿಟ್‌ ಆಗಿ ಯಾವ ರಾದ್ಧಾಂತ ಆಗಲಿಕ್ಕಿದೆಯೋ ಎಂದು ಹೌಹಾರಿದ್ದಾರೆ. 

ಅದಿರಲಿ, ಈಗ ದಿನಾ ಪತ್ರಿಕೆಗಳಲ್ಲಿ, ಟಿವಿಯಲ್ಲಿ ಪೇಮೆಂಟ್‌ ಬ್ಯಾಂಕ್‌ ಎಂಬ ಹೆಸರು ನೋಡಿ ಅದೇನಿರಬಹುದು ಹೊಸ ಪೀಡೆ ಎಂಬ ಮೂಲಭೂತ ಚಿಂತನೆ ಅವರನ್ನು ಕಾಡುತ್ತಿದೆ. ಆ ಹೆಸರು ಯಾಕಾಗಿ ಬಂದಿದೆ? ಅದರಲ್ಲಿ ಯಾರು ಯಾರಿಗೆ ಪೇಮೆಂಟ್‌ ಮಾಡುತ್ತಾರೆ? ಬ್ಯಾಂಕ್‌ ನಮಗೆ ಪೇಮೆಂಟ್‌ ಮಾಡುವುದೋ ಅಥವಾ ನಾವೇ ಬ್ಯಾಂಕಿಗೆ…? ಹಾಗಾದರೆ ಅದು ತುಸು ಕಷ್ಟವೇ ಸರಿ. ಖಾತೆ ತೆರೆಯಲು ಮೋದಿ ಹೇಳಿದ್ದರೂ ತೆರೆದಾಕ್ಷಣ ಪೇಮೆಂಟ್‌ ಶುರು ಹಚ್ಚಿಕೊಂಡರೆ ಏನು ಗತಿ? ಈ ಇಪಿಎಸ್‌ ದೆಶೆಯಿಂದ ಬರುವುದೇ ಅತ್ಯಲ್ಪ ಪಿಂಚಣಿ. ಕಟ್ಟಿದ ದುಡ್ಡು ಮುಕ್ಕಾಲುವಾಶಿ ಗುಳುಂ. ಮೊಮ್ಮಗನ ಚಾಕಲೇಟಿನ ದುಡ್ಡಿಗೂ ಸೊಸೆಯೆದುರು ಕೈಯೊಡ್ಡುವ ಪರಿಸ್ಥಿತಿ. ಇನ್ನು ಈ ಬ್ಯಾಂಕಿನಲ್ಲಿ ಖಾತೆ ತೆರೆದು ಪೇಮೆಂಟ್‌ ಅತ್ಲಾಗಿ ಆರಂಭವಾದರೆ ಇದ್ದ ದುಡ್ಡು ಖಾಲಿ. ಇತ್ಲಾಗಿ ಬಂದರೆ ಕಿಂಚಿತ್‌ ಪ್ರಯೋಜನವಾಗಬಹುದು ಎಂಬ ಸಣ್ಣ ಆಸೆ. ಆದರೆ ಈ ಪೇಮೆಂಟ್‌ ಎತ್ಲಾಗಿ ಎಂಬುದನ್ನು ಹೇಗಪ್ಪಾ ಖಚಿತಪಡಿಸಬಹುದು? 

ದೀರ್ಘ‌ ಚಿಂತನೆಯ ಬಳಿಕ ತಮ್ಮ ಎಲ್ಲಾ ಈಗೋ ಅನ್ನು ಬದಿಗೊತ್ತಿ ರಾಯರು ಎಂದಿನಂತೆ ತಮ್ಮ ಸ್ಮಾರ್ಟ್‌ ಸೊಸೆ ಬಹೂರಾನಿಯನ್ನೇ ಕೇಳುವುದು ಎಂದು ತೀರ್ಮಾನಿಸಿದರು. 

