ಜಿಎಸ್ಟಿಯಲ್ಲಿ ಟ್ವಿಸ್ಟ್‌ಸಾಮಾನ್ಯನಿಗೆ ರಿಸ್ಕ್


Team Udayavani, Jul 17, 2017, 2:50 AM IST

gst.jpg

ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆಯಿಂದ ಜಿಎಸ್ಟಿಗೆ (ಸರಕು ಮತ್ತು ಸೇವಾ ತೆರಿಗೆ) ತೆರಿಗೆ ನಿಯಮಗಳು ಪಲ್ಲಟಗೊಂಡ ಬಳಿಕ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಾಮಾನ್ಯ ಜನರಿಗೆ ವಸ್ತುಗಳ ಬೆಲೆ ಕಡಿಮೆಯಾಗುತ್ತದೆಂದು ಬಿಂಬಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಮಾಹಿತಿ ಕೊರತೆಯೋ, ನಿಯಮದ ಗೊಂದಲವೋ ಅಥವಾ ವರ್ತಕರ ಕುತಂತ್ರವೋ ಶ್ರೀಸಾಮಾನ್ಯನಿಗೆ ಮಾತ್ರ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಿದೆ. ಜಿಎಸ್ಟಿ ನಿಯಮಗಳನ್ನು ಅವಲೋಕಿಸಿದರೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಂಕಷ್ಟದಿಂದ ವಿನಾಯಿತಿ, ಸರಕು ಸೇವೆಯಿಂದ ರಿಯಾಯಿತಿ ಸಿಗಬೇಕಿತ್ತು.  ಆದರೆ ಹಾಗೆ ಆಗಲೇ ಇಲ್ಲ. ಯಾಕೆ ಹೀಗಾಯಿತು ಎಂಬ ಕುತೂಹಲ. ಸಿಡಿಮಿಡಿಯ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

“ನಾನಂತೂ ಹೋಟೆಲ್‌ ಅಲ್ಲಿ ತಿಂಡಿ ತಿನ್ನೋದಿಲ್ಲ, ಕಾಫಿ ಕುಡಿಯೋದಿಲ್ಲ. ಮೊದಲೆÇÉಾ ಹೋಟೆಲ್ಲಿನಲ್ಲಿ ತಿಂದರೆ ತಿಂಗಳಿಗೆ ನಾಲ್ಕುಸಾವಿರ ದಾಟುತ್ತಿರಲಿಲ್ಲ. ಜಿಎಸ್ಟಿ ಬಂದ ಮೇಲೆ ಹೋಟೆಲ್‌ ಬಿಲ್ಲು ತಿಂಗಳಿಗೆ ಆರುಸಾವಿರ ಮುಟ್ಟುವ ಹಂತಕ್ಕೆ ಬೆಳೆದಿದೆ, ‘ ಹಾಲು, ಹಣ್ಣು ಹಂಪಲು, ತರಕಾರಿ ಬೆಲೆಯೆÇÉಾ ಇಳಿಯುತ್ತೆ ಅಂತ ಹೇಳ್ತಾ ಇದ್ರು.  ಏನೂ ಆಗಲೇ ಇಲ್ಲ’, ಟೆಕ್ಸ… ಟೈಲ್ಸ…, ಜ್ಯುವೆಲರಿ ಶಾಪ್‌, ಸೂಪರ್‌ ಮಾರ್ಕೆಟ್‌ ಗಳಿಗೆ ನಾವಿನ್ನು ಹೋಗೋಕಾಗುತ್ತಾ..! ಇದು ಸದ್ಯದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಮಾತು. ಇನ್ನು ವರ್ತಕರು, ಉದ್ಯಮಿಗಳು, ಕಂಪನಿಗಳು ಜಿಎಸ್ಟಿಯಿಂದ ಇನ್ನು ಮುಂದೆ ಶೇ. 28ರಷ್ಟು ತೆರಿಗೆ ಕಟ್ಟಬೇಕಾ ಅಂತ ಕೈ ಕೈ ಹಿಸುಕಿಕೊಳ್ಳುತ್ತಿ¨ªಾರೆ. ಜೊತೆಗೆ ಆ ತೆರಿಗೆಯನ್ನು ತಮ್ಮ ಮೇಲೆ ಹಾಕಿಕೊಳ್ಳದೆ ಉತ್ಪನ್ನದ ಆಮದಿನಿಂದ ಹಿಡಿದು ಮಾರಾಟದವರೆಗೆ ಆಗುವ ತೆರಿಗೆ ಖರ್ಚನ್ನು ಜನಸಾಮಾನ್ಯರ ಮೇಲೆ ಹಾಕುತ್ತಿ¨ªಾರೆ. ಹೀಗಾದರೆ ಗ್ರಾಹಕನಿಗೆ ಆರ್ಥಿಕ ಹೊರೆ ಕಡಿಮೆಯಾಗಲು ಹೇಗೆ ಸಾಧ್ಯ?

