ರೈತರಿಗೆ ಬೇಕು ಸೂಕ್ತ ಕೃಷಿ ಸಾಲ ವ್ಯವಸ್ಥೆ


Team Udayavani, Feb 13, 2017, 3:45 AM IST

krishi-sala-vyavaste.jpg

ವರುಷದಿಂದ ವರುಷಕ್ಕೆ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. 1995ರಿಂದ 2014ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ಕೃಷಿ ಕಾರ್ಮಿಕರ ಸಂಖ್ಯೆ ಮೂರು ಲಕ್ಷಕ್ಕಿಂತ ಜಾಸ್ತಿ. ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯುರೋ ನಮ್ಮ ದೇಶದ ಆತ್ಮಹತ್ಯೆಗಳ ಬಗ್ಗೆ 49ನೇ ವಾರ್ಷಿಕ ವರದಿಯನ್ನು ಜನವರಿ 2017ರಲ್ಲಿ ಪ್ರಕಟಿಸಿದೆ. ಅದರ ಅನುಸಾರ, 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು 8,007 ಮತ್ತು ಕೃಷಿಕಾರ್ಮಿಕರು 4,595 (ಒಟ್ಟು 12,602). 2014ಕ್ಕೆ ಹೋಲಿಸಿದಾಗ 2015ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 2 ಹೆಚ್ಚಳವಾಗಿದೆ.

ಕಳೆದ 15 ವರ್ಷಗಳಲ್ಲಿ ಈ ಮಾಹಿತಿ ಪ್ರಕಟವಾದಾಗೆಲ್ಲ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದು ರಾಷ್ಟ್ರವಾಗಿ ಇಂತಹ ದುರಂತಗಳ ಬಗ್ಗೆ ನಮಗೆ ಕಿಂಚಿತ್ತೂ ಆತಂಕವಿಲ್ಲವೇ?

ಈ ಮಾಹಿತಿ ಬಹಿರಂಗವಾದ 48 ಗಂಟೆಗಳೊಳಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಅನಂತರ ಸದ್ದಿಲ್ಲದೆ ಈ ಸ್ಫೋಟಕ ಸುದ್ದಿಯ ಸಮಾಧಿ ಮಾಡಲಾಯಿತು. ಅದೇ ಸಂದರ್ಭದಲ್ಲಿ, ಅಧಿಕ ಬೆಲೆಯ ನೋಟುಗಳ ಮಾನ್ಯತೆ ರದ್ದು ಮತ್ತು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸಿದ್ದೀರಾ? ಆ ಗದ್ದಲದಲ್ಲಿ ರೈತರ ಆತ್ಮಹತ್ಯೆಗಳು 2017ನೇ ವರ್ಷದಲ್ಲಿ ಹೆಚ್ಚಾಗುವ ಸೂಚನೆಗಳು ಯಾವುವು ಎಂಬ ಚರ್ಚೆ ಹುಟ್ಟಲೇ ಇಲ್ಲ!

2015ರಲ್ಲಿ ಅತ್ಯಧಿಕ ಸಂಖ್ಯೆಯ (4,291) ರೈತರು ಆತ್ಮಹತ್ಯೆ ಮಾಡಿಕೊಂಡದ್ದು ಮಹಾರಾಷ್ಟ್ರದಲ್ಲಿ; ಇನ್ನೂ ಮೂರು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಗಳು ಒಂದು ಸಾವಿರಕ್ಕಿಂತ ಅಧಿಕ: ಕರ್ನಾಟಕದಲ್ಲಿ 1,559, ತೆಲಂಗಾಣದಲ್ಲಿ 1,400, ಮಧ್ಯಪ್ರದೇಶದಲ್ಲಿ 1,290. ತಮಿಳುನಾಡಿನ ಪರಿಸ್ಥಿತಿಯಂತೂ ರೈತರ ಹತಾಶೆಯ ಸ್ಪಷ್ಟ ಸೂಚನೆ ನೀಡಿತು: ಅಲ್ಲಿ ಒಂದೇ ತಿಂಗಳಿನಲ್ಲಿ ಪ್ರಾಣತ್ಯಾಗ ಮಾಡಿದ ರೈತರ ಸಂಖ್ಯೆ ಒಂದು ನೂರಕ್ಕಿಂತ ಅಧಿಕ! 

