CONNECT WITH US  

ಮೊಜಾವೆಯ ಮಜವೇ ಬೇರೆ..

ಯುವಕರ ಹಾರ್ಟ್‌ ಬೀಟ್‌ ರೆನೆಗೇಡ್‌

ಮೊಜಾವೆ ಕ್ಲಾಸಿಕ್‌ ಬೈಕ್‌ನ ಬೆಲೆ 1.85ಲಕ್ಷ! ಈ ದುಬಾರಿ ಬೆಲೆಯನ್ನು ಲೆಕ್ಕಿಸದೆ ಬೈಕ್‌ ಖರೀದಿಸಲು ಪಡ್ಡೆಗಳು ತುದಿಗಾಲಲ್ಲಿ ನಿಂತಿದ್ದಾರೆ...

ಹುಡುಗರು ಅದೇನ್‌ ಕ್ರೇಜ್‌ ಅಂತ ಲಕ್ಷ ಲಕ್ಷ ಕೊಟ್ಟು ಬೈಕ್‌ ತಗೋತಾರೋ ಗೊತ್ತಿಲ್ಲ. ಓಡಾಡ್ಲಿಕ್ಕೆ ಒಂದು ಬೈಕ್‌ ಆದ್ರೆ ಸಾಕಪ್ಪಾ... ಬಹುತೇಕ ಮನೆಗಳಲ್ಲಿ ಬೈಕ್‌ ಖರೀದಿಸೋ ವಿಚಾರ ಬಂದಾಗಲೆಲ್ಲ ಹಿರಿಯರಿಂದ ಇಂಥದ್ದೊಂದು ಮಾತು ಬಂದೇ ಬರುತ್ತೆ. ಇನ್ನೊಂದು ವಿಷ್ಯಾ ಗೊತ್ತಾ?, ಅಪ್ಪ ಬಾಯ್ತುಂಬ ತಂಬಾಕಿನ ಪಾನ್‌ ತುಂಬಿಕೊಂಡೇ ಈ ಮಾತನ್ನು ಹೇಳ್ತಿರ್ತಾನೆ ಅಂದೊಳ್ಳಿ. ಆಗ ಮಗ ಮನಸ್ಸಲ್ಲೇ ಹೇಗೆ ಪ್ರತಿಕ್ರಿಯಿಸಿರ್ತಾನೆ ಅನ್ನೋದನ್ನೂ ಒಮ್ಮೆ ಊಹಿಸಿಕೊಳ್ಳಿ. ಸಹಜವಾಗಿ, ಅಯ್ಯೋ ನೀನು ಪಾನ್‌ ಹಾಕೋದೂ ಒಂದು ಕ್ರೇಜ್‌ ತಾನೆ... ಅಂದ್ಕೊಡಿರ್ತಾರೆ. ಹೌದಾ...  ಅಂದಹಾಗೆ, ಕ್ರೇಜ್‌ ಅನ್ನೋದೇ ಹಾಗೆ. ಅದಕ್ಕೆ ಇತಿ-ಮಿತಿಗಳಿಲ್ಲ. 