ಸರಕು ಮತ್ತು ಸೇವಾ ತೆರಿಗೆ ಗೊಂದಲ
ಜಿಎಸ್ಟಿ ನಿಯಮಗಳಲ್ಲಿ ಎಲ್ಲ ತೆರಿಗೆಗಳನ್ನು ಸರಕು ಮತ್ತು ಸೇವಾ ತೆರಿಗೆಯಲ್ಲಿ ಸಂಯೋಜನೆಗೊಳಿಸಿರುವುದೇ ಮೂಲ ಗೊಂದಲಗಳಿಗೆ ಕಾರಣವಾಗಿದೆ. ಸರಕು ಸಂಬಂಧಿತ ತೆರಿಗೆ ಮತ್ತು ಸೇವೆಗೆ ಸಂಬಂಧಿಸಿದ ತೆರಿಗೆಗಳ ವಿಂಗಡಣೆಯಲ್ಲಿ ಜನರಿಗೆ ಸ್ಪಷ್ಟತೆಯ ಕೊರತೆಯಿದೆ. ಸರಕು ಮತ್ತು ಸೇವೆಯಲ್ಲಿ ತೆರಿಗೆಯನ್ನು ವಿಭಾಗಿಸುವಾಗ ಇಂತಿಷ್ಟು ಶೇಕಡಾ ಪ್ರಮಾಣದ ತೆರಿಗೆ ನಿರ್ಧರಿಸಲಾಗಿದೆ. ಅದನ್ನು ಹೇಗೆ ವಿಧಿಸಬೇಕು ಎಂಬುದು ವರ್ತಕರಿಗೆ ಮತ್ತಷ್ಟು ಗೊಂದಲ ಸೃಷ್ಟಿಸಿ ಮನಸೋ ಇಚ್ಚೆ ಶೇಕಡಾವಾರು ತೆರಿಗೆ ವಿಧಿಸುತ್ತಿ¨ªಾರೆ. ಇನ್ನು ಶೇ. ಶೂನ್ಯ ತೆರಿಗೆ ಎಂದು ಹೇಳಲಾಗುವ ವಸ್ತುಗಳಿಗೆ ಹಳೇ ಮಾದರಿಯ ತೆರಿಗೆ ಮತ್ತು ಮೌಲ್ಯವರ್ಧಿತ ಸುಂಕವನ್ನು ಈಗಲೂ ವಿಧಿಸಲಾಗುತ್ತಿದೆ. ಜಿಎಸ್ಟಿಯಲ್ಲಿ ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ, ಜಿಎಸ್ಟಿಎನ…, ರಪು¤ ತೆರಿಗೆ,ಸೆಸ್‌ ಇವುಗಳ ಬಗ್ಗೆ ಜನಸಾಮಾನ್ಯರಿಗಿರಲಿ ವರ್ತಕವರ್ಗಕ್ಕೂ ಜ್ಞಾನದ ತೊಡಕಿದೆ.

