ಡಿಟಿಎಚ್‌ ಬಳಕೆದಾರರ ನೆರವಿಗೂ ಇದೆ ಕಾನೂನು ಚೌಕಟ್ಟು!


Team Udayavani, Jul 17, 2017, 2:50 AM IST

dth.jpg

ಡೈರೆಕ್ಟ್ ಟು ಹೋಮ್‌ ಸರ್ವೀಸ್‌ ಎಂಬ ನೇರ ಉಪಗ್ರಹ ಸೇವೆಯ ಬಗ್ಗೆ ಸಾಕಷ್ಟು ಜನರಿಗೆ ಪರಿಚಯವಿದೆ. ಸಂಕ್ಷಿಪ್ತವಾಗಿ ಇದನ್ನು ಡಿಟಿಎಚ್‌ ಎನ್ನುತ್ತೇವೆ. ಇಂಥದೊಂದು ಸೇವೆ ಆರಂಭವಾದಾಗ ಕೇಬಲ್‌ ಸಂಪರ್ಕದ ಸೌಲಭ್ಯ ಸಾಧ್ಯವಿಲ್ಲದವರು. ಗ್ರಾಮೀಣ ಭಾಗದ ಜನರು ಈ ಸೇವೆಯ ಗ್ರಾಹಕರಾದರು. ಕೇಬಲ್‌ ಸೇವೆಯ ವ್ಯತ್ಯಯಗಳು ಮತ್ತು ಅದಕ್ಕಿಂತ ಮುಖ್ಯವಾಗಿ, ಹೆಚ್ಚು ಸ್ವತಂತ್ರ ನಿರ್ಣಯಗಳ ಪ್ರಕಾರ ಬೇಕಾದ ಚಾನೆಲ್‌ ನೋಡಲು ಬಯಸುವ ನಗರ ವಾಸಿಗಳು ಕೂಡ ನಂತರದ ದಿನಗಳಲ್ಲಿ ಡಿಟಿಎಚ್‌ ಗ್ರಾಹಕರಾದರು. ಇತ್ತೀಚಿನ ದಿನಗಳಲ್ಲಂತೂ, ಕೇಬಲ್‌ ಟಿವಿ ಸೌಲಭ್ಯದಲ್ಲೂ ಬೇಕಾದ ಚಾನೆಲ್‌ ನೋಡಲು ಆಯ್ಕೆ ಮಾಡುವ ಸೆಟ್‌ಟಾಪ್‌ ಬಾಕ್ಸ್‌ ತಾಂತ್ರಿಕತೆಯ ಅಳವಡಿಕೆಯಾದಾಗಲೂ ಸಹ, ಡಿಟಿಎಚ್‌ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. 

ಸೌಲಭ್ಯಗಳ ಹೊರತಾಗಿಯೂ ಡಿಟಿಎಚ್‌ ಕ್ಷೇತ್ರದಲ್ಲೂ ಸಮಸ್ಯೆಗಳಿವೆ. ಬಹುರಾಷ್ಟ್ರೀಯ ಕಂಪನಿಗಳು, ದೇಶೀಯ ವ್ಯವಸ್ಥೆಗಳು ಸೇರಿದಂತೆ ಸುಮಾರು 6 ಡಿಟಿಎಚ್‌ ಸೇವಾದಾತರು ಕಾರ್ಯ ನಿರ್ವಸುತ್ತಿದ್ದರೂ, ಅವರ ಅಂತಿಮ ಗುರಿ ಗ್ರಾಹಕರ ಜೇಬು ಕತ್ತರಿಸುವುದೇ. ಹಾಗೊಂದು ಅನುಮಾನ ಬರುವಂತೆಯೇ ಅವರ ಕಾರ್ಯಾಚರಣೆ ಇದೆ. 1996ರಲ್ಲಿ ಡಿಟಿಎಚ್‌ ಅನುಮೋದನೆಯ ಪ್ರಸ್ತಾಪ ಇದ್ದರೂ ಸರ್ಕಾರ ಅದಕ್ಕೆ ಮುಂದಾಗಲಿಲ್ಲ. 97ರಲ್ಲಂತೂ ರುಪೋಕ್‌ ಮುಡೋìಕ್‌ರ ಸ್ಕೈ ಹೆಸರಿನಲ್ಲಿ ಬರಲು ಮುಂದಾದಾಗ ಸರ್ಕಾರ ಅದಕ್ಕೆ ಅಕ್ಷರಶಃ ನಿಷೇಧ ಹೇರಿತ್ತು. ಅಂತೂ 2000ದಲ್ಲಿ ಹಸಿರು ನಿಶಾನೆ ಪಡೆದ ಡಿಟಿಎಚ್‌ ಕ್ಷೇತ್ರದ ಮೊದಲ ಪಾದಾರ್ಪಣೆ ಆಗಿದ್ದು 2003ರಲ್ಲಿ, ಡಿಷ್‌ ಟಿವಿ ರೂಪದಲ್ಲಿ. ಇಂದು ಡಿಷ್‌ ಟಿವಿ ಶೇ.25ರಷ್ಟು ಮಾರುಕಟ್ಟೆ ಪಡೆದಿದ್ದರೆ ಟಾಟಾ ಸ್ಕೈ ಶೇ.23, ಏರ್‌ಟೆಲ್‌, ವಿಡಿಯೋಕಾನ್‌ ಶೇ.20, ಸನ್‌ ಶೇ. 10 ಹಾಗೂ ರಿಲಯನ್ಸ್‌ ಶೇ. 2ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿವೆ.