ಇತ್ತೀಚೆಗಿನ ದಿನಗಳಲ್ಲಿ ಪೇಮೆಂಟ್‌ ಬ್ಯಾಂಕ್‌ ಎನ್ನುವ ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಆಗಸ್ಟ್‌ 2015ರಲ್ಲಿ 11 ಸಂಸ್ಥೆಗಳಿಗೆ ರಿಸರ್ವ್‌ ಬ್ಯಾಂಕ್‌ ಪೇಮೆಂಟ್‌ ಬ್ಯಾಂಕ್‌ ತೆರೆಯಲು ಪರವಾನಗಿ ನೀಡಿದ್ದು, ಏರ್‌ಟೆಲ್‌ , ಪೇಟಿಎಂ, ಆದಿತ್ಯ ಬಿರ್ಲಾ ಇತ್ಯಾದಿ ಕಂಪೆನಿಗಳು ಇದೀಗ ಪೇಮೆಂಟ್‌ ಬ್ಯಾಂಕುಗಳನ್ನು ಸ್ಥಾಪಿಸಿದ್ದು ಹಲವಾರು ಜನರು ಚಿಕ್ಕಪುಟ್ಟ ವ್ಯವಹಾರಗಳಿಗೆ ಅವನ್ನು ಉಪಯೋಗಿಸುತ್ತಲೂ ಇದ್ದಾರೆ. ಜನವರಿ 2017ರಲ್ಲಿ ರಾಯಪುರ ಮತ್ತು ರಾಂಚಿಯಲ್ಲಿ ಪ್ರಾಯೋಗಿಕವಾಗಿ ತನ್ನ ಭಾರತೀಯ ಅಂಚೆ ಇಲಾಖೆಯ ಆಧೀನದಲ್ಲಿ ಕಾರ್ಯ ಆರಂಭಿಸಿದ ಭಾರತ ಸರಕಾರ ಶೇ. 100 ತನ್ನ ಒಡೆತನದ ಪೇಮೆಂಟ್‌ ಬ್ಯಾಂಕನ್ನು ದೇಶದಾದ್ಯಂತ ಇದೀಗ ವಿಸ್ತರಿಸಿದ ವಿಷಯ ಸಾಕಷ್ಟು ಸಂಚಲನವನ್ನು ಉಂಟುಮಾಡಿದೆ. ಹೌದು, ಸೆಪ್ಟೆಂಬರ್‌ 1, 2018ರಂದು ದೇಶದ 3250 ಕಡೆಗಳಲ್ಲಿ ಐಪಿಪಿಬಿ ಅಥವಾ “ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌’ ಕಾರ್ಯಾರಂಭ ಮಾಡಿದೆ. ವರ್ಷಾಂತ್ಯದ ಒಳಗಾಗಿ ಎಲ್ಲಾ 1.55 ಲಕ್ಷ ಪೋಸ್ಟಾಫಿಸುಗಳಲ್ಲೂ ಈ ಸೌಲಭ್ಯ ತೆರೆಯುವ ಇರಾದೆ ಸರಕಾರಕ್ಕೆ ಇದೆ. ಇದು ಪೋಸ್ಟಾಫೀಸಿನ ಆಧೀನದಲ್ಲಿ ಕೆಲಸ ಮಾಡುತ್ತದೆಯಾದರೂ ಕಾನೂನು ರೀತ್ಯಾ ಐಪಿಪಿಬಿ ಒಂದು ಪ್ರತ್ಯೇಕ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿ. 

