CONNECT WITH US  

ಯಾರಿಗೆ, ಯಾವ ದಿಕ್ಕು ಯೋಗ್ಯ, ಯಾವ ದಿಕ್ಕು ಕ್ಷೇಮ?

ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ 

ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ನಕಾರಾತ್ಮಕ ಸಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತವೆ. ಹೀಗಾಗಿ ವಿಶ್ವವೇ ತನ್ನ ಆಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ಕಸನ ಗೊಳಿಸುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು. ಇದು ಅನಿವಾರ್ಯ.

ಉತ್ತರ ದಿಕ್ಕನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ ಪರಿಣಾಮಕಾರಿ ಯಾದ ಬರಹಗಳ ಸಮಯದಲ್ಲಿ ಅಥವಾ ಹೊಸತೇನನ್ನೋ ಪರಿಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ವ್ಯಾಪಾರ ಅಥವಾ ಇನ್ನೇನೇ ವ್ಯಾವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು. ಬೆಳಕಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು.
ಯೋಗೀರ್ಶವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವ ದಿಕ್ಕುಗಳ ಫ‌ಲವಂತಿಕೆಯೇ ಉತ್ತಮವಾಗಿದೆ. 

ಆದರೆ ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕನ್ನು ಮುಖಮಾಡಿ ಅಡುಗೆ ಮಾಡಕೂಡದು. ಹೀಗೆನ್ನುವುದಿರಲಿ, ಕುಡಿಯುವುದಿರಲಿ ಉತ್ತರ ದಿಕ್ಕು ನಿಷಿದ್ಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ. ಆಹಾರ ಸಂವರ್ಧನಾ, ತಯಾರಿಕಾ ಪ್ರಗತಿ, ಸಾಫ‌ಲ್ಯ, ರುಚಿ, ಪ್ರಸನ್ನತೆಗಳು ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆಯೋ, ಸ್ಟೋವ್‌, ಗ್ಯಾಸ್‌ ಬರ್ನರ್‌ ಇತ್ಯಾದಿ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಗೊಳ್ಳಬೇಕು. ಈ ವಿಚಾರವನ್ನು ಅಳತೆಬದ್ಧವಾಗಿ ರೂಪಗೊಳಿಸಲು ಮನೆಯ ಖುಲ್ಲಾ ಇರುವ ಜಾಗ ಉತ್ತರ ಮತ್ತು ಪೂರ್ವಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯಪ್ರಕಾಶ ಪೂರ್ವದಿಂದ ಒಳಹೊಮ್ಮುವಂತಿದ್ದು ಶಾಖ ಸೂಕ್ತವಾಗಿ ಹೊರಹೋಗುವಂತೆ ನೈಸರ್ಗಿಕ ವಾತಾವರಣದ ವ್ಯವಸ್ಥೆ ಸೂಕ್ತವಾಗಿರಬೇಕು. ದೈಹಿಕ ಸಮೃದ್ಧಿಗೆ ಆರೋಗ್ಯ ಚಟುವಟಿಕೆಗಳ ಗಟ್ಟಿತನಕ್ಕೆ ಇದರಿಂದ ದಾರಿ ಲಭ್ಯ. ಮಾನಸಿಕ ನೆಮ್ಮದಿಗೂ ಇದರಿಂದ ಸಾಧ್ಯ. 

ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಟೀವಿ, ಕಂಪ್ಯೂಟರ್‌ ಲ್ಯಾಪ್‌ ಟ್ಯಾಪ್‌ ಉಪಯೋಗಗಳನ್ನು ಮಲಗುವ ಕೋಣೆಯಲ್ಲಿ ನಿಷೇಧಿಸಿ. ಮಲಗುವ ಕೋಣೆಯು ಒಂದು ಕ್ರಿಯಾ ಶಕ್ತಿಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಕಿರಣದಿಂದ ತೊಂದರೆಗೆ ದಾರಿ ಇದೆ. ದಯಮಾಡಿ ಇವುಗಳ ಉಪಯೋಗ ಮಲಗುವ ಕೋಣೆಯಲ್ಲಿ ಬೇಡ. ಇದ್ದರೂ ಒಂದು ಮಿತಿ ಇರಲಿ. 

ಮಿತಿ ಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ ಇದರಿಂದ ಕ್ಷೇಮ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ಬಟ್ಟೆಯಿಂದ ರಾತ್ರಿ ಮುಚ್ಚಿಡಿ. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ ಬೇಡ. ತುಳಸೀ ಗಿಡಗಳು ಮನೆಯ ವಾಯುಶುದ್ಧಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಯಲ್ಲಿ ಭಾರಿ ತೊಲೆಗಳು ಅಚ್ಚು ಹಾಗೂ ಅಡ್ಡಪಟ್ಟಿಗಳಿರುವ ತಾರಸಿಯ ಕೆಳಗಡೆ ಮಲಗಬೇಡಿ. ಭಯಾನಕ ಕನಸುಗಳಿಗೆ, ಖನ್ನತೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಇದೇ ರೀತಿ ಕಬ್ಬಿಣದ ಮಂಚಗಳೂ ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯವ್ಯಾಧಿ ಹಾಗೂ ಮೆದುಳಿಗೆ ಇದರಿಂದ ಹಾನಿಯಾಗುತ್ತದೆ. ಮಂಚಗಳು ಮರದಿಂದಲೇ ಮಾಡಿರಲಿ. 

ಈಶಾನ್ಯದ ಕಡೆ ಬಸುರಿ ಹೆಂಗಸರು ಮಲಗಬೇಕು. ಉತ್ತರರದ ಕಡೆ ತಲೆ ಇಡುವುದು ಬೇಡ. ಯಾರೂ ಉತ್ತರ ದಿಕ್ಕಿನೆಡೆ ತಲೆ ಇಟ್ಟು ಮಲಗಬಾರದು. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೊಸ್ಥಿತಿಗೆ ಕಾರಣವಾತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ ಕಳ್ಳಕಾಕರರ ಕಾಟವಿರದಂತೆ ಜಾಲರಿ ಜೋಡಿಸಿದ್ದರೆ ಉತ್ತಮ. 

- ಅನಂತಶಾಸ್ತ್ರಿ

Trending videos

Back to Top