ಅದಿರಲಿ, ಈ ಸೇವೆಯು ಭಾರತೀಯ ದೂರವಾಣಿ ನಿಯಂತ್ರಣ ಆಯೋಗ -( ಟ್ರಾಯ್‌) ಮೇಲ್ವಿಚಾರಣೆಗೆ ಒಳಪಡುತ್ತದೆ. ಡಿಟಿಎಚ್‌ ಬಂದ ಬರೋಬ್ಬರಿ 4 ವರ್ಷಗಳ ನಂತರ ಟ್ರಾಯ್‌ 2007ರ ಆಗಸ್ಟ್‌ 31ರಂದು “ದಿ ಡೈರೆಕ್ಟ್ ಟು ಹೋಮ್‌’ ಸೇವಾ ಕಾನೂನು (ಸೇವಾ ಗುಣಮಟ್ಟ ಹಾಗೂ ದೂರು ಪರಿಹಾರ) ನಿಬಂಧನೆ ಎಂಬ ಶೀರ್ಷಿಕೆಯಡಿ ನೋಟಿಫಿಕೇಷನ್‌ ಅನ್ನು ಜಾರಿ ಮಾಡಿತು. ಈ ಕಾನೂನು ಬಹುಪಾಲು ಮೊಬೈಲ್‌ ಕ್ಷೇತ್ರದ ನಿಯಮಗಳನ್ನೇ ಹೋಲುವುದು ವಿಶೇಷ. ಆ ವೇಳೆಗೆ ಮೊಬೈಲ್‌ ಕ್ಷೇತ್ರವನ್ನು ನೇರ್ಪುಗೊಳಿಸುವ ಧಾವಂತದಲ್ಲಿದ್ದ ಟ್ರಾಯ್‌, ಡಿಟಿಎಚ್‌ ಬಗ್ಗೆ ಕಾನೂನು ರೂಪಿಸಲು ವಿಳಂಬ ಮಾಡಿತು.

ನಾವು ರಿಸೀವರ್‌ ಎಂದು ಕರೆಯುವುದನ್ನು ತಾಂತ್ರಿಕ ಭಾಷೆಯಲ್ಲಿ ಸೆಟ್‌ಟಾಪ್‌ ಬಾಕ್ಸ್‌(ಎಸ್‌ಟಿಬಿ) ಎನ್ನಲಾಗುತ್ತದೆ. ಇದನ್ನು ಡಿಟಿಎಚ್‌ ಸೇವಾದಾತರು (ಉದಾಹರಣೆಗೆ ಜೀ ಅವರ ಡಿಷ್‌ ಟಿವಿ, ಟಾಟಾ ಸ್ಕೈ, ಸನ್‌ ಡಿಷ್‌) ಬಳಕೆದಾರರಿಗೆ ಬಾಡಿಗೆ ಲೆಕ್ಕದಲ್ಲಿ ಅಥವಾ ಖರೀದಿಯ ಮಾದರಿಯಲ್ಲಿ ಒದಗಿಸಬೇಕು. ಇವತ್ತಿಗೂ ಡಿಷ್‌ ಟಿವಿಯವರು ಕೇವಲ 5 ವರ್ಷದ ಬಾಡಿಗೆಗೆ ಎಂಬ ಅರ್ಥದಲ್ಲಿಯೇ ಎಸ್‌ಟಿಬಿಯನ್ನು ಪೂರೈಸುತ್ತಿದ್ದಾರೆ. ಸೇವಾದಾತರ ಷರತ್ತುಗಳನ್ನು ಮೀರಿ, ಡಿಟಿಎಚ್‌ ಬಳಕೆದಾರ ಯಾವುದೇ ರೀತಿಯಲ್ಲಿ ಎಸ್‌ಟಿಬಿಯನ್ನು ಸ್ವಯಂ ಹಾಳುಗೆಡವದಿದ್ದ ಪಕ್ಷದಲ್ಲಿ, ಬಾಡಿಗೆ ರೂಪದಲ್ಲಿ ಅಳವಡಿಸಿಕೊಂಡ ಎಸ್‌ಟಿಬಿಯ ದುರಸ್ತಿ ಜವಾಬ್ದಾರಿ ಡಿಟಿಎಚ್‌ ಸೇವಾದಾತರದ್ದು.

