CONNECT WITH US  

ಜಲದುರ್ಗೆ ನಿಮ್ಮ ಮನೆಯಲ್ಲಿರಲಿ

ಮನುಷ್ಯನ ಜೀತಾವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ಎದುರಿಸಲೇ ಬೇಕಾಗುತ್ತದೆ. ಏರುವುದನ್ನು ಮನುಷ್ಯ ಆನಂದಿಸಬಹುದಾದರೂ ಇಳಿತಗಳು ಮಾನಸಿಕವಾದ ದೈಹಿಕವಾದ ತಳಮಳಗಳನ್ನು ಕಿರಿಕಿರಿ ಯಾತನೆಗಳನ್ನು ಒದಗಿಸುವುದು ನೋವಿನ ಸಂಗತಿ. ಸಾಮಾನ್ಯವಾಗಿ ಶನಿಕಾಟದ ಸಂದರ್ಭದಲ್ಲಿನ ಜೀತದ ಇಳಿತಗಳಿಂದಾಗಿ ಅನೇಕ ಬಗೆಯ ಆಘಾತಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. 

ಪ್ರಧಾನವಾಗಿ ಶನಿಕಾಟದ ಕಾಲಘಟ್ಟದಲ್ಲಿ ಜೀವನದ ಸಂದರ್ಭದ ನೋವು ಯಾತನೆ ಪಡಿಪಾಟಲುಗಳು ಅಗಾಧ. ಇವುಗಳು ಮುಖ್ಯವಾಗಿ ಪಂಚಭೂತಾತ್ಮಕ ಅಂಶಗಳಾದ ಮಣ್ಣು , ನೀರು, ಬೆಳಕು, ವಾಯು ಹಾಗೂ ಆಕಾಶ ತತ್ವಗಳಿಗೆ ತೊಂದರೆ ತರುತ್ತವೆ. ಇದರಿಂದಾಗಿ ಆಸ್ತಿ ಜಮೀನು ಸೈಟು ಫ್ಲ್ಯಾಟ್‌ಗಳ ತೊಂದರೆಗಳು ಎದುರಾಗಬಹುದು. ಬೆಂಕಿಯ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು. ಆರೋಗ್ಯದ ವಿಷಯದಲ್ಲಿ ರಕ್ತದ ಒತ್ತಡ ರಕ್ತ ಧಮನಿಗಳ ಬಿರುಸಾಗುಕೆ ಇತ್ಯಾದಿ ತೊಂದರೆ ಎದುರಾಗಬಹುದು. ಮಾನಸಿಕ ಉನ್ಮಾದಗಳನ್ನು ಕೂಡಾ ಎದುರಿಸಬೇಕಾಗಿ ಬರುವುದು ಸಾಮಾನ್ಯ.

ಜಲ ಸಂಬಂಧವಾದ ತಾಪತ್ರಯಗಳನ್ನು ಎದುರಿಸಬೇಕಾಗಿ ಬರಬಹುದು. ಜಲದ ಸಮಸ್ಯೆ ದೈಹಿಕ ಅಸಮತೋಲನಗಳ ವಿಷಯದಲ್ಲಿದ್ದಷ್ಟೇ ಮನೆಯೊಳಗೆ ನೀರಿನ ಸಂಬಂಧವಾದ ಸಮಸ್ಯೆಗಳು ಕೂಡಾ ಅಧಿಕವಾಗಿಯೇ ಇರುತ್ತದೆ.

