“ಬರಿ’ ಗೋಳು!


Team Udayavani, Apr 23, 2018, 11:52 AM IST

bari-golu.jpg

ಪ್ರಸ್ತಕ ಪ್ರಕಟಣೆ ಮತ್ತು ಮಾರಾಟ ಎಂಬುದೀಗ ಲಾಭದಾಯಕ ಉದ್ಯಮ. ಅದಕ್ಕೆ ಸಾಕ್ಷಿ ಹೇಳುವಂತೆ ಕನ್ನಡದಲ್ಲಿ ಇರುವ ಪುಸ್ತಕ ಪ್ರಕಾಶಕರ ಸಂಖ್ಯೆ 500 ಅನ್ನು ದಾಟುತ್ತದೆ. ವರ್ಷಕ್ಕೆ, 700ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ. ಪುಸ್ತಕ ಬಿಡುಗಡೆ, 3 ತಿಂಗಳು ಮೊದಲೇ ಆಡಿಟೋರಿಯಂ ಬುಕ್‌ ಮಾಡಬೇಕಾದ ಪರಿಸ್ಥಿತಿಯಿದೆ.

ಗ್ರಂಥಾಲಯ ಇಲಾಖೆಗೆ ಪ್ರತಿ ವರ್ಷವೂ ಅದೆಷ್ಟೋ ಕೋಟಿ ರೂ.ನ ಪ್ರಸಕ್ತಗಳು ಸರಬರಾಜಾಗುತ್ತವೆ. ಪ್ರಿಂಟಿಂಗ್‌ ಪ್ರಸ್‌ಗಳು ಮೂರು ಪಾಳಿಯಲ್ಲಿ ಕೆಲಸ ನಿರ್ವಿಸುತ್ತಿವೆ.  ಇಷ್ಟೆಲ್ಲ ನಿಜವಾದರೂ- ಪುಸ್ತಕ ಪ್ರಕಟಣೆಯಿಂದ ಏನೇನೂ ಗಿಟ್ಟಲಿಲ್ಲ ಎಂಬ ಮಾತು ಲೇಖಕ. ಪ್ರಕಾಶಕರಿಂದ ಜೋರಾಗಿಯೇ ಕೇಳಿಬರುತ್ತಿದೆ. ಕನ್ನಡ ಪುಸ್ತಕೋದ್ಯಮದ ಈ ದುಸ್ಥಿತಿಗೆ ಕಾರಣಗಳೇನು ಅಂದರೆ…  

ಕನ್ನಡದಲ್ಲಿ ವರ್ಷಕ್ಕೆ ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತವೆ. ಪ್ರತಿ ವರ್ಷವೂ ನೂರರ ಲೆಕ್ಕದಲ್ಲಿ ಹೊಸ ಬರಹಗಾರರು ಹುಟ್ಟಿ ಕೊಳ್ಳುತ್ತಿದ್ದಾರೆ. ಕೆಲವು ಪುಸ್ತಕಗಳನ್ನು ಹೆಸರಾಂತ ಪ್ರಕಾಶಕರು ಪ್ರಕಟಿಸಿದರೆ, ಉಳಿದವನ್ನು ಪುಸ್ತಕ ಬರೆದವರೇ ಪ್ರಕಟಿಸುತ್ತಾರೆ. ಆ ಮೂಲಕ, ಒಬ್ಬ ಬರಹಗಾರನ ಜೊತೆಯಲ್ಲಿ ಒಬ್ಬ ಪ್ರಕಾಶಕನೂ ಹುಟ್ಟಿಕೊಳ್ಳುತ್ತಿದ್ದಾನೆ. ಹೀಗೆ, ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಕಟವಾಗುತ್ತವಲ್ಲ. ಆ ಪೈಕಿ ಎಷ್ಟು ಪುಸ್ತಕಗಳು ಚೆನ್ನಾಗಿವೆ ಎಂದು ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಏಕೆಂದರೆ, ಪ್ರಕಟವಾದ ಐಳು ಸಾವಿರ ಪುಸ್ತಕಗಳ ಪೈಕಿ “ದಿ ಬೆಸ್ಟ್‌’ ಅನ್ನುವಂಥ ಪುಸ್ತಕಗಳ ಸಂಖ್ಯೆ 50 ಅನ್ನೂ ದಾಟುವುದಿಲ್ಲ. ಈ ವಿಪರ್ಯಾಸದ ಸಂಗತಿ, ಪ್ರತಿ ವರ್ಷವೂ “ರಿಪೀಟ್‌’ ಆಗುತ್ತಲೇ ಇರುತ್ತದೆ. ಇದು, ಕನ್ನಡ ಪುಸ್ತಕೋದ್ಯಮದ ಸದ್ಯದ ಸ್ಥಿತಿ. ಪುಸ್ತಕಗಳಲ್ಲಿ ಇರುವುದು ಎರಡೇ ವಿಧ. ಒಳ್ಳೆಯ ಪುಸ್ತಕ ಮತ್ತು ಕೆಟ್ಟ ಪುಸ್ತಕ. ಸ್ವಾರಸ್ಯವೆಂದರೆ, ಈ ಎರಡು ಬಗೆಯ ಪುಸ್ತಕಗಳಿಗೂ ಓದುಗರಿದ್ದಾರೆ ! ಈ ದೃಷ್ಟಿಯಿಂದ ನೋಡಿದರೆ, ಪುಸ್ತಕ ಪ್ರಕಾಶನ ಮತ್ತು ಮಾರಾಟ ಎಂಬುದು ಲಾಭದಾಯಕ ಉದ್ಯಮ.

