CONNECT WITH US  

ಅಗರಬತ್ತಿಗಳ ಸುವಾಸನೆ ನಿಮ್ಮ ಮನೆಯೊಳಗಿರಲಿ

ನಮ್ಮ ಸಂಸ್ಕೃತಿಯಲ್ಲಿ ಧೂಪದ ಹೊಗೆಯನ್ನು ಮನೆಯೊಳಗೆ ಆಗಾಗ ತುಂಬಿಸುವ ಪದ್ಧತಿ ಇದೆ. ಧೂಪವನ್ನು ಉರಿಸುವ ಕ್ರಮ ಇಂದು ನಿನ್ನೆಯದಲ್ಲ. ಈ ಹೊಗೆಯಿಂದಾಗಿ ಮನೆಯೊಳಗಿನ ಸೂಕ್ಷ್ಮ ಏಕ ಜೀವಾಣುಗಳು ಆರೋಗ್ಯಕ್ಕೆ ಬಾಧೆ ತರುವ ಸಮಾಧಾನ ದೊಡ್ಡದೇ ಆದ ಹುಳುಹುಪ್ಪಡಿಗಳು ಸಾಯಲ್ಪಡುವ ಮನೆಯಿಂದ ಹೊರಗೆ ದೂಡಲ್ಪಡುವ ವಿಚಾರ ಇದರಿಂದ ಬಹಳಷ್ಟು ಸುಲಭವಾಗುತ್ತದೆ. ಬಹಳ ಹಿಂದೇನಲ್ಲ ಈಗ ಸುಮಾರು ಎರಡು ದಶಕಗಳ ಹಿಂದೆ ಕೂಡಾ ಹೊಸ ಮಗುವಿನ ಜನನದಿಂದಾಗಿ ಸಂಭ್ರಮ ತುಂಬಿದ ಮನೆಯಲ್ಲಿ ಧೂಪದ ಹೊಗೆ ಹಾಕಲಾಗುತ್ತಿತ್ತು. ಮಗುವಿಗೆ ಸೂಕ್ಷ್ಮಜೀವಿಗಳ ಕಾಟದಿಂದ ಬಿಡುಗಡೆ ಸಿಗಲೆಂಬ ಕಾರಣದಿಂದಲೇ ಇದನ್ನು ಮಾಡಲಾಗುತ್ತಿತ್ತು. ಹೀಗಾಗಿ ಧೂಪದ ಧೂಮ ಆರೋಗ್ಯದ ವಿಚಾರದಲ್ಲಿ ಸ್ವಾಗತಾರ್ಹವಾಗಿದೆ. ಜೊತೆಗೆ ಧೂಪದ ವಿಷಯ ದುಬಾರಿಯಾದ ಸಂಗತಿ ಏನಲ್ಲ. 
ಸುಲಭ ಬೆಲೆಗೆ ಧೂಪ ಲಭ್ಯ. ಧೂಪದಂತೆ ಅಗರಬತ್ತಿಗಳು ಕೂಡಾ ಸುಹಾಸಕರ, ಮಧುರ ಸುವಾಸನೆ ಮನೆಯಲ್ಲಿ ತುಂಬಿರಲು ಇದರಿಂದಾಗಿ ಮನೆಯ ಧನಾತ್ಮಕ ಸ್ಪಂದನ ಕೂಡಾ ಹೆಚ್ಚಲು ಸಹಾಯವಾಗುತ್ತದೆ. ಧನಾತ್ಮಕ ಸ್ಪಂದನಗಳು ಅಧಿಕಗೊಳ್ಳುವ ಕಾರಣವೆಂದರೆ ಅಗರಬತ್ತಿಗಳು ಉರಿಯತೊಡಗಿದಾಗ ಅವುಗಳ ಒಳಗಿನಿಂದ ಅಡಕಗೊಳಿಸಲ್ಪಟ್ಟ ಸುವಾಸನೆಯು ತೈಲಬುಗ್ಗೆಗಳು ನಮ್ಮ ನಾಸಿಕದ ವಾಸನಾಗ್ರಹಿಕೆಯ ಗ್ರಂಥಿಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ. ಈ ರೀತಿಯ ಸುವಾಸನಾಯುಕ್ತ ಗಾಳಿಯು ಹವೆಯು ಮನಸ್ಸನ್ನು ಉತ್ತೇಜಿಸುತ್ತಿರುತ್ತವೆ. ಸಕಾರಾತ್ಮಕ ಯೋಚನೆಗಳಿಗೆ, ಯೋಜನೆಗಳಿಗೆ ಈ ಉತ್ತೇಜನ ಪ್ರಕ್ರಿಯೆಯಿಂದ ಸಹಾಯಕವಾಗುತ್ತದೆ. 

