ಕರ ವಿನಾಯಿತಿ ಪಡೆಯಲು ನಾನಾ ಮಾರ್ಗಗಳು 


Team Udayavani, Nov 19, 2018, 6:00 AM IST

tax-222.jpg

ಕಳೆದ ವಾರ ತಿಳಿಸಿದಂತೆ ಈ ವಿತ್ತ ವರ್ಷ 2018-19ರ ಕರ ಕಾನೂನು 2018ರ ಬಜೆಟ್‌ ಮೇರೆಗೆ ಇರುತ್ತದೆ. ಈ ಕೆಳಗಿನ ಪಟ್ಟಿ ಬಜೆಟ್‌-2018 ಅನ್ನು ಅನುಸರಿಸಿ ತಯಾರಿಸಲಾಗಿದೆ. ಹಾಗಾಗಿ ಈ ವರ್ಷದ ಕರ ಉಳಿತಾಯಕ್ಕೆ ಮೊತ್ತ ಮೊದಲನೆಯದಾಗಿ ನೀವು ಈ ಕೆಳಗಿನ ವಿಚಾರಗಳಲ್ಲಿ ಮಾಡಿದ ಖರ್ಚು/ಹೂಡಿಕೆ ಏನಾದರೂ ಇವೆಯೇ ಎನ್ನುವುದನ್ನು ಹಂತ ಹಂತವಾಗಿ ಪರಿಶೀಲಿಸಿ ಪಟ್ಟಿ ಮಾಡಿಕೊಳ್ಳಿ.

1. ಸ್ಟಾಂಡರ್ಡ್‌ ಡಿಡಕ್ಷನ್‌ 
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನ್ಶನ್‌ ಮೊತ್ತದಿಂದ ರೂ. 40,000 ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ.

2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್‌ 24/ಸೆಕ್ಷನ್‌ 80EE) 
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ಒಟ್ಟು ರೂ. 2 ಲಕ್ಷದವರೆಗೆ ಸ್ವಂತ ಅಥವಾ ಬಾಡಿಗೆ ನೀಡಿರುವ ಮನೆಯ ಮೇಲೆ ಮಾಡಿದ ಗೃಹಸಾಲದ ಬಡ್ಡಿಯನ್ನು Income from House property  ಎಂಬ ಹೆಸರಿನಲ್ಲಿ ಕಳೆಯಬಹುದಾಗಿದೆ. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್‌ ಟ್ಯಾಕ್ಸ್‌ ಹಾಗೂ ಮತ್ತು ಬಾಡಿಗೆಯ ಶೇ.30 ವಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು. 

ಇದಲ್ಲದೆ, ಸೆಕ್ಷನ್‌ 80EE ಅನುಸಾರ ತಮ್ಮ ಪ್ರಪ್ರಥಮ ಮನೆಗಾಗಿ ಹಿಂದೊಮ್ಮೆ 2016-17 ಅವಧಿಯಲ್ಲಿ ಸಾಲ ಮಾಡಿದ್ದಲ್ಲಿ ಅದರ ಬಡ್ಡಿಯ ಮರುಪಾವತಿಗಾಗಿ ವಾರ್ಷಿಕ ರೂ. 50,000ವರೆಗೆ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಮನೆಯ ಒಟ್ಟು ವೆಚ್ಚ ರೂ. 50 ಲಕ್ಷ ಮಿತಿಯೊಳಗೆ ಹಾಗೂ ಸಾಲದ ಒಟ್ಟು ಮೊತ್ತ ರೂ. 35 ಲಕ್ಷದ ಮಿತಿಯೊಳಗೆ ಇದ್ದಿರಬೇಕು. ಈ ಸೌಲಭ್ಯ ಎಪ್ರಿಲ್‌ 1, 2017 ಬಳಿಕ ಮಾಡಿದ ಗೃಹ ಸಾಲಕ್ಕೆ ಲಭ್ಯವಿಲ್ಲ. 