ಒಂದೊಮ್ಮೆ ಈ ಕಾನೂನು ಜಾರಿಗೆ ಬರುವ ಮುನ್ನವೇ ಗ್ರಾಹಕರಿಗೆ ಡಿಟಿಎಚ್‌ ಸೇವಾದಾತರು ಬಿಐಎಸ್‌ ಮಾನ್ಯತೆ ಪಡೆಯದ ಎಸ್‌ಟಿಬಿಯನ್ನು ಪೂರೈಸಿದ್ದರೆ ಏನು ಮಾಡಬೇಕು? ನಿಬಂಧನೆಗಳ ಅನ್ವಯ, ಹೊಸ ಕಾನೂನು ಜಾರಿ ಬಂದ ಏಳು ದಿನಗಳಲ್ಲಿ ಸ್ವತಃ ಸೇವಾದಾತರು ಯಾವುದೇ ವೆಚ್ಚ ಪಡೆಯದೆ ಗ್ರಾಹಕನಿಗೆ ಹಳೆ ಎಸ್‌ಟಿಬಿ ಬದಲು ಹೊಸದಾದ ಬಿಐಎಸ್‌ ಗುರುತಿನ ಎಸ್‌ಟಿಬಿ ಒದಗಿಸಬೇಕು.

ಹೊಸ ಕಾನೂನಿನ ಪ್ರಕಾರ, ಬಳಕೆದಾರ ತನ್ನ ಸಂಪರ್ಕವನ್ನು ರದ್ದುಗೊಳಿಸಲೂ ಅವಕಾಶವಿದೆ. ಅರ್ಜಿದಾರನ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ, ಪಡೆದ ಪ್ಲಾನ್‌, ನೋಂದಣಿ ಸಂಖ್ಯೆ ಮುಂತಾದ ವಿವರಗಳನ್ನು ತುಂಬಲು ಅವಕಾಶರುವ ಅರ್ಜಿಯನ್ನು ಸೇವಾದಾತರೇ ಗ್ರಾಹಕರಿಗೆ ಒದಗಿಸಬೇಕು. ಅಷ್ಟೇಕೆ, ಓರ್ವ ಗ್ರಾಹಕನಿಂದ ಇನ್ನೋರ್ವ ಗ್ರಾಹಕನಿಗೆ ಡಿಷ್‌ ಸಂಪರ್ಕವನ್ನು ವರ್ಗಾಯಿಸಲೂ ನಿಯಮ ರೂಪಿಸಲಾಗಿದೆ. ಈ ಮಾದರಿಯ ವರ್ಗಾವಣೆ, ರದ್ದು, ಪುನರ್‌ ಸಂಪರ್ಕಗಳ ವಿನಂತಿಯನ್ನು ಸ್ವೀಕರಿಸಿದ ಐದು ದಿನಗಳಲ್ಲಿ ತಾಂತ್ರಿಕ ಅನುಕೂಲವಿದ್ದಲ್ಲಿ ಕೆಲಸ ಪೂರ್ಣಗೊಳಿಸಿಕೊಡಬೇಕು.

ಚಾನೆಲ್‌ ಮಾಯ!
ಯಾವುದೇ ಪೂರ್ವ ಸೂಚನೆ ಇಲ್ಲದೆ ಬಳಕೆದಾರನ ಯೋಜನೆಯ ಚಾನೆಲ್‌ಅನ್ನು ಇದ್ದಕ್ಕಿದ್ದಂತೆ ಪ್ರಸಾರ ಮಾಡದೆ ನಿಲ್ಲಿಸುವಂತಿಲ್ಲ. ಈ ಷರತ್ತು ಪ್ರಕೃತಿ ವಿಕೋಪ, ಇನ್ನಿತರ(ಸೇವಾದಾತರ ಕೈ ಮೀರಿದ) ಕಾರಣಗಳಿಂದ ಚಾನೆಲ್‌ ಪ್ರಸಾರ ನಿಂತರೆ ಅನ್ವಯಿಸುವುದಿಲ್ಲ. 2007ರ ಕಾಯ್ದೆಗೆ 2009 ಹಾಗೂ 2017ರಲ್ಲಿ ಕೆಲವು ತಿದ್ದುಪಡಿಗಳಾಗಿದ್ದು, ಗ್ರಾಹಕನ ಪ್ಯಾಕೇಜ್‌ ಅನ್ನು ಆರು ತಿಂಗಳ ಅವಧಿಯ ಮುನ್ನ ಬದಲಿಸುವಂತಿಲ್ಲ. ಡಿಟಿಎಚ್‌ ಫಾಮ್ಯಾìಟ್‌ನಲ್ಲಿ ನಿಶ್ಚಿತ ಚಾನೆಲ್‌ ಇತರ ಕಾರಣಗಳಿಗೆ ಅಲಭ್ಯ ಎಂಬ ಸಂದರ್ಭದಲ್ಲಿ ಅದರ ದರವನ್ನು ಪ್ಯಾಕೇಜ್‌ ದರದಲ್ಲಿ ಕಡಿತಗೊಳಿಸಿ, ಗ್ರಾಹಕನ ವ್ಯಾಲಿಡಿಟಿಯಲ್ಲಿ ಹೊಂದಾಣಿಕೆ ಮಾಡಲು ಆದೇಶಿಸಲಾಗಿದೆ. ಅಷ್ಟಕ್ಕೂ ಚಾನೆಲ್‌ ಮಾಯವಾಗಲಿದೆ ಎಂಬ ಬಗ್ಗೆ 15 ದಿನಗಳ ಮುಂಚಿತ ನೋಟೀಸ್‌ ಅನ್ನು ಕೊಡಲೇಬೇಕು.

