CONNECT WITH US  

ಜ್ಞಾನಕ್ಕೆ ಉತ್ತರ ದಿಕ್ಕು ಉತ್ತಮ

ಭಾರತೀಯ ಮೀಮಾಂಸೆಯು ಲೌಕಿಕವನ್ನು ಅಲೌಕಿಕವನ್ನು ಒಟ್ಟಂದದಲ್ಲಿ ಸಮಾನ ದೃಷ್ಟಿಯಲ್ಲೇ ನೋಡಿದೆ. ಬದುಕನ್ನು ಶೂನ್ಯ ಎನ್ನುವುದಿಲ್ಲ. ಭಾವನಾಮಯವಾದ ಜಗದ 
ಯಾತ್ರೆಯಲ್ಲಿ ಅಧ್ಯಾತ್ಮವನ್ನು ಬೆರೆಸಿಕೊಂಡು ನಿನ್ನೊಳಗೇ ಪರಮಾತ್ಮನನ್ನು ಹುಡುಕು ಎಂದೂ ಹೇಳುತ್ತದೆ. ನಿನ್ನಿಂದ ಅನ್ಯನಾದ ಪರಮಾತ್ಮನಲ್ಲಿ ಶರಣಾಗುವ ವಿನಯವನ್ನು ತೋರು ಎಂದು ಬೋಧಿಸುತ್ತದೆ. ಮಂಗಳಮಯನಾಗಿ ಮಂಗಳಪ್ರದನನಾದವನ್ನು ಹುಡುಕಿಕೊಂಡಿರು ಎಂದು ಬೋಧಿಸುತ್ತದೆ. ಒಂದು ಎಲೆಯ ಹಸಿರು ಉದುರಿ ಬೀಳುವ ಮುನ್ನ ಅಕಸ್ಮಾತ್ತಾಗಿ ಹಸುವಿನ ಆಹಾರವಾಗಿಯೂ ಮಾಯವಾಗಿಬಿಡಬಹುದು. ಹೀಗಾಗಿ ಒಂದು ಗೊಂದಲ ಇದೇ ಇರುತ್ತದೆ. ಯಾವುದು ತನ್ನ ಕಾರ್ಯವನ್ನು ಪೂರ್ತಿ ಮುಗಿಸಿ ಉದುರುತ್ತದೆ. ಮುಗಿಸುವ ಮುನ್ನವೇ ಯಾವುದು ಮರೆಯಾಗುತ್ತದೆ ಎಂಬ ಗೊಂದಲಕ್ಕೆ ಉತ್ತರವಿಲ್ಲ. ಇದನ್ನು ಅದೃಷ್ಟ ಎಂದು ಕರೆದರು. ಅದೃಷ್ಟದ ಬೇರುಗಳು ಅಧ್ಯಾತ್ಮದ ಚಿಂತನೆಯಿಂದಲೇ ಕೆಲವಷ್ಟು ಉತ್ತರಗಳನ್ನು ತಡೆಯಬಹುದು. ಜಾnನದಿಂದಾಗಿ ಆಧ್ಯಾತ್ಮದ ಬತ್ತಿಗೆ ಬೆಳಕಿನ ಸೌಭಾಗ್ಯ ಒದಗಿಬರಬಹುದು. ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆದರೆ ಕತ್ತಲು ಏಕೆ? ಹೇಗೆ? ಎಲ್ಲಿಂದ ಬಂತು. ಬೆಳಕು ಕತ್ತಲಿಗೆ ಪ್ರತಿರೋಧ ತರುವ ತನ್ನ ಹುಟ್ಟನ್ನು ಹೇಗೆ ಕಂಡುಕೊಂಡಿತು ಹೀಗೆ ಆಳವಾಗಿ ಇಳಿಯುತ್ತ ಹೊರಟರೆ ಎಲ್ಲವೂ ಮತ್ತೆ ಪ್ರಶ್ನೆಗಳೆ. 

