ಸಾವಯವ ಬೇಸಾಯ ಸಮಗ್ರ ಆದಾಯ

Team Udayavani, Jan 15, 2018, 2:26 PM IST

15-27.jpg

ಬಹುಬೆಳೆಗಳನ್ನು ಬೆಳೆದರೆ, ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ, ಪ್ರತಿ ತಿಂಗಳೂ ಸಾಫ್ಟ್ವೇರ್‌ ಎಂಜಿನಿಯರ್‌ಗಳಷ್ಟೇ ಸಂಪಾದನೆ ಮಾಡಬಹುದು ಎಂಬುದಕ್ಕೆ ಇಲ್ಲಿ ಸಾಕ್ಷಿಯಿದೆ…

  ಒಂದೇ ಬೆಳೆಯನ್ನು ಬೆಳೆಯುವ ಬದಲು ಬಹು ಬೆಳೆಗಳನ್ನು ಬೆಳೆದರೆ ಕೃಷಿಯಲ್ಲೂ ತಿಂಗಳಿಗೆ ಸಾಫ್ಟ್ವೇರ್‌ ಇಂಜಿನಿಯರ್‌ಗಳು ಪಡೆಯುವಷ್ಟೇ ಆದಾಯವನ್ನು ಗಳಿಸಬಹುದು. ಈ ಮಾತಿಗೆ ಚಿಕ್ಕಮಗಳೂರು ಜಿಲ್ಲೆಯ ಎನ್‌. ಆರ್‌. ಪುರ ತಾಲೂಕಿನ ಹಾತೂರು ಗ್ರಾಮದ ರಾಘವೇಂದ್ರರೇ ಉದಾಹರಣೆ.

   ಇವರದು ಐದು ಎಕರೆ ಜಮೀನು. ತಂದೆ ಕುಟ್ಟಿ ಪೂಜಾರಿಯವರೊಂದಿಗೆ ಸೇರಿ ಅಡಿಕೆ, ಕಾಫಿ, ತೆಂಗನ್ನು ಬೆಳೆಯುತ್ತಿದ್ದರು. ಇವುಗಳಿಂದ ವರ್ಷದಲ್ಲೊಂದು ಬಾರಿಯಷ್ಟೇ ಆದಾಯ ಕೈಸೇರುತ್ತಿತ್ತು. ಅಡಿಕೆಗೆ ಬೇಡಿಕೆಯಿದ್ದಾಗ ತೆಂಗನ್ನು ಕೇಳುವವರೆ ಇರುತ್ತಿರಲಿಲ್ಲ. ಒಂದು ವೇಳೆ ಅವೆರಡಕ್ಕೂ ಉತ್ತಮ ಬೆಲೆ ದೊರೆತರೆ ಕಾಫಿ ಯಾರಿಗೂ ಬೇಡವಾಗಿರುತ್ತಿತ್ತು ! ಇದು ಪ್ರತಿ ವರ್ಷವೂ ಇವರು ಎದುರಿಸುತ್ತಿದ್ದ ಸಮಸ್ಯೆ. ಬಹು ಬೆಳೆಗಳನ್ನು ಬೆಳೆಯಬೇಕೆಂಬ ಬಯಕೆಯಿದ್ದರೂ ಅವುಗಳ ಕುರಿತು ಮಾಹಿತಿ ಇರಲಿಲ್ಲ. 2011ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಆರಂಭವಾದವು. ಇವರು “ಸಿದ್ಧೇಶ್ವರ’ ಪ್ರಗತಿಬಂಧು ತಂಡವನ್ನು ಸೇರಿಕೊಂಡರು. ಸಮಗ್ರ ಕೃಷಿಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಸಾವಯವದಲ್ಲಿ ಮಾಡುವ ನಿರ್ಧಾರಕ್ಕೆ ಬಂದರು. ದಿನಬಳಕೆಯ ಪ್ರತಿಯೊಂದನ್ನೂ ಮನೆಯಲ್ಲೇ ಬೆಳೆಯಬೇಕೆಂಬ ನಿಟ್ಟಿನಲ್ಲಿ ಕೃಷಿ ಮಾಡದೆ ಹಾಗೇ ಬಿಟ್ಟಿದ್ದ ಜಮೀನಿನಲ್ಲಿ ಶ್ರೀ ಪದ್ಧತಿ ಭತ್ತವನ್ನು ಬೆಳೆದರು. ಸಾಮಾನ್ಯ ತಳಿಬಿತ್ತಿದಾಗ ಹದಿನಾರು ಕ್ವಿಂಟಾಲ್‌ ದೊರೆಯುತ್ತಿದ್ದ ಇಳುವರಿ, ಶ್ರೀ ಪದ್ಧತಿಯಿಂದಾಗಿ ಇಪ್ಪತ್ತ ಮೂರು ಕ್ವಿಂಟಾಲ್‌ ದೊರೆಯಿತು. ಕೃಷಿಯಲ್ಲಿ ಹೆಚ್ಚಿನ ಅರಿವು ಪಡೆಯುವ ಆಸೆಯಿಂದ ಕೇರಳ, ಬೈಲಹೊಂಗಲ, ಧಾರವಾಡದ ರೈತರ ಮನೆಗಳಿಗೆ ಅಧ್ಯಯನ ಪ್ರವಾಸ ಕೈಗೊಂಡರು. ಉಜಿರೆಯ ರತ್ನಮಾನಸದಲ್ಲಿ ಮಿಶ್ರ ತರಕಾರಿ ಬೆಳೆಯುವುದನ್ನು ಕಂಡು ಟೊಮೆಟೊ, ಶುಂಠಿ, ಸುವರ್ಣಗಡ್ಡೆ, ಸೌತೆ, ಮೆಣಸು, ಅರಶಿನ, ಕ್ಯಾರೆಟ್‌, ಮೂಲಂಗಿ, ಆಲೂಗಡ್ಡೆ, ಬೀನ್ಸ್‌, ಅರಿವೆಸೊಪ್ಪು, ಈರುಳ್ಳಿ, ಕೊತ್ತಂಬರಿಸೊಪ್ಪು, ಕ್ಯಾಬೇಜ್‌ ಹೀಗೆ ಎಲ್ಲಾ ತರಕಾರಿಗಳನ್ನು ಬೆಳೆದರು. ಗೊಬ್ಬರಕ್ಕಾಗಿ ಅಂಗಡಿಗೆ ತೆರಳುವ ಬದಲು ಹೈನುಗಾರಿಕೆಯನ್ನು ಆರಂಭಿಸಿದರು.  ದನಗಳಿಗೆ ಮೇವಿಗಾಗಿ ಅಜೋಳ, ಹಸಿರುಲ್ಲು, ಡಯಾಂಚ (ಹಸಿರೆಲೆಗೊಬ್ಬರ)ವನ್ನು ಬೆಳೆದರು. ಕೇವಲ ಕೊಟ್ಟಿಗೆ ಗೊಬ್ಬರವನ್ನು ನೀಡುವ ಬದಲು ಎಂಟು ಎರೆಹುಳು ತೊಟ್ಟಿಯನ್ನು, ಸಾವಯವ ಜೀವಾಮೃತ, ಕೋಳಿಗೊಬ್ಬರ, ಕುರಿಗೊಬ್ಬರವನ್ನು ತಯಾರಿಸಿದರು.