ಪೇಮೆಂಟ್‌ ಬ್ಯಾಂಕ್‌? 
ಅಷ್ಟಕ್ಕೂ ಏನಿದು ಪೇಮೆಂಟ್‌ ಬ್ಯಾಂಕು? ಹೆಸರೇ ಸೂಚಿಸುವಂತೆ ಇದು ಜನ ಸಾಮಾನ್ಯರ ಪೇಮೆಂಟ್‌ ಅಥವಾ ಪಾವತಿಗಳಿಗೆ ಅನುಕೂಲವಾಗುವಂತಹ ಒಂದು ಬ್ಯಾಂಕ್‌. ಇದೊಂದು ಸರಳವಾದ ಎಸಿº ಖಾತೆ ಮಾತ್ರ. ಈ ಖಾತೆಯ ಮೂಲಕ ಮಾಮೂಲಿ ದುಡ್ಡಿನ ವರ್ಗಾವಣೆ, ಪೆನ್ಶನ್‌ ಪಡೆಯುವುದು, ವಿದ್ಯುತ್‌/ನೀರು/ಟೆಲಿಫೋನ್‌/ಮೊಬೈಲ್‌ ಬಿಲ್‌ ಪಾವತಿ ಇತ್ಯಾದಿ ವ್ಯವಹಾರಗಳನ್ನು ಮಾಡಬಹುದು. ಅಂತೆಯೇ, ಅನ್ಯ ವಿತ್ತೀಯ ಸಂಸ್ಥೆಗಳ ಒಡೆತನದ ಮ್ಯೂಚುವಲ್‌ ಫ‌ಂಡುಗಳು, ವಿಮಾ ಪಾಲಿಸಿಗಳು ಇತ್ಯಾದಿ ವಿತ್ತೀಯ ಪತ್ರಗಳ ವಿತರಣೆ ಕೂಡಾ ಮಾಡಬಹುದು. ಅರ್‌ಬಿಐ ಕಾನೂನಿನ ಪ್ರಕಾರ ಈ ಬ್ಯಾಂಕುಗಳು ಎಫ್ಇಆರ್‌ಡಿ ರೀತಿಯ ಡೆಪಾಸಿಟ್‌ಗಳನ್ನು ಪಡೆಯುವಂತಿಲ್ಲ. ಸಾಲಗಳನ್ನು, ಕ್ರೆಡಿಟ್‌ ಕಾರ್ಡುಗಳನ್ನು ನೀಡುವಂತಿಲ್ಲ. ಹಾಗಾಗಿ ಇದೊಂದು ಸಂಪೂರ್ಣವಾದ ಬ್ಯಾಂಕು ಅಲ್ಲವೇ ಅಲ್ಲ. ಕೇವಲ ಪಾವತಿಗಳನ್ನು ನೋಡಿಕೊಳ್ಳಲು ಇರುವಂತಹ ಒಂದು ಸೌಲಭ್ಯ ಮಾತ್ರ. ಬ್ಯಾಂಕುಗಳಂತೆ ಲೇವಾದೇವಿ ವ್ಯವಹಾರದಲ್ಲಿ ತೊಡಗದೇ ಇರುವ ಕಾರಣ ಈ ಪಾವತಿ ಬ್ಯಾಂಕುಗಳು ಒಂದು ದಿನ ದಿವಾಳಿಯೆದ್ದು ಹೋಗುವ ಸಂಭವ ವಿರಳ. ರಿಸ್ಕ್ ರಹಿತವಾಗಿ ಹಳ್ಳಿ ಹಳ್ಳಿಗಳಲ್ಲೂ ಜನಸಾಮಾನ್ಯರು ಬ್ಯಾಂಕ್‌ ವ್ಯವಹಾರ ನಡೆಸಿ ಅಭಿವೃದ್ಧಿಗೆ ಸಹಾಯಕವಾಗುವ ಸಲುವಾಗಿ ಆರ್‌ಬಿಐ ಇಂತಹ ಒಂದು ಬ್ಯಾಂಕ್‌ ನಡೆಸಲು ಪರವಾನಿಗೆ ನೀಡಿದೆ. ಇದು ಹಳ್ಳಿಗರಿಗೆ, ವಲಸಿ ಕೆಲಸಗಾರರಿಗೆ, ಸಣ್ಣ ಆದಾಯವುಳ್ಳ ಬಡವರ್ಗಕ್ಕೆ, ಅಸಂಘಟಿತ ನೌಕರಿ ವರ್ಗಕ್ಕೆ, ಛೋಟಾ ಬಿಸಿನೆಸ್‌ ಮಾಡುವವರಿಗೆ ಸಹಾಯಕವಾಗಲಿದೆ. ವಿತ್ತೀಯ ಒಳಗೊಳ್ಳುವಿಕೆ ಇದರ ಮೂಲ ಉದ್ದೇಶ. 