ಪ್ರತಿ ವರ್ಷವೂ ಸಾವಿರ-ಸಾವಿರ ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗುತ್ತಿರುವುದೇ ಈ ಮಾತಿಗೆ ಸಾಕ್ಷಿ. ಅಂದಹಾಗೆ, ರಾಶಿ ರಾಶಿ ಪುಸ್ತಕಗಳು ಮುದ್ರಣಾಲಯದಿಂದ ಹೊರ ಬಂದ ನಂತರ ಪ್ರಕಾಶಕರಿಗೆ ಲಾಭವಾಯಿತಾ? ಪುಸ್ತಕ ಬರೆದಿದ್ದಕ್ಕೆ ಬರಹಗಾರನ ಜೇಬು ಭರ್ತಿಯಾಯಿತಾ? ಒಂದು ಪುಸ್ತಕ ಪ್ರಕಟಿಸಿದ ನಂತರ ಮತ್ತೂಂದು ಪುಸ್ತಕ ಪ್ರಕಟಿಸುವ ಹುಮ್ಮಸ್ಸು ಬರಹಗಾರನ ಜೊತೆಯಾಯಿತಾ? – ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ. ಕಾರಣ – ಪ್ರಕಾಶಕ, ಬರಹಗಾರ ಇಬ್ಬರ ಮುಖಗಳೂ ಕಳೆಗುಂದಿರುತ್ತವೆ. “ಏನೂ ಗಿಟಿ¤ಲ್ಲ’ ಎಂಬ ಉದ್ಗಾರ ಎರಡೂ ಕಡೆಯಿಂದ ಕೇಳಿಬರುತ್ತದೆ. 

ಏಕೆ ಹೀಗಾಗುತ್ತಿದೆ? ಸರಸ್ವತಿ ಇರುವ ಕಡೆ ಲಕ್ಷಿ ಇರುವುದಿಲ್ಲ ಎಂಬ ಮಾತು ಬರಹಗಾರನ ವಿಷಯದಲ್ಲಿ ಅದೇಕೆ ಮತ್ತೆ ಮತ್ತೆ ನಿಜವಾಗುತ್ತಿದೆ? ಪುಸ್ತಕ ಬಿಡುಗಡೆಯಾದ ನಂತರವೂ ಲೇಖಕನ ಜೇಬೇಕೆ ತುಂಬುವುದಿಲ್ಲ ಎಂದು ಕೇಳಿದರೆ, ಬಹುಪಾಲು ಲೇಖಕರು ಪ್ರಕಾಶಕರತ್ತ ಬೆರಳು ತೋರಿಸುತ್ತಾರೆ.ಅದರರ್ಥ; ಪ್ರಕಾಶಕರು ಕೊಡುವ ಹಣ (ಕೊಟ್ಟರೆ) ಏನೇನೂ ಸಾಲದು!  ಈ ಮಾತಿನಲ್ಲಿ ಸತ್ಯವಿದೆ. ಏಕೆಂದರೆ, ಒಬ್ಬ ಲೇಖಕ ಒಂದು ಪುಸ್ತಕ ಬರೆಯಬೇಕೆಂದರೆ ಇಡೀ ಒಂದು ವರ್ಷ ಶ್ರಮ ಪಟ್ಟಿರುತ್ತಾನೆ.

