CONNECT WITH US  

ಟರ್ಮ್ ಪ್ಲಾನ್‌

ಇವರು ನಿಮ್ಮ ಸಾಲ ತೀರಿಸುತ್ತಾರೆ ಬಿಡಿ...

ಇನ್ಸುರೆನ್ಸ್‌ ಎಂಬ ಶಬ್ದ ಕೇಳಿದಾಕ್ಷಣ ಹಲವರು ದೂರ ಸರಿಯುತ್ತಾರೆ. ವಿಮೆ ಮಾಡಿಸುವುದೆಂದರೆ ಅನೇಕರಿಗೆ ಅದೇಕೋ ರೇಜಿಗೆ. ನಾವು ಬದುಕಿದ್ದಾಗ ಸಿಗದಿರುವ ಆ ಹಣಕ್ಕಾಗಿ ಹೂಡಿಕೆ ಮಾಡುವುದು ವ್ಯರ್ಥ ಎನ್ನುವವರೂ ಇದ್ದಾರೆ. ಸಾಂಪ್ರದಾಯಿಕವಾಗಿದ್ದ ವಿಮಾ ವಲಯ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆಗಳನ್ನು ಕಂಡಿದೆ.

ಗ್ರಾಹಕರನ್ನು ಸೆಳೆಯಲು ಅನೇಕ ಗ್ರಾಹಕ ಸ್ನೇಹಿ ಪಾಲಿಸಿಗಳು ಜಾರಿಗೆ ಬಂದಿವೆ. ಕೆಲವು ಕಂಪೆನಿಗಳಂತೂ ಸ್ಪರ್ಧೆಗೆ ಬಿದ್ದು ಹೊಸ ಸೂತ್ರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಒಂದಂತೂ ನಿಜ. ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುವುದು ಕೇವಲ ನಮ್ಮ ಅವಲಂಬಿಸಿರುವ ಕುಟುಂಬದ ಸುರಕ್ಷತೆಗಾಗಿ ಮಾತ್ರವಲ್ಲ.

ನಮ್ಮ ಬಂಡವಾಳದ ವರ್ಧನೆಗೂ ಎಂಬುದನ್ನೂ ಇಲ್ಲಿ ಗಮನಿಸಬೇಕು. ನಾನಿಲ್ಲಿ ಸಾಂಪ್ರದಾಯಿಕವಾದ ಜೀವ ವಿಮಾ ಪಾಲಿಸಿಗಳ ಬಗ್ಗೆ ಹೇಳ ಹೊರಟಿಲ್ಲ. ಟರ್ಮ್ಪ್ಲಾನ್‌ ಎಂಬ ಶಿರೋನಾಮೆ ಅಡಿಯಲ್ಲಿ ವಿಮಾ ಕಂಪೆನಿಗಳು ಕೊಡುವ ವಿಮಾ ಪಾಲಿಸಿಗಳ ಮೇಲೆ ಬೆಳಕು ಚೆಲ್ಲಲು ಹೊರಟಿದ್ದೇನೆ.

ಟರ್ಮ್ ಪ್ಲಾನ್‌ ಹೇಗೆ ಕೆಲಸ ಮಾಡುತ್ತದೆ?
ಸಾಮಾನ್ಯವಾಗಿ Term Plan ಗಳಲ್ಲಿ ನಿರ್ದಿಷ್ಟ ಮೊತ್ತಕ್ಕೆ ವಿಮೆ ಮಾಡಿಸಿರುತ್ತೇವೆ. ಅದಕ್ಕೆ ನಿಗದಿಯಾದ ಮಾ ಪ್ರೀಮಿಯಂ ಪ್ರತಿವರ್ಷ ಕಟ್ಟುತ್ತಾ ಹೋಗಬೇಕು. ಮೂವತ್ತು ವರ್ಷಗಳ ಅವಧಿಗೆ ಮೂವತ್ತು ಲಕ್ಷ ರೂಪಾಯಿಗಳ ಮೊತ್ತಕ್ಕೆ ನೀವು ಈ ಪ್ಲಾನ್‌ನಲ್ಲಿ ವಿಮಾ ಪಾಲಿಸಿ ಕೊಂಡಿದ್ದರೆ, ನಿಗದಿಯಾದ ಮೊತ್ತ ಪ್ರತಿವರ್ಷವೂ ಕಟ್ಟುತ್ತಾ ಹೋಗಬೇಕಾಗುತ್ತದೆ.  

