CONNECT WITH US  

ಮಲಗುವ ಕೋಣೆಗಿರಲಿ ಸರಳ ಸಂಪನ್ನ ಗುಣ

ಆಧುನಿಕ ಜೀವನ ಕ್ರಮ ವಿವಿಧ ಕಾರಣಗಳಿಂದಾಗಿ ಮನೆಯ ಯಜಮಾನ ವಿಶೇಷ ಹಾಗೂ ಜರೂರು ಕೆಲಸ ಕಾರ್ಯಗಳಿಗಾಗಿ ಮಲಗು ಕೋಣೆಯನ್ನು ಉಪಯೋಗಿಸುತ್ತಾನೆ. ಮನೆಯಲ್ಲಿ ಪ್ರತ್ಯೇಕ ಕಚೇರಿ ಎಂಬ ಒಂದು ಸ್ಥಳವನ್ನು ರೂಪಿಸಿ ಕೊಳ್ಳುವುದು ತುಂಬಾ ಕಷ್ಟದ ಕೆಲಸ. ವಿರಾಮಕ್ಕೆ, ನಿದ್ದೆಗೆ ಉಪಯೋಗಿಸುವುದಲ್ಲದೇ, ಮನೆಯಲ್ಲೇ
ಪೂರೈಸಬೇಕಾದ ತನ್ನ ಹೊರ ವಹಿವಾಟುಗಳ ಮುಂಚಿನ ತಯಾರಿಗಳು ಬೆಡ್‌ ರೂಮಿನಲ್ಲೇ ಅವುಗಳ ಆವರಣಗಳನ್ನ ಯಜಮಾನ ನಿಯೋಜಿಸುತ್ತಾನೆ. ಹೀಗಾಗಿ ಬೆಡ್‌ರೂಂ ಸಂಯೋಜನೆ ಈ ಎಲ್ಲಾ ನಿಟ್ಟಿನಿಂದ ಸೂಕ್ತ ರೂಪವನ್ನು ವಾಸ್ತು ದೃಷ್ಟಿಯಿಂದ ಪಡೆಯಲೇ ಬೇಕಾದ್ದು ಅನಿವಾರ್ಯವಾಗಿದೆ. ಜೀವನದ ಶೈಲಿಯಲ್ಲಿನ ಶಾಂತಿ, ನೆಮ್ಮದಿಗೆ ಬೆಡ್‌ರೂಮ್‌ ಪ್ರಧಾನವಾಗಿದೆ.

ಶಾಂತಿ, ನೆಮ್ಮದಿಯ ವಿಚಾರದಲ್ಲಿ ಏರುಪೇರುಗಳಾದ ಬೆಡ್‌ ರೂಮ್‌ ವಿನ್ಯಾಸಕ್ಕೆ ಕೆಲವು ಚಾಲನೆಗಳನ್ನು ನೀಡಲೇಬೇಕು. ಮಲಗುವ ಕೋಣೆಯ ಕಿಟಕಿಗಳ ಸ್ವರೂಪ, ಬಾಗಿಲು, ಕನ್ನಡಿಗಳ ಹೊಂದಾಣಿಕೆಯಲ್ಲಿ, ಗೋಡೆಗಳ ಬಣ್ಣ, ಅಲಂಕಾರಕ್ಕಾಗಿ ಇರಿಸಲ್ಪಟ್ಟ ಚಿತ್ರಗಳು, ಅಂದ ಹೆಚ್ಚಿಸುವ ಕೆತ್ತನೆಗಳಲ್ಲಿ ಯಾವಾ ಯಾವ ಚಿತ್ರಗಳು ಮೂಡಿವೆ ಎಂಬಿತ್ಯಾದಿ ಅಂಶಗಳತ್ತ ಗಮನಹರಿಸಿ. ಮಲಗುವ ಕೋಣೆಯಲ್ಲೇ ದೇವರ ಪೀಠ, ಪೂಜಾ ಸ್ಥಳ ಒಳಗೊಳ್ಳಕೂಡದು.

ಕಸ, ತ್ಯಾಜ್ಯಗಳು ಬೆಡ್‌ರೂಮಿನಲ್ಲಿ ಪೇರಿಸಲ್ಪಡುವ ಅಂಶವನ್ನ ಸರಿಪಡಿಸಿ. ನಿಮ್ಮ ಜನ್ಮ ಕುಂಡಲಿಯ ಆಧಾರದಲ್ಲಿ ಬಹು ಮುಖ್ಯವಾದ ವರ್ಣಗಳನ್ನು ಗೋಡೆಯ ಬಣ್ಣಗಳ ವಿಷಯದಲ್ಲಿ ಆಯ್ಕೆ ಮಾಡಿಕೊಳ್ಳಿ. ಜೀವನದ ಸುಗಮತೆಗೂ, ಹಗಲಿನ ಆಕಾಶದ ನೀಲ ಛಾಯೆಗೂ ಒಂದು ಸುಸಂಬದ್ಧ ಹೊಂದಾಣಿಕೆ ಇರುವುದರಿಂದ ಆಕಾಶ ನೀಲಿಯು ಮಲಗುವ ಕೋಣೆಗೆ ಸೂಕ್ತವಾದ ಬಣ್ಣ ಬಹುತೇಕವಾಗಿ ಮನುಷ್ಯನ ಮನಸ್ಸಿನ ಮೂಲೆಯ ಬುದ್ಧಿ ಚೇತನವನ್ನು ಸ್ಪಂದಿಸಲಾರದು ಕಪ್ಪು ಬಣ್ಣವನ್ನು ಮಲಗುವ ಮಂಚದೆದುರಿಗೆ ದೃಷ್ಟಿಗೆ ಬೀಳುವಂತೆ ಇರದಿರುವಂತೆ ನೋಡಿಕೊಳ್ಳಿ.