ಬರೆಯುವುದು, ತಿದ್ದುವುದು, ಮಾಹಿತಿ ಸಂಗ್ರಹಣೆ, ಪೇಜ್‌ ಡಿಸೈನ್‌, ರೀಸರ್ಚ್‌ ಟೂರ್‌…. ಇದೆಲ್ಲಾ ಸೇರಿ ಕಡಿಮೆ ಎಂದರೂ 40, 000 ರೂಪಾಯಿ ಕೈ ಬಿಟ್ಟಿರುತ್ತದೆ. ಪುಸ್ತಕ ಪ್ರಕಟಣೆಯ ನಂತರ ಗೌರವಧನದ ರೂಪದಲ್ಲಿ ಈ ಹಣ ವಾಪಸ್‌ ಬರಬಹುದೆಂಬ ನಿರೀಕ್ಷೆ ಲೇಖಕರದ್ದಾಗಿರುತ್ತದೆ. ಆದರೆ, ಪುಸ್ತಕ ಮೂಲ ಮಾರಾಟ ಬೆಲೆಯಲ್ಲಿ (ಎಂಆರ್‌ಪಿ) ಶೇ. 10ರಷ್ಟು ಹಣ ಮತ್ತು 25 ಪುಸ್ತಕಗಳನ್ನು ನೀಡಿ (ಗೌರವ ಧನ ಮತ್ತು ಪುಸ್ತಕ ಎರಡೂ ಸಿಕ್ಕಿದರೆ ಅದೇ ಅದೃಷ್ಟ) ನಮ್ಮ ಕೆಲಸ ಮುಗೀತು ಅನ್ನುತ್ತಾರೆ. 

ದುಡ್ಡೆಲ್ಲಿದೆ ಸ್ವಾಮಿ?: ಕರ್ನಾಟಕದಲ್ಲಿ ಒಟ್ಟು 150 ಅಧಿಕೃತ ಹಾಗೂ 300 ಅನಧಿಕೃತ ಪ್ರಕಾಶನ ಸಂಸ್ಥೆಗಳು ಇರಬಹುದೇನೋ. ಪುಸ್ತಕ ಪ್ರಕಟಣೆಯ ಕಾಯಕದಲ್ಲಿ ಎಲ್ಲಾ ಪ್ರಕಾಶಕರೂ ವರ್ಷವಿಡೀ ಬ್ಯುಸಿ ಇರುತ್ತಾರೆ. ಪ್ರತಿಯೊಂದು ಜಿಲ್ಲೆಯಲ್ಲಿ ಪುಸ್ತಕದ ಪ್ರಿಂಟಿಂಗ್‌ ಪ್ರಸ್‌ಗಳಿರುವುದು, ಕೆಲವು ಪ್ರಿಂಟಿಂಗ್‌ ಪ್ರಸ್‌ಗಳು ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡುವುದು, ಇದೆಲ್ಲಾ- ಪುಸ್ತಕ ಪ್ರಕಟಣೆಯು ಲಾಭದಾಯಕ ಉದ್ಯಮ ಎಂಬ ಮಾತಿಗೆ ಸಿಗುವ ಸಾಕ್ಷಿಗಳು. ವಾಸ್ತವ ಹೀಗಿದ್ದರೂ, ಪುಸ್ತಕ ಪ್ರಕಟಣೆಯಿಂದ ನನಗೆ ಲಾಭವಾಯಿತು. ಗೌರವಧನದಿಂದ ದುಡ್ಡು ಆಪದ್ದನದ ರೂಪದಲ್ಲಿ ನನ್ನ ಕೈ ಹಿಡಿಯಿತು ಎಂದು ಹೇಳಲು, ಲೇಖಕರು-ಪ್ರಕಾಶಕರು ಸಿದ್ಧರಿಲ್ಲ.