ಮಧುರ ಹಾಗೂ ಸಂಪನ್ನ ಸುವಾಸನೆಗಳು ಅಸುರೀ ಶಕ್ತಿಯನ್ನು ಗೆಲ್ಲುತ್ತದೆ. ಮನದಲ್ಲಿನ ಭಿನ್ನತೆಯನ್ನು ದಣಿವನ್ನು ನಿವಾರಿಸಿ ಚೈತನ್ಯದ ಬಿಂದುವಿಗೆ ಅದು ಮನಸ್ಸನ್ನು ರೂಪಾಂತರಿಬಲ್ಲದು. ಅದಕ್ಕೇ ನಮ್ಮ ಪೂಜಾವಿಧಾನಗಳಲ್ಲಿ ಧೂಪದೀಪಾದಿ ಮಂಗಳಾರತಿಗಳು ದೇವರನ್ನು ಆರಾಧಿಸುವ ಸಂದರ್ಭದ ಘಟಕಗಳಾಗಿವೆ. ದೀಪ ಹಾಗೂ ಮಂಗಳಾರತಿಗಳ ಸಂದರ್ಭದ ಅಗರಬತ್ತಿಗಳ ಉರಿಯುವಿಕೆಯಿಂದಾಗಿನ ಸುವಾಸನೆಯ ಜ್ವಲನದಲ್ಲಿ ಮನಸ್ಸನ್ನು ದೇವರ ನಿಟ್ಟಿನಲ್ಲಿ ಕೇಂದ್ರೀಕರಿಸಲು ಸುಲಭ ಸಾಧ್ಯ. ಶ್ರೀಗಂಧ ಹಾಗೂ ರಕ್ತಚಂದನದಂಥಾ ಪರಿಕರಗಳ ಕಲ್ಪನೆ ಕೂಡಾ ಇದೇ ಆಧಾರದಲ್ಲಿ ನಿರೂಪಿಸಿರುತ್ತದೆ. ಶ್ರೀಗಂಧವು ಮೈಯಲ್ಲಿನ ಹುಣ್ಣುಗಳನ್ನು ಗುಣಪಡಿಸುವ, ರಕ್ತಚಂದನವು ಉಷ್ಣದೇಹಕ್ಕೆ ತಂಪಿನ ಅನುಭವವನ್ನು ಸೊಗಸಾಗಿ ಒದಗಿಸುವ ಕಾರ್ಯದಲ್ಲಿ ನೆರವಾಗುತ್ತದೆ. 

ಪ್ರತಿ ಸೋಮವಾರ ಸುವಾಸನಾಭರಿತ ಅಗರಬತ್ತಿಗಳ್ಳೋಂದಿಗೆ ಮನೆಯೊಳಗಿನ ದೇವರನ್ನು ಬಿಳಿಯ ಹೂಗಳಿಂದ ಪೂಜೆ ಸಲ್ಲಿಸುವುದು ಯುಕ್ತ. ಮಂಗಳವಾರ ಕೆಂಪು ಹೂಗಳು ಶ್ರೇಷ್ಟ. ಬುಧವಾರದಂದು ಹಸಿರುಬಣ್ಣದ ಹೂಗಳಿಂದ ದೇವರನ್ನು ಪೂಜಿಸದರೆ ಉತ್ತಮ ಮೇಧಾಶಕ್ತಿ ದೊರೆಯುತ್ತದೆ. ಗುರುವಾರ ಹಳದು ಜೂಗಳು ಶ್ರೇಷ್ಟ. ಶುಕ್ರವಾರದಂದು ಹೂಗಳು ನೇರಳೇ ಬಣ್ಣವು, ನೀಲಿ ಮಿಶ್ರಿತ ಬಿಳಿ ಬಣ್ಣವೂ ಉತ್ತಮ ಫ‌ಲ ನೀಡುತ್ತವೆ. ಶನಿವಾರದ ಹೂಗಳು ನೀಲಿಯೂ, ನೇರಳೆಯೂ ಜೇನುಬಣ್ಣದ ಹೂಗಳೂ ತುಂಬಾ ಅಪೇಕ್ಷಣೀಯ. ಶನಿವಾರದಂದು ದ್ರೋಣಪುಷ್ಪ, ಮಲ್ಲಿಗೆ ತಾವರೆಗಳು (ನೀಲತಾವರೆ ಹೊರತುಪಡಿಸಿ) ಉತ್ತಮವಾಗಿದೆ. ಅಗರಬತ್ತಿಗಳ ಉಪಯೋಗ ಹಾಗೂ ಆಯಾ ದಿನದಂದು ಮೇಲೆ ತಿಳಿಸಿದ ಹೂಗಳ ಉಪಯೋಗ ಪೂಜಾ ಸಂದರ್ಭಅದಲ್ಲಿ ಮಂಗಳಕರತೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ.

ಹೂಗಳು ಸಿಗದಿರುವಾಗ ಅದನ್ನೇ ದೊಡ್ಡ ಕೊರಗಾಗಿಸಿಕೊಂಡು ಮನಸ್ಸನ್ನು ಕೆಡಿಸಿಕೊಳ್ಳುವುದು ಬೇಡ. ಆದರೆ ಸುವಾಸನೆಯ ಅಗರಬತ್ತಿಗಳಂತೂ ಮನೆಯಲ್ಲಿ ಇರಲಿ. ಧೂಪದ ಉಪಯೋಗವೂ ಆಗಾಗ ಇರಲಿ. ಪೂಜೆಯ ಸಂದರ್ಭ ಎಂದೇ ಅಲ್ಲ. ಮುಂಜಾವಿನ ಸೂರ್ಯನಾಗಮನಕ್ಕೆ ಸಂಧ್ಯಾಕಾಲದ ತಾರೆಗಳ ಹೊಳಪಿನ ಹೊತ್ತಿಗೆ ಮಂಗಳಕರವಾದ ವರ್ತಮಾನವನ್ನು ಚೌಕಟ್ಟುಗೊಳಿಸಲಿಕ್ಕಾಗಿ ಸೂಕ್ತವಾದ ಸುವಾಸನೆ ಮನೆಯಲ್ಲಿ ತುಂಬಿರಲಿ.

ಅನಂತಶಾಸ್ತ್ರಿ

Trending videos

Back to Top