ಹೊಸ ನೀರು ಬಂದಾಗ….ಬದಲಾದ ಬ್ಯಾಂಕಿಂಗ್‌ ಸೌಲಭ್ಯಗಳು


Team Udayavani, Jul 16, 2018, 6:00 AM IST

27.jpg

ಹೊಸ ನೀರು ಬಂದಾಗ ಹಳೆನೀರು ಕೊಚ್ಚಿಕೊಂಡು ಹೋಗುವುದು ನೈಸರ್ಗಿಕ  ಪ್ರಕ್ರಿಯೆ. ಬ್ಯಾಂಕ್‌ಗಳ ವಿಚಾರದಲ್ಲಿ ಇದು ಸತ್ಯ. ಗ್ರಾಹಕ, ತನ್ನ  ಶಾಖೆಯಲ್ಲಿ  ತನ್ನ ಖಾತೆಗೆ ಹಣವನ್ನು ಜಮಾ ಮಾಡಿದಂತೆ, ಬೇರೆ  ಶಾಖೆಗಳಲ್ಲಿರುವ  ಖಾತೆಗಳಿಗೂ  ಚಲನ್‌ ಮೂಲಕ ಮಾಡಬಹುದು.  ಕೇವಲ  ಐದು ನಿಮಿಷದಲ್ಲಿ  ಬೆನಿಫಿಷಿಯರ್‌ ಖಾತೆಗೆ ಜಮಾ ಆಗುತ್ತದೆ. ಬ್ಯಾಂಕುಗಳು ಈ ಸೇವೆಗೆ ವ್ಯವಹಾರದ ಮೊತ್ತದ ಮೇಲೆ ಶುಲ್ಕವನ್ನು ಹಾಕುತ್ತವೆ.