ಅಲ್ರೀ, ಪ್ರತಿ ವರ್ಷವೂ ಪುಸ್ತಕಗಳನ್ನು ಪ್ರಕಟಿಸುತ್ತಾ ಇದ್ದೀರ. ಹಾಗಿದ್ದೂ ಲಾಸ್‌ ಆಗಿದೆ ಅಂತೀರ. ಇದು ಹೇಗೆ ಸಾಧ್ಯ? ಲಾಸ್‌ ಆದಮೇಲೂ ನೀವು ಇದೇ ಬ್ಯುಸಿನೆಸ್‌ನಲ್ಲಿ ಮುಂದುವರಿಯೋದು ಹೇಗೆ ಸಾಧ್ಯ? ಪ್ರಕಟವಾದ ಪುಸ್ತಕಗಳೆಲ್ಲಾ ಏನಾದವು ಎಂದು ಕೇಳಿದರೆ, ಎಲ್ಲಾ ಪುಸ್ತಕಗಳೂ ಸೇಲ್‌ ಆಗುವುದಿಲ್ಲ. ಹಾಗಿದ್ರೂ, ಪ್ರತಿ ಸಿನಿಮಾನೂ 100 ದಿನ ಓಡೋಕೆ ಅಂತ ಡೈರೆಕ್ಟರ್‌, ಪ್ರೊಡ್ನೂಸರ್‌ ನಂಬಾ¤ನೆ ನೋಡಿ. ಅಂಥದೇ ನಂಬಿಕೆಯಿಂದ ಪ್ರತಿ ವರ್ಷ ಪುಸ್ತಕಗಳನ್ನು ಪ್ರಕಟಿಸ್ತೀವಿ. ಮಾರಾಟ ಆಗದ ಪುಸ್ತಕಗಳನ್ನು ಗೋಡೌನ್‌ಗಳಲ್ಲಿ ಇಟ್ಟಿರ್ತೀವಿ.

ಲೈಬ್ರರಿಗೆ ಸೆಲೆಕ್ಟ್ ಆದರೆ, ಹಾಕಿದ್ದ ಬಂಡವಾಳ ಆದ್ರೂ ವಾಪಸ್‌ ಆಗುತ್ತದೆ. ಆದರೆ, 2018ರಲ್ಲಿ ಪ್ರಕಟವಾಗುವ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಆಹ್ವಾನಿಸುವುದು 2020ಕ್ಕೆ. ಅಂದರೆ, ಪ್ರಕಟಿಸಿದ ಪುಸ್ತಕಗಳನ್ನು ಎರಡು ವರ್ಷಗಳ ಕಾಲ ಜೋಪಾನವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೂಡ ಪ್ರಕಾಶಕರಿಗೆ ಬೀಳುತ್ತದೆ. ಹಾಗಾಗಿ, ಲೈಬ್ರರಿಗೆ ಪುಸ್ತಕ ಹೋಗದಿದ್ದರೆ ಖಂಡಿತ ನಮಗೆ ಲಾಸ್‌ ಆಗುತ್ತದೆ. ಪರಿಸ್ಥಿತಿ ಹೀಗಿರುವಾಗ, ಬರಹಗಾರರಿಗೆ ಜಾಸ್ತಿ ಸಂಭಾವನೆ ಕೊಡಿ  ಅಂದ್ರೆ ನಾವೆಲ್ಲಿಂದ ಹಣ ತರುವುದು? ಎನ್ನುವುದು ಪ್ರಕಾಶಕರ ವಾದ. 

