CONNECT WITH US  

ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಪೀಡೆಗೆ ಕಾರಣವಾಗುವ ದಿಕ್ಕು, ದಕ್ಷಿಣ

ನೆನಪಿಡಿ. ದಕ್ಷಿಣದಿಕ್ಕು ಮಾನವನ ಜೀವನದ ಪರಿಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿಹಾಕುತ್ತದೆ ಎಂದು ಅರ್ಥವಲ್ಲ. ಒಟ್ಟಿನಲ್ಲಿ ಈ ದಿಕ್ಕಿನ ದೋಷ ಶನಿ, ರಾಹು, ಕುಜ, ಕೇತು ಅಥವಾ ಸೂರ್ಯರ ವೈಪರೀತ್ಯಗಳು ಆಯಾ ವ್ಯಕ್ತಿಯ ಮುಖ್ಯ ವೇದಿಕೆಯಲ್ಲಿ ಕೆಟ್ಟ ಹೆಸರನ್ನು ಆರೋಗ್ಯದ ವೈಪರೀತ್ಯಗಳನ್ನು ದಿಢೀರನೆ ಸಲ್ಲದ ಕಾರ್ಯತಂತ್ರಗಳನ್ನು ಸಂಯೋಜಿಸುವ ದುಬುದ್ಧಿಯನ್ನು, ಯುದ್ಧದಂತ ಅನಿಷ್ಟಗಳಿಗೆ ಮುಂದಾಗುವ ನಿರ್ಣಯಗಳನ್ನು ಪರಿಣಾಮಗಳ ಯೋಚನೆಗಳಿರದೆ ಸರ್ರನೆ ಕಾರ್ಯೋನ್ಮುಖರಾಗುವ ಅವಸರಗಳನ್ನು ಕೈಗೆಟುಕಲಾರದ ಕನಸಿನ ಗೋಪುರದ ಶಿಖರಕ್ಕೆ ಕೈಚಾಚುವುದನ್ನು, 

