ಬ್ಯಾಲೆನ್ಸ್‌ ಎಂಬ ಮಿನಿಮಮ್‌ ಗ್ಯಾರಂಟಿ


Team Udayavani, Jan 22, 2018, 1:01 PM IST

balance.jpg

ದಂಡ, ಶುಲ್ಕ ಅಥವಾ ಬಡ್ಡಿ, ಯಾವುದೇ ಇರಲಿ, ಅವು ಆರಂಭದ ದಿನಗಳಲ್ಲಿ  ಅಥವಾ ಅವುಗಳನ್ನು ಪ್ರಥಮ ಬಾರಿ  ಜಾರಿಗೆ ತಂದಾಗ ನೆಪಮಾತ್ರಕ್ಕೆ ಅಥವಾ ಸಣ್ಣ ಪ್ರಮಾಣದಲ್ಲಿ ಇರುತ್ತವೆ. ಆದರೆ, ದಿನಗಳು ಕಳೆದಂತೆ, ಅವು  ನಾನಾ ಕಾರಣಗಳಿಗಾಗಿ ಹೆಚ್ಚಾಗುತ್ತಾ ಹೋಗುತ್ತವೆ.  

ಸರ್ಕಾರಿ ಸ್ವಾಮ್ಯದ  ಬ್ಯಾಂಕ್‌ ಒಂದು  ಏಪ್ರಿಲ್ 2017 ರಿಂದ ನವೆಂಬರ್‌ ಅವಧಿಯಲ್ಲಿ  ತನ್ನ ಗ್ರಾಹಕರ ಖಾತೆಗಳಲ್ಲಿ ನಿಗದಿತ ಕನಿಷ್ಠ ಬ್ಯಾಲೆನ್ಸ್‌ ಇರಿಸದಿದ್ದಕ್ಕೆ ದಂಡ ಹಾಕಿ 1,770  ಕೋಟಿ ಸಂಗ್ರಹಿಸಿದೆಯಂತೆ . ಇದು ಆ ಬ್ಯಾಂಕಿನ ಜುಲೈ- ಸೆಪ್ಟೆಂಬರ್‌ ತ್ತೈಮಾಸಿಕ ಅವಧಿಯಲ್ಲಿ ಗಳಿಸಿದ ಲಾಭಕ್ಕಿಂತ ತುಸು ಹೆಚ್ಚು. ಇದೇ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ 97 ಕೋಟಿ, ಸೆಂಟ್ರಲ್  ಬ್ಯಾಂಕ್‌ 68, ಕೆನರಾ ಬ್ಯಾಂಕ್‌ 62  ಐಡಿಬಿಐ ಬ್ಯಾಂಕ್‌ 52 ಮತ್ತು ಉಳಿದ ಕೆಲವು ಬ್ಯಾಂಕುಗಳು ಒಟ್ಟು 268 ಕೋಟಿ  ಸಂಗ್ರಹಿವೆಯಂತೆ. 

ಬ್ಯಾಲೆನ್ಸ್‌ ಅಂದರೇನು?: ಹಾಗಾದರೆ ಕನಿಷ್ಠ ಬ್ಯಾಲೆನ್ಸ್‌ ಅಂದರೇನು, ಅದು ಹೇಗೆ ನಿಗಧಿಯಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಗ್ರಾಹಕರು ನಿಗದಿತ ಕನಿಷ್ಠ  ಬ್ಯಾಲೆನ್ಸ್‌ ಅನ್ನು ತಮ್ಮ ಖಾತೆಗಳಲ್ಲಿ ಇರಿಸುವುದು ಮತ್ತು ಇರಿಸದಿದ್ದರೆ ದಂಡ ವಿಧಿಸುವುದು  ಹೊಸ ಬೆಳವಣಿಗೆ ಏನಲ್ಲ.  ಪ್ರತಿ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಏಕರೂಪವಾಗಿ ಇರುವುದಿಲ್ಲ.