ಸರಕು ಮತ್ತು ಸೇವೆ ಎಂದು ವಿಭಾಗಿಸಿದೊಡನೆಯೇ ನಮಗೆ ಕಣ್ಣಿಗೆ ಕಾಣುವ ವಸ್ತು ಮತ್ತು ಕಾಣದ ಸೇವೆ ಜಾಗೃತವಾಗುತ್ತದೆ. ಕಣ್ಣಿಗೆ ಕಾಣುವ ವಸ್ತುಗಳ ಮೇಲೆ ತೆರಿಗೆ ವಿಧಿಸುವುದು ಸುಲಭ ಆದರೆ ಕಣ್ಣಿಗೆ ಕಾಣದ ಸೇವೆಯ ಮೇಲೆ ತೆರಿಗೆ ವಿಧಿಸುವುದು ಹೇಗೆ ? ಹಿಂದಿನ ವ್ಯವಸ್ಥೆಯಲ್ಲಿಯೂ ಸೇವಾ ತೆರಿಗೆ ವಿಧಿಸುತ್ತಿದ್ದರಲ್ಲವೆ ಆದರೆ ಈಗ ಏಕೆ ತೊಡಕು ?

ಸರಕು ಉತ್ಪನ್ನ
ಯಾವುದೇ ಒಂದು ವಸ್ತುವನ್ನು ಗಾತ್ರ, ಪ್ರಮಾಣ, ಮೌಲ್ಯ, ಸಾರಿಗೆ ಖರ್ಚು ಇತ್ಯಾದಿಯಾಗಿ ಸರಕಿನ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಜಿಎಸ್ಟಿಯಲ್ಲಿಯೂ ಅದೇ ಮಾದರಿಯಿದ್ದು ಕೆಲವು ಬದಲಾವಣೆಯಿದೆ. ಜಿಎಸ್ಟಿಯಲ್ಲಿ ಶೂನ್ಯ ತೆರಿಗೆಯಲ್ಲಿ ಬರುವ ವಸ್ತುಗಳಿಗೆ ಯಾವುದೇ ತೆರಿಗೆ ವಿಧಿಸುವಂತಿಲ್ಲ. ಗಾತ್ರ ಪ್ರಮಾಣದಲ್ಲಿ ಬದಲಾವಣೆಯಿದ್ದರೂ ಸಾರಿಗೆ ಹೊರತು ಪಡಿಸಿ ತೆರಿಗೆ ಹೇರುವಂತಿಲ್ಲ.  ಈ ಲೆಕ್ಕಾಚಾರದ ಪ್ರಕಾರ, ಹಾಲು, ಮೊಸರು, ಉಪ್ಪು, ಹಣ್ಣು ಇತ್ಯಾದಿ ವಸ್ತುಗಳು ಶ್ರೀ ಸಾಮಾನ್ಯನಿಗೆ ತುಸು ಪ್ರಮಾಣದಲ್ಲಿ ಕಡಿಮೆ ಬೆಲೆಗೆ ಸಿಗಬೇಕಿತ್ತು. ಆದರೂ ಹಿಂದಿನ ತೆರಿಗೆ ಪ್ರಮಾಣದಲ್ಲಿಯೇ ವಸ್ತುಗಳು ದೊರೆಯುತ್ತಿವೆ. ಇನ್ನು ಜಿಎಸ್ಟಿಯಲ್ಲಿ ಶೇಕಡಾವಾರು ತೆರಿಗೆ ವಿಧಿಸಿರುವ ವಸ್ತುಗಳ ಬೆಲೆ ಹೇಗಾಗಿರಬಹುದು ಎಂಬುದನ್ನು ನೀವೇ ಯೋಚಿಸಿ. ಸರಕು ಕಣ್ಣಿಗೆ ಕಾಣುವ ವಸ್ತುವಾದ್ದರಿಂದ ಉತ್ಪನ್ನ ಮಾರುಕಟ್ಟೆ, ಕಂಪನಿ ಇತರೆ ದೊಡ್ಡ ಮಟ್ಟದಲ್ಲಿ ತೆರಿಗೆ ವಿಷಯವಾಗಿ ಯಾವುದೇ ಬುಡಮೇಲು ತಂತ್ರಗಾರಿಕೆಗೆ ಅವಕಾಶವಿರುವುದಿಲ್ಲ. ಆದರೆ ವರ್ತಕರು ಮತ್ತು ಸಾಮಾನ್ಯ ವರ್ತಕರಿಂದ ಸರಕು ಮಾರಾಟವಾಗುವಾಗ ಜನಸಾಮಾನ್ಯರೇ ಬಹುಪಾಲು ಹೊರೆ ಅನುಭವಿಸಬೇಕಾಗುತ್ತದೆ.