ಈ ಎಲ್ಲ ರಾಜ್ಯಗಳೂ ಕಳೆದ ಮೂರು ವರ್ಷಗಳಲ್ಲಿ ಭೀಕರ ಬರಗಾಲದಿಂದ ತತ್ತರಿಸಿವೆ. ಅಲ್ಲಿನ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಸಾಲ ಪಡೆಯುತ್ತಿ¨ªಾರೆ. ಆದರೆ, ಬೆಳೆ ನಷ್ಟವಾಗಿ, ಸಾಲ ತೀರಿಸಲಾಗದೆ ಕಂಗಾಲಾಗುತ್ತಿ¨ªಾರೆ. ಹಾಗಿರುವಾಗ ಸಾವಿರಗಟ್ಟಲೆ ರೈತರ ಆತ್ಮಹತ್ಯೆ ಕೇವಲ ಎಚ್ಚರಿಕೆಯ ಗಂಟೆಯಲ್ಲ. ಅದು ರೈತರ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳನ್ನು ತುರ್ತಾಗಿ ಸಮರೋಪಾದಿಯಲ್ಲಿ ಆರಂಭಿಸಬೇಕೆಂಬ ಎಚ್ಚರಿಕೆಯ ಗುಡುಗು.

ಕಳೆದೆರಡು ವರುಷಗಳಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣ ತೀವ್ರ ಬರಗಾಲ. ತಮಿಳುನಾಡಿನ ಮುಖ್ಯಮಂತ್ರಿ ಇಡೀ ರಾಜ್ಯವೇ ಬರಪೀಡಿತವೆಂದು ಘೋಷಿಸಿ¨ªಾರೆ. ಕರ್ನಾಟಕದ ಒಟ್ಟು 176 ತಾಲೂಕುಗಳಲ್ಲಿ 160 ಬರಪೀಡಿತವೆಂದು ಸರಕಾರವು ಫೆಬ್ರವರಿ 2017ರ ಆರಂಭದಲ್ಲಿ ಘೋಷಿಸಿದೆ. ರೈತರ ಆತ್ಮಹತ್ಯೆಗಳ ಹೊಸ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಇನ್ನೊಂದು ಸುದ್ದಿಯೂ ಸದ್ದು ಮಾಡುತ್ತಿತ್ತು: ಅದೇನೆಂದರೆ, ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ, ನವಂಬರ್‌  ಡಿಸೆಂಬರ್‌ 2016ರಲ್ಲಿ ಬ್ಯಾಂಕುಗಳು ಈ ಮೂರು ವರ್ಗಗಳಿಗೆ ನೀಡಿದ ಸಾಲದ ಪ್ರಮಾಣ ಚರಿತ್ರೆಯÇÉೇ ಅತ್ಯಂತ ಕಡಿಮೆ  ವ್ಯಾಪಾರವಹಿವಾಟಿಗೆ, ವ್ಯಕ್ತಿಗಳಿಗೆ ಮತ್ತು ರೈತರಿಗೆ. 

ಗ್ರಾಮೀಣ ಸಾಲ ವ್ಯವಸ್ಥೆ ಕುಸಿಯಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಪ್ರಧಾನ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಏರುತ್ತಿರುವ ಸಾಲದ ಹೊರೆ ರೈತರನ್ನು ಹೈರಾಣ ಮಾಡಿದೆ. ಸೋತು ಸುಣ್ಣವಾಗಿದ್ದ ರೈತರು, 2016ರಲ್ಲಿ ಸಾಧಾರಣ ಮಳೆ ಆಗುತ್ತದೆಂದು ನಿರೀಕ್ಷಿಸಿದ್ದರು. ಸಾಧಾರಣ ಮಳೆ ಬಂತು, ರೈತರಿಗೆ ಬಂಪರ್‌ ಫ‌ಸಲೂ ಬಂತು. ಆದರೆ, ಸರಕಾರವು ರೈತರ ಕೈಬಿಟ್ಟಿತು. ರೂ.500 ಮತ್ತು ರೂ.1,000ದ ನೋಟುಗಳ ಮಾನ್ಯತೆ ರದ್ದು ಮಾಡಿದ್ದರಿಂದಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುಸಿಯಿತು; ಅದರೊಂದಿಗೆ ರೈತರ ಆಸೆಗಳೆಲ್ಲ ಮಣ್ಣುಪಾಲಾದವು.

ಕರ್ನಾಟಕದಲ್ಲಿ ಕೆಲವೆಡೆ ಎಲೆಕೋಸು ಬೆಳೆದ ರೈತರು ಎಲೆಕೋಸಿನ ಹೊಲದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿ¨ªಾರೆ. ಇನ್ನು ಕೆಲವೆಡೆ ಟ್ರಾಕ್ಟರಿನಿಂದ ಎಲೆಕೋಸಿನ ಹೊಲ ಉಳುಮೆ ಮಾಡಿ, ತಾವೇ ಬೆಳೆದಿದ್ದ ಎಲೆಕೋಸನ್ನು ಮಣ್ಣಿಗೆ ಸೇರಿಸುತ್ತಿ¨ªಾರೆ. ಯಾಕೆಂದರೆ ಎಲೆಕೋಸಿನ ಬೆಲೆ ಕಿ.ಲೋಗ್ರಾಂಗೆ ಒಂದು ರೂಪಾಯಿಗೆ ಕುಸಿದಿದೆ. ಹಾಗಾಗಿ ಕೊಯ್ದು ಮಾರಿದರೆ ರೈತರಿಗೆ ಕೊಯ್ಲಿನ ಮಜೂರಿ ವೆಚ್ಚವೂ ಗಿಟ್ಟುವುದಿಲ್ಲ. 