3. ಎನ್‌.ಪಿ.ಎಸ್‌/ಅಟಲ್‌ ಪೆನ್ಶನ್‌ (ಸೆಕ್ಷನ್‌ 80CCD(1b) 
ಎನ್‌.ಪಿ.ಎಸ್‌ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್‌.ಪಿ.ಎಸ್‌ ದೇಣಿಗೆ ಸೆಕ್ಷನ್‌ 80ಇಅಡಿಯಲ್ಲಿ PPF, NSC, ELSS, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಒಟ್ಟಿಗೆ ಬರುತ್ತದೆ. ಅದನ್ನು ಆಮೇಲೆ ನೋಡೋಣ. ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್‌ 80 CCD(1b) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ. 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರ ವಿನಾಯಿತಿ ಲಭ್ಯ. ಹಾಗಾಗಿ ಮೊತ್ತ ಮೊದಲು ಎನ್‌.ಪಿ.ಎಸ್‌ ಹೂಡಿಕೆಯನ್ನು 80 CCD(1b) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಇ ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್‌.ಪಿ.ಎಸ್‌ ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80CCD(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ) 

4. ಮೆಡಿಕಲ್‌ ಇನ್ಶೂರೆನ್ಸ್‌ (ಸೆಕ್ಷನ್‌ 80D) 
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್‌ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000 ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ. 50,000 ಆಗಿದೆ. 80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.
 
5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್‌ 80 DD)

ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್‌ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರ ವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ.40-ಶೇ.80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ. 1,25,000 ಆಗಿರುತ್ತದೆ. 

6. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80DDB) 
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 1,00,000. 

7. ಶೈಕ್ಷಣಿಕ ಸಾಲದ ಬಡ್ಡಿ (ಸೆಕ್ಷನ್‌ 80 E) 
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ಇಲ್ಲಿ ಅಸಲಿನ ಮರುಪಾವತಿಗೆ ವಿನಾಯಿತಿ ಇಲ್ಲ.

8. ಡೊನೇಶನ್‌ (ಸೆಕ್ಷನ್‌ 80 G) 
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ.50 ಅಥವಾ ಶೇ.100 – ಸರಕಾರ ನಿಗದಿಪಡಿಸಿದಂತೆ ಸಂಬಳದ ಶೇ.10 ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. 

9. ಬಾಡಿಗೆ ರಿಯಾಯಿತಿ (ಸೆಕ್ಷನ್‌ 80 GG) 
ಸಂಬಳ ಮೂಲಕ ಎಚ್‌ಆರ್‌ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ. 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ. 

10.ಸ್ವಂತ ಅಂಗವೈಕಲ್ಯ (ಸೆಕ್ಷನ್‌ 80 U)
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ. 1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ. 

ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಅದಾದ ಮೇಲೆ ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್‌80ಸಿ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ. 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು

11.ಸೆಕ್ಷನ್‌ 80 C/CCC/CCD
ಈ 3 ಸೆಕ್ಷನ್‌ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ)
– ಎಂಪ್ಲಾಯೀಸ್‌ ಫ್ರಾವಿಡೆಂಟ್‌ ಫ‌ಂಡ್‌ (ಇಪಿಎಸ್‌) – ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ ವಾಲಂಟರಿಯಾಗಿ ಪಿಎಫ್ಗೆ ನೀಡಿದ್ದು ಸಹಿತ (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ, ಅದು ಪ್ರತ್ಯೇಕ)
– ಸ್ವಂತ, ಬಾಳಸಂಗಾತಿ, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ -ವಿಮಾ ಮೊತ್ತದ ಶೇ.10 ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಸರಿ ಸುಮಾರು ಜೀವ ವಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ. 
– ಗರಿಷ್ಟ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್‌ ಫೀ. (ಬೇರೆ ಯಾವುದೇ ಫೀಸ್‌ ಆಗಲ್ಲ, ಟ್ಯೂಶನ್‌ ಫೀ ಹೆಸರಿನಲ್ಲಿರುವ ಫೀ ಮಾತ್ರ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ…ಐ) ಅಸಲು ಭಾಗ (ಬಡ್ಡಿ ಬಿಟ್ಟು) 
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್‌, ಸ್ಟಾಂಪ್‌ಡ್ನೂಟಿ ವೆಚ್ಚಗಳು. 
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ ದೇಣಿಗೆ 
– ಅಂಚೆ ಕಚೇರಿಯ ಎನ್‌ಎಸ್‌ಸಿ ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌ (ELSS) ನಾಮಾಂಕಿತ ಮ್ಯೂಚುವಲ್‌ ಫ‌ಂಡ್‌. ಇಲ್ಲಿ ಯಾವುದೇ ಈಕ್ವಿಟಿ ಫ‌ಂಡುಗಳು ಬರುವುದಿಲ್ಲ. ಇವುಗಳು ಇಎಲ…ಎಸ್‌ಎಸ್‌ ಅಥವಾ ಟ್ಯಾಕ್ಸ್‌ ಸೇವರ್‌ ಎಂಬ ನಿರ್ದಿಷ್ಟ ಲೇಬಲ್‌ಗ‌ಳೊಂದಿಗೆ ಬಿಡುಗಡೆಯಾಗುತ್ತವೆ. 
– ಮ್ಯೂಚುವಲ್‌ ಫ‌ಂಡ್‌ಗಳ ಯುನಿಟ್‌ ಲಿಂಕ್ಡ್ ಪೆನ್ಶನ್‌ ಪ್ಲಾನ್‌ಗಳು (UTI & RBP, Franklin Templeton & TIPP and Reliance Retirement Fund)
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರ ನೋಂದಾಯಿತ ಎಫ್ಡಿ: ಇಲ್ಲೂ ಕೂಡಾ 80ಇ ಸೆಕ್ಷನ್‌ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್‌ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್‌-ಇನ್‌ ಇರುತ್ತದೆ. 
– ಅಂಚೆ ಕಚೇರಿಯ 5 ವರ್ಷದ ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ (SCSS)ನಲ್ಲಿ ಮಾಡಿದ ಹೂಡಿಕೆ. 
– ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ. 
– ಎಲ್ಲೆçಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್‌ ಪ್ಲಾನುಗಳು (ಸೆಕ್ಷನ್‌ 80CCC)
– ನ್ಯಾಶನಲ್‌ ಪೆನ್ಶನ್‌ ಸ್ಕೀಂ (NPS)/ಅಟಲ್‌ ಪೆನ್ಶನ್‌ (ಸೆಕ್ಷನ್‌ 80CCD): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ -80CCD(1) ಮತ್ತು 80CCD(1b). ಮೊದಲೇ ಹೇಳಿದಂತೆ, ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80ಇಇಈ(1b) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ. 80CCD(1) ಸೆಕ್ಷನ್‌ ಉಳಿದ 80E ಸೆಕ್ಷನ್‌ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80CCD(1b) ಮಿತಿ ಮೀರಿದರೆ ಉಳಿದ ಮೊತ್ತವನ್ನು ಇಲ್ಲಿ 80CCD(1) ಅಡಿಯಲ್ಲಿ ತೆಗೆದುಕೊಳ್ಳಬಹುದು. 