   ಇವರ ತೋಟದಲ್ಲಿ ಈಗ ಎಲ್ಲವೂ ಇದೆ. ಅಂಗಡಿಯಿಂದ ಧಾನ್ಯವೊಂದನ್ನು ಹೊರತುಪಡಿಸಿ ಬೇರ್ಯಾವುದನ್ನೂ ಇವರು ಖರೀದಿಸುವುದಿಲ್ಲ. ತರಕಾರಿಗಳು ಮನೆಬಳಕೆಯಾಗಿ ಉಳಿಯುತ್ತವೆ. ಅವುಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಕಳೆದ ವರ್ಷ ಒಟ್ಟು ಮೂರು ಲಕ್ಷ ರೂಪಾಯಿ ಉಳಿತಾಯವಾಗಿದೆಯಂತೆ. 

   ಗೊಬ್ಬರ ನೀಡುವ, ನೀರುಹಾಯಿಸುವ, ಕಟಾವು ಮಾಡುವ ಕೆಲಸಗಳಲ್ಲಿ ಮಗ, ತಂದೆ, ತಾಯಿ, ಮಕ್ಕಳು ಜೊತೆ ಸೇರಿ ದುಡಿಯುತ್ತಾರೆ. ಬಹುಬೆಳೆಗಳಿಂದ ಬಂದ ಆದಾಯದಿಂದ ಸುಂದರ ಮನೆಯೊಂದನ್ನು ನಿರ್ಮಿಸಿದ್ದಾರೆ. ಕೂಲಿಯಾಳುಗಳ ಸಮಸ್ಯೆಗೆ ಮುಕ್ತಿ ಎಂಬಂತೆ ಟಿಲ್ಲರ್‌, ಕಳೆತೆಗೆಯುವ, ಔಷಧಿ ಸಿಂಪಡಿಸುವ ಯಂತ್ರಗಳನ್ನು ಖರೀದಿಸಿದ್ದಾರೆ. ನೀರಿಗಾಗಿ ಬೋರ್‌ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕೃಷಿಗೆ ಪೂರಕವಾಗಿ ಕೋಳಿಗಳನ್ನು ಸಾಕಿಕೊಂಡಿದ್ದಾರೆ. ಗೋಬರ್‌ಗ್ಯಾಸ್‌, ಸೋಲಾರ್‌ ಹೀಗೆ ಎಲ್ಲವೂ ಇಲ್ಲಿವೆ. ವರ್ಷದ ಎಲ್ಲಾ ಮಾಸದಲ್ಲೂ ಒಂದಿಲ್ಲೊಂದು ತರಕಾರಿಗಳ ನಾಟಿ ಆಗುತ್ತಿರುತ್ತದೆ. ಸಾವಯವ ಪದ್ಧತಿ ಕೃಷಿ ಅನುಸರಿಸುತ್ತಿರುವುದರಿಂದ ರೋಗಗಳು ಬಾಧಿಸುತ್ತಿಲ್ಲ. ಒಣಗಿದ ತರಕಾರಿ ಗಿಡಗಳು, ಎಲೆಗಳನ್ನು ಸಗಣಿಯೊಂದಿಗೆ ಸೇರಿಸಿ ಗೊಬ್ಬರ ತಯಾರಿಸಲಾಗುತ್ತದೆ. ಇಲ್ಲಿನ ಹೆಚ್ಚಿನ ಕೆಲಸಗಳು ಯೋಜನೆಯ ಸಂಘದ ಶ್ರಮನಿಮಯದ ಮೂಲಕ ನಡೆಯುತ್ತಿರುವುದರಿಂದ ಖರ್ಚು ಕೂಡಾ ತುಂಬಾ ಕಡಿಮೆ.

 ಮಾಹಿತಿಗೆ -9449968205. (ರಾತ್ರಿ 6 ರಿಂದ 7 ಗಂಟೆಯವರೆಗೆ).

ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.