ನಿರಪರಾಧಿಗಳನ್ನು ಶಿಕ್ಷಿಸಿ ಕರ್ಮಗಳನ್ನು ಸುತ್ತಿಕೊಳ್ಳುವ ದುರ್ಭರತೆಗಳನ್ನು, ಭಯೋತ್ಪಾದಕ ಘಟನೆಗಳಿಗೆ ಬಲಿಯಾಗುವ ಅತಂತ್ರಗಳನ್ನು, ಮಕ್ಕಳಿಂದಲೇ ಗೋಳಿಗೆ ಸಿಲುಕುವ ಮಿಸುಕಾಟಗಳನ್ನು ಒದಗಿಸಬಹುದು. ಕಟ್ಟಡಗಳಿಗೂ ದುಷ್ಟಗ್ರಹಗಳ ಬಾಧೆಯೇ ಎಂಬ ವಿಚಾರ ಆಶ್ಚರ್ಯವಾಗಬಹುದು. ಆದರೆ ಸತ್ಯ. ಕಟ್ಟಡಗಳಿಗೂ ತೊಂದರೆ ಉದ್ಭವಿಸುತ್ತದೆ. 2001 ಸೆಪ್ಟೆಂಬರ್‌ ನಲ್ಲಿ ಉರುಳಿದ ಅಮೆರಿಕಾದ ವರ್ಲ್ಡ್ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ನೆನಪಿಸಿಕೊಳ್ಳಿ. ಕಟ್ಟಡದ ದಕ್ಷಿಣ ದಿಕ್ಕಿನ ವಾಸ್ತು ಸಂಯೋಜನೆಗಳು ಅಗ್ನಿತತ್ವಕ್ಕೆ ವೈರುಧ್ಯದಿಂದ ಕೂಡಿದ ಪ್ರಮಾಣದೊಂದಿಗೆ ಸಮತೋಲನ ತಪ್ಪಿದ್ದವು. ತಗ್ಗಿನ ಹೊರ ಆವರಣ ಕಟ್ಟಡದ ದಕ್ಷಿಣ ಭಾಗದಲ್ಲಿ ಹಿಗ್ಗಿಕೊಂಡಿತ್ತು. ಉತ್ತರ ದಿಕ್ಕಿನ ಅಮೃತ ಸ್ಪಂದನಗಳನ್ನು ಅದು ಘರ್ಷಿಸುತ್ತಲೇ ಇತ್ತು. ಹೀಗಾಗಿ ಶನೈಶ್ಚರನು ಆಗಿನ ಪ್ರಧಾನಿ ಬುಶ್‌ರ ಜನನದ ಸಂದರ್ಭದ ರಾಹುವಿನ ಜಾಗೆಗೆ ಬಂದಾಗ ಬುಶ್‌ ಅಧಿಕಾರದ ಪ್ರಥಮ ಅವಧಿಯ ಸಂದರ್ಭದಲ್ಲಿ ಅಷ್ಟಮ ಶನಿಕಾಟದ ವೇಳೆಯಲ್ಲಿ ಒಸಾಮ ಬಿನ್‌ ಲಾಡೆನ್‌ ಅಪಾಯಕಾರಿ ಯೋಜನೆ ರೂಪಿಸುವುದರಲ್ಲಿ ದಕ್ಷಿಣ ದಿಕ್ಕಿನ ದೋಷದ ಅಂಶವನ್ನು ವಾಸ್ತು ವಿಚಾರದಲ್ಲಿ ಹೊಂದಿದ್ದ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಕುಸಿದು ಬಿದ್ದು ಈ ಭಯೋತ್ಪಾದಕ ಚಟುವಟಿಕೆ ಇಷ್ಟು ದೊಡ್ಡ ಅಗಾಧ ಪರಿಣಾಮ ಹಾನಿ ನಿರ್ಮಿಸಿದಾಗ ಜಗತ್ತಿಗೇ ಭಯೋತ್ಪಾದನೆಯ ಕರಾಳ ಸ್ವರೂಪದ ರೂಪುರೇಷೆಗಳು ಯುಕ್ತವಾಗಿ ಅರ್ಥವಾದದ್ದು ಭಾರತದಲ್ಲಿ 1983ರ ಮುಂಬೈ ಸ್ಫೋಟಗಳು ಭಯೋತ್ಪಾದನೆಯ ನಿಕೃಷ್ಟ ಕ್ರೂರ ಮನಸ್ಸಿನ ಕಟ್ಟಹಾಸವಾಗಿದ್ದರೂ ವರಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳು ಬೆಂಕಿ ಹತ್ತಿ ಉರಿದದ್ದು, ಬೆಂಕಿ ಜಾÌಲೆಯ  ತಾಂಡವ ನೃತ್ಯ ನಡೆದಾಗ ಜಗತ್ತಿನ ಇತಿಹಾಸಕ್ಕೆ ಹೊಸರೂಪ ಒದಗಿ ಜಾಗತಿಕ ಹೋರಾಟದ ವ್ಯಾಖ್ಯೆ ಭಯೋತ್ಪಾದಕತೆಯ ವಿರುದ್ಧ ಹೊಸರೂಪ ಪಡೆಯಿತು. ವಾಸ್ತು ದೋಷದ ಪರಿಣಾಮವು ಒಂದು ಅವಳಿ ಕಟ್ಟಡಗಳ ಕಾರಣದಿಂದಾಗಿ ಜಾಗತಿಕ ವರ್ತಮಾನದ ತಲ್ಲಣಗಳಿಗೆ ಕಾರಣವಾಗುವ ಕ್ರಿಯೆ ಅನೂಹ್ಯ.

