CONNECT WITH US  

ದೇವಾಲಯಗಳು ಪವಿತ್ರವಾಗಿರಲು ಏನು ಮಾಡಬೇಕು ಗೊತ್ತಾ?

ಜಲಾವೃತವಾದ ಬ್ರಹ್ಮಾಂಡವು ತದನಂತರದಲ್ಲಿ ಜಲದಿಂದಲೇ ಎಲ್ಲ ಸೃಷ್ಟಿ ಕ್ರಿಯೆ ಪೂರೈಸುತ್ತದೆ. ಜಲದಿಂದಲೇ ಸರ್ವಸ್ವವೂ, ತ್ರಿಮೂರ್ತಿಗಳು, ದೇವತೆಗಳು ದ್ವಾದಶಾದಿತ್ಯರೂ, ತಾರಾಮಂಡಲ, ಗ್ರಹ ಮಂಡಲ, ಭೂಮಿ ಯ ಉಪಗ್ರಹಗಳೆಲ್ಲ ನೀರಿನಿಂದಲೇ ಸೃಷ್ಟಿಗೊಂಡಂಥವು. ಅಗ್ನಿ ಮಣ್ಣುಗಾಳಿಗಳು ಲೌಕಿಕ ಹಾಗೂ ಅಲೌಕಿಕಗಳ ಕೊಂಡಿಯಾದ ಆಕಾಶತತ್ವವೂ ಹೇಗೆ ಸರ್ವಸ್ವವೂ ನೀರಿನಿಂದಲೇ ಉದಯಿಸಲ್ಪಡುತ್ತದೆ. ಈ ಉದಯಕ್ಕೆ ಕಾರಣಗಳೇನು? ಹೇಗೆ? ಎಂತು ಇತ್ಯಾದಿಗಳೆಲ್ಲ ಮಾಯೆಯ ಕಾರಣದಿಂದ ಶಂಕರಾಚಾರ್ಯರು ಜಗನಿ¾ತ್ಯಾ ಬ್ರಹ್ಮೋ ಸತ್ಯಂ ಎಂದವರು. ಅಹಂ ಬ್ರಹ್ಮಾಸ್ಮಿ ಎಂದು ವ್ಯಾಖ್ಯಾನಿಸಿದವರು. ತತ್ವಮಸಿ ಎಂದು ವಿಶ್ಲೇಷಿಸಿದವರು.  ಅದೂ ಅಲ್ಲಿದೆ ಎಂದವರು. ಅದು ಎಂದರೆ ಏನು? ಅನೂಹ್ಯವಾದದ್ದು ಎಂದೇ ಅರ್ಥ. ಮಾಯಾ ಎಂಬುದೇ ಅರ್ಥ.

ಪ್ರತಿಯೊಂದು ನಾಗರೀಕತೆಯೂ ಜನ್ಮ ತಳೆದದ್ದು ನೀರಿನ ದಡದಲ್ಲೇ. ಅಂದರೆ ನೀರು ಇರುವ ಸ್ಥಳದ ಸಮೀಪವೇ ಜನರು ಬೀಡು ಬಿಡುತ್ತಾರೆ ಹೊರತೂ ಮರುಭೂಮಿಯಲ್ಲಿ ಬೀಡು ಬಿಡಲು ಸಾಧ್ಯವಿಲ್ಲ. "ತಂತ್ರಸಮುತ್ಛಯ' ಎಂಬ ವಾಸ್ತುಶಾಸ್ತ್ರ ಹೊತ್ತಿಗೆ  ಹೀಗಾಗಿ ನೀರಿನ ಸೆಲೆ, ಅಲೆ ಹರಿತಗಳಿರುವ ಜಾಗೆದ ಸಮೀಪವೇ ದೇವಾಲಯಗಳಿರಬೇಕು ಎಂಬುದನ್ನು ದೇವಾಲಯ ಸಂಧಾನದ ಪರಿಚ್ಛೇದದಲ್ಲಿ ವಿಸ್ತಾರವಾಗಿ ವಿವರಿಸಿ ಹೇಳುತ್ತದೆ. ದೇವತೆಗಳು ಈ ನೀರಿನ ಧಾರೆಯಿರುವ ಜಾಗೆಯನ್ನೇ ದೇವಾಲಯಗಳಿಗಾಗಿ ಸಂಕೇತಿಸುತ್ತಾರೆ. ಈ ಜಾಗೆಗಳಲ್ಲಿ ಧ್ಯಾನ, ಮಂತ್ರ, ಜಪತಪಗಳನ್ನು ಮಾಡಲು ಸುಲಭವಾಗುತ್ತದೆ. ಈ ದೇವಾಲಯಗಳು ವೇದಗಳು ನಿರೂಪಿಸಿದ ಮಂತ್ರಗಳಿಂದ ಶಕ್ತಿ ಪಡೆಯುತ್ತದೆ. ಸ್ಥಾಪಿಸಲ್ಪಡುವ ದೇವರ ಪ್ರಾಣಮೂರ್ತಿ ಚೈತನ್ಯ ಪಡೆಯುವುದೇ ಮಂತ್ರಗಳ ಮೂಲಕ. ಮಂತ್ರಗಳು ಜಾnನಿಗಳು ಕೈವಶ ಮಾಡಿಕೊಂಡಿರುತ್ತಾರೆ. ಮಂತ್ರಗಳು ದೇವತೆಗಳನ್ನು ಕೈವಶ ಮಾಡಿಕೊಳ್ಳಲು ದಾರಿಯಾಗುತ್ತದೆ.