ಇದ್ದಕ್ಕಿದ್ದಂತೆ ಚಂದಾದಾರನಿಗೆ ಸೇವೆ ನಿಲ್ಲಿಸಲು ಡಿಟಿಎಚ್‌ ಸೇವಾದಾತರಿಗೆ ಅವಕಾಶ ಇಲ್ಲ. ಅಂತಹ ಸಂದರ್ಭದಲ್ಲಿ ಪೂರ್ವ ಸೂಚನೆಯನ್ನು ಕಾರಣ ಸಮೇತ ಒದಗಿಸಬೇಕಾಗುತ್ತದೆ. ಒಂದೊಮ್ಮೆ ವ್ಯವಸ್ಥೆಯ ಸುರಕ್ಷತೆ ನಿರ್ವಹಣೆಗೆಂದು ಡಿಟಿಎಚ್‌ ಸೇವೆ ಕೆಲಕಾಲ ನಿಲ್ಲಿಸಬೇಕಾಗಿ ಬಂದರೂ ಪೂರ್ವಸೂಚನೆ ಕೊಡಬೇಕಾದುದು ಕಡ್ಡಾಯ. ಅಲ್ಲದೇ, ಮತ್ತೆ ಸೇವೆ ಆರಂಭಗೊಳ್ಳುವ ದಿನವನ್ನೂ ಸೂಚಿಸಬೇಕಾಗುತ್ತದೆ. ಚಂದಾ ಹಣವನ್ನು ಪೂರ್ವ ಪಾವತಿ ಮಾಡುವ ವಿಧಾನ ಜಾರಿಯಲ್ಲಿರುವುದರಿಂದ ಖಾತೆಯಲ್ಲಿ ಹಣಲ್ಲದಿದ್ದಾಗ ಚಾನೆಲ್‌ ಪ್ರಸಾರ ನಿಲ್ಲಿಸುವುದಕ್ಕೆ ಸೇವಾದಾತರಿಗೆ ನಿರ್ಬಂಧವಿಲ್ಲ.

ಬಹುಶಃ ನಿಬಂಧನೆಯ ಗಮನಿಸಬೇಕಾದ ಅಂಶ ಈ ಮುಂದಿನದು. ಎಸ್‌ಟಿಬಿಗೆ ಸಂಬಂಧಿಸಿದಂತೆ ಯಾವುದೇ ಬಾಕಿಯನ್ನು ತುಂಬಬೇಕಾದ ಸನ್ನಿವೇಶ ಇಲ್ಲದಿದ್ದಲ್ಲಿ ಆ ಎಸ್‌ಟಿಬಿಯನ್ನು ಸೇವಾದಾತ “ಅನುಪಯುಕ್ತ’ ಗೊಳಿಸುವಂತಿಲ್ಲ. ಅಷ್ಟೇಕೆ, ಈ ಎಸ್‌ಟಿಬಿಯ ಮೂಲಕ  ದೂರದರ್ಶನದ ಅಥವಾ ಇತರ ಡಿಟಿಎಚ್‌ ಸೇವಾದಾತರ ಉಚಿತ ಸೇವೆ ಪಡೆಯಲು ನಿರ್ಬಂಧ ವಿಧಿಸುವಂತಿಲ್ಲ. ಅಂದರೆ, ಐದು ವರ್ಷದ ಬಾಡಿಗೆ ಕೊಟ್ಟು ಪಡೆದ ಎಸ್‌ಟಿಬಿಯಲ್ಲಿ ಯಾವುದೇ ಪ್ಯಾಕೇಜ್‌ಗೆ ಹಣ ಪಾವತಿಸದಿದ್ದರೂ ದೂರದರ್ಶನದ ಉಚಿತ ಉಪಗ್ರಹ ಚಾನೆಲ್‌ಗ‌ಳನ್ನು ಪಡೆಯಬಹುದು.