ಸೇವಾ ವಲಯ
ನಿಜವಾಗಿಯೂ ದೊಡ್ಡ ಪ್ರಮಾಣದಲ್ಲಿ ಸೇವಾ ಕ್ಷೇತ್ರದಿಂದಲೇ ತೆರಿಗೆ ನಷ್ಟ ಎದುರಾಗುತ್ತದೆ. ಏಕೆಂದರೆ ಸಾಮಾನ್ಯ ನೌಕರ, ಗುತ್ತಿಗೆದಾರರು, ಸೇವಾ ಸಿಬ್ಬಂದಿ, ಕಾರ್ಮಿಕ ಇವರು ನೀಡುವ ಪ್ರಾಮಾಣಿಕ ಸೇವೆಯನ್ನು ಮರೆಮಾಚಿ ತೆರಿಗೆ ಪಾವತಿಯಾಗುತ್ತದೆ. ಜಿಎಸ್ಟಿಯಲ್ಲಿ ಈ ರೀತಿಯ ತೆರಿಗೆಯನ್ನು ಗರಿಷ್ಟ ಮಟ್ಟಕ್ಕೆ(12%, 18%, 28%) ಏರಿಸಲಾಗಿದೆ, ಹೀಗಾಗಿ ಇದನ್ನು ಮರೆಮಾಚಲು ಸೇವಾ ಕ್ಷೇತ್ರಗಳಲ್ಲಿ ವೈವಿಧ್ಯಮಯ ತಂತ್ರಗಳನ್ನು ಬಳಸಲಾಗುತ್ತಿದೆ. ಚಲನಚಿತ್ರ ವಾಣಿಜ್ಯೋದ್ಯಮ, ಇವೆಂಟ್‌ ಮ್ಯಾನೆಜಿಂಗ…, ಎಲೆಕ್ಟಾನಿಕ್ಸ… ಮತ್ತು ಮೊಬೈಲ್‌ ಸರ್ವಿಸ್‌, ಶಾಮಿಯಾನ, ಕ್ಯಾಟರಿಂಗ್‌ ಇನ್ನೂ ಅನೇಕ ಸೇವಾವಲಯದಲ್ಲಿ ನೌಕರರ ಸೇವೆಗೆ ಸರಿಯಾಗಿ ಸಂಬಳ ದೊರೆಯುವುದಿಲ್ಲ. ಹಾಗೆಯೇ ಸೇವೆಯನ್ನು ಪಡೆದ ಜನಸಾಮಾನ್ಯರಿಗೆ ಬಿಲ್‌ ಗಳನ್ನು ಕೆಡುವುದಿಲ್ಲ. ಡ್ರೈಕ್ಲೀನಿಂಗ್‌ ನಲ್ಲಿ ನೀವು 15 ಬಟ್ಟೆಗಳನ್ನು ಕೊಡುತ್ತೀರಾ, ಅದಕ್ಕೆ ನೀವು ಇನ್ವಾಯ್ಸ… ಬಿಲ್‌ ಕೇಳಿದರೆ ಆತ ನಕ್ಕು ಹಣ ಪಡೆದು ಬಟ್ಟೆ ನೀಡಿ ಕಳುಹಿಸುತ್ತಾನೆ. ನಾವು ಸುಮ್ಮನೆ ಬರಬೇಕಷ್ಟೆ.