ಒಬ್ಬ ವ್ಯಕ್ತಿಗೆ ಅದ್ಭುತವಾದ ಮನೆ ಇರುತ್ತದೆ. ಆದರೆ ನೀರಿನ ಸಮಸ್ಯೆ ಮಾತ್ರ ಅಪಾರವಾಗಿರುತ್ತದೆ. ನಗರಗಳಲ್ಲಿ ಒಂದು ರೀತಿಯ ನೀರಿನ ಸಮಸ್ಯೆಯಾದರೆ ಹಳ್ಳಿಗಳಲ್ಲಿ ಇನ್ನೊಂದು ರೀತಿಯ ತೊಂದರೆಯಾಗುತ್ತದೆ. ಆ ಜಮೀನು, ಗದ್ದೆ, ಹೊಲಗಳ ವಿಷಯದಲ್ಲಿ ಮತ್ತೂಂದೇ ರೀತಿಯಲ್ಲಿ ಇರುತ್ತದೆ. ಇವೆಲ್ಲಾ ಪ್ರಧಾನವಾಗಿ ಶನಿಕಾಟದ ಸಂದರ್ಭದಲ್ಲಂತೂ ದೊಡ್ಡ ಪ್ರಮಾಣದಲ್ಲಿ ಇರುತ್ತದೆನ್ನಬಹುದು. ಹೀಗಾಗಿ ಶನಿಕಾಟದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಯಾವರೀತಿಯಲ್ಲಿ ಶನಿಕಾಟದ ತೀವ್ರತೆ ಇದೆಯೆಂಬುದನ್ನು ಗ್ರಹಿಸಬೇಕು.

ನೀರಿನ ತಾಪತ್ರಯವು ಎದುರಾಗುವುದಿದ್ದಲ್ಲಿ ಜಲದುರ್ಗಾ ಸ್ತಿತಿ ಹೆಚ್ಚು ಸೂಕ್ತ. ಆಲದುರ್ಗಾವನ್ನು ಮನೆಯ ಯಜಮಾನ ಮನೆಯ ಎದುರಲ್ಲಿ ಸ್ಥಾಪಿಸುವುದು ಸ್ತುತಿಸುವುದು ಹೆಚ್ಚು ಸೂಕ್ತ. ಇದರಿಂದ ಮನೆಯೊಳಗಿನ ಜಲಕ್ಷೊàಭೆಯನ್ನು ನಿವಾರಿಸುವಲ್ಲಿ ಮನೆಯ ಯಜಮಾನನಿಗೆ ಹೆಚ್ಚಿನ ಶಕ್ತಿ ಒದಗುತ್ತದೆ.

ಜಲದುರ್ಗೆಯನ್ನು ಸೂಕ್ತವಾದ ರೀತಿಯಲ್ಲಿ ಕಲಶ ಸ್ಥಾಪನಾ ವಿಧಿಯ ಮೂಲಕವಾಗಿ ಅಥವಾ ಪಂಚಲೋಹ ಬೆಳ್ಳಿ ಅಥವಾ ಬಂಗಾರದ ಮೂರ್ತಿಯ ರೂಪದಲ್ಲಿ ಮನೆಯ ದೇವರ ಪೀಠದಲ್ಲಿ ಕೂಡ್ರಿಸಬಹುದು. ಜಲದುರ್ಗಾ ಸ್ತುತಿಯಿಂದ ಬೆಸ್ತರು ಸಾಗರೋತೊನ್ನ ವಸ್ತು ವಹಿವಾಟಿನ ವ್ಯಾಪಾತರಸ್ಥರು ಉದ್ಯಮಿಗಳು ಅಪಾರವಾದ ಯಶಸ್ಸನ್ನು ಸಂಪಾದಿಸಿಕೊಳ್ಳಬಹುದಾಗಿದೆ. ಆಯಾತ ನಿರ್ಯಾತಗಳ ಸಂಬಂಧವಾಗಿ ಖಂಡಾಂತರ ಮಟ್ಟದ ವಹಿವಾಟುಗಳನ್ನು ಹೊಂದಿದವರು ಕೂಡಾ ಜಲದುರ್ಗೆಯನ್ನು ಆರಾಧಿಸಬೇಕು.

ಒಟ್ಟಿನಲ್ಲಿ ಜಲದುರ್ಗಾ ಪೂಜೆ ಅಥವಾ ಸ್ತುತಿ ಮನೆಯಲ್ಲಿ ಅನೇಕ ರೀತಿಯ ನೆಮ್ಮದಿ ಹಾಗೂ ಮಾನಸಿಕ ಶಾಂತಿಯನ್ನು ನಿರ್ಮಿಸಿಕೊಡುತ್ತದೆ. 

ಅನಂತಶಾಸ್ತ್ರಿ

Trending videos

Back to Top