ದುಬಾರಿ ಬೆಲೆ ಎಂಬ ಬಿಸಿ ತುಪ್ಪ: ಒಂದು ಪುಸ್ತಕದಿಂದ ಲಾಭ ಆಗಬೇಕೆಂದರೆ, ಅದು ಲೈಬ್ರರಿಗೆ ಹೋಗಲೇ ಬೇಕಾ? ಅಂಗಡಿಗಳಲ್ಲಿ ಮಾರಾಟ ಮಾಡಿಯೇ ಲಾಭಗಳಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರವಿಷ್ಟೆ; ಇವತ್ತು, ಪುಸ್ತಕ ಪ್ರಕಟಣೆಯನ್ನು “ಸೇವೆ’ ಎಂದು ಹೆಚ್ಚಿನವರು ಭಾವಿಸಿಲ್ಲ. ಎಲ್ಲರ ಪಾಲಿಗೂ ಬುಕ್‌ ಪಬ್ಲಿಷಿಂಗ್‌ ಎಂಬುದು “ಸರ್ವಿಸ್‌’ನ ಬದಲಿಗೆ ಬಿಜಿನೆಸ್‌ ಆಗಿದೆ. ಪುಸ್ತಕ ಪ್ರಕಟಿಸಿ, ಒಂದಿಷ್ಟು ತಿಳಿವಳಿಕೆಯನ್ನು, ಜ್ಞಾನವನ್ನು ಎಲ್ಲರಿಗೂ ಹಂಚಬೇಕು ಎಂದು ಯೋಚಿಸುವ ಮಂದಿ ನೂರಕ್ಕೆ 10 ಜನ ಸಿಗಬಹುದೇನೋ. ಉಳಿದ 90 ಮಂದಿ ಬುಕ್‌ ಮಾಡಿ ಕಾಸ್‌ ಮಾಡಿ ಎಂಬ ಲೆಕ್ಕಾಚಾರದವರೇ. ಪರಿಣಾಮ ಏನಾಗಿದೆ ಎಂದರೆ- 120 ಪುಟಗಳ ಒಂದು ಪುಸ್ತಕಕ್ಕೆ 145 ರೂಪಾಯಿ ಬೆಲೆ ಇಡಲಾಗುತ್ತಿದೆ !

60 ಪುಟಗಳ ಕವನ ಸಂಕಲನಕ್ಕೆ 75 ರೂಪಾಯಿ ರೇಟು ಫಿಕ್ಸ್‌ ಆಗಿರುತ್ತದೆ ! ಪುಸ್ತಕವೇನಾದರೂ 250 ಪುಟಗಳಿದ್ದರೆ ಅನುಮಾನವೇ ಬೇಡ; ಅದಕ್ಕೆ 300 ರೂಪಾಯಿಗಳನ್ನು ಮಾರಾಟ ಬೆಲೆಯೆಂದು ಇಡಲಾಗುತ್ತದೆ. 300 ಅಥವಾ 200 ರುಪಾಯಿಗಳನ್ನು ಕೊಟ್ಟು ಕನ್ನಡ ಪುಸ್ತಕಗಳನ್ನು ಓದುವ ಸ್ಥಿತಿಯಲ್ಲಿ ಕನ್ನಡ ಓದುಗರು ಖಂಡಿತಾ ಇಲ್ಲ. ಹಾಗಾಗಿ, ಪ್ರಕಟವಾದ ಪುಸ್ತಕಗಳು ಮುದ್ರಣಾಲಯದಿಂದ,