ವೈದ್ಯಕೀಯ ಮತ್ತು ಆರೋಗ್ಯಕ್ಷೇತ್ರ ನಿಂತಿರುವುದೇ ಸೇವಾವಲಯದಿಂದ. ದೊಡ್ಡ ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರ, ನರ್ಸ್‌ ಗಳ ಮತ್ತು ಸಿಬ್ಬಂದಿ, ಔಷದೋಪಚಾರಗಳ ಸೇವೆಗಿಂತ ಹಿರಿದಾದ ಬಿಲ್ಲುಗಳನ್ನು ರೋಗಿಯ ಪರಿವಾರ ಪಾವತಿ ಮಾಡುತ್ತದೆ. ನೀಡಿದ ಹಣ ಜಿಎಸ್ಟಿ ಮುಖಾಂತರ ಹೇಗೆ ವಿಂಗಡನೆಯಾಗುತ್ತದೆಯೋ,  ತಿಳಿಯದು. ಅದೇ ಕ್ಲೀನಿಕ್‌ ಗಳಲ್ಲಿ ನೀಡುವ ಸೇವೆಗೆ ಯಾವರೀತಿ ಇನ್ವಾಯ್ಸ… ಕೇಳಬೇಕು ಅನ್ನುವುದೇ ಗೊತ್ತಾಗುವುದಿಲ್ಲ.  ಈ ರೀತಿಯ ಜಾಗಗಳಲ್ಲಿಯೇ ಮರೆಮಾಚುವ ತಂತ್ರ ನಡೆಯುವುದು.

ಅಂತಿಮ ಗ್ರಾಹಕರಿಗೆ ಮೋಸ
ಸರಕು ಮತ್ತು ಸೇವಾ ತೆರಿಗೆ ಪಾವತಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಅನುಭವಿಸುತ್ತಿರುವುದು ಮಾತ್ರ ಅಂತಿಮ ಗ್ರಾಹಕ. ಆದರೆ ಎಲ್ಲ ಆಮದು ರಫ್ತು ಮತ್ತು ಆರ್ಥಿಕ ವ್ಯವಹಾರಗಳ ಕೇಂದ್ರ ಬಿಂದುವು ಗ್ರಾಹಕನೇ ಅಲ್ಲವೆ? ಗ್ರಾಹಕನಿಗೆ ಅನುಕೂಲವಾಗುವಂತೆ ಆರ್ಥಿಕ ನಿಯಮಗಳನ್ನು ರೂಪಿಸಲಾಗುತ್ತಿ¨,  ಎಂದು ಎಲ್ಲ ಸರ್ಕಾರಗಳೂ  ಹೇಳಿಕೊಳ್ಳುತ್ತಿವೆ. ಆದರೆ ನಿಯಮಗಳಿಂದ ಹೊರೆ ಅನುಭವಿಸುತ್ತಿರುವವರು ಮಾತ್ರ ಸಾಮಾನ್ಯರು.  ಉದಾಹರಣೆಗೆ..

