ಜನ ಮರುಳೋ, ಜಾತ್ರೆ ಮರುಳೋ…


Team Udayavani, Apr 16, 2018, 5:04 PM IST

jana-maralo.jpg

ಮೊದಲು ಚಿನ್ನವನ್ನು ಕೊಳ್ಳುವುದು, ಅದನ್ನು ಇಟ್ಟುಕೊಳ್ಳುವುದು, ಹಣವನ್ನು ಇಟ್ಟುಕೊಂಡಂತೆ ಎನ್ನುವ ಭಾವನೆ ಇತ್ತು. ಆದರೆ ಈಗ ಹಾಗಲ್ಲ. ಮಕ್ಕಳ ಕಾಲಕ್ಕೆ ಆಗುತ್ತದೆ ಎಂದು ಚಿನ್ನ ಖರೀದಿಸುವವರು ಈಗ ಕಡಿಮೆ ಆಗಿದ್ದಾರೆ. 

ಇದು ಅತ್ಯಂತ ಹಳೆಯ ಮಾತು. ಆದರೂ ಇದು ಎಲ್ಲಕಾಲಕ್ಕೂ ಅನ್ವಯಿಸುತ್ತದೆ. ಎಲ್ಲ ರೈತರೂ ಟೊಮೆಟೊ ಬೆಳೆದು ಅದರ  ಬೆಲೆ ಕುಸಿದಾಗ, ಎಲ್ಲ ತಂದೆ ತಾಯಿಗಳೂ ಮಕ್ಕಳು ಇದನ್ನೇ ಓದಬೇಕೆಂದು ಹಠ ಹಿಡಿದು ಕುಳಿತಾಗ, ಕೊನೆಗೆ ಅಕ್ಷಯ ತೃತೀಯ ಎಂದು ಚಿನ್ನದಂಗಡಿ ಮುಂದೆ ಕ್ಯೂ ನಿಂತು ಕೊಳ್ಳುವಾಗ…. ಇಂಥವರನ್ನು ಕಂಡಾಗ ಜನಮರುಳ್ಳೋ, ಜಾತ್ರಿ ಮರುಳ್ಳೋ ಎಂಬು ಮಾತು ತಪ್ಪದೇ ನೆನಪಾಗುತ್ತದೆ.

ಅದರ ಅರ್ಥ ಅಂದರೆ ಸರಿಯಾಗಿ ವಿವೇಚನೆ ಇಲ್ಲದೇ ಮಾಡುವ ಕೆಲಸ ಎಂದು ಜಾತ್ರೆಯನ್ನು ನಾವೆಲ್ಲರೂ ನೋಡಿದ್ದೇವೆ. ಇಲ್ಲಿ ಏನಾಗುತ್ತದೆ ಎಂದರೆ ಎಲ್ಲರೂ ಯಾವುದಕ್ಕೆ ನುಗ್ಗುತ್ತಾರೋ ಅದು ಚೆನ್ನಾಗಿದೆ ಎಂದೇ ಅರ್ಥ. ಅದಕೇR ಎಲ್ಲರೂ ಹೋಗುತ್ತಾರೆ. ತುಂಬಾ ರಶ್‌ ಇರುವ ಅಂಗಡಿಗೇ ಮತ್ತಷ್ಟು ಜನ ಮುಗಿಬೀಳುತ್ತಾರೆ. ಜಾತ್ರೆಯಲ್ಲಿ ಬರುವ ಅಂಗಡಿಗಳಿಂದ ಹಿಡಿದು ಮನರಂಜನೆಯ ಹಲವು ಆಟಗಳು,

ನೋಟಗಳು ಇವೆಲ್ಲವುಗಳಿಗೂ ಇದು ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಜ್ಯೂಸ್‌ ಅಂಗಡಿ, ಆಹಾರದ ಅಂಗಡಿಗಳ ವರೆಗೂ. ಅಂಗಡಿಯಿಂದ ಹೊರ ಬಂದ ನಂತರ ಹೇಳುತ್ತೇವೆ.;ಆವಸ್ತು. ನಾನು ಅಂದುಕೊಂಡಷ್ಟೇನೂ ಚೆನ್ನಾಗಿ ಇರಲಿಲ್ಲ. ಎಲ್ಲರೂ ತಗೊಳ್ತಾ ಇದ್ದದ್ದು ನೋಡಿ ನಾನೂ ತಗೊಂಡೆ. ಬಟ್‌, ಏನೂ ಪ್ರಯೋಜನವಿಲ್ಲ. ಅಕ್ಷಯ ತೃತೀಯವನ್ನು ಚಿನ್ನ ಕೊಳ್ಳುವ ಸಂಭ್ರಮದ ಹಬ್ಬವಾಗಿಸಿದ, ಚಿನ್ನ ಮಾರಾಟದ ಭರಾಟೆಯನ್ನು ಹೆಚ್ಚಿಸಿದ ಜಾಹೀರಾತುಗಳು, ಮಾಧ್ಯಮಗಳು,