ಆದ್ದರಿಂದಲೇ ಖಾಸಗಿ ಬ್ಯಾಂಕ್‌ಗಳಲ್ಲಿ ಮೂರರಿಂದ 25 ಸಾವಿರದ ತನಕ ಇದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಏಕರೂಪವಾಗಿದ್ದು, ಕೆಲವು ಬ್ಯಾಂಕ್‌ಗಳಲ್ಲಿ ಮೂರು ಸಾವಿರವೂ ಆಗಿದೆ.  ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಇದು ಭರಿಸುವ ಮೊತ್ತ ಎನ್ನಬಹುದು.  ಹಾಗೆ ನೋಡಿದರೆ, ಬ್ಯಾಂಕಿನ ಆದಾಯದ ಮೂಲ ಮಿನಿಮಮ್‌ ಬ್ಯಾಲೆನ್ಸ್‌. ಬ್ಯಾಂಕುಗಳಿಗೆ ಎರಡು ರೀತಿಯ ಆದಾಯವಿರುತ್ತದೆ.

1) ಸಾಲದ ಮೇಲಿಂದ ಬರುವ ಬಡ್ಡಿಯ ಆದಾಯ
2) ಬಡ್ಡಿಯೇತರ ಆದಾಯ.
ಬಡ್ಡಿಯೇತರ ಆದಾಯ ಎಂದರೆ ಪ್ರೊಸೆಸಿಂಗ್‌ ಚಾರ್ಜ್‌, ದಂಡ ಇವೆಲ್ಲವೂ ಬರುತ್ತದೆ.  ಖಾಸಗಿ ಬ್ಯಾಂಕ್‌ಗಳಲ್ಲಿ ಮಿನಿಮಮ್‌ ಮೊತ್ತ ಏಕೆ ಜಾಸ್ತಿ ಅಂದರೆ ಅವುಗಳನ್ನು ಕ್ಲಾಸ್‌ ಬ್ಯಾಂಕಿಂಗ್‌ ವಲಯಕ್ಕೆ ಸೇರಿಸುತ್ತಾರೆ. ಹಾಗೇ ನಮ್ಮ ಬ್ಯಾಂಕ್‌ಗಳನ್ನು  ರಾಷ್ಟ್ರೀಕೃತ ಬ್ಯಾಂಕ್‌, ಮಾಸ್‌ ಬ್ಯಾಂಕಿಂಗ್‌ ಅಂತ ಆಂತರಿಕವಾಗಿ ವಿಂಗಡಣೆ ಮಾಡಲಾಗಿದೆಯಂತೆ.

ಹೀಗಾಗಿ ಇವುಗಳ ಖರ್ಚು ನಿರ್ವಹಣೆಯ ಆಧಾರದ ಮೇಲೂ ಮಿನಿಮಮ್‌ ಬ್ಯಾಲೆನ್ಸ್‌ ನಿಗದಿಯಾಗುವುದುಂಟು. ಹಾಗಂತ ಇಷ್ಟೇ ಮಿನಿಮಮ್‌ ಬ್ಯಾಲೆನ್ಸ್‌ ನಿಗದಿ ಮಾಡಬೇಕು ಅನ್ನೋ ಖಚಿತವಾದ ಗೈಡ್‌ಲೈನ್ಸ್‌ ಇಲ್ಲ ಯಾವ ಬ್ಯಾಂಕಿಗೂ ಇಲ್ಲ. ಗ್ರಾಹಕರಿಗೆ ಹೊರೆ ಆಗದಂತೆ ನೋಡಿಕೊಳ್ಳಿ ಎಂದಷ್ಟೇ ಆರ್‌ಬಿಐ ಹೇಳಿರುವುದರಿಂದ ಕೆಲವು ಬ್ಯಾಂಕ್‌ಗಳು ಮನಬಂದಂತೆ ಕೂಡ ಬ್ಯಾಲೆನ್ಸ್‌ ಏರಿಸಿವೆ. 