ತಪೋನಿರತನಾಗಿ ದೈವಾನುಗ್ರಹಕ್ಕೆ ಪಾತ್ರನಾದ ವ್ಯಕ್ತಿಗೆ ದೇವತೆಗಳು ಒಲಿಯುತ್ತಾರೆ. ನದೀ ತೀರದಲ್ಲಿ ಅಥವಾ ವನಪ್ರದೇಶಗಳಲ್ಲಿ ತಪೋನಿರತರಾದ ಸಾಧಕರು ತಮ್ಮ ಸಾಧನೆಗಾಗಿ ತಪಸ್ಸು ಮಾಡುತ್ತಾರೆ. ಬ್ರಾಹ್ಮಣನು ಸಾತ್ವಿಕನಾಗಿರಬೇಕು. ಸಾತ್ವಿಕತೆ ಇರದಿದ್ದರೆ ಜನ್ಮಾತ್‌ ಆತ ಬ್ರಾಹ್ಮಣನೇ ಹೊರತು ನಿಜವಾದ ಬ್ರಾಹ್ಮಣನಾಗಲೂ ಸಾಧ್ಯವಿರುವುದಿಲ್ಲ. ತಪಸ್ಸಿನ ದಿವ್ಯತೆಯಿಂದ ಶಾಖೋತ್ಪನ್ನ ಸಾಧ್ಯ. ಅದು ಮೈಮನಗಳನ್ನು ಶುದ್ಧ ಮಾಡುತ್ತದೆ. ತ್ರಿಕರಣ ಪೂರ್ವಕವಾಗಿ ದೈವಾನುಷ್ಟಾನ ನಿರತನು ತಪಸ್ಸಿನಿಂದ ಹೊಸದೇ ತೇಜಸ್ಸನ್ನು ನಿರ್ವಿಕಾರ ಚಿತ್ತದಿಂದ ವರ್ಚಸ್ಸನ್ನೂ ಸಂಪಾದಿಸಿಕೊಳ್ಳುತ್ತಾನೆ. ಜಾnನಿಯಾಗಿರದವನು ತಪಸ್ಸು ಮಾಡಲಾರ. ತಪಸ್ಸಿನ ನಂತರ ಜಾnನಕ್ಕೆ ಒದಗುವ ಪುಟವೇ ಬೇರೆ. ಈ ಕಾರಣಗಳಿಂದ ತನ್ನ ಮನಸ್ಸಿನ ವಿಕಾರಗಳನ್ನು ದೂರ ಮಾಡಿಕೊಂಡ ಅನುಷ್ಠಾನ ನಿರತ ವ್ಯಕ್ತಿ, ಜಾತಿ,ಧರ್ಮ, ಮತ, ಭಾಷೆ ಜನಾಂಗೀಯ ಸಂಬಂಧೀ  ವಿಚಾರಗಳಿಂದ ಹೊರಬಂದು ಯೋಗಿಯಾಗುತ್ತಾನೆ. ಹೀಗಾಗಿ ಪ್ರಾಜ`ರು ವಾಸಿಸುವ ನಿಸ್ವಾರ್ಥಿಗಳಿಂದ ತುಂಬಿದ ವಸತಿಗಳಲ್ಲಿ ದೇವಾಲಯಗಳಿರಬೇಕು. ನೀರು, ಜಾnನ, ತಪಸ್ಸು, ಹಸಿರು ಭೂವಲಯಗಳು ತನ್ನಷ್ಟಕ್ಕೆ ತಾನೇ ದೇವಾಲಯಗಳನ್ನು ದೈವಬಲ ಸಂವರ್ಧನಾ ಕ್ಷೇತ್ರಗಳನ್ನಾಗಿ ಪರಿವರ್ತಿಸುತ್ತದೆ. 