ಆಯಾ ಪಾಲಿಸಿ ವರ್ಷದಲ್ಲಿ ನಿಮ್ಮ ಪಾಲಿಸಿ ಊರ್ಜಿತ ಸ್ಥಿತಿಯಲ್ಲಿದ್ದಾಗ, ಅಪಘಾತದಿಂದ ಆಸ್ಪತ್ರೆ ಸೇರುವಂತಾದರೆ  ಚಿಕಿತ್ಸೆಯ ಮೊತ್ತ, ವಿಮಾ ಕಂಪೆನಿ ತೆರುತ್ತದೆ. ಒಂದೊಮ್ಮೆ ಪಾಲಿಸಿಯ ಅವಧಿಯ ನಡುವೆ ಪಾಲಿಸಿದಾರ ಸಹಜಸಾವು, ಅಪಘಾತ ಅಥವಾ ಇನ್ನಾವುದೇ ಆಕಸ್ಮಿಕದಿಂದ ಮೃತಪಟ್ಟಲ್ಲಿ, ವಿಮೆಯ ಸಮ್‌ ಅಶ್ಯೂರ್‌x ಮೊತ್ತ ಪೂರ್ಣವಾಗಿ ನಾಮಿನಿಗೆ ಸಂದಾಯವಾಗುತ್ತದೆ. ಕುಟುಂಬದ ಯಜಮಾನ ಇಂತಹ ಪಾಲಿಸಿ ಮಾಡಿಕೊಳ್ಳುತ್ತಾನೆ.

ಆತನೊಬ್ಬನೇ ಕುಟುಂಬದಲ್ಲಿ ದುಡಿಯುವವನಾದ್ದರಿಂದ ಆತನಿಗೇನಾದರೂ ಆದರೆ ಅವಲಂಬಿತ ಕುಟುಂಬಕ್ಕೆ ಆರ್ಥಿಕವಾಗಿ ಧಕ್ಕೆಯಾಗಬಾರದು ಎಂಬುದು ಈ ಪಾಲಿಸಿಯಲ್ಲಿರುವ ಅಂತರ್ಗತ ಆಶಯ. ಈ ದೃಷ್ಟಿಯಿಂದ ಇಂತಹದೊಂದು ಪಾಲಿಸಿ ಮಾಡಿಸುವುದು ಸೂಕ್ತ ಮತ್ತು ಸುರಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಂದು ತೊಡಕಿದೆ. ಬೇರೆ ಮಾಪಾಲಿಸಿಗಳಲ್ಲಾದರೆ ಮೆಚ್ಯುರಿಟಿ ಮೊತ್ತ ಎಂಬುದೊಂದು ಇರುತ್ತದೆ.

ನೀವು ಕಟ್ಟಿದ ಪ್ರೀಮಿಯಂಗೆ ಲಾಭಾಂಶ ಸೇರಿ ನಿಮಗೆ ಅಥವಾ ನಿಮ್ಮ ನಾಮಿನಿಗೆ ಅದು ದಕ್ಕುತ್ತದೆ.  ಆದರೆ ಟರ್ಮ್ ಪ್ಲಾನ್‌ನಲ್ಲಿ ಅದಿಲ್ಲ. ಇಲ್ಲಿ ಪ್ರತಿವರ್ಷ ಕಟ್ಟಿದ ಪ್ರೀಮಿಯಂ ಪಾಲಿಸಿದಾರನಿಗೆ ವಾಪಾಸು ಸಿಗುವುದಿಲ್ಲ. ಒಂದೊಮ್ಮೆ ಅವಘಡ, ಜೀವಹಾನಿ ಸಂಭಸಿದಾಗ ಮಾತ್ರ ಹಣಕಾಸಿನ ಕೊಡುಗೆಯ ಪ್ರಶ್ನೆ ಉದ್ಭವಿಸುತ್ತದೆಯೇ ವಿನಃ, ಏನೂ ಸಂಭವಿಸದೇ ಇದ್ದಲ್ಲಿ ಕೊನೆಗೆ ಪಾಲಿಸಿದಾರನಿಗೆ ಯಾವ ಮೊತ್ತವೂ ಸಿಗುವುದಿಲ್ಲ.

ಹಾಗಿದ್ದರೆ ಈ ಪಾಲಿಸಿ ಯಾಕೆ ಬೇಕು?: ಸಾಮಾನ್ಯವಾಗಿ ಎಲ್ಲರೂ ಮನೆಯೋ, ಫ್ಲಾಟೋ ಕೊಳ್ಳುತ್ತಾರೆ. ಅದಕ್ಕಾಗಿ ಬ್ಯಾಂಕ್‌ ಸಾಲವನ್ನೂ ಮಾಡಿರುತ್ತಾರೆ. ತಿಂಗಳ ಕಂತಿನಲ್ಲಿ ಸಾಲದ ತೀರುವಳಿಯೂ ಆಗುತ್ತಿರುತ್ತದೆ. ಕಂತುಕಟ್ಟುವ ಮನೆಯ ಯಜಮಾನ ಸಾಲಬಾಕಿ ಇರುವಾಗಲೇ ಅನಾರೋಗ್ಯದಿಂದಲೋ, ಅಪಘಾತದಿಂದಲೋ ತೀರಿಕೊಂಡಲ್ಲಿ, ಸಾಲ ತೀರಿಸುವುದು ಯಾರು ಮತ್ತು ಹೇಗೆ?