ನಾವು ಕಟ್ಟುವ ಕಟ್ಟಡಗಳು, ಮನೆ, ವಸತಿ, ಸಂಕೀರ್ಣ ಅಥವಾ ಏನೇ ಕಟ್ಟೋಣಗಳಿರಲಿ ಎಡವಟ್ಟಾದ ಸ್ವರೂಪದಲ್ಲಿ ಆಗ್ನೇಯ ದಿಕ್ಕು ವಿಸ್ತರಿಸಿಕೊಳ್ಳಬಾರದು. ಎಪ್ಪತ್ತರ ದಶಕದ ಹಿಂದಿ ಚಲನಚಿತ್ರರಂಗದ ಜನಪ್ರಿಯ ಸೂಪರ್‌ ಸ್ಟಾರ್‌ ತನ್ನ ಅರಮನೆಯ ಸದೃಶವಾದ ಬಂಗ್ಲಾದಲ್ಲಿ ಎಷ್ಟು ಎತ್ತರಕ್ಕೆ ಏರಿದ್ದು ಸತ್ಯವೋ ಹಾಗೇ ಇನ್ನಿಲ್ಲದ ರೀತಿಯಲ್ಲಿ ಕುಸಿದದ್ದೂ ಕೂಡಾ ಅಷ್ಟೇ ಸತ್ಯ. ಈ ಕಟ್ಟಡದ ವಿಚಾರದಲ್ಲಿವ ವಾಸ್ತು ದೋಷಗಳು ತನಗೆ ದುರ್ಭರ ದಿನಗಳನ್ನು ತಂದವು ಎಂಬುದನ್ನು ಆ ಪ್ರಸಿದ್ಧ ನಟರೇ ಅವರ ಸಂದರ್ಶನ ಒಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಪತ್ನಿಯೊಂದಿಗೆ ಹೊಂದಿಕೊಂಡು ಹೋಗಲಾರದ ಶನಿದಶಾ ಸಂದರ್ಭವೂ ಈ ನಟ ಡೈವೋರ್ಸ್‌ ಪಡೆದು ಒಂಟಿಯಾಗುವಂತಾಯ್ತು. ಅನೇಕ ರೀತಿಯ ತಾಪತ್ರಯ ಸಾಲಗಳು ಕಷ್ಟಗಳಿಗೆ ವೇದಿಕೆ ಒದಗಿಸಿತು. 

ದಕ್ಷಿಣದಿಕ್ಕು ಮೂಲಭೂತವಾಗಿ ಅಗ್ನಿಯನ್ನು ಸಂಕೇತಿಸುವ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡಿರುತ್ತದೆ. ಅಗ್ನಿಯು ಶುಭಕರನಾದಾಗ ಅವನೇ ಶನೈಶ್ಚರ. ಸ್ವರ್ಗ ಹಾಗೂ ಭೂಮಿಯನ್ನು ಕೊಂಡಿ ಕೂಡಿಸುವ ಹವ್ಯವಾಹನ. ನಮ್ಮ ಪ್ರಾರ್ಥನೆಗಳು ನಮ್ಮ ಸಮರ್ಪಣೆಗಳು ದೈವೀಕವಾದ ಅನನ್ಯ ಶಕ್ತಿ ಧಾತುವನ್ನು ಮುಟ್ಟುತ್ತದೆ. ಬೆಂಕಿ ಮುನಿದಾಗ ಅದು ಕಾಳಿYಚ್ಚು. ಅದು ಚಿತೆಯ ದಾರುಣತೆಗೆ ಕಾರಣನಾಗುವ ಸರಕು. ದಕ್ಷಿಣ ದಿಕ್ಕು ವಾಸ್ತು ದೋಷ ಹೊಂದಿದ್ದರೆ ದುರ್ಗಾದೇಯನ್ನು ನೆನೆಯಬೇಕು. ಸ್ತುತಿಸಬೇಕು. ಇದರಿಂದ ಅಗ್ನಿಭೀತಿಯ ಅಗ್ನಿ ದಾರುಣತೆಯ ಶಮನಗಳಿಗೆ ದಾರಿ ಲಭ್ಯ. ಮಲಿನತೆಗಳು ದಕ್ಷಿಣ ದಿಕ್ಕಿನಲ್ಲಿ ಬೇರೂರುವಂತೆ ಆಗದಿರಲಿ. ನಿಮ್ಮ ಪ್ರಯತ್ನ ಈ ದಿಸೆಯಲ್ಲಿ ನಡೆದುದಾದರೆ ಕೊಂಚ ಮಟ್ಟಿಗಿನ ನಿರಾಳತೆ ಸಾಧ್ಯ. 

ಅನಂತಶಾಸ್ತ್ರಿ  
ಮೊ: 8147824707

Trending videos

Back to Top