ಇದೀಗ ಈ ಕಾಯ್ದೆಯಡಿ ಇನ್ನಷ್ಟು ಅನುಕೂಲಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಒಂದೊಮ್ಮೆ ಗ್ರಾಹಕ ಕೆಲ ತಿಂಗಳ ಕಾಲ ಮನೆಯಲ್ಲಿ ಇರುವುದಿಲ್ಲ ಎಂಬ ಸಂದರ್ಭದಲ್ಲಿ ಸೇವೆಯನ್ನು ಒಂದು ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 3 ತಿಂಗಳವರೆಗೆ ಸ್ಥಗಿತಗೊಳಿಸಲು ಅವಕಾಶವಿದೆ. ಮೂರು ತಿಂಗಳ ನಂತರ 25 ರೂ. ಪುನರ್‌ ಸಂಪರ್ಕ ಶುಲ್ಕದ ಸಮೇತ ನಿಮಗೆ ಬೇಕಾದ ಪ್ಯಾಕೇಜ್‌ಗಾಗಿ ಶುಲ್ಕ ಪಾವತಿಸಬೇಕು. ಈ ಸ್ಥಗಿತದ ಸಮಯದಲ್ಲೂ ಎಸ್‌ಟಿಬಿ ಬಾಡಿಗೆ ಮೊತ್ತವನ್ನು ಭರಿಸಲೇಬೇಕಾಗುತ್ತದೆ. 

ದರ ಏರಿಕೆ ಇಲ್ಲದ ಆರು ತಿಂಗಳು 
ಡಿಟಿಎಚ್‌ ಬಳಕೆದಾರ ಯಾವುದೇ ಒಂದು ಪ್ಯಾಕೇಜ್‌ಅನ್ನು ಅಳವಡಿಸಿಕೊಂಡ ದಿನದಿಂದ ಕನಿಷ್ಟ ಆರು ತಿಂಗಳವರೆಗೆ ಆತನಿಗೆ ಈ ಪ್ಯಾಕೇಜ್‌ ಒದಗಿಸಲೇಬೇಕು. ಈ ಅವಧಿಯಲ್ಲಿ ಸೇವಾದಾತರಿಗೆ ಸದರಿ ಪ್ಯಾಕೇಜ್‌ನ ದರ ಇಳಿಸಲು ಅವಕಾಶವಿದೆಯೇ ವಿನಃ ಗ್ರಾಹಕನ ಹಿತಕ್ಕೆ ವಿರುದ್ಧವಾಗಿ ದರ ಏರಿಸಲಿಕ್ಕಲ್ಲ. ಆದರೆ ಈ ಆರು ತಿಂಗಳ ಅವಧಿಯ ಮಧ್ಯೆಯೇ ಪ್ಯಾಕೇಜ್‌ಅನ್ನು ಬದಲಿಸಲು ಬಳಕೆದಾರನಿಗೆ ಯಾವುದೇ ಕಾನೂನು ತಡೆ ಇಲ್ಲ. ಈ ನಿಯಮ ಅಕ್ಷರಶಃ ಮೊಬೈಲ್‌ ಕ್ಷೇತ್ರದ ಕಾನೂನನ್ನೇ ಹೋಲುವಂತದು.

ಒಂದೊಮ್ಮೆ ಚಂದಾದಾರ ಅಥವಾ ಸ್ವತಃ ಸೇವಾದಾತಾರರ ಡಿಟಿಎಚ್‌ ಸೇವೆಯನ್ನು ನಿರ್ದಿಷ್ಟ ಅವಧಿಯವರೆಗೆ ಪಡೆಯದಿದ್ದಲ್ಲಿ, ಆ ವೇಳೆಗೆ ಯಾವುದೇ ಶುಲ್ಕ ವಿಧಿಸಲು ಸೇವಾದಾತರಿಗೆ ಅವಕಾಶವಿಲ್ಲ.

