CONNECT WITH US  

ಮೀನು , ಹಕ್ಕಿಗಳನ್ನು ಮನೆಯಲ್ಲಿ ಸಾಕಬಹುದಾ?

ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ ಪಾರಿವಾಳ ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಲÊ ಬರ್ಡ್ಸ್‌ಗಳಂಥ ಬಣ್ಣಬಣ್ಣಗಳ ಮೈ ಹೊದಿಕೆಯ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣಗಳ, ಅವುಗಳ ಹೊರಮೈ ಚೆಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾಗದ ಗಾಜಿನ ಗೋಡೆಗಳೀಗೆ ಡಿಕ್ಕಿ ಹೊಡೆಯುತ್ತ ಮೂತಿ ಬಡೆಯುತ್ತಾ, ಉರಟುರುಟಾಗಿಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ ಎಂದು ಆನಂದಿಸುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪಿದ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣವಾಗುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು, ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭ ಸೂಚಕವಾಗಿದೆ. ಇದಕ್ಕೆ ಕಾರಣ ಮಲಗಿದ ಸಂದರ್ಭದ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಭೇದಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನನಿಗೆ ತಂದಿಡುವ ಅಂಶಗಳಾಗಿವೆ. 

ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂ ನಲ್ಲಿ ಪೂರ್ತಿಯಾಗಿ ಕಡುಗಪ್ಪು ಮೈಬಣ್ಣವಿರುವ ಮೀನುಗಳು ಇರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸುನೀಲಿ, ನಸುಗೆಂಪು, ಬಿಳಿಕಪ್ಪು ಪಟ್ಟೆಗಳಿರುವ  ಮೀನುಗಳು ಅಲೆ, ಅಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದಿಂದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ.

ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಬೇಡ. ಮುಂಜಾನೆ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸಿಟ್ಟುಕೊಳ್ಳಿ. ಒಳಗಿನ ನೀರು ನಸುನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫ‌ಲಿಸುವಂತಾಗಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು ಸಹಾಯವಾಗುತ್ತದೆ.

ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವ ವಿಚಾರ ಆಗದಿದ್ದರೆ ಸೂಕ್ತ. ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ  ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿದ್ದವೇ ಆಗಿದೆ. ಉಳಿದಂತೆ ಗಿಣಿ , ಲವ್‌ಬರ್ಡ್ಸ್‌, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ಕೊಳ್ಳುವುದು ಬೇಡ. ಪಂಜರದಲ್ಲಿ ಇವುಗಳ ಅಸಹಾಯಕ ಪರಿಸ್ಥಿತಿ ಅಥವಾ ಸೆರೆವಾಸ ಅಷ್ಟು ಒಳ್ಳೆಯದಲ್ಲ. 

- ಅನಂತಶಾಸ್ತ್ರಿ

Trending videos

Back to Top