ಕಿಟಕಿಗಳನ್ನು ತೆರೆದಾಗ, ಮುಚ್ಚಿದಾಗ ಯಾವ ಕಾಲದಲ್ಲಿ ಯಾವುದು ಸೂಕ್ತ ಎಂಬುದನ್ನರಿತು. ಎಷ್ಟೆಷ್ಟು ಹೊರಗಿನ ಗಾಳಿ ಒಳಗೆ ಬರುತ್ತಿರಬೇಕು ಎಂಬುದನ್ನು ನಿರ್ಧರಿಸಿ. ಆ ರೀತಿಯಲ್ಲಿ ಕಿಟಕಿಗಳನ್ನು ತೆರೆಯುವ, ಮುಚ್ಚುವ ವ್ಯವಸ್ಥೆ ಇರಲಿ. ಗಾಳಿ ಜೋರಾಗಿ ಬಂದಾಗ ಡಬ್‌ ಎಂದು ಕಿಟಿಕಿಗಳು ಬಡಿದು ಕೊಳ್ಳುವಂತೆ ಇರಲಿ. ಕಿಟಕಿಗಳಿಗೆ ಉಜ್ಜಿದ ಹುರುಬುರುಕು ಗಾಜು ಇರಲಿ. ಪೂರ್ತಿ ಪಾರದರ್ಶಕವಾದ ಗಾಜುಗಳು ಬೇಡ. ನೀಲಿ, ಕೇಸರಿ, ಚಾಕಲೇಟ್‌, ಹಸಿರು ಬಣ್ಣಗಳ
ಚಿತ್ತಾರದ ಡೊಂಕು ಗೆರೆಗಳು ಗಾಜುಗಳ ಮೇಲೆ ಉಬ್ಬಿದ ಸ್ವರೂಪದಲ್ಲಿ ಮೂಡಿರುವುದು ಸೂಕ್ತ.

ಪ್ರಖರ ಬೆಳಕು ರಾಚದಿರಲಿ ಬೆಡ್‌ರೂಮಿನಲ್ಲಿ. ಮಂದ ಸ್ವರೂಪದಿಂದ, ಓದಲು ಖುಷಿ ಇರುವಷ್ಟೇ ಬೆಳಕಿದ್ದರೆ ಉತ್ತಮ. ಮಲಗುವ ಮಂಚದ ನೇರ ಎತ್ತರಕ್ಕೆ ದೀಪದ ಗೊಂಚಲು ತೂಗಿಕೊಂಡಿರುವುದು ಬೇಡ. ಭಾರವಾದ ಕಬ್ಬಿಣದ ತೊಲೆಗಳು ಮಲಗುವ ಸ್ಥಳದ ನೇರಕ್ಕೆ ಛಾವಣಿಗೆ ಬೇಡ. ಹಾಗೆಯೇ ತಲೆ ದಿಂಬುಗಳ ಕಡೆಗೆ ಒರಟು ವಸ್ತುಗಳನ್ನು ಇಡಬೇಡಿ. ಮಂಚದ ಅವಶ್ಯಕತೆ ಮಲಗುವುದಕ್ಕೆ ಮಾತ್ರ ಸೀಮಿತವಿರಲಿ. ಎಲ್ಲಾ ದಿಕ್ಕುಗಳಿಂದ ಮಂಚವನ್ನು ತಲುಪುವ ಹಾಗೆ ಅಂತರ ಇರಲಿ. ಒಂದು ಕಡೆ ಇಳಿ ಜಾರಿರುವಂತೆ ಮಲಗುವ ಕೋಣೆಯ ಛಾವಣಿಯ ವಿನ್ಯಾಸವನ್ನು ರೂಪಿಸಬೇಡಿ. ತಲೆಯ ಕಡೆಯಿಂದ ತುಸು ದೂರಕ್ಕೆ ಇಳಿ ಬಿಟ್ಟ ಫ್ಯಾನ್‌ಗಳಿರಲಿ. ಕಿಟಕಿಗಳ ಒಮ್ಮೆಗೇ ತೀರಾ ಹತ್ತಿರಕ್ಕೆ
ಮಲಗುವ ಮಂಚ ಇರದಿರಲಿ. ಅಂತೂ ಮಲಗುವ ರೂಮು ನಿಮ್ಮ ದಿವ್ಯವಾದ ದಿನವೊಂದನ್ನು ಮುಗಿಸಿ ಮಗದೊಂದು ದಿವ್ಯತೆಯನ್ನು ಸ್ವಾಗತಿಸುವ ವರ್ತಮಾನಕ್ಕೆ ಹೊಂದಿಕೊಳ್ಳುವಂತೆ ಶುಚಿಯಾಗಿರಲಿ. 

- ಅನಂತಶಾಸ್ತ್ರಿ


Trending videos

Back to Top