ಉತ್ತರಗಳನ್ನು ಕೆಲವುಸಲ ನೀಡಬಹುದೇ ವಿನಾ ಪ್ರತಿಯೊಂದಕ್ಕೂ ಉತ್ತರವಿಲ್ಲ ಹೀಗಾಗಿ ಅದೃಷ್ಟವನ್ನು ಮನಗಾಣಲೇ ಬೇಕು. ಏನೋ ಒಂದು ನಮ್ಮನ್ನು ಮೀರಿ ಇದೆಯೆಂಬುದು ನಂಬಬೇಕು. ದಾಡ್ಯìತೆ ಇದ್ದರೆ ನಂಬದೆ ಇರಿ. ಪ್ರಧಾನವಾಗಿ ಮನೆಯಲ್ಲಿ ಮನಸ್ಸು ಕಂಡ 
ರೀತಿಯಲ್ಲಿ ದೇವರುಗಳನ್ನು, ದೇವರುಗಳ ಪಟವನ್ನು ಇಡಬೇಡಿ. ದೇವರು ಎನ್ನುವುದು ನಮ್ಮನ್ನು ಒಂದು ಶಕ್ತಿಯ ಎದುರು ಬಾಗುವ ವಿನಯಕ್ಕಾಗಿ ಇರಬೇಕಾದದ್ದು. ಕುಳಿತಲ್ಲಿ, ನಿಂತಲ್ಲಿ, ಕಂಡಕಂಡಲ್ಲಿ ದೇವರನ್ನು ಪ್ರತಿಷ್ಠಾಪಿಸುತ್ತಾ ಹೋದರೆ ತುಂಬಾ ಅಪಾಯಕರವಾದ ರೀತಿಯಲ್ಲಿ ನೀವು ಕರಗಿಹೋಗುತ್ತೀರಿ. ಬೌದ್ಧಿಕ ವಿಕಸನಕ್ಕೆ  ಅಡೆತಡೆ ಉಂಟಾಗುತ್ತದೆ. ಜಾnನವನ್ನು ವಿಸ್ತರಿಸಿಕೊಳ್ಳಿ. ದೇವರನ್ನು ವಿಸ್ತರಿಸಿಕೊಳ್ಳಲು ಮುಂದಾಗದಿರಿ. ದೇವರು ನಿಮ್ಮಿಂದ ವಿಸ್ತಾರಗೊಳ್ಳಬೇಕಾಗಿಲ್ಲ. ಜಾnನದಿಂದ ಹೊಸಹೊಸ ಹೊಳಹುಗಳು ಸಿಗುತ್ತವೆ. ಜೀವನವನ್ನು ಸರಳವಾಗಿಸಿಕೊಳ್ಳಲಿಕ್ಕೆ ನಾಗರೀಕತೆಯ ಸಂಪನ್ನತೆಗೆ ವೃದ್ಧಿ ತರುತ್ತದೆ. 