ಜಾತಿ-ಬೇಧಗಳಿಲ್ಲ. ವಯಸ್ಸಿನ ಮಿತಿಯಂತೂ ಇಲ್ಲವೇ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್‌ ಇದ್ದೇ ಇರುತ್ತೆ. ಹಾಗೇ ಹೊಸ ತಲೆಮಾರಿನ ಯುವಕ-ಯುವತಿಯರಲ್ಲಿ ಬೈಕ್‌-ಕಾರ್‌ಗಳ ಕ್ರೇಜ್‌ ತುಂಬಾನೇ ಇದೆ. ಕಳೆದ ಏಳೆಂಟು ವರ್ಷಗಳಿಂದೀಚೆ ಮೊಬೈಲ್‌ ಕ್ಷೇತ್ರದಲ್ಲಾದ ರೀತಿಯಲ್ಲೇ ತಂತ್ರಜ್ಞಾನ ಅಳವಡಿಕೆಯೊಂದಿಗೆ ಕ್ರಾಂತಿ ಮೂಡಿಸಿರುವ ಕ್ಷೇತ್ರಗಳಲ್ಲಿ ಆಟೋಮೊಬೈಲ್‌ ಕೂಡ
ಒಂದಾಗಿದೆ. ಅದೇ ಕಾರಣಕ್ಕೇ ಆಕರ್ಷಣೆಯೂ ಹೆಚ್ಚು.  ಇದನ್ನೇ ಪ್ರಮುಖ ಅಜೆಂಡಾವಾಗಿಸಿಕೊಂಡು ಭಾರತೀಯ ಮಾರುಕಟ್ಟೆಯಲ್ಲಿ ಬೇರೂರಿರುವ ಅಮೇರಿಕ ಮೂಲದ ಯುಎಂ ಇಂಟರ್‌ನ್ಯಾಷನಲ್‌ನ ಭಾರತೀಯ ಶಾಖಾ ಸಂಸ್ಥೆ ಯುಎಂ ಲೋಯಾ ಟು ವೀಲರ್ಇತ್ತೀಚೆಗಷ್ಟೇ ರೆನೆಗೇಡ್‌ ಕಮ್ಯಾಂಡೋ ಕ್ಲಾಸಿಕ್‌ ಮತ್ತು ರೆನೆಗೇಡ್‌ ಕಮ್ಯಾಂಡೊ ಮೊಜಾವೆ ಬೈಕ್‌ಗಳನ್ನು ಪರಿಚಯಿಸಿದೆ. ಈ ಎರಡೂ ಬೈಕ್‌ಗಳೂ ಸಧ್ಯ ಭಾರತದಲ್ಲಿ ಸ್ಪರ್ಧಾತ್ಮಕವಾದ ಸವಾಲನ್ನೇ ನೀಡುತ್ತಿವೆ. 

ತೃಪ್ತಿದಾಯಕ ಸುರಕ್ಷತೆ
ಸುರಕ್ಷತೆ ದೃಷ್ಟಿಯಿಂದಲೂ ಕ್ಲಾಸಿಕ್‌ ಮತ್ತು ಮೊಜಾವೆ ಯಾವುದೇ ಬೈಕ್‌ಗಳಿಗೆ ಏನೂ ಕಡಿಮೆ ಇಲ್ಲ. ಮುಂಭಾಗದ ವೀಲ್‌ನಲ್ಲಿ ಡಿಸ್ಕ್, ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ ಅಳವಡಿಸಲಾಗಿದೆ. ಡಿಸ್ಕ್/ಡ್ರಮ್‌ 180 ಮಿ.ಮೀ ಹಾಗೂ 130 ಮಿ.ಮೀ. ಹೊಂದಿದ್ದು ಎಷ್ಟೇ ವೇಗದಲ್ಲಿದ್ದರೂ ಸುಲಭವಾಗಿ ಕಂಟ್ರೋಲ್‌ ಮಾಡುವ ಸಾಮರ್ಥ್ಯ ಇದರಲ್ಲಿದೆ. ಎಬಿಎಸ್‌ ಅಳವಡಿಸಲಾಗಿರುವುದೂ ಇನ್ನೊಂದು ಪ್ಲಸ್‌
ಪಾಯಿಂಟ್‌.