ಗ್ರಾಹಕನೊಬ್ಬ ದರ್ಶಿನಿಯೊಂದರಲ್ಲಿ ಪ್ರತಿದಿನ 10 ರೂ.ಗೆ ಕಾಫಿ ಕುಡಿಯುತ್ತಿದ್ದ ಎಂದುಕೊಳ್ಳಿ, ಅದೇ ಸ್ಥಳದಲ್ಲಿ ಜಿಎಸ್ಟಿ ಬಳಿಕ ಕಾಫಿ ಬೆಲೆ 12 ರೂ ಆಗಿದೆ. ಗ್ರಾಹಕ ಹೌಹಾರಿದ. ಬೆಲೆ ಏಕೆ ಇಷ್ಟೊಂದು ಎಂದು ಕೇಳಿದಾಗ ಜಿಎಸ್ಟಿ ಎಂದರು. ಆತ ಹಣ ಕಟ್ಟಬೇಕಾಯಿತು. ಅಂದರೆ ಗ್ರಾಹಕ ಒಂದು ಕಾಫಿಗೆ 2.50 ರೂ ಹಣ ಹೆಚ್ಚು ತೆರಬೇಕಾಯಿತು. ಹೇಗೆಂದರೆ ಜಿಎಸ್ಟಿ ಬರುವ ಮೊದಲು ತೆರಿಗೆ, ಮೌಲ್ಯವರ್ದಿತ ತೆರಿಗೆ ಸೇರಿ ಆತ 10 ರೂಗೆ ಕಾಫಿ ಕುಡಿಯುತ್ತಿದ್ದ. ಜಿಎಸ್ಟಿ ಬಳಿಕ ಹಳೇ ತೆರಿಗೆ ಕಳೆದರೆ 9.50 ರೂ.ಗೆ ಕಾಫಿ ಬರಬೇಕಿತ್ತು. ಏಕೆಂದರೆ ಆ ಹೋಟೆಲ್‌ ತಿಂಗಳಿಗೆ 20 ಲಕ್ಷ ಹೆಚ್ಚಿನ ಮಟ್ಟದ ಆದಾಯಗಳಿಸುವಂತದ್ದೇನು ಆಗಿರಲಿಲ್ಲ. ಜೊತೆಗೆ ಆತ ಹವಾನಿಯಂತ್ರಿತ ರೂಮಿನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದನೇ?  ಅದೂ ಇಲ್ಲ. ಸ್ವಸಹಾಯ ಪದ್ಧತಿಯಲ್ಲಿ ತಾನೇ ಹೋಗಿ ರಸೀದಿ ನೀಡಿ ಕಾಫಿಯನ್ನು ಹೊತ್ತುತಂದು ಕುಡಿಯುತ್ತಿದ್ದ.

ಹೋಗಲಿ, ಆ ದರ್ಶಿನಿಯಲ್ಲಿ 20 ಲಕ್ಷಕ್ಕಿಂತಲೂ ಹೆಚ್ಚು ವ್ಯವಹಾರ ನಡೆಯುತ್ತಿದೆ ಎಂದು ಭಾವಿಸೋಣ, ಹಳೇ ತೆರಿಗೆ ಕಳೆದು ಹೊಸ ಜಿಎಸ್ಟಿ ತೆರಿಗೆ ಸೇರಿಸಿದರೆ ಶೇ.ಐದರಷ್ಟು ಮಾತ್ರ ವಿಧಿಸಬೇಕಾಗಿತ್ತು. ಆಗಲೂ ಗ್ರಾಹಕನಿಗೆ ಕಾಫಿಯ ಮೌಲ್ಯ 10 ರೂ ಮಾತ್ರ ಆಗಬೇಕಿತ್ತು.  ಹೆಚ್ಚಾಗುತ್ತಿರಲಿಲ್ಲ. ಈಗ ಖೋತಾ ಆದ ಎರಡು ರೂ.ಗೆ ಆತ ಏನು ಮಾಡಬೇಕು? ಇದೇ ಮಾದರಿಯಲ್ಲಿ ನಷ್ಟ ಅನುಭವಿಸುತ್ತಿರುವವರು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುವುದು ಒಳಿತು.

ಅಸಂಘಟಿತ ವಲಯದಿಂದ ತೊಡಕು
ಭಾರತದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಮೂಲಕ ವ್ಯವಹಾರಗಳು ಜರುಗುತ್ತವೆ. ಮಾರಾಟವೂ ಅದೇ ರೀತಿಯಲ್ಲಿಯೇ ಆಗುವುದು. ಸಂಘಟಿತ ವಲಯದಿಂದ ಖರೀದಿ ನಡೆದರೆ ಅದಕ್ಕೆ ವ್ಯವಸ್ಥಿತ ಬಿಲ್‌ ಇತ್ಯಾದಿ ದೊರಕುತ್ತದೆ. ಅಸಂಘಟಿತ ವಲಯದಲ್ಲಿ ಬಿಲ್‌ ಮತ್ತು ಗ್ಯಾರಂಟಿ ಸಿಗುವುದಿಲ್ಲ. ಇದು ಜಿಎಸ್ಟಿ ಸುಗಮ ಆಚರಣೆಗೆ ಆಗುತ್ತಿರುವ ದೊಡ್ಡ ತೊಡಕು. ದೇಶದ ಜನರಲ್ಲಿ ಅರಿವಿನ ಕೊರತೆ ಹೆಚ್ಚು. ಹೀಗಾಗಿಯೇ ಪದೇ ಪದೇ ಮೋಸಹೋಗುವುದು.