ನೀರು ಕೊಳೆಯನ್ನು ಕಳೆಯುವ ಗಂಗೆಯಾಗಿದೆ. ಶುಚಿಭೂìತವಾದ ದೇಹವೇ ಅನನ್ಯವಾದ ಕಾಂತಿವಲಯವೊಂದನ್ನು ಕೈವಶಪಡಿಸಿಕೊಂಡ ಚೈತನ್ಯವನ್ನು ಅಂತರ್ಗತಗೊಳಿಸುತ್ತ ತಾತ್ವಿಕತೆಯೊಂದಿಗೆ ಪರಿಶುದ್ಧತೆ, ಅಧ್ಯಾತ್ಮ ಚಿಂತನೆ ತತ್ವಶಾಸ್ತ್ರ ನಿರ್ದೇಶಿತ ಕೈಂಕರ್ಯಗಳನ್ನು ಹೊಂದಲು ಸಫ‌ಲಗೊಳ್ಳುತ್ತದೆ. ಈ ಸಾಫ‌ಲ್ಯದಿಂದ ದೈವಕ್ಕೆ ಪ್ರಿಯವಾದ ಮಂತ್ರಗಳು ಜಾnನಿಗೆ ತಾತ್ವಿಕವಾಗಿ, ನೈತಿಕವಾಗಿ ಸಂಪನ್ನತೆಯನ್ನು ಒದಗಿಸುತ್ತದೆ. ದೇವಾಲಯದಲ್ಲಿನ ದೇವರು ತನ್ನ ದೃಷ್ಟಿಬಲಕ್ಕೆ ಜಾಗ್ರತ ಸಿದ್ಧಿ ಮಾಡಿಸಿಕೊಂಡಾಗ ಅನುಗ್ರಹ ನೀಡಲು ಶಕ್ತನಾಗುತ್ತಾನೆ. ಜಾಗ್ರತ ಶಕ್ತಿಗಳು ಮಂತ್ರಾಕ್ಷರಗಳ ಅನುಕರಣದಿಂದ ಪಡಿಮೂಡುತ್ತದೆ. ಮಂತ್ರಾಕ್ಷರಗಳು ಪರಿಶುದ್ಧ ದೇಹ ಮತ್ತು ಮನಸ್ಸಿನಲ್ಲಿ ಬೇರು ಬಿಡುತ್ತದೆ. ಪರಿಶುದ್ಧತೆ ನೀರಿನ ಕಾರಣದಿಂದ ಮೈಗೂಡುತ್ತದೆ. ಒಟ್ಟಿನಲ್ಲಿ ಆಸ್ತಿಕತೆಯು ಜಾnನದ ಪರಿಶುದ್ಧತೆಯ ಫ‌ಲ. ಪರಿಶುದ್ಧತೆಗೆ ಜಾnನವೂ ಪರಿಶುದ್ಧವಾದ ನೀರಿನ ಕಾರಣಕ್ಕಾಗಿ ಶುಚಿಭೂìತತ್ವವು ಅನಿವಾರ್ಯವಾಗಿದೆ. 

ಮೊ: 8147824707

ಅನಂತಶಾಸ್ತ್ರಿ 


Trending videos

Back to Top