ಈಶಾನ್ಯ ದಿಕ್ಕು ಜಾnನಕ್ಕೆ ಹಾಗೂ ಓದು ಕಲಿಕೆಗಳಿಗೆ ತನ್ನನ್ನು ಸಮೃದ್ಧಿಯ ವೇದಿಕೆಯನ್ನಾಗಿ ರೂಪಿಸುವ ಸಿದ್ಧಿ ಪಡೆದಿದೆ. ಮಣ್ಣು ಇದರ ಮೂಲ ವಸ್ತು. ಪ್ರತಿದಿಕ್ಕುಗಳಲ್ಲೂ ಮೂಲವಸ್ತು ಮಣ್ಣೇ ಇದ್ದರೂ ಬೆಂಕಿತತ್ವ, ವಾಯುತತ್ವ, ಜಲತತ್ವಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಸ್ವಾಮ್ಯವನ್ನು ಮೆರೆಯುತ್ತದೆ. ಅಲ್ಲಿ ಈಶಾನ್ಯ ದಿಕ್ಕಿನಲ್ಲಿ ಚಿಂತನೆಗೆ ಅಧ್ಯಯನಕ್ಕೆ ದೈವ ಸಂಬಂಧಿ ಅನುಷ್ಠಾನಗಳಿಗೆ ಸೂಕ್ತವಾಗಿದೆ. ನೀರು, ಬೆಂಕಿ ಅಥವಾ ಗಾಳಿಯ ಪ್ರಕ್ಷುಬ್ಧತೆಗಳಿಗೆ ಈ ದಿಕ್ಕಿನಲ್ಲಿ ಅವಕಾಶ ಇರುವುದಿಲ್ಲ. ಆನೆಯ ಚಿಕ್ಕ ಶಿಲ್ಪವೊಂದು ಇದ್ದರೆ ಈಶಾನ್ಯ ದಿಕ್ಕಿನಲ್ಲಿ ಮಕ್ಕಳು ಅಭ್ಯಾಸ ಅಧ್ಯಯನ ನಡೆಸಬಹುದು.
ಆನೆಯು ಬೃಹತ್‌ ನಿಲುವು ಗಟ್ಟಿ ಬಲವುಳ್ಳ ಪ್ರಾಣಿ ಎಂಬ ನಂಬಿಕೆ ಮಕ್ಕಳಲ್ಲಿ ಒಂದು ಸುರಕ್ಷಿತ ವಲಯವನ್ನು ಪ್ರಜ್ಞೆಯ ಪರಿಧಿಯಲ್ಲಿ ನಿರ್ಮಿಸುತ್ತದೆ. ಎಲ್ಲವನ್ನೂ ತಿಳಿದ ವ್ಯಾಸ ಮಹರ್ಷಿಗಳು ಆನೆಯ ಮುಖದ ಗಣಪನಿಂದಲೇ ಮಹಾಭಾರತದ ಮಹಾಕಾವ್ಯದ ರಚನೆಯನ್ನು ಮಾಡಿಸಿದರು. ಕಥೆಯ ಪ್ರಕಾರ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದವರ ತಲೆ ಕತ್ತರಿಸಿ ತಂದುಕೊಡಿ ಎಂದು ಶಿವನು ಪ್ರಲಾಪಿಸಿದ ಕತೆ ಎಲ್ಲರಿಗೂ ತಿಳಿದಿದ್ದೆ. ಉತ್ತರ ದಿಕ್ಕಿಗೆ ಮಲಗಿದ ಒಂದು ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಲಾಯ್ತು.

ಜಾnನಕ್ಕೆ ಹೀಗಾಗಿ ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಅಂದರೆ ಚಿಂತನೆಯ ಸಂವರ್ಧನೆಗೆ ಎಚ್ಚರವಾಗಿದ್ದಾಗ ಉತ್ತರದಿಕ್ಕು ಶ್ರೇಷ್ಠ. ಮಲಗಿರುವಾಗ ಬೌದ್ಧಿಕ ಚಿಂತನೆಗೆ ವೇದಿಕೆಯಾದ ತಲೆ ಉತ್ತರದಿಕ್ಕಿನಲ್ಲಿ ಸ್ಥಗಿತವಾಗಕೂಡದು. ಗಣಪತಿಯ ಆನೆಯ ಮುಖದ ಕಥೆಯನ್ನೇ ಒಂದು ಆಧಾರಗೊಳಿಸಬೇಕಾಗಿಲ್ಲ. ಇದೊಂದು ದಂತ ಕಥೆ ಇದ್ದರೂ ಉತ್ತರ ದಿಕ್ಕು ಜಾnನಕ್ಕೆ ಕುಂಭ ಎಂಬುದು ನಿಸ್ಸಂಶಯ. ಒಟ್ಟಿನಲ್ಲಿ ಪರರದೆ ಇಹವಲ್ಲ. ಇಹದ ಸಾûಾತ್ಕಾರಕ್ಕೆ ಪದಾರ್ಥಚಿಂತನೆಯ ಅವಶ್ಯಕತೆ ಇದೆ. ಹಿಡಿಯಲಾಗದ್ದನ್ನು ಹಿಡಿಯುವ ಅನನ್ಯತೆಗೆ ಜಾnನವೇ ಆಧಾರ. ಜಾnನವು ಶೂನ್ಯದಿಂದ ಬರಲಾರದು. ಅದು ಅವನ ಸಂಕಲ್ಪ, ಅದೃಷ್ಟ. ಅದೃಷ್ಠದ ಸಿದ್ಧಿಗಾಗಿ ಮನೆಯ ಈಶಾನ್ಯದ ಶಿಸ್ತು ಜಾರಿಗೆ, ಮಂಥನಕ್ಕೆ ದೊರಕಲಿ.


Trending videos

Back to Top