ಹಾಗಾದರೆ, ರೈತರು ಈಗೇನು ಮಾಡಲಿ¨ªಾರೆ? ಅವರು ಹೆಚ್ಚು ಸಾಲ ಮಾಡಲಿ¨ªಾರೆ  ದೈನಂದಿನ ವೆಚ್ಚಕ್ಕಾಗಿ, ಚಳಿಗಾಲದ ಬೆಳೆ ಉಳಿಸಿಕೊಳ್ಳಲಿಕ್ಕಾಗಿ ಮತ್ತು ಬೇಸಗೆಯ ಬೆಳೆಯ ತಯಾರಿಗಾಗಿ. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕಿನ ಮಾಹಿತಿಯ ಪ್ರಕಾರ, ಬ್ಯಾಂಕ್‌ ಇತ್ಯಾದಿ ಸಾಂಸ್ಥಿಕ ಮೂಲಗಳಿಂದ ರೈತರಿಗೆ ನೀಡಲಾದ ಒಟ್ಟು ಸಾಲ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿಯ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಇದು ರೈತರ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ಸಾಲವನ್ನೆಲ್ಲ ಅವರು ಮರುಪಾವತಿಸಲು ಸಾಧ್ಯವೇ? ಹಂಗಾಮಿನಿಂದ ಹಂಗಾಮಿಗೆ ರೈತರ ಸಾಲದ ಹೊರೆ ಹೆಚ್ಚಾಗುತ್ತ ಹೋದಂತೆ ಅವರು ಹತಾಶರಾಗಿ, ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ. 

ಹಾಗಿರುವಾಗ, ರೈತರನ್ನು ಈ ಸಾಲದ ಸುಳಿಯಿಂದ ರಕ್ಷಿಸಲಿಕ್ಕಾಗಿ ಸರಕಾರ ಏನು ಮಾಡಬೇಕು? ತಟಕ್ಕನೆ ಅಧಿಕ ಮೌಲ್ಯದ ನೋಟುಗಳ ಮಾನ್ಯತೆ ರದ್ದು ಮಾಡಿ, ರೈತರಿಗೂ ಸಲೀಸಾಗಿ ನಗದು ಸಿಗದಂತೆ ಮಾಡಿದ ಸರಕಾರ, ಈಗ ರೈತರಿಗೆ ಸುಲಭವಾಗಿ ಕೃಷಿಸಾಲ ಸಿಗುವ ವ್ಯವಸ್ಥೆ ಮಾಡಬೇಕು.

ಫೆಬ್ರವರಿ 1, 2017ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ 2017-18ರ ಬಜೆಟಿನಲ್ಲಿ ಈ ಬಗ್ಗೆ ಪ್ರಮುಖ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ಬಜೆಟಿನಲ್ಲಿ ರೂಪಾಯಿ 9 ಲಕ್ಷ ಕೋಟಿ ಹಣವನ್ನು ಕೃಷಿ ಸಾಲಕ್ಕಾಗಿ ಮೀಸಲಾಗಿಟ್ಟಿದ್ದ ಕೇಂದ್ರ ಸರಕಾರ, ಈ ಬಜೆಟಿನಲ್ಲಿ ಅದನ್ನು ರೂಪಾಯಿ ಹತ್ತು ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಸಾಲ ರೈತರಿಗೆ ಶೇಕಡಾ 7 ಬಡ್ಡಿದರದಲ್ಲಿ ಸಿಗಲಿದೆ. ಜೊತೆಗೆ, ಸಕಾಲದಲ್ಲಿ ಕೃಷಿಸಾಲ ಮರುಪಾವತಿಸಿದ ರೈತರಿಗೆ ಶೇಕಡಾ 3 ಬಡ್ಡಿ ರಿಯಾಯ್ತಿ ಮುಂದುವರಿಯಲಿದೆ. ಕೇಂದ್ರ ಬಜೆಟಿನ ಈ ಕ್ರಮಗಳು ಸರಿಯಾಗಿ ಜಾರಿಯಾಗಿ, ರೈತರ ಸಂಕಟ ಕಡಿಮೆಯಾಗಲೆಂದು ಹಾರೈಸೋಣ.

– ಅಡ್ಕೂರು ಕೃಷ್ಣ ರಾವ್

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.