ಎಂಬ ಪ್ರಶ್ನೆ ಉದ್ಭವಿಸುತ್ತದೆಯಲ್ಲ?  ಇಂತಹದೊಂದು ಟರ್ಮ್ ಪ್ಲಾನ್‌ ಇದ್ದಲ್ಲಿ ಮತ್ತು ಸಾಲದ ಮೊತ್ತಕ್ಕೆ ಸಮನಾಗುವ ಮೊತ್ತಕ್ಕೆ ಅದನ್ನು ಮಾಡಿಸಿದ್ದಲ್ಲಿ, ಮನೆಯ ಯಜಮಾನನ ಅವಲಂಬಿತರು ಸಾಲದ ಕಿರಿಕಿರಿ ಇಲ್ಲದೆ ನೆಮ್ಮದಿಯಾಗಿ ಇರಬಹುದು. ಸಾಮಾನ್ಯವಾಗಿ ಈಗ ಮನೆಸಾಲ ಕೊಡುವ ಎಲ್ಲ ಬ್ಯಾಂಕುಗಳೂ ಈ ತರಹದ್ದೊಂದು ಪಾಲಿಸಿ ಕಡ್ಡಾಯವಾಗಿ ಮಾಡಿಸುತ್ತದೆ.  

ಈ ಹೊಸ ಥರಹದ ಪಾಲಿಸಿಯ ಲಾಭವೇನು?: ಇದೇ ಟರ್ಮ್ ಪ್ಲಾನಿನಲ್ಲಿ ಎಲ್ಲ ವಿಮಾ ಕಂಪೆನಿಗಳು ಪ್ರೀಮಿಯಂ ಹಣವನ್ನು ವಾಪಾಸುಕೊಡುವುದಿಲ್ಲ ಎಂದೇನಲ್ಲ. ಆದರೆ ಈ ಹೊಸ ಪಾಲಿಸಿಯಡಿಯಲ್ಲಿ ಇರುವ ಆಕರ್ಷಣೆ ಎಂದರೆ ಇಲ್ಲಿ ಪ್ರೀಮಿಯಂ ವಾಪಾಸುಸಿಗುತ್ತದೆ. ವಿಮಾ ಪಾಲಿಸಿಯ ಅವಧಿಯ ನಡುವೆ ಪಾಲಿಸಿದಾರನಿಗೆ ಅವಘಡ, ಪ್ರಾಣಾಪಾಯ ಇಂತಹದ್ದೇನೂ ಸಂಭವಿಸದೇ, ಕ್ಲೈಮು ಕೊಡುವ ಪ್ರಮೇಯ ಉದ್ಭವಿಸದೇ ಇದ್ದಲ್ಲಿ ವಿಮಾ ಕಂಪೆನಿ ಕೊನೆಗೆ ಅಷ್ಟೂ ವರ್ಷ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಏಕಗಂಟಿನಲ್ಲಿ ವಾಪಾಸು ಕೊಡುತ್ತದೆ.  

ಅಲ್ಲಿಗೆ ನಮಗೆ ಸುರಕ್ಷತೆಯೂ ದಕ್ಕಿದಂತಾಗಿ ಕೊನೆಗೆ ಕಟ್ಟಿದ ದುಡೂ ಸಿಗುವಂತಾದರೆ ಒಳ್ಳೆಯದೇ ಅಲ್ಲವೇ? ಇದು ಈ ಹೊಸ ವಿಮಾಪ್ಲಾನಿನ ಆಕರ್ಷಣೆ.   20 ವರ್ಷಗಳ ಮನೆಸಾಲದ ಅವಧಿ ಕಳೆದಾಗ, ಈ ಟರ್ಮ್ ಪ್ಲಾನಿನ ಅವಧಿಯೂ ಕಳೆದರೆ ಕೊನೆಗೆ ಅಷ್ಟೂ ವರ್ಷ ಕಟ್ಟಿದ ಪ್ರೀಮಿಯಂ ಏಕಗಂಟಿನಲ್ಲಿ ನಿಮಗೇ ವಾಪಾಸು ಸಿಗುತ್ತದೆ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಹೀಗೆ ರೀಫ‌ಂಡ್‌ ಸಿಗುವ ಪ್ರೀಮಿಯಂ ಮೊತ್ತಕ್ಕೆ ವರಮಾನ ತೆರಿಗೆ ಇರುವುದಿಲ್ಲ.

* ನಿರಂಜನ

Trending videos

Back to Top