ನೋಂದಣಿಯಿಲ್ಲ, ಬಿಲ್‌ ಕೊರತೆ, ತಪ್ಪುಗ್ರಹಿಕೆ
ಅನೇಕ ವರ್ತಕರು ತೆರಿಗೆ ಹೊರೆಯನ್ನು ಸಹಿಸದೇ ಇನ್ನು ಜಿಎಸ್ಟಿಗೆ ನೋಂದಣಿಯೇ ಆಗಿಲ್ಲ. ಅವರು ಗ್ರಾಹಕ ಬಿಲ್‌ ಕೇಳಿದಾಗ ಹಳೇ ಮಾದರಿಯ ಬಿಲ್‌ ಗಳನ್ನು ಕೊಡುತ್ತಾರೆ. ಹುಷಾರಾದ ಗ್ರಾಹಕರು ಜಿಎಸ್ಟಿ ಬಿಲ್‌ ಕೇಳಿದರೆ ಇನ್ನು ಆಗಬೇಕು ಸಾರ್‌, ಕೊಡಿ ನಾನು ಜಿಎಸ್ಟಿ ಸೀಲ್‌ ಹಾಕಿಕೊಡುತ್ತೇನೆ ಎನ್ನುತ್ತಾರೆ. ಇನ್ನು ಕೆಲವರು ಜಿಎಸ್ಟಿ ಬಿಲ್‌ ಇದೆ ಅದನ್ನು ಹಾಕಿದರೆ ಬೆಲೆ ಪ್ರಮಾಣ ಹೆಚ್ಚು ನೀವು ನಮಗೆ ತಿಳಿದವರೆ ಅಲ್ಲವೆ ಎನ್ನುವವರು ಇ¨ªಾರೆ.

– ನೋಂದಣಿ ಮಾದರಿಯ ಬಿಲ್‌ ಗಳನ್ನು ದುಬಾರಿ ತೆರಿಗೆ ಸೂಚಿಸುತ್ತಾ ರಾಜಾರೋಷವಾಗಿ ಲಾಭ ಮಾಡಿಕೊಳ್ಳುತ್ತಿ¨ªಾರೆ.

– ಜಿಎಸ್ಟಿ ಬರುವ ಮುನ್ನ ಇದ್ದ ಹಳೇ ಸ್ಟಾಕ್‌ ಜಿಎಸ್ಟಿ ತೆರಿಗೆ ಹಾಕಿ ಮಾರಾಟ ಮಾಡುತ್ತಿರುವ ವರ್ತಕರು.
– ಪ್ರಶ್ನೆ ಮಾಡವ ಗ್ರಾಹಕರಿಗೆ ಕ್ಯಾಲಿಕ್ಲೇಷನ್‌ ತಪ್ಪು ನೀಡಿ ಮಾರೆ ಮಾಚುವುದು.
– ತೆರಿಗೆ ಉಳಿಸಿಕೊಳ್ಳಲು ಇಪ್ಪತ್ತು ಲಕ್ಷಕ್ಕಿಂತ ಕಡಿಮೆ ವ್ಯವಹಾರದ ಬಿಲ್‌ ಗಳನ್ನು ತೋರಿಸುವುದು. 
– ಜಿಎಸ್ಟಿಯಲ್ಲಿ ಇರುವ ವಿನಾಯಿತಿಯನ್ನು ಪಡೆಯದಿರುವುದು.
– ಜಿಎಸ್ಟಿಯಲ್ಲಿ ಬಗ್ಗೆ ವರ್ತಕರಿಗಿರುವ ತಪ್ಪುಗ್ರಹಿಕೆ ಮಾಹಿತಿ ಕೊರತೆ