QR ಕಾರ್ಡ್‌ 
ಐಪಿಪಿಬಿ ಖಾತೆಯ ಬಳಕೆ ಹೇಗೆ? ಈ ಖಾತೆಯಡಿಯಲ್ಲಿ ಯಾವುದೇ ATM ಯಾ ಡೆಬಿಟ್‌ ಕಾರ್ಡ್‌ ನೀಡಲಾಗುವುದಿಲ್ಲ. ಹಳ್ಳಿಗಳಲ್ಲಿ ATM ಉಪಯೋಗ ಕಷ್ಟ ತಾನೆ? ಅದಕ್ಕೆ ಹೆಚ್ಚಿನ ಬಂಡವಾಳ ಬೇಕು. ಇಲ್ಲಿ ಖಾತದಾರರಿಗೆ ATM/ಡೆಬಿಟ್‌ ಕಾರ್ಡ್‌ ಬದಲಾಗಿ ಸುಲಭವಾಗಿ ಕೆಲಸ ಮಾಡುವ QR Code ಇರುವ ಒಂದು QR ನೀಡಲಾಗುತ್ತದೆ. ಏನಿದು AR ಕಾರ್ಡ್‌ ಎಂದು ನೀವೀಗ ಕೇಳಬೇಕಲ್ಲವೇ? ಕೇಳಿ, ಪರವಾಗಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಹಲವಾರು ಜಾಹೀರಾತುಗಳಲ್ಲಿ/ಪ್ರಾಡಕ್ಟ್ಸ್ಗಳಲ್ಲಿ/ಅಂಗಡಿಗಳಲ್ಲಿ ಅಥವಾ ಆಧಾರ್‌ ಕಾರ್ಡಿನಲ್ಲೂ ಸಹ ಹುಳ ಮೇಯ್ದಂತಹ ಒಂದು ಚೌಕಾಕಾರದ ಚಿತ್ರವನ್ನು ನೀವು ಗಮನಿಸಿರಬಹುದು (ಚಿತ್ರ ನೋಡಿ) 

ಐಪಿಪಿಬಿ ನೀಡುವ QR Card
“ಹುಳ ಮೇಯ್ದ’ ಚೌಕಾಕಾರದ Quick Response (QR)ಚಿತ್ರದಲ್ಲಿ ನಿಮ್ಮ ಖಾತೆಯ ಎಲ್ಲಾ ಮಾಹಿತಿಗಳೂ ಕೋಡೆಡ್‌ ಆಗಿರುತ್ತದೆ. ಆ ಕಾರ್ಡನ್ನು ಬಳಸಿ ಮೊಬೈಲ್‌ ಮೂಲಕ ಅಥವಾ ಮೈಕ್ರೋ ಎಟಿಎಂ ಅನ್ನುವ ಚಿಕ್ಕ ಸ್ಕ್ಯಾನರ್‌ ಮೆಶೀನು ಮೂಲಕ ವ್ಯವಹಾರ ಮಾಡಲು ಬರುತ್ತದೆ. ಇಲ್ಲಿ ಪಿನ್‌ಕೋಡ್‌ ಇರುವುದಿಲ್ಲ. ನಿಮ್ಮ ಹೆಬ್ಬೆಟ್ಟೇ ನಿಮ್ಮ ಗುರುತು. ಏಕ್ದಂ ಅಂಗೂಟಾ ಛಾಪ್‌! ಇದನ್ನು ದಿಲ್ಲಿಯಲ್ಲೂ ಹಳ್ಳಿಗಳಲ್ಲೂ ಉಪಯೋಗಿಸಬಹುದು. ಬಹುತೇಕ ಮೊಬೈಲ್‌ ಅಂತರ್ಜಾಲವನ್ನು ಬಳಸಿಕೊಳ್ಳುವ ಈ ಪದ್ಧತಿಯನ್ನು ಸುಲಭವಾಗಿ ದೇಶದ ಯಾವ ಮೂಲೆಯಲ್ಲೂ ಬಳಸಲು ಸಾಧ್ಯ. ಒಟ್ಟು ವ್ಯವಸ್ಥೆಗೆ ಖರ್ಚು ಕಡಿಮೆ ಹಾಗೂ ಎಲ್ಲೆಡೆ ಸುಲಭವಾಗಿ ಬಳಸುವ ಸೌಕರ್ಯ ಬೇರೆ. 