ಇದೇ ರೀತಿ ಕಣ್ಮರೆಯಾದ ಇನ್ನೊಂದು ಅವಿಷ್ಕಾರ ಟಿಟಿ (ಟೆಲೆಗ್ರಾಫಿಕ್‌ ಟ್ರಾನ್ಸ್‌ಫ‌ರ್‌). ಒಂದು ಕಾಲಕ್ಕೆ ತ್ವರಿತ ಗತಿಯಲ್ಲಿ ಹಣ ರವಾನೆ ಮಾಡುವುದಕ್ಕೆ  ಈ ಅವಿಷ್ಕಾರವನ್ನು ಬಳಸುತ್ತಿದ್ದರು. ಇದನ್ನು ಹೆಚ್ಚಾಗಿ ವ್ಯಾಪಾರೀ ಸಮುದಾಯಗಳು ಬಳಸುತ್ತಿದ್ದವು. ಬ್ಯಾಂಕುಗಳು  ತಮ್ಮ   ಗ್ರಾಹಕರು ಕಳಿಸಬೇಕಾದ ಮೊತ್ತದ ಸಂಗಡ  ಬೆನಿಫಿಷಿಯರ್‌ರ   ಖಾತೆಯ ವಿವರ ಪಡೆದು, ಅವುಗಳಿಗೆ ತಮ್ಮ  ರಹಸ್ಯ ಬ್ಯಾಂಕ್‌ ಕೋಡ್‌ಗಳನ್ನು ಸೇರಿಸಿ, ಬೆನಿಫಿಷಿಯರ್‌  ಬ್ಯಾಂಕ್‌ ಖಾತೆ ಇರುವ  ಶಾಖೆಗಳಿಗೆ ಟೆಲೆಗ್ರಾಮ್‌ ಕಳಿಸುತ್ತಿದ್ದರು. ಟೆಲೆಗ್ರಾಮ್ ರಿಸೀವ್‌  ಮಾಡಿದ  ಶಾಖೆಗಳು   ರಹಸ್ಯ  ಟಿಟಿ ಸಂದೇಶದಲ್ಲಿರುವ ಕೋಡ್‌ ಅನ್ನು ಡಿಕೋಡ್‌ ಮಾಡಿ, ಮೊತ್ತ ಮತ್ತು ಖಾತೆದಾರನನ್ನು ಖಚಿತ ಮಾಡಿಕೊಂಡು ಖಾತೆದಾರನಿಗೆ ಹಣ ಜಮಾಯಿಸುತ್ತಿದ್ದರು. ಈ ರೀತಿ ಹಣ ರವಾನೆಗೆ ಕನಿಷ್ಠ ಒಂದು ದಿವಸ  ಹಿಡಿಯುತ್ತಿತ್ತು. ಬ್ಯಾಂಕುಗಳಲ್ಲಿ ಟೆಲೆಕ್ಸ್‌ ಬಳಕೆ ಆರಂಭವಾದ ಮೇಲೆ ಟಿಟಿ ವ್ಯವಸ್ಥೆ ಕಡಿಮೆಯಾಯಿತು. ಬ್ಯಾಂಕುಗಳಲ್ಲಿ ಕೋರ್‌ ಬ್ಯಾಂಕಿಂಗ್‌ ತಂತ್ರ ಜ್ಞಾನವನ್ನು ಅಳವಡಿಸಿದ ಮೇಲೆ  ಇದು ಸಂಪೂರ್ಣವಾಗಿ ಕಣ್ಮರೆಯಾಗಿ NEEFT ಮತ್ತು RTGS ಎನ್ನುವ  ಹೊಸ ಅವಿಷ್ಕಾರಗಳು ಬಂದಿವೆ.   2 ಲಕ್ಷದ ವರೆಗಿನ  ಹಣ ರವಾನೆಗೆ NEEFT ಮತ್ತು ಅದಕ್ಕೂ ಮೇಲಿನ ಮೊತ್ತದ  ರವಾನೆಗೆ RTGS ವ್ಯವಸ್ಥೆಯನ್ನು ಬಳಸಲಾಗುತ್ತದೆ. ಟಿಟಿ ಮತ್ತು ಎಮ್ಟಿಗಳನ್ನು ಒಂದು ಬ್ಯಾಂಕಿನ  ಬೇರೆ ಶಾಖೆಗಳಿಗೆ ಮಾತ್ರ  ಹಣ  ರವಾನೆ ಮಾಡಬಹುದಿತ್ತು. ಆದರೆ , NEEFT ಮತ್ತು RTGS ಮೂಲಕ  ಬೇರೆ ಬ್ಯಾಂಕುಗಳಿಗೆ ನೇರವಾಗಿ ಹಣ ರವಾನೆ ಮಾಡಬಹುದು.  ಇದು ಅತ ಶೀಘ್ರವಾದ ಹಣ ರವಾನೆ ವ್ಯವಸ್ಥೆ. NEEFT ವ್ಯವಸ್ಥೆ ಯ ಮೂಲಕ ಮಾಡಿದರೆ ಒಂದು ದಿನ  ತೆಗೆದುಕೊಳ್ಳಬಹುದು. ಆದರೆ RTGS ವ್ಯವಸ್ಥೆ   ಒಂದೆರಡು ತಾಸುಗಳಲ್ಲಿ ಹಣ ರವಾನೆ ಮಾಡುತ್ತದೆ. ಬ್ಯಾಂಕುಗಳಲ್ಲಿ ಅಂತರಾಷ್ಟ್ರೀಯ ಹಣ ವರ್ಗಾವಣೆಗೆ  ಮೊದಲಿನ  ಟಿಟಿ ವ್ಯವಸ್ಥೆಯನ್ನು  ಕೈಬಿಟ್ಟು SWIFT ಎನ್ನುವ  ಅಂತರಾಷ್ಟ್ರೀಯ ಮಾನ್ಯಿಕೃತ ಬಾರೀ ಭದ್ರತೆ ಇರುವ ಅವಿಷ್ಕಾರವನ್ನು ಬಳಸಲಾಗುವುದು. ಅಂತರಾಷ್ಟ್ರೀಯ  ಹಣ ವರ್ಗಾವಣೆ  ಮಾಡುವವರು ಕಡ್ಡಾಯವಾಗಿ SWIFT ಹಣ ರವಾನೆ ವ್ಯವಸ್ಥೆಯನ್ನು ಬಳಸಲೇ ಬೇಕಾಗುತ್ತದೆ.

ಬ್ಯಾಂಕುಗಳಲ್ಲಿ ಹಣ ರವಾನೆಯ ಇನ್ನೊಂದು  ವ್ಯವಸ್ಥೆ ಡಿಮಾಂಡ್‌ ಡ್ರಾಫ್ಟ್. ಈ ವ್ಯವಸ್ಥೆ ಕೂಡಾ ಕ್ರಮೇಣ  ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಗ್ರಾಹಕರು  ಹಣರವಾನೆಗಾಗಿ RTGS, NEFT ಮತ್ತು SWIFTಗಳನ್ನು ಬಳಸುತ್ತಿದ್ದು, ಡ್ರಾಫ್ಟ್ ನಿಟ್ಟಿನಲ್ಲಿ  ಹೆಚ್ಚಿನ ಕೋರಿಕೆ ಇರುವುದಿಲ್ಲ. ಕೆಲವು ಸಂಸ್ಥೆಗಳು  ಮತ್ತು ಮುಖ್ಯವಾಗಿ  ಶೈಕ್ಷಣಿಕ ಸಂಸ್ಥೆಗಳಲ್ಲಿ  ಮಾತ್ರ ಇವುಗಳಿಗೆ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ  ಹಣ ರವಾನೆ ನಿಟ್ಟಿನಲ್ಲಿ  