ಪೋಸ್ಟ್‌ ಪೇಯ್ಡ ಚಂದಾ ವ್ಯವಸ್ಥೆ ಇದ್ದಲ್ಲಿ, ಸೇವಾದಾತರು ಚಂದಾದಾರನಿಗೆ ಬಿಲ್‌ನಲ್ಲಿ (1) ಪ್ಯಾಕೇಜ್‌ ವೆಚ್ಚ (2) ಮೌಲ್ಯಾಧಾರಿತ ಸೇವಾ ಮೊತ್ತ (3) ಎಸ್‌ಟಿಬಿ ಶುಲ್ಕ ಮತ್ತು (4) ಅನ್ವಯಿಸುವ ತೆರಿಗೆಗಳ ಮಾಹಿತಿಯನ್ನು ನೀಡಲೇಬೇಕು. ಈ ವರೆಗೆ ಡಿಟಿಎಚ್‌ ಚಂದಾದಾರರಿಗೆ ಅತಿ ಮುಖ್ಯ ಸಮಸ್ಯೆ ಕಾಡಿದ್ದು ದೂರು ಪರಿಹಾರದ ವಿಚಾರದಲ್ಲಿ. ಟ್ರಾಯ್‌ ಅತ್ತಲೂ ಗಮನ ಹರಿಸಿದ್ದು ದೂರು ನಿರ್ವಹಣೆಗೆ ಪಕ್ಕಾ ವ್ಯವಸ್ಥೆಯನ್ನೇ ಸೂಚಿಸಿದೆ.

ದೂರಿನ ಪರಿಹಾರ ಸಾಧ್ಯ
ಇನ್ನು ಮುಂದೆ ಎಲ್ಲ ಡಿಟಿಎಸ್‌ ಸೇವಾದಾತರು ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸಬೇಕು. ಇವು ವಾರದ ಏಳೂ ದಿನ, ಸತತ 24 ಘಂಟೆ ಕೆಲಸ ನಿರ್ವಹಿಸಬೇಕು. ಕರೆ ಮಾಡಿದ ಚಂದಾದಾರನಿಗೆ ಮಾಹಿತಿ ಒದಗಿಸುವುದು, ದೂರು ದಾಖಲಿಸಿಕೊಳ್ಳುವುದು ಮತ್ತು ದೂರು ಪರಿಹರಿಸುವುದು ಇವುಗಳ ಜವಾಬ್ದಾರಿ. ಬಳಕೆದಾರನಿಗೆ ತಕ್ಷಣ ಸಂಪರ್ಕ ಲಭ್ಯವಾಗುವಷ್ಟು ಲೈನ್‌ಗಳಿರಬೇಕು. ಇದಕ್ಕೆ ಟೋಲ್‌ ಫ್ರೀ ನಂಬರ್‌, ಕಸ್ಟಮರ್‌ ಕೇರ್‌ ನಂಬರ್‌, ಹೆಲ್ಪ್ ಲೈನ್‌ ನಂಬರ್‌, ಸ್ಪೆಶಲ್‌ ನಂಬರ್‌ ಎಂಬ ಮಾದರಿಗಳ ಯಾವುದೇ ದೂರು, ವಿಚಾರಣೆ, ವಿನಂತಿಗಳನ್ನು ಸ್ವೀಕರಿಸುವ ಕಾಲ್‌ ಸೆಂಟರ್‌ ಈ ಕರೆಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಡಾಕೆಟ್‌ ಸಂಖ್ಯೆಯನ್ನು ಚಂದಾದಾರನಿಗೆ ಒದಗಿಸಬೇಕು. ಆದಷ್ಟು ಶೀಘ್ರ ಕಾಲ್‌ಸೆಂಟರ್‌ನಿಂದ ಪರಿಹಾರ ಲಭ್ಯವಾಗಬೇಕು. ಸಿಗ್ನಲ್‌ ಸಿಗದ ತಾಂತ್ರಿಕ ಸಮಸ್ಯೆಗೆ 24 ಘಂಟೆಯಲ್ಲಿ ಪರಿಹಾರ ಒದಗಿಸಬೇಕು. ಉಳಿದ ಮಾದರಿಯ ದೂರುಗಳನ್ನು 48 ಘಂಟೆಯಲ್ಲಿ ನಿರ್ವಹಿಸಬೇಕು. 
ಯಾವುದೇ ದೂರು 5 ದಿನಗಳ ಗರಿಷ್ಠ ಅವಧಿಯನ್ನು ಮೀರಿ ಪರಿಹರಿಸದೆ ಉಳಿಯುವಂತಿಲ್ಲ.

ಯಾವುದೇ ಬಿಲ್ಲಿಂಗ್‌ ದೂರು 7 ದಿನಗಳ ಅವಧಿಯಲ್ಲಿ ಇತ್ಯರ್ಥಗೊಳ್ಳಬೇಕು. ಚಂದಾದಾರನಿಗೆ ಯಾವುದೇ ಹಣ ಮರಳ ಬೇಕಿದ್ದಲ್ಲಿ ಅದಕ್ಕೆ 30 ದಿನಗಳ ಕಾಲಮಿತಿ ಇರುತ್ತದೆ.