12. ಎಸ್‌ಬಿ/ಎಫ್ಡಿ/ಆರ್‌ಡಿ ಬಡ್ಡಿಗೆ ಕರ ವಿನಾಯಿತಿ (ಸೆಕ್ಷನ್‌ 80 TTA/TTB): ಸೆಕ್ಷನ್‌ 80TTA ಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಸೆಕ್ಷನ್‌ 80TTA ಅನುಸಾರ ಕರ ವಿನಾಯಿತಿ ಇದೆ. 

ಅಲ್ಲದೆ, ಕೇವಲ ಹಿರಿಯನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80TTB ಅನುಸಾರ ರೂ. 50,000ದ ವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಖಖಅ ಅನ್ವಯವಾಗುವುದಿಲ್ಲ). ಈ ರೂ. 50,000 ದಲ್ಲಿ ಎಸ್‌ಬಿ ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್‌ಡಿಗಳ ಬಡ್ಡಿಯನ್ನೂ ಈಗ ಸೇರಿಸಬಹುದಾಗಿದೆ. 

– ಪ್ರತಿ ಸ್ಲಾಬಿನವರೂ ಅದರ ಹಿಂದಿನ ಸ್ಲಾಬಿನ ಕರ ಸಹಿತ ಒಟ್ಟು ಕರ ಕಟ್ಟಬೇಕು.
– ರೂ. 3.5 ಲಕ್ಷದ ಕೆಳಗಿನ ಆದಾಯ ಇರುವವರಿಗೆ ಸೆಕ್ಷನ್‌ 87ಅ ಅನುಸಾರ ಕಟ್ಟುವ ಕರದಲ್ಲಿ ರೂ. 2,500ರಷ್ಟು ಕರ ವಿನಾಯಿತಿ ಇದೆ. 
– ಆದಾಯ ರೂ. 50 ಲಕ್ಷ ಮೀರಿದರೆ ಶೇ. 10 ಸರ್ಚಾರ್ಜ್‌ ಹಾಗೂ ರೂ. 1 ಕೋಟಿ ಮೀರಿದರೆ ಶೇ.15 ಸರ್ಚಾರ್ಜ್‌
– ಕರ ಮತ್ತು ಸರ್ಚಾರ್ಜ್‌ ಮೇಲೆ ಶೇ.4 ಎಜುಕೇಶನ್‌ ಸೆಸ್‌. 

ಟಾಪ್ ನ್ಯೂಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.