CONNECT WITH US  

ಸ್ನಾನ ಗೃಹದ ವಾಸ್ತು, ಅದರ ಮಹತ್ವ

ಮನೆಯ ಶೌಚ ಗೃಹವಾಗಲೀ, ಸ್ನಾನದ ಮನೆಯಾಗಲೀ ಶುಚಿ, ಶುದ್ಧತೆ ಹಾಗೂ ಸರಳ ಸ್ವರೂಪದಲ್ಲಿ ಸ್ಥಾಯಿ ಗೊಂಡಿದ್ದಲ್ಲಿ ಮನೆಯಲ್ಲಿನ ಶಾಂತಿ ಹಾಗೂ ಸಮೃದ್ಧಿಗಳಿಗೆ ತೂಕ ಒದಗಿಬರುತ್ತದೆ. ಮನೆಯ ಯಜಮಾನನಿಗೆ ತಾತ್ವಿಕ, ಅಲೌಕಿಕ, ದೈವೀಕ ಸಿದ್ಧಿ ಸಂಪ್ರಾಪ್ತಿಯಾಗುತ್ತದೆ.  ಈ ರೀತಿಯಾಗಿ ಸಂಪತ್ತು ಬರುವ ಸಂದರ್ಭದಲ್ಲಿ ದೈವಾನುಗ್ರಹವೂ ದೊರಕಿ ಸಂಪತ್ತು ಒಳಿತಿಗೆ, ಸನ್ಮಾರ್ಗಕ್ಕೆ ಕಾರಣವಾಗುತ್ತದೆ. ಮೊತ್ತ ಮೊದಲಾಗಿ ಸ್ನಾನ ಗೃಹ, ಶೌಚಾಲಯಗಳು ಮನೆಯ ನಡು ಭಾಗದಲ್ಲಿ ಇರಲೇ ಕೂಡದು. ತೊಟ್ಟಿ ಮನೆಗಳೆಂದು ಮನೆಯ ನಡು ಭಾಗದಲ್ಲಿ ಖಾಲಿ ಜಾಗವನ್ನು ಇಟ್ಟು ಮನೆಯನ್ನು ಕಟ್ಟುವುದು ಮನೆಯ ಅಗ್ನಿ ಧಾತುವಿಗೆ ಮತ್ತು ಮನೆಯ ವಾಯು ತತ್ವಕ್ಕೆ ಭಂಗ ಬರುತ್ತದೆ. ವಾಯುವ್ಯ ದಿಕ್ಕಿನ ಭಾಗಕ್ಕೆ ತಡೆಯಾಗದಂತಿರುವುದು ಶೌಚಾಲಯ ಹಾಗೂ ಸ್ನಾನ ಗೃಹಗಳಿಗೆ ಅಪ್ಯಾಯಮಾನವಾದ ಅಂಶ.
ಸ್ನಾನಾದಿ ಶೌಚ ಗೃಹಗಳ ಇಳಿಜಾರು ಮುಖ್ಯವಾಗಿ ಪೂರ್ವದ ಕಡೆಗೋ, ಉತ್ತರದ ಕಡೆಗೋ ಇರಬೇಕು.    ತ್ಯಾಜ್ಯ ಹೊರ ಹೋಗುವ ಸ್ಥಳಾವಕಾಶವಾಗುವಂತೆ ಕೊಳೆವೆಗಳೂ ಹೀಗೆ ಈ ದಿಕ್ಕಿನಲ್ಲೇ ಇರಬೇಕು. ಸಂಗಮರವರೀ ಕಲ್ಲುಗಳ, ನುಣುಪು ಹಾಸುಗಳ ಜೋಡಣೆ ಶೌಚಾಲಯದ ತಳ ನೆಲಕ್ಕೆ ಇರಬಾರದು. 

ನೀರು ತುಂಬುವ ಡ್ರಂ, ಕೊಳಾಯಿಗಳು  ಪೂರ್ವ ಅಥವಾ ವಾಯುವ್ಯ ದಿಕ್ಕಿಗೇ ಇರಬೇಕು. ಶೌಚ ಮಂಡಲ  ಕೂಡ
ಇದೇ ದಿಕ್ಕಿಗೆ ಅಥವಾ ವಾಯುವ್ಯ ದಿಕ್ಕಿನಲ್ಲಿ ಅಡಕವಾಗಿರಲಿ. ಸರ್ವಥಾ ಅಗ್ನಿ ಮೂಲೆಯಲ್ಲಿ ಅಡಕವಾಗಿರಲಿ. ನೈಋತ್ಯಕ್ಕೂ ಕೂಡ ಇರದಿರಲಿ. ಇದನ್ನು ಮುಖ್ಯವಾಗಿ ಗಮನಿಸಬೇಕು. ಹಾಗೆಯೇ ಸ್ನಾನ ಗೃಹ ತಳದ ಸಪಾಟಿಗಿಂತ ಎರಡು ಫ‌ೂಟು ಏರು ಎತ್ತರ ಹೊಂದಿರಲಿ. ಸ್ನಾನ ಗೃಹದ ಬಾಗಿಲುಗಳು ಪೂರ್ವ ಅಥವಾ ಉತ್ತರ ದಿಕ್ಕಿಗೆ ಸಮ್ಮಳಿತವಾಗಿರಲಿ. ಶೌಚಾಲಯದ ಒಳ ವಿನ್ಯಾಸದ ಬಣ್ಣ ಹೆಚ್ಚಾಗಿ ಹಸಿರು, ನೀಲಿ ಅಥವಾ ನೇರಳೆ ಬಣ್ಣದಿಂದ ಕೂಡಿರಲಿ. ಊತ್ತರ ಪೂರ್ವ, ಪಶ್ಚಿಮ ದಿಕ್ಕಿಗೆ ಚಿಕ್ಕ ಒಂದು ಕಿಂಡಿಯ ರೂಪದ ಕಿಟಕಿ ಇರಲಿ. 