ಬಡ್ಡಿ ಕೊಡಬೇಕು…: ಒಂದು ಬ್ಯಾಂಕ್‌ನಲ್ಲಿ 10ಸಾವಿರ ಖಾತೆಗಳಿದ್ದು, ಪ್ರತಿ ಖಾತೆಗೆ ಮಿನಿಮಮ್‌ ಐದು ಸಾವಿರ ಇಟ್ಟರೆ ಆ ಬ್ಯಾಂಕಿಗೆ ಎಷ್ಟು ಹಣ ಕ್ರೂಡೀಕರಣವಾಗಬಹುದು? ಇದೂ ಒಂಥರಾ ಬ್ಯಾಂಕಿಗೆ ಗ್ಯಾರಂಟಿ ಠೇವಣಿಯಂತೆಯೇ ಆಗುತ್ತದೆ. ಇಷ್ಟಾದರೂ, ನಮ್ಮಲ್ಲಿ ಖಾತೆದಾರರ ಆರ್ಥಿಕ ಸಾಮರ್ಥಯ ನೋಡಿಕೊಂಡು ಬ್ಯಾಲೆನ್ಸುಗಳನ್ನು ನಿಗದಿ ಮಾಡಿದೆ, ಕೆಲವು ಬ್ಯಾಂಕ್‌ಗಳು ಮಿನಿಮಂ ಬ್ಯಾಲೆನ್ಸ್‌ ಮೊತ್ತವನ್ನು ಗಾಳಿಪಟದಂತೆ ಏರಿಸಿ, ಗ್ರಾಹಕರನ್ನು ಕಳೆದುಕೊಂಡದ್ದೂ ಇದೆ. 

ಈಗಂತೂ ಮಿನಿಮಮ್‌ ಬ್ಯಾಲೆನ್ಸ್‌ಗೂ ಬಡ್ಡಿ ಕೊಡಬೇಕು ಅನ್ನೋ ಕಾನೂನು ಜಾರಿಯಾಗಿದೆ. ಪ್ರಸ್ತುತ ಕನಿಷ್ಠ ಶೇ.3.5ರಷ್ಟು ನಿಗದಿಯಾಗಿದೆ. ಕೆಲವು ಬ್ಯಾಂಕ್‌ಗಳು ಶೇ. 6ರಷ್ಟು ಕೊಡುತ್ತಿವೆಯಾದರೂ, ಒಂದು ಲಕ್ಷ ಇಟ್ಟರೆ ಮಾತ್ರ ಅನ್ನೋ ನಿಬಂಧನೆ ಕೂಡ ಇದೆಯಂತೆ. ದಂಡ, ಶುಲ್ಕ ಅಥವಾ ಬಡ್ಡಿ,  ಯಾವುದೇ ಇರಲಿ, ಅವು ಆರಂಭದ ದಿನಗಳಲ್ಲಿ  ಅಥವಾ ಅವುಗಳನ್ನು ಪ್ರಥಮ ಬಾರಿ  ಜಾರಿಗೆ ತಂದಾಗ ನೆಪಮಾತ್ರಕ್ಕೆ ಅಥವಾ ಸಣ್ಣ ಪ್ರಮಾಣದಲ್ಲಿ ಇರುತ್ತವೆ. ಆದರೆ, ದಿನಗಳು ಕಳೆದಂತೆ, ಅವು  ನಾನಾ ಕಾರಣಗಳಿಗಾಗಿ ಹೆಚ್ಚಾಗುತ್ತಾ ಹೋಗುತ್ತವೆ.

ಈ ಹೆಚ್ಚಳ  ಅನಿವಾರ್ಯವೆಂದು ಬ್ಯಾಂಕ್‌ಗಳು ಸಮರ್ಥನೆ  ಮಾಡಿಕೊಳ್ಳುತ್ತವೆ. ಈ ಸಮರ್ಥನೆಯಲ್ಲಿ ಅರ್ಥವೂ ಇದೆ.  ಹಾಗೆಯೇ, ಇದು  ಅರ್ಥಿಕವಾಗಿ ಕೆಳಸ್ತರದಲ್ಲಿದ್ದವರಿಗೆ  ಭಾರ ಎನ್ನುವುದನ್ನೂ ಅಲ್ಲಗೆಳೆಯಲಾಗದು. ಬ್ಯಾಂಕುಗಳಲ್ಲಿ  ವಸೂಲಾಗದ ಸಾಲದ ಪ್ರಮಾಣ ಏರುತ್ತಿದೆ. ಸಾಲದ ಬೇಡಿಕೆ ನಿರೀಕ್ಷೆಯಷ್ಟು ಇರುವುದಿಲ್ಲ. ಅಂತೆಯೇ ಬಡ್ಡಿ ಆದಾಯ ಕುಂಠಿತವಾಗಿದ್ದು, ಬ್ಯಾಂಕುಗಳು ತಮ್ಮ ನಿರ್ವಹಣೆಗಾಗಿ  ಬಡ್ಡಿಯೇತರ ಅದಾಯವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗುತ್ತದೆ. 

* ರಮಾನಂದ ಶರ್ಮ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.