ಏನಿದರ ವಿಶೇಷ?
ರೆನೆಗೇಡ್‌ ಕಮ್ಯಾಂಡೋ ಕ್ಲಾಸಿಕ್‌ ಬೈಕ್‌ ಅನ್ನು 2016ರ ಆಟೋ ಎಕ್ಸ್‌ಪೋ'ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಅಮೇರಿಕ ಮೂಲದ ಕ್ರೂಸರ್‌ 279.5 ಸಿಸಿ ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌, ಇಎಫ್ಎಐ ಎಂಜಿನ್‌ ಹೊಂದಿದೆ. ರೆಸ್ಪಾನ್ಸಿವ್‌ 4 ಸ್ಟ್ರೋಕ್‌, 4 ವಾಲ್ಟ್$Õ ಮತ್ತು ಸ್ಪಾರ್ಕ್‌ ಇಂಗ್ನಿಷನ್‌ ಇದರದ್ದಾಗಿದೆ. 25.15 ಬಿಎಚ್‌ಪಿ ಅನ್ನು 8500 ಆರ್‌ಪಿಎಂನಲ್ಲಿಯೂ ಹಾಗೂ 23 ಎಂಎನ್‌ ಟಾರ್ಕ್‌ ಅನ್ನು 7000 ಆರ್‌ಪಿಎಂನಲ್ಲಿ ನೀಡುವ ಗುಣ ಈ ಬೈಕ್‌ಗಳದ್ದಾಗಿವೆ. 6 ಸ್ಪೀಡ್‌ ಟ್ರಾನ್ಸ್‌ಮಿಷನ್‌ ಹೊಂದಿರುವ ಈ ಬೈಕ್‌ನಲ್ಲಿ ವೈಬ್ರೇಷನ್‌ ಇಲ್ಲದೇ ಚಾಲನೆ ಮಾಡಲು ಸಾಧ್ಯ. ಅಷ್ಟಕ್ಕೂ ಎಲ್ಲಾ ರಸ್ತೆಗಳಲ್ಲಿಯೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಮೊಜಾವೆ ಮತ್ತು ಕ್ಲಾಸಿಕ್‌ ಎರಡೂ ಬೈಕ್‌ಗಳು ಎಲೆಕ್ಟ್ರಿಕ್‌ ಸ್ಟಾರ್ಟ್‌ ಬಟನ್‌ ಹೊಂದಿವೆ. ಪೇಪರ್‌ ಎಲಿಮೆಂಟ್‌ ಇನೋವೇಟಿವ್‌ ಏರ್‌ μಲ್ಟರ್‌ ಅಳವಡಿಸಲಾಗಿದೆ. ಉಳಿದಂತೆ ಮುಂಭಾಗದ ವೀಲ್‌ನಲ್ಲಿ ಟೆಲಿಸ್ಕೋಪಿಕ್‌ ಸಸ್ಪೆನÒನ್‌, ಹಿಂಭಾಗದಲ್ಲಿ ಡ್ಯುಯಲ್‌ ಶಾಕ್ಸ್‌ ಅಬ್ಸರ್ವರ್‌ಗಳನ್ನು ಹಾಗೂ ಸ್ಪ್ರಿಂಗ್‌ ಹೊಂದಿರುವ ಟ್ವಿನ್‌ ಹೈಡ್ರಾಲಿಕ್‌ ಶಾಕ್ಸ್‌ ನೀಡಲಾಗಿದೆ.  ಇವೆಲ್ಲದರ ಜತೆಗೇ ಫ್ಯೂಯಲ್‌ ಗೇಜ್‌ ಹಾಗೂ ಡಿಜಿಟಲ್‌ ಟ್ರಿಪ್‌ ಮೀಟರ್‌ ನೀಡಲಾಗಿದೆ. ಪಿಲ್ಲಿಯಾನ್‌ ಸೀಟ್‌ ಮತ್ತು ಗ್ರಾಬ್ರೆ„ಲ್‌ ಹೊಂದಿರುವುದು ಇನ್ನೊಂದು ವಿಶೇಷ.

ಇಂಧನ ಸಾಮರ್ಥ್ಯ
18 ಲೀಟರ್‌
ಮೈಲೇಜ್‌
35 ಕಿಲೋ ಮೀಟರ್‌ ಪ್ರತಿ ಲೀಟರ್‌ಗೆ 
ಒಟ್ಟಾರೆ ರೈಡಿಂಗ್‌ ರೇಂಜ್‌
630 ಕಿಲೋ ಮೀಟರ್‌
ಬೈಕ್‌ನ ಭಾರ
179 ಕಿಲೋಗ್ರಾಂ

ಉದ್ದ 2257 ಮಿ.ಮೀ./
ಅಗಲ 780  ಮಿ. ಮೀ/
ಎತ್ತರ 1350  ಮಿ. ಮೀ

ಬೈಕ್‌ನ ಗ್ರೌಂಡ್‌ ಕ್ಲಿಯರೆನ್ಸ್‌
200 ಮಿ.ಮೀ.

ಬೆಂಗಳೂರಲ್ಲಿ ಬೆಲೆ ಎಷ್ಟು?
ಈ ಎರಡೂ ಬೈಕ್‌ಗಳ ಎಕ್ಸ್‌ ಶೋರೂಂ ಬೆಲೆ:
1.85 ಲಕ್ಷ ರೂ. ನಿಂದ 1.93 ಲಕ್ಷ ರೂ.

ಅಗ್ನಿಹೋತ್ರಿ 


Trending videos

Back to Top