ಐಪಿಪಿಬಿ ಸೌಲಭ್ಯಗಳೇನು?
ಅಂಚೆ ಇಲಾಖೆಯ ಈ ಪೇಮೆಂಟ್‌ ಬ್ಯಾಂಕಿನ ವಿವಿಧ ಸೌಲಭ್ಯಗಳು ಈ ಕೆಳಗಿನಂತಿವೆ: 

ಪೋಸ್ಟಾಫೀಸುಗಳಲ್ಲಿ ಅಥವಾ ಮನೆ ಬಾಗಿಲಿಗೆ ಬಂದು ಉಚಿತವಾಗಿ ಖಾತೆ ತೆರೆಯುವ ಸೌಲಭ್ಯ. ಗೂಗಲ್‌ ಪ್ಲೇಸ್ಟೋರ್‌ನಿಂದಲೂ ಅಟಟ ಕೆಳಗಿಳಿಸಿ ಅದರ ಮೂಲಕ ಖಾತೆ ತೆರೆಯಬಹುದು.

ಯಾವ ಖಾತೆಗೂ ಅನ್ವಯವಾಗುವ ಕೆವೈಸಿ ದಾಖಲೆಗಳು ಅಗತ್ಯ (ಆಧಾರ್‌/ಪ್ಯಾನ್‌ ಇತ್ಯಾದಿ) 

ನಿಮ್ಮ ಖಾತೆಯ ಮೇಲೆ ಶೇಕಡಾ 4 ಬಡ್ಡಿ ದರ. 
ಪ್ರತಿ ತ್ತೈಮಾಸಿಕ ಪಾವತಿಗಳು.

ಇಲ್ಲಿ ಚೆಕ್‌ಬುಕ್‌ ಸೌಲಭ್ಯವಿಲ್ಲ 

ಖಾತೆ ಬಳಸಲು ATM ಕಾರ್ಡಿನ ಬದಲಾಗಿ ನೀಡಲಾಗುವ ಕ್ಕಿ ಕಾರ್ಡಿಗೆ ಯಾವುದೇ ಶುಲ್ಕವಿಲ್ಲ. ಡುಪ್ಲಿಕೇಟ್‌ ಬೇಕಿದ್ದರೆ ಮಾತ್ರ ರೂ. 25 ದಂಡ ಪಾವತಿಸಬೇಕು

ಶೂನ್ಯ ಉಳಿಕೆಯೊಂದಿಗೆ ಖಾತೆಯನ್ನು ತೆರೆಯಬಹುದು, ನಿರ್ವಹಿಸಬಹುದು. ಕನಿಷ್ಠ ಮಾಸಿಕ ಉಳಿಕೆಯ 

ನಿರ್ಬಂಧ ಇಲ್ಲ. ಸರ್ವರನ್ನೂ ಒಳಗೊಂಡ ವಿತ್ತೀಯ ಅಭಿವೃದ್ಧಿಗೆ ಇದು ಪೂರಕವಲ್ಲವೆ?