ಗೋಡೌನ್‌ಗಳಿಂದ ಆಚೆ ಬಾರದು ಹಾಗೇ ಸ್ಟಾಕ್‌ ಉಳಿತು ಹೋಗುತ್ತವೆ. ಇಷ್ಟಾದ ಮೇಲೂ ಪುಸ್ತಕ ಪ್ರಕಟಣೆಗೆ ಗುಡ್‌ಬೈ ಹೇಳಲು ಪ್ರಕಾಶಕರಾಗಲಿ, ಇನ್ಮುಂದೆ ಪುಸ್ತಕ ಪ್ರಕಟಿಸಲಾರೆ ಎಂದು ಘೋಷಿಸಲು ಲೇಖಕರಾಗಲಿ ಸಿದ್ಧರಿಲ್ಲ. ಎಲ್ಲಿ ಕಳೆದು ಕೊಂಡೆವೋ ಅಲ್ಲಿಯೇ ಮರಳಿ ಪಡೆಯಬೇಕು ಎಂಬ ಯೋಚನೆಯಲ್ಲಿ ಹೊಸದೊಂದು ಪುಸ್ತಕ ಪ್ರಕಟಣೆಗೆ ಮುಂದಾಗುತ್ತಾರೆ. ಹಲವು ಸಂಕಟಗಳ ಮಧ್ಯೆಯೂ ಒಂದಷ್ಟು ದುಡ್ಡು ಹೊಂದಿಸಿ ಪ್ರಿಂಟಿಂಗ್‌ ಪ್ರಸ್‌ಗೆ ತಲುಪಿಸುತ್ತಾರೆ.  

ಈ ಬಾರಿ ಎಲ್ಲವನ್ನೂ ಪ್ಲಾನ್‌ ಹಾಕ್ಕೊಂಡು ಮಾಡಬೇಕು. ಎಲ್ಲೂ ಲಾಸ್‌ ಆಗದಂತೆ ನೋಡ್ಕೊಬೇಕು. ಬೇಗ ಬುಕ್‌ ರಿಲೀಸ್‌ ಮಾಡಿ ಒಂದಷ್ಟು ಲಾಭ ಮಾಡ್ಕೊàಬೇಕು ಎಂದು ಲೇಖಕನೂ, ಪ್ರಕಾಶಕರೂ ಲೆಕ್ಕ ಹಾಕುವುದರೊಂದಿಗೆ, ಪುಸ್ತಕ ಪ್ರಕಾಶನವೆಂಬ ಲಾಭದಾಯಕ ಕೆಲಸ ಹೊಸ ವೇಗದೊಂದಿಗೆ ಶುರುವಾಗಿಯೇ ಬಿಡುತ್ತದೆ. ಕೆಲ ದಿನಗಳ ನಂತರ “ಏನೂ, ಗಿಟಿಲ್ಲ’ ಎಂಬ ಹಳೆಯ ನೋವಿನ ಮಾತು ಲೇಖಕ-ಪ್ರಕಾಶಕರ ಕಡೆಯಿಂದ ಕೇಳಿಬರುತ್ತದೆ !

ಏನಿದು ಅಂತರಾಷ್ಟ್ರೀಯ ಪುಸ್ತಕ ದಿನ?: ಇದು ಯುನೆಸ್ಕೊ 1995 ರಿಂದ ಮಾಡಿಕೊಂಡು ಬಂದ ಆಚರಣೆ. ಅದಕ್ಕಾಗಿ ಗುರುತಿಸಿದ ದಿನಾಂಕ ಏಪ್ರಿಲ್‌ 23.  ಬರಹಗಾರರನ್ನು, ಪ್ರಕಾಶಕರನ್ನು ಮತ್ತು ಓದುಗರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭವಾದ ವಿಶ್ವಸಂಸ್ಥೆ ಮಟ್ಟದ ಕಾರ್ಯಕ್ರಮ. ಸ್ಪ್ಯಾ³ನಿಷ್‌ ಬರಹಗಾರ ಮಿಗುಯಲ್‌ ಡೇ ಸರ್ವಾಂಟೆಸ್‌ನ ನೆನಪಿಗಾಗಿ ಇದು ಆಚರಣೆಗೆ ಬಂತು. ಇನ್ನೊಂದು ವಿಶೇಷವೆಂದರೆ ಏಪ್ರಿಲ್‌ 23 ಲಿಯಂ ಷೇಕ್ಸ್‌ಪಿಯರ್‌ ಮರಣಿಸಿದ ದಿನವೂ ಹೌದು. 

