CONNECT WITH US  

ಮನೆಯ ಅತಿ ಸೂಕ್ಷ್ಮ, ಸಂವೇದನಾಶೀಲ ಸ್ಥಳ ಯಾವುದು ಗೊತ್ತಾ?

ನಿಮ್ಮ ವಾಸ್ತು ರೀತಿಯಾಗಿ, ಸರಿಯಾಗಿ ಮಾಡಿಕೊಳ್ಳುವುದು ಒಂದು ಕ್ರಮ. ಮೊತ್ತ ಮೊದಲಾಗಿ ವಾಸ್ತು ಶಾಸ್ತ್ರದ ಸಕಲ ವೈಶಿಷ್ಠಗಳನ್ನು ಅಕ್ಷರಶಃ ಪರಿಪಾಲಿಸಲು ಅಸಾಧ್ಯವಾಗಿದೆ. 

ಆಧುನಿಕವಾದ ಈ ಕಾಲದಲ್ಲಿ ಎಂಬುದ ನಿಮಗೆ ತಿಳಿದೇ ಇದೆ. ಆದರೆ ಪರಿಷ್ಕರಿಸಿಕೊಳ್ಳಬಲ್ಲ ಇನ್ನೊಂದು ಅಂಶ ನಮ್ಮೊಳಗೇ ಇರುವ ಒಂದು ಆತ್ಮಸಾಕ್ಷಿಯ ಆವರಣಗಳನ್ನು ಅದು ಧೈರ್ಯ ಮತ್ತು ನಮ್ಮ ಮನುಷ್ಯತ್ವದ ಘಟಕಗಳ ಪರಿಷ್ಕರಣಗಳಿಂದ ಸಾಧ್ಯವಾಗಲೂ ಅವಕಾಶ ಪಡೆದಿದೆ. ಪಂಚಭೂತಗಳು ಶವವನ್ನೇ ರೂಪಿಸಿದೆ. ಅದೂ ನಮ್ಮನ್ನು ರೂಪಿಸಿದೆ. ನಮ್ಮ ಬಾಹ್ಯ ಹಾಗೂ ಆಂತರ್ಯದ ಅತಿಸೂಕ್ಷ್ಮ ಕಣಗಳು ಕೋಶಗಳು ಚೈತನ್ಯವನ್ನು ಪಡೆಯುವ, ನಿಷ್ಕ್ರಿಯಗೊಳ್ಳುವ ವಿಚಾರಗಳು ಪಂಚಭೂತಗಳಿಂದಲೇ ಚಾಲನೆ ಪಡೆಯುತ್ತದೆ. 