  ಈ  ವ್ಯವಸ್ಥೆ ಔಟ್ ಡೇಟೆಡ್‌ ಆಗಿದೆ.
ಇನ್ನೊಂದು  ವಿಶೇಷ ಆವಿಷ್ಕಾರವೆಂದರೆ, ಬ್ಯಾಂಕುಗಳಲ್ಲಿ 2000 ಕ್ಕಿಂತ  ಹೆಚ್ಚು ವ್ಯವಹಾರ ಮಾಡಿದರೆ, ಅದರ  ಸಂಕ್ಷಿಪ್ತ ವಿವರ ಕ್ಷಣ ಮಾತ್ರದಲ್ಲಿ ಖಾತೇದಾರನಿಗೆ sಞs   ಸಂದೇಶದ ಮೂಲಕ ತಲುಪುತ್ತದೆ. ಬಹಳಷ್ಟು ಗ್ರಾಹಕರು  ಇದನ್ನು ಬಳಸಿಕೊಳ್ಳುವುದಿಲ್ಲ. ಈ ಸೇವೆಗಾಗಿ  ಬ್ಯಾಂಕುಗಳು ಆಕರಿಸುವ   ಸಣ್ಣ  ಶುಲ್ಕ ದ  ಬಗೆಗೆ  ತಕರಾರು ಎತ್ತುತ್ತಾರೆ. ಹಾಗೆಯೇ  ತಮ್ಮ ಖಾತೆಯಲ್ಲಿರರುವ  ಬ್ಯಾಲೆನ್ಸ್‌ ತಿಳಿಯಲು ಬ್ಯಾಂಕ್‌ಗೆ ತೆರಳಿ   ವಿಚಾರಿಸುವ ಅಗತ್ಯವಿಲ್ಲ.  ಬ್ಯಾಂಕ್‌ನ  ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ ಬ್ಯಾಲೆನ್ಸ್‌ ಆತನ ಮೊಬೈಲ್‌ ಸ್ಕ್ರೀನ್‌ ಮೇಲೆ ಮೂಡುತ್ತದೆ.  ಹಾಗೆಯೇ  ಬ್ಯಾಂಕ್‌ ಖಾತೆಯನ್ನೂ ಆನ್‌ ಲೈನ್‌ನ°ಲ್ಲಿ ತೆರೆಯುವ ಸೌಲಭ್ಯವಿದೆ. ಬ್ಯಾಂಕುಗಳಲ್ಲಿ  ಈ ಅವಿಷ್ಕಾರಗಳನ್ನು  ಗ್ರಾಹಕ ಸ್ನೇಹಿಯಾಗಿ  ನಿರಂತರವಾಗಿ, ಅನುಭವ, ಮತ್ತು ಫೀಡ್‌ಬ್ಯಾಕ್‌ ಆಧಾರದ ಮೇಲೆ ಬದಲಾಯಿಸುತ್ತಾರೆ.

 ಹೀಗೆ ಬ್ಯಾಂಕುಗಳು ಗ್ರಾಹಕನ ಅನುಕೂಲದ ದೃಷ್ಟಿಯಲ್ಲಿ ಮತ್ತು  ಗ್ರಾಹಕರು  ತಮ್ಮ  ದಿನನಿತ್ಯದ ಕೆಲಸ ಬಿಟ್ಟು ಪದೇ ಪದೇ  ಬ್ಯಾಂಕಿಗೆ ಭೇಟಿಕೊಡುವುದನ್ನು  ತಪ್ಪಿಸಲು  ಅನೇಕ ಸೌಲಭ್ಯಗಳನ್ನು ನೀಡಿವೆ. ಆದರೆ, ಮಾಹಿತಿ, ಪ್ರಚಾರ, ತಿಳುವಳಿಕೆ ಇಲ್ಲದೆ ಅವುಗಳ ಪೂರ್ಣ ಉಪಯೋಗವಾಗುತ್ತಿಲ್ಲ. 

ರಮಾನಂದ ಶರ್ಮಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.