 ಔಡಲ ಮರದ ಎಲೆಗಳನ್ನು ಸ್ನಾನ ಗೃಹದ ಒಂದೆಡೆ ಪೇರಿಸಿಡುವುದು (ನಾಲ್ಕಾರು ಎಲೆಗಳು ಮಾತ್ರ) ಉತ್ತಮ ವಿಚಾರ. ಇದರಿಂದ ಪಂಚಭೂತ ಧಾತುಗಳ ಸಮತೋಲನ ಸುಸಂಬದ್ಧತೆಗೆ ಅವಕಾಶ ಹೇರಳ. ಮಲ ವಿಸರ್ಜನೆಗೆ ಉತ್ತರ , ದಕ್ಷಿಣ ದಿಕ್ಕಿಗೆ ಮುಖ ಇರುವುದು ಸೂಕ್ತ. ಪೂರ್ವ ದಿಕ್ಕಿನೆಡೆ ಮುಖ ಮಾಡಿ ಸ್ನಾನ ಮಾಡುವುದು ಅಪೇಕ್ಷಣೀಯ. 

 ಮನೆಯ ದೇವರ ಪೀಠದಷ್ಟೇ ಶೌಚ ಮತ್ತು ಸ್ನಾ ಗೃಹ ಮುಖ್ಯ. ಯಮಾದಿ ದಶ ಕೋಟಿ ಅಪರ ಶಕ್ತಿ ಸೂಕ್ತಗಳು ತಂತಮ್ಮ ಧನಾತ್ಮಕವಲ್ಲದ ವಿಪ್ಲವಗಳನ್ನು ಕಳಕೊಳ್ಳುವುದೇ ಸ್ನಾನ ಹಾಗೂ ಶೌಚ ಗೃಹಗಳ ಶುದ್ಧ ಸ್ವರೂಪದಲ್ಲಿ. ಹೀಗಾಗಿ ಸ್ನಾನ ಗೃಹವನ್ನು ಇಂದ್ರ ಶಕ್ತಿಯ ಪ್ರತ್ಛನ್ನತೆಗೆ ಮೂಲ ಶಕ್ತಿ ಸ್ವರೂಪವಾಗಿ ಬಳಸಿಕೊಳ್ಳಬೇಕು. ಶೌಚದ ನಂತರ ಸ್ನಾನ ಪೂರೈಸಿ ಸ್ವತ್ಛವಾದ ಉಡುಪಿನಲ್ಲಿ ಮುಂದಿನ ಕೆಲಸಗಳಿಗೆ ಮುಂದಾಗುವಾಗ ಈ ಕೆಳಗಿನ ಮಂತ್ರ ಭಾಗವನ್ನು ಅವಶ್ಯವಾಗಿ ಓದಿಕೊಳ್ಳಿ. ಸಾಲಿಗ್ರಾಮ ಶಿಲಾವಾರಿ ಪಾಪಹಾರಿ ವಿಶೇಷತಃ
ಆ ಜನ್ಮ ಕೃತ ಪಾಪಾನಾಂ ಪ್ರಾಯಶ್ಚಿತ್ತಂ ದಿನೇ ದಿನೇ

 ಸ್ವರೂಪ ಕುಸುಮ ಮಾಲಾದ ಈ ಮಂತ್ರ ವಿಶೇಷ ವಿಷಜನ್ಯಕ್ಕೆ ಕಾರಣವಾಗುವ ದೇಹದ ವಿಕಾರಗಳನ್ನು ನಾಶ ಪಡಿಸುತ್ತದೆ. ಅಂತರಂಗದ, ಬಹಿರಂಗ ಶುದ್ಧತೆಗಳು ಸದಾ ಒಬ್ಬನನ್ನ, ಒಬ್ಬಳನ್ನ ಸದಾ ಆರೋಗ್ಯ ಹಾಗೂ ಹರ್ಷ, ಉತ್ಸಾಹಗಳಲ್ಲಿ ಇರಿಸಲು ಸಹಾಯವಾಗುತ್ತದೆ.

ಅನಂತಶಾಸ್ತ್ರಿ


Trending videos

Back to Top