ನಮ್ಮ ಸುತ್ತಲೂ ಅಲೌಕಿಕವಾದ ಒಂದು ಪ್ರಭಾವಳಿ ಇದೆ. ಅದು ನಮ್ಮನ್ನು ನಮ್ಮ ವ್ಯಕ್ತಿತ್ವ, ವರ್ಚಸ್ಸು, ಶಕ್ತಿ, ಲವಲವಿಕೆಗಳನ್ನು ಕೊಡುವ ಕಳೆಯುವ ಮೂಲಕ ನಿಯಂತ್ರಿಸುತ್ತದೆ. ಕುಶಲಮತಿಯಾದವನು ತನ್ನ ಜಾnನದಿಂದ ತನ್ನ ಮತ್ತು ಸುತ್ತಲಿನ ಒಳಿತುಗಳಿಗೆ ಕಾರಣನಾಗಬಹುದು. ಆದರೆ ಜಾnನಿಗಳಾಗಿಯೂ ಬುದ್ಧಿಯ ಪ್ರಯೋಜನ ಪಡೆಯಲಾಗದೆ ಜಡವಾಗಿರುವ ಎಷ್ಟೋ ಜನರಿದ್ದಾರೆ. ಜಾnನವನ್ನೂ ದುಬುìದ್ಧಿಯನ್ನು ಸೂಕ್ಷ್ಮವಾದ ಒಂದು ಕೂದಲೆಳೆಯ  ಅಂತರ ಒಂದು ಇನ್ನೊಂದಕ್ಕಿಂತ ಬೇರೆಯಾಗುವಂತೆ ಮಾಡುತ್ತದೆ.
ಹೀಗಾಗಿ ಜಾnನವಿದ್ದರೂ ದುಬುìದ್ಧಿಯಿಂದ ಸುತ್ತಲ ಜನಜೀವನ ಸ್ವಕೀಯರ ವಿಶ್ವಶಾಂತಿಗೆ ಕಾರಣರಾಗುತ್ತಾರೆ. ಭಯೋತ್ಪಾದಕರೂ, ಭ್ರಷ್ಟರೂ, ವಿಘ್ನಸಂತೋಷಿಗಳು ಪರ ಹಿಂಸಾ ನಿರತರಾಗಿ ಸಂತೋಷಪಡುವವರು, ವಕ್ರವಾಗೇ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವವರು, ಪರರ ತಪ್ಪುಗಳನ್ನೇ ಹುಡುಕುತ್ತ ಭೂತಗನ್ನಡಿಯನ್ನು ಕೈಗಂಟಿಸಿಕೊಂಡವರು, ಇನ್ನೊಬ್ಬರ ತೇಜೋವಧೆಗಾಗಿ ಸೂಕ್ಷ್ಮವಾಗಿ ವರ್ತಿಸುವವರು, ಬ್ಲಾಕ್‌ ಮೇಲ್‌ ಮಾಡುತ್ತ ಬೇಳೆ ಬೇಯಿಸಿಕೊಳ್ಳುವವರು ಇತ್ಯಾದಿ ಇತ್ಯಾದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ಸಂಧಿಸುತ್ತಲೇ ಇರುತ್ತೇವೆ. ಇದು ಎಲ್ಲರ ಅನುಭವ.

ಆದರೆ ಒಂದು ತಿಳಿಯಿರಿ ಈ ಎಲ್ಲಾ ದೋಷಗಳನ್ನು ಹೊಂದಿದ ವ್ಯಕ್ತಿಯ ಆತ್ಮ ಎಂದೂ ಸುಖದಲ್ಲಿ ಇರಲಾರದು. ಯಾಕೆಂದರೆ ಆನೆಗೆ ಸಿಂಹ ಉಂಟು. ಹಾಗೆ ಗರುಡಾ ಉಂಟು ಎಂಬಂತೆ ಈ ರೀತಿಯ ದರಿದ್ರಗಳನ್ನು ಮೀರಿಸುವ ಈ ದರಿದ್ರಗಳಿಗೆ ಶಿಖರಪ್ರಾಯವಾಗುವ ಅತಿದರಿದ್ರಗಳು ಸಿಗುತ್ತಾರೆ. ಅಪರೂಪಕ್ಕೆ ಶಿಷ್ಟರ ಬಲವೇ ಇಂತ ದುಷ್ಟ ಪಿಡುಗುಗಳನ್ನು ಸಕಾರಾತ್ಮಕವಾಗಿ ಬಗ್ಗು ಬಡಿಯುತ್ತದೆ. ಈ ನಮ್ಮ ಪ್ರಭಾವಳಿಯು ಪ್ರತಿಯೊಬ್ಬನಲ್ಲೂ ಪರಿಶುದ್ಧವಾಗಿಯೇ ಇದ್ದು ಅರಿಷಡ್ವರ್ಗಗಳು ಪ್ರಭಾವಳಿಯನ್ನು ಕೆಡಿಸುತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತದೆ. ಮನೆಯ ವಾಸ್ತು ದೋಷವು ನಮ್ಮ ನಾಶಕ್ಕೆ ಪ್ರಧಾನವಾದ ವಂತಿಗೆಯನ್ನು ಕೊಡಲಾರದು. ನೈತಿಕವಾದ ಎತ್ತರವನ್ನು ನಾವು ಸ್ಪಷ್ಟವಾಗಿ ಪಡೆದೆವಾದರೆ ವಾಸ್ತುವಿನ ದೋಷ ಗೌಣವಾಗುತ್ತದೆ. ಆದರೆ ಮನೆಯ ಸ್ವತ್ಛತೆ ಪರಿಶುದ್ಧತೆ ವಸ್ತುಗಳ ಚೆಲ್ಲಾಪಿಲ್ಲಿತನ ತಡೆಯಿರಿ. ಬೆಳಕೇ ಇರದಿದ್ದಲ್ಲಿ ಸೂಕ್ತವಾದ ಬಲುºಗಳನ್ನು ಉರಿಸಿ. ಉರಿಬಿಸಿಲು ಪೂರ್ವದಿಂದ ಕಣ್ಣುಕುಕ್ಕುವ ಹಾಗೆ ಬರುವಂತಿದ್ದರೂ ಪೂರ್ವದ ಬಾಗಿಲು ಶುಭಕರವಾಗಿರುವುದಿಲ್ಲ. ಸಂಡಾಸು, ಸ್ನಾನಗೃಹ, ಶುಚಿಯಾಗಿರಲಿ. ಅಡುಗೆಯ ಮನೆ ಸರಳವಾಗಿ ಪರಿಶುದ್ಧವಾಗಿರಲಿ. ಮನಸ್ಸು ನಿರಾಳವಾಗಿರಲು ಬಿಡಿ. 