ಕೊಳ್ಳುವುದಕ್ಕೆ ಕಷ್ಟ ಪಡುವವರನ್ನು, ಕೊಳ್ಳಲೇಬೇಕೆಂದು ಭ್ರಮಿಸುವವರನ್ನು ನೋಡಿದಾಗ ಯಾರಿಗಾದರೂ ಜನ ಮರುಳ್ಳೋ, ಜಾತ್ರೆ ಮರುಳ್ಳೋ ಎಂದು ಅನ್ನಿಸದೇ ಇರದು. ಯಾವಾಗ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕ ಅಲ್ಲ ಎನ್ನುವುದು ಅರಿವಾಯಿತೋ; ಆಗ ಚಿನ್ನವನ್ನು ಕೊಳ್ಳುವವರ ಸಂಖ್ಯೆಯೂ ಕಡಿಮೆ ಆಯಿತು. ಅಕ್ಷಯ ತೃತೀಯದ ದಿನ ಚಿನ್ನ ಬೇಕೆಂದು ಮೊದಲೇ ಬುಕ್‌ ಮಾಡುತ್ತಿದ್ದ,

ಮಧ್ಯರಾತ್ರಿಯವರೆಗೂ ಅಂಗಡಿ ತೆರೆದು ಗ್ರಾಹಕರನ್ನು ನಿಭಾಯಿಸಲು ಹೈರಾಣಾಗುತ್ತಿದ್ದ ವ್ಯಾಪಾರಿಗಳು ಈಗ ಇಂಥ ಪರಿಸ್ಥಿತಿಯಲ್ಲಿ ಇಲ್ಲ. ಅಕ್ಷಯ ತೃತೀಯ ಕೂಡ ಉಳಿದ ದಿನದಂತೆ (ಅಂದರೆ- ಹತ್ತರಲ್ಲಿ ಹನ್ನೊಂದು ಎಂಬಂತೆ) ಆಗಿದೆ ಅಷ್ಟೇ. ಮತ್ತೆ ಅಕ್ಷಯ ತೃತೀಯ ಬಂದಿದೆ. ಚಿನ್ನ ಬಳಕೆಗೆ ಬೇಕಾ? ಅಂದರೆ, ಮದುವೆಗೆ ಬೇಕಾಗಿದೆ. ಬಹಳ ದಿನಗಳಿಂದ ಖರೀದಿಸಬೇಕು ಎಂದುಕೊಂಡಿದ್ದೆ.  ಹೀಗೆಲ್ಲಾ ಯೋಚಿಸುತ್ತಿದ್ದೀರಾ? ಒಂದು ಮಾತು ಕೇಳಿ.

ಚಿನ್ನ ಖರೀದಿಗೆ ಯಾವ ದಿನದ ಹಂಗಿಲ್ಲ. ಹೂಡಿಕೆಯಾಗಿ ಚಿನ್ನವನ್ನು ಈಗ ಯಾರೂ ನೋಡುವುದಿಲ್ಲ. ವರ್ಷದಿಂದ ವರ್ಷಕ್ಕೆ ಚಿನ್ನದ ಮೇಲಿನ ಹೂಡಿಕೆ, ಲಾಭ ಕೊಡುವ ಬದಲು ನಷ್ಟವನ್ನು ತರುತ್ತಿದೆ. ಮೊದಲು ಚಿನ್ನವನ್ನು ಕೊಳ್ಳುವುದು, ಅದನ್ನು ಇಟ್ಟುಕೊಳ್ಳುವುದು, ಹಣವನ್ನು ಇಟ್ಟುಕೊಂಡಂತೆ ಎನ್ನುವ ಭಾವನೆ ಇತ್ತು. ಆದರೆ ಈಗ ಹಾಗಲ್ಲ. ಮಕ್ಕಳ ಕಾಲಕ್ಕೆ ಆಗುತ್ತದೆ ಎಂದು ಚಿನ್ನ ಖರೀದಿಸುವವರು ಈಗ ಕಡಿಮೆ ಆಗಿದ್ದಾರೆ.

ಚಿನ್ನವನ್ನು ಪೇಪರ್‌ ರೀತಿಯಲ್ಲಿ ಹೇಗೆ ಬ್ಯಾಂಕಿನಲ್ಲಿ ನಾವು ಇಟ್ಟ ಹಣವನ್ನು ಪಾಸ್‌ ಬುಕ್‌ನಲ್ಲಿ ನೋಡಿಕೊಂಡು ಸಂತೋಷ ಪಡುತ್ತೇವೋ ಹಾಗೆ, ನಾವು ಖರೀದಿಸಿದ ಚಿನ್ನಕ್ಕೆ ಪ್ರತಿಯಾಗಿ ಕೊಡುವ ಸರ್ಟಿಫಿಕೇಟ್‌ ಕೂಡ ಲಭ್ಯ ಇದೆ. ಮತ್ತೀಗ ಅಕ್ಷಯ ತೃತೀಯ ಬಂದಿದೆ. ಚಿನ್ನ ಕೊಳ್ಳಬೇಕು ಎಂದು ಮುಗಿಬೀಳಬೇಡಿ. ಬಳಕೆಗೆ ಬೇಕು ಅನ್ನಿಸಿದರೆ ಮಾತ್ರ ಖರೀದಿಸಿ. ಹೂಡಿಕೆಗೆ ಮಾತ್ರ ಕೊಳ್ಳಬೇಡಿ.

* ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.