ಮುಂದಿನ ಹಂತ – ನೋಡಲ್‌ ಅಧಿಕಾರಿ
ಕಾಲ್‌ ಸೆಂಟರ್‌ನಲ್ಲಿ ಇತ್ಯರ್ಥವಾಗದ ಅಥವಾ ಸಮಾಧಾನ ದೊರಕದ ಸಂದರ್ಭಗಳಲ್ಲಿ ದೂರು ಪರಿಹಾರದ ಮುಂದಿನ ಹಂತವಾದ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಕಾನೂನಿನನ್ವಯ, ಎಲ್ಲ ಡಿಟಿಎಚ್‌ ಸೇವಾದಾತರು ಪ್ರತಿ ರಾಜ್ಯದಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಇವರ ಹೆಸರು, ಕಚೇರಿ ವಿಳಾಸ, ಸಂಪರ್ಕ ಫೋನ್‌ ಸಂಖ್ಯೆಗಳನ್ನು ಎಲ್ಲೆಡೆ ಜಾಹೀರು ಮಾಡಬೇಕು.

ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಡಿಟಿಎಚ್‌ ಬಳಕೆದಾರರು ಕಾಲ್‌ ಸೆಂಟರ್‌ಗಳನ್ನು ಸಂಪರ್ಕಿಸದೆ, ದೂರು ಪರಿಹಾರಕ್ಕೆ ನೇರವಾಗಿ ನೋಡಲ್‌ ಅಧಿಕಾರಿಯನ್ನು ವಿನಂತಿಸಲೂ ಅವಕಾಶವಿದೆ. ಉಳಿದಂತೆ, ಕಾಲ್‌ ಸೆಂಟರ್‌ಗಳು ನೀಡುವ ವಿಶಿಷ್ಟ ಡಾಕೆಟ್‌ ಸಂಖ್ಯೆಯನ್ನು ನಮೂದಿಸಿ (ಉಲ್ಲೇಖೀಸಿ)ಯೇ ನೋಡಲ್‌ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ನೋಡಲ್‌ ಅಧಿಕಾರಿಯು ದೂರು ದಾಖಲಿಸಿಕೊಂಡ 3 ದಿನಗಳೊಳಗೆ ಅರ್ಜಿ ಸ್ವೀಕೃತಿ ದಾಖಲೆ ನೀಡಬೇಕು. ಮುಂದಿನ ಹತ್ತು ದಿನಗಳ ಕಾಲ ಮಿತಿಯಲ್ಲಿ ಆತ ಗ್ರಾಹಕನ ದೂರು ಪರಿಹರಿಸಬೇಕು.

ಈ ನಡುವೆ “ಟ್ರಾಯ್‌’ ಕೂಡ ತನ್ನ ಮುಂದಿರುವ ದೂರುಗಳನ್ನು ಡಿಟಿಎಚ್‌ ಸೇವಾದಾತರ ದೂರು ಪರಿಹಾರ ವ್ಯವಸ್ಥೆಯ ಮುಂದಿಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಸ್ವರೂಪದ ಗ್ರಾಹಕ ದೂರುಗಳು, ಕಾಯ್ದೆ, ಕಾನೂನು, ನಿರ್ದೇಶನಗಳನ್ನು ಉಲ್ಲಂ ಸಿದ ಪ್ರಕರಣಗಳು, ಗ್ರಾಹಕ ಹಿತ ಕಾಪಾಡದ ಸೇವಾದಾತರ ಕ್ರಮಗಳ ಕುರಿತಂತೆ ಟ್ರಾಯ್‌ ಗ್ರಾಹಕ ದೂರುಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಇವುಗಳನ್ನು ಸಂಬಂಧಿಸಿದವರು 15 ದಿನಗಳ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಸ್ವಯಂ ಸೇವಾದಾತರು ಚಂದಾದಾರರಿಗೆ ದೂರು ವಿಚಾರದ ಫ‌ಲಿತಾಂಶವನ್ನು ದೂರು ಇತ್ಯರ್ಥಗೊಳಿಸಿದ ಒಂದು ತಿಂಗಳ ಅವಧಿಯಲ್ಲಿ ತಿಳಿಸಬೇಕಾಗುತ್ತದೆ.

ಟ್ರಾಯ್‌, ಡಿಟಿಎಚ್‌ ಕ್ಷೇತ್ರದ ನಿಯಮಗಳನ್ನು ರೂಪಿಸುವಾಗ ಕ್ಯಾಸ್‌ ವ್ಯವಸ್ಥೆ (ಕೇಬಲ್‌ ಬಳಕೆದಾರರಿಗೆ ಬೇಕಾದ ಚಾನೆಲ್‌ಗ‌ಳಿಗೆ ಚಂದಾದಾರರಾಗುವ ಎಸ್‌ಟಿಬಿ ತಾಂತ್ರಿಕತೆ) ಮತ್ತು ಮೊಬೈಲ್‌ ಕ್ಷೇತ್ರದ ಕಾನೂನುಗಳನ್ನು ಪರಿಗಣಿಸಿದೆ. ಈವರೆಗೆ ಡಿಟಿಎಚ್‌ ಬಳಕೆದಾರನ ಪರ ಯಾವುದೇ ನಿರ್ದಿಷ್ಟ ಕಾನೂನು, ದೂರು ಪರಿಹಾರ ವ್ಯವಸ್ಥೆ ಇದ್ದಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಈಗಿನ ಟ್ರಾಯ್‌ ನಿಯಮ ಸ್ವಾಗತಾರ್ಹ. ಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಟ್ರಾಯ್‌ನಿಂದ ನಾವು ನಿರೀಕ್ಷಿಸಬಹುದು. 