ಖಾತೆಯಲ್ಲಿ ಗರಿಷ್ಟ ಮೊತ್ತದ ಮಿತಿ ರೂ. 1 ಲಕ್ಷ ಆಗಿರುತ್ತದೆ. ಈ ಯೋಜನೆಯನ್ನು ಮೂಲತಃ ಬಡವರನ್ನು ಉದ್ದೇಶಿಸಿ ತೆರೆಯಲಾಗಿದೆ. ಒಂದು ವೇಳೆ ಖಾತೆಯಲ್ಲಿ ರೂ. 1 ಲಕ್ಷದ ಮಿತಿ ಮೀರಿದರೆ ಹೆಚ್ಚುವರಿ ದುಡ್ಡನ್ನು ನಿಮ್ಮ ಐಪಿಪಿಬಿ ಖಾತೆಗೆ ತಾಳೆ ಹಾಕಲ್ಪಟ್ಟ ಪೋಸ್ಟಾಫೀಸಿನ ಸೇವಿಂಗ್ಸ್‌ ಖಾತೆಗೆ (POSA) ವರ್ಗಾಯಿಸಬಹುದು. POSA ಎನ್ನುವುದು ಈಗಾಗಲೇ ಪೋಸ್ಟಾಫೀಸುಗಳಲ್ಲಿ ಲಭ್ಯವಿರುವ ಪೂರ್ಣ ಪ್ರಮಾಣದ ಎಸಿº ಖಾತೆ. ಬಡ್ಡಿ ದರ ಅದರಲ್ಲೂ ಶೇ.4 ಇದೆ. 

ಈ ಖಾತೆಯಲ್ಲಿ ದುಡ್ಡನ್ನು ಎಷ್ಟು ಬಾರಿ ಬೇಕಾದರೂ ಹಾಕಬಹುದು, ತೆಗೆಯಬಹುದು. ವ್ಯವಹಾರಗಳ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. 

ಖಾತೆಯಲ್ಲಿ ದುಡ್ಡನ್ನು ಜಮೆ ಮಾಡಲು ಅಥವಾ ಹಿಂಪಡೆಯಲು ಇಪಿಪಿಬಿ ಇರುವ ಪೋಸ್ಟಾಫೀಸಿಗೆ ಭೇಟಿ ನೀಡಬಹುದು. ನಿಮಗೆ ನೀಡಿದ QR Code ಬಳಸಿ ಜಮೆ, ಹಿಂಪಡೆತ, ವರ್ಗಾವಣೆ ನಡೆಸಬಹುದು. ಅಥವಾ, ಅಂಚೆಯಣ್ಣನೇ (ಹಳ್ಳಿಗಳಲ್ಲಿ ಗ್ರಾಮೀಣ ಡಾಕ್‌ ಸೇವಕ್‌) ನಿಮ್ಮ ಮನೆ ಬಾಗಿಲ ಸೇವೆ ಒದಗಿಸಬೇಕು ಅಂದರೆ ಅದೂ ಕೂಡಾ ಸಾಧ್ಯ. ಆದರೆ ಅದಕ್ಕೆ ಸ್ವಲ್ಪ ಶುಲ್ಕವಿರುತ್ತದೆ – ಡಿಜಿಟಲ್‌ ವ್ಯವಹಾರಕ್ಕೆ ರೂ. 15 ಹಾಗೂ ನಗದು ವ್ಯವಹಾರಕ್ಕೆ ರೂ. 25. 

ಈಗ ಎಲ್ಲೆಡೆ ಪ್ರಚಲಿತವಾಗಿರುವ ಮೊಬೈಲ್‌ ಆ್ಯಪ್‌ (ಅಟಟ) ಮೂಲಕವೂ ಬಿಲ್‌ ಪಾವತಿ, ಬ್ಯಾಲನ್ಸ್‌ ಪರಿಶೀಲನೆ, ಆನ್‌ಲೈನ್‌ ವರ್ಗಾವಣೆಗಳನ್ನು ಮಾಡಬಹುದು.