ಜಾಗೃತಿ ಅಗತ್ಯ
ದುಡಿದ ಒಂದು ರೂಪಾಯಿಯೂ ಆರ್ಥಿಕತೆಯಲ್ಲಿ ಮುಖ್ಯಪಾತ್ರವಹಿಸುವ ಕಾರಣ ತಮ್ಮ ಅನುಭೋಗಕ್ಕೆ ಬಾರದೇ ಅದು ವ್ಯಯವಾಗಬಾರದು. ಜಿಎಸ್ಟಿಯನ್ನು ಅನೇಕ ವರ್ತಕರು ವಾಮ ಮಾರ್ಗದಿಂದ ಹಣ ಗಳಿಕೆಯ ಅಸ್ತ್ರವನ್ನಾಗಿಸಿಕೊಳ್ಳುತ್ತಿ¨ªಾರೆ. ಜೊತೆಗೆ ತೆರಿಗೆ ಇಲಾಖೆಯೂ ಇದರ ಬಗ್ಗೆ ಅಷ್ಟು ಜಾಗೃತಿ ವಹಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಜಿಎಸ್ಟಿ ಬಗ್ಗೆ ಜನಸಾಮಾನ್ಯರು ಅರಿಯುವ ಅಗತ್ಯವಿದೆ. ಅಲ್ಲದೆ ಸಾಮಾನ್ಯವಾಗಿ ಆದಾಯ ತೆರಿಗೆ ಪಾವತಿ, ರೀಫ‌ಂಡ…, ತೆರಿಗೆ ಜಮೆ ಹೊಂದಾಣಿಕೆ ಇತ್ಯಾದಿ ಆರ್ಥಿಕ ವ್ಯವಹಾರ ನಡೆಸುವಾಗ ಉಪಯೋಗಕ್ಕೆ ಬರುತ್ತದೆ.

ವಿನಾಯಿತಿ
ಜಿಎಸ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಜಿಎಸ್ಟಿ ಎಂಬ ಎರಡು ತೆರಿಗೆಯನ್ನು ನಿಗದಿ ಪಡಿಸಿರುವ ಶೇಕಡಾಂಶದ ಮೂಲಕ ವಿಧಿಸಲಾಗುತ್ತದೆ. ವಿನಾಯಿತಿ ನೀಡಲಾದ ಸರಕುಗಳಿಗೆ ಉತ್ಪನ್ನ ಮಟ್ಟದಲ್ಲಿ ವಿಧಿಸಿದ ತೆರಿಗೆಯನ್ನು ಸಿದ್ದ ವಸ್ತುವಾಗಿ ಮಾರಾಟ ಮಾಡುವಾಗ ವಿನಾಯಿತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಇಲಾಖೆ ಕರ್ತವ್ಯ
ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಾ ಅವರನ್ನು ದಾರಿತಪ್ಪಿಸುತ್ತಿರುವ ಅನೇಕ ಕಂಪನಿಗಳು ಮತ್ತು ವರ್ತಕರ ಬಗ್ಗೆ ಹಾಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೆರಿಗೆ ವಂಚನೆ ಮಾಡುತ್ತಾ ರಾಜ್ಯ, ದೇಶದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವವರ ವಿರುದ್ಧ ತೆರಿಗೆ ಇಲಾಖೆ ಅಗತ್ಯ ಕ್ರಮ ಜರುಗಿಸಬೇಕಿದೆ. ಅಲ್ಲದೆ ಜಿಎಸ್ಟಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತಷ್ಟು ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಅರಿವು ನೆರವು ಕಾರ್ಯಕ್ರಮಗಳನ್ನು ನಡೆಸಬೇಕಿದೆ.

– ಎಚ್‌.ಆರ್‌. ರುಕ್ಮಿಣಿಕಾಂತ್

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.