ನಿಮ್ಮ ದೇಹದ ಸುತ್ತಲಿನ ಪ್ರಭಾವಳಿಗೆ ಆಗ ತ್ರಿಮೂರ್ತಿ ತತ್ವಗಳು ಒಗ್ಗೂಡಿ ಪಂಚಭೂತಗಳನ್ನು ನಿಮ್ಮ ಪಾಲಿನ ಕಾಯುವ ಶಕ್ತಿಯನ್ನಾಗಿಸುತ್ತದೆ. ಮನೆಯೊಳಗೆಯೇ ಒಂದು ಪ್ರಭಾವಳಿ ಮನೆ ಮಾಡಿರುತ್ತದೆ. ನಿಮ್ಮ ದೇಹದ ಸುತ್ತಲಿನ ಪ್ರಭಾವಳಿಗೆ ಅದು ಕೊಂಡಿ ಕೂಡಿಸಿಕೊಂಡಾಗ ಜೀವನದ ಸಾಫ‌ಲ್ಯತೆಗೆ ದಾರಿ ತಂತಾನೆ ಸಿಗಲು ಅವಕಾಶ ಸಾಧ್ಯ.

ಮನೆಯ ಅತಿ ಸೂಕ್ಷ್ಮ ಸಂವೇದನಾಶಿಲ ಸ್ಥಳ ಗುರುತಿಸಿಕೊಳ್ಳಿ. ಅದು ನಿಮ್ಮ ಮೇಧಾಶಕ್ತಿಯನ್ನು ಸಂವರ್ಧನೆಗಳಿಗೆ ಕಾರಣ ಮಾಡಿಕೊಡುತ್ತದೆ. ಮುಖ್ಯವಾದುದನ್ನು ಅಲ್ಲಿಯೇ ನಿಷ್ಕರ್ಷಿಸಿ. ಆ ಸ್ಥಳದಲ್ಲಿ ಮನೆಮಂದಿಯೊಂದಿಗೆ ಒಳಿತುಗಳ ಬಗ್ಗೆ ಚರ್ಚಿಸಿ. ನಿಮ್ಮ ಒತ್ತಡಗಳನ್ನು ಒಮ್ಮೆಗೇ ತಿಳಿಗೊಳಿಸಿಕೊಳ್ಳುವ ವರ್ತಮಾನ ಅವಕಾಶ ನೀಡದು. ಚರ್ಚಿಸಬೇಕಾದ ಒತ್ತಡದ ವಿಚಾರಗಳನ್ನು ಒಂದೆಡೆ ಪಟ್ಟಿ ಮಾಡಿಕೊಳ್ಳಿ. ಸಂಬಂಧಿಸದವರ ಜೊತೆ ಅವರೂ ನಿರಾಳವಾಗಿರುವಾಗಿ ಚರ್ಚಿಸಿ. ಇದರಿಂದ ನಿಮ್ಮ ಕೆಲಸಗಳು ಹಗುರವಾಗುತ್ತದೆ. 

Trending videos

Back to Top