ಬರಹಗಾರನೆಂಬ ಬಡಪಾಯಿ!: ಪುಸ್ತಕ ಪ್ರಕಟಣೆ ಎಂಬುದು ಲಾಭದಾಯಕ ಉದ್ಯಮವಾಗಿರುವ ಈ ದಿನಗಳಲ್ಲಿ ಮೇಲಿಂದ ಮೇಲೆ ಲಾಸ್‌ ಅನುಭವಿಸುತ್ತಿರುವ ಬಡಪಾಯಿ ಎಂದರೆ ಲೇಖಕನೇ. ಅದಕ್ಕೆ ಒಂದು ಉದಾಹರಣೆ ಕೇಳಿ; ಲೇಖಕ ಒಂದು ಪುಸ್ತಕವನ್ನು ಪ್ರಕಟಣೆಗೆ ಕೊಡುತ್ತಾನೆ. ಅವನಿಗೆ ತೃಪ್ತಿಯಾಗುವಷ್ಟು ಗೌರವಧನ, 50 ಉಚಿತ ಪುಸ್ತಕ, ಉಚಿತವಾಗಿ ಪುಸ್ತಕ ಪ್ರಕಟಣೆ- ಇದಿಷ್ಟೂ ಸಿಗುವುದು ವಿರಳ.

ಪುಸ್ತಕ ಪ್ರಕಟಿಸಿದ ಮೇಲೆ ಅದರ ಬಿಡುಗಡೆ ಕಾರ್ಯಕ್ರಮ ಮಾಡಬೇಕಲ್ಲವೇ? ಅದು ಹೆಚ್ಚಿನ ಸಂದರ್ಭದಲ್ಲಿ ಲೇಖಕನ ತಲೆಗೆ ಬರುತ್ತದೆ. ಇಲ್ಲವಾದರೆ, ಪ್ರಕಾಶಕರು-ಲೇಖಕರು ಅರ್ಧರ್ಧ ಹಣ ಹಾಕುವ ಮಾತುಕತೆ ಆಗಿರುತ್ತದೆ. ಎಷ್ಟೇ ಸರಳ ಕಾರ್ಯಕ್ರಮ ಅಂದರೂ ಒಟ್ಟು 40 ಸಾವಿರ ರೂಪಾಯಿ ( ಅರ್ಧರ್ಧ ಅಂದುಕೊಂಡರೆ 20 ಸಾವಿರ) ಕೈ ಬಿಡುತ್ತದೆ.

ಪುಸ್ತಕ ಪ್ರಕಟಣೆಯ ರೀಸರ್ಚ್‌ಗೆ ( ಅರ್ಧರ್ಧ ಅಂದುಕೊಂಡರೆ 20 ಸಾವಿರ) ಕೈ ಬಿಡುತ್ತದೆ. ಪುಸ್ತಕ ಪ್ರಕಟಣೆಯ ರೀಸರ್ಚ್‌ಗೆ 40 ಸಾವಿರ, ಬಿಡುಗಡೆ ಕಾರ್ಯಕ್ರಮದ ವೇಳೆ 20 ಸಾವಿರ ಕಳೆದುಕೊಳ್ಳುವ ಲೇಖಕರಿಗೆ 10 ಸಾವಿರ ರೂಪಾಯಿ ಗೌರವಧನ ಸಿಗುತ್ತದೆ. 60 ಸಾವಿರ ಕಳೆದುಕೊಂಡಿದ್ದಕ್ಕೆ ಅಳಬೇಕೋ, 10ಸಾವಿರ ಪಡೆದಿದ್ದಕ್ಕೆ ಸಂಭ್ರಮಿಸಬೇಕೋ ಎಂಬುದೇ ಗೊತ್ತಾಗದ ಸ್ಥಿತಿಯಲ್ಲಿ ಬರಹಗಾರ ನಿಂತಿರುತ್ತಾನೆ. ಶಲೆಯಂತೆ, ಸ್ಥಿತಪ್ರಜ್ಞನಂತೆ… 

* ಸುದರ್ಶನ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.