ಇನ್ನೇನು ಬೇಕು?
ಡಿಟಿಎಚ್‌ ಸೇವಾದಾತರು ಚಾನೆಲ್‌ಗ‌ಳ ಪ್ಯಾಕೇಜ್‌ಗಳನ್ನು ರೂಪಿಸಿದ್ದಾರೆ. ಚಂದಾದಾರನಿಗೆ ಬಿಡಿ ಚಾನೆಲ್‌ಗ‌ಳನ್ನು ಆಯ್ದುಕೊಳ್ಳಲು ಅವಕಾಶ ನೀಡಿಲ್ಲ. ಕೆಲ ನಿರ್ದಿಷ್ಟ ಚಾನೆಲ್‌ ಅಗತ್ಯಕ್ಕೆ ಬಳಕೆದಾರ ಅನಾವಶ್ಯಕವಾಗಿ ಇಡೀ ಪ್ಯಾಕೇಜ್‌ಅನ್ನೇ ಆಯ್ದುಕೊಳ್ಳಬೇಕಾದ  ವ್ಯವಸ್ಥೆ ಗ್ರಾಹಕ  ಹಿತಕ್ಕೆ, ಟ್ರಾಯ್‌ ಹೇಳುವ ವ್ಯಾಪಾರೀ ನೀತಿಗೆ ವಿರುದ್ಧ. ಈ ಬಗ್ಗೆ ಟ್ರಾಯ್‌ ಒಂದು ತಿದ್ದುಪಡಿಯನ್ನು ಜಾರಿಗೆ ತಂದಿದೆ. ಚಾನೆಲ್‌ಗ‌ಳ ಗುತ್ಛವನ್ನು ಕೊಡಲು ಅವಕಾಶವಿದೆ. ಇದೇ ವೇಳೆ ಒಂದು ಚಾನೆಲ್‌ನ ಮಾಸಿಕ ಶುಲ್ಕ 19 ರೂ.ಗೂ ಹೆಚ್ಚಿದ್ದರೆ ಅದನ್ನು ಗುತ್ಛದಲ್ಲಿ ಸೇರಿಸದೆ ಪ್ರತ್ಯೇಕವಾಗಿಯೇ ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು. ಈ ನಿಯಮವೂ ಪರಿಸ್ಥಿತಿಯನ್ನು ಸಂಪೂರ್ಣ ಬದಲಿಸಿಲ್ಲ. 

ಟ್ರಾಯ್‌ “ಕ್ಯಾಸ್‌’ ವ್ಯವಸ್ಥೆಗೆ ಸ್ವಾಗತಾರ್ಹ ಚೌಕಟ್ಟು ರೂಪಿಸಿದೆ. ಅದರ ಪ್ರಕಾರ, ತಿಂಗಳ ಬಾಡಿಗೆಗೆ ಸೇವಾದಾತಾರರು ಕನಿಷ್ಟ 30 ಉಚಿತ ಚಾನೆಲ್‌ ಒದಗಿಸಬೇಕು. ಉಳಿದಂತೆ ಪ್ರತಿ ಚಾನೆಲ್‌ಗೆ ತಲಾ 5 ರೂ.ನಂತೆ ಎಷ್ಟು ಚಾನೆಲ್‌ಗ‌ೂ ಗ್ರಾಹಕ ಚಂದಾದಾರನಾಗಲು ಅವಕಾಶವಿದೆ. ಈ ಸೂತ್ರವನ್ನು ಡಿಟಿಎಚ್‌ ಕ್ಷೇತ್ರಕ್ಕೂ ಅಳವಡಿಸಬೇಕಿತ್ತು. ಈವರೆಗೆ ಅಂತಹ ಪ್ರಯತ್ನ ಕಂಡುಬಂದಿಲ್ಲ. 

ಮುಂದಿನ ದಿನಗಳಲ್ಲಿ ಡಿಟಿಎಚ್‌ ಕ್ಷೇತ್ರವನ್ನು ಕೂಡ ಟ್ರಾಯ್‌ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಬಹುದು.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.