ಎಸ್ಸೆಮ್ಮೆಸ್‌ ಫ್ರೀ

ಖಾತೆಯ ತ್ತೈಮಾಸಿಕ ಸ್ಟೇಮೆಂಟ್‌ಗಳ ಮೇಲೆ ಶುಲ್ಕವಿಲ್ಲ. ಹೆಚ್ಚುವರಿ ಸ್ಟೇಟೆ¾ಂಟುಗಳಿಗೆ ಮಾತ್ರ ರೂ. 50 ಒಂದರ. 

ರೆಗ್ಯುಲರ್‌ ಬದಲಿಗೆ ಒಂದು ಬೇಸಿಕ್‌ ಖಾತೆ ತೆರೆದರೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ನಗದು ಹಿಂಪಡೆಯಲು ಸಾಧ್ಯ. ಬೇರೆಲ್ಲಾ ರೀತಿಯಲ್ಲಿ ಬೇಸಿಕ್ಕಿಗೂ ರೆಗ್ಯುಲರಿಗೂ ಯಾವುದೇ ವ್ಯತ್ಯಾಸ ಇಲ್ಲ. 

ಇನ್ನು ಡಿಜಿಟಲ್‌ ಖಾತೆ ಎಂದರೆ ನಾವೇ ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಮನೆಯಲ್ಲಿಯೇ ಕುಳಿತುಕೊಂಡು ಖಾತೆ ತೆರೆಯುವ ಸೌಲಭ್ಯ. ಖಾತೆ ತೆರೆದು 12 ತಿಂಗಳುಗಳ ಒಳಗಾಗಿ ಕೆವೈಸಿ ದಾಖಲಾತಿಗಳನ್ನು (ಆಧಾರ್‌/ಪ್ಯಾನ್‌ಕಾರ್ಡ್‌ ಇತ್ಯಾದಿ) ಅಂಚೆ ಕಚೇರಿಗೆ ಹೋಗಿ ಸಲ್ಲಿಸಿ ನಿಮ್ಮ ಖಾತೆಯನ್ನು ರೆಗ್ಯುಲರ್‌ ದರ್ಜೆಗೆ ಏರಿಸಿಕೊಳ್ಳತಕ್ಕದ್ದು. ಅಲ್ಲಿಯವರೆಗೆ ಒಂದು ಸೀಮಿತ ಮಿತಿಯೊಳಗೆ ಖಾತೆಯನ್ನು ಚಲಾಯಿಸಲು ಅನುಮತಿ ಇರುತ್ತದೆ. 

ಇಲ್ಲಿಯ ಸೇವೆ ದೇಶದ ವಿವಿಧ ಭಾಷೆಗಳಲ್ಲಿ ಲಭ್ಯ

ಗ್ರೂಪ್‌ ಇನ್ಶೂರೆನ್ಸ್‌ ಸೌಲಭ್ಯ (ಸಮೂಹ ವಿಮೆ) ಶೀಘ್ರದಲ್ಲಿಯೇ ಬರಲಿದೆ.

ಉದ್ದಿಮೆದಾರರಿಗೆ ಪ್ರತ್ಯೇಕವಾದ ಕರೆಂಟ್‌ ಅಕೌಂಟ್‌ ಸೌಲಭ್ಯ ಇದೆ. ಇದಕ್ಕೆ ಎಲ್ಲಾ ಕರೆಂಟ್‌ ಖಾತೆಯ ರೀತಿಯಲ್ಲಿ ಬಡ್ಡಿ ದರ ಶೂನ್ಯ. ಕನಿಷ್ಠ ಮಾಸಿಕ ರೂ. 1000 ಇರಬೇಕು. ಇಲ್ಲದಿದ್ದಲ್ಲಿ ರೂ. 100 ದಂಡ. ಅದಲ್ಲದೆ ಹಲವಾರು ಚಿಕ್ಕಪುಟ್ಟ ಚಾರ್ಜಸ್‌